ಉದ್ದೇಶ :- ಸೂಜಿ ಬಿಂಬ ದರ್ಶಕ
ಅಗತ್ಯ ಸಾಮಗ್ರಿಗಳು :-
ಕಾರ್ಡಶೀಟ್ (ಕಪ್ಪುಬಣ್ಣದ) ಸೂಜಿ ಅರೆ ಪಾರದರ್ಶಕ ಹಾಳೆ
ವಿಧಾನ :-
30 ಸೆಂ.ಮೀ. ಉದ್ದ 05 ಸೆಂ.ಮೀ. ಅಗಲ, 05 ಸೆಂ.ಮೀ. ಎತ್ತರವಿರುವ ಟೊಳ್ಳಾದ ಆಯಾತಾಕಾರದ
ಕೊಳವೆಯನ್ನು ಕಾರ್ಡಶೀಟ್ ನಿಂದ ತಯಾರಿಸಿಕೊಳ್ಳಿ. ಅದರ ಒಂದು ಮುಖ (5×5) ಕಾರ್ಡಸೀಟ್ ನಿಂದ ಮುಚ್ಚಿ, ಮಧ್ಯದಲ್ಲಿ ಒಂದು ರಂದ್ರ ಮಾಡಿ ಅದೇ ರೀತಿ ಇನ್ನೊಂದು ಆಯತ ಕೊಳವೆ 30 ಸೆಂ.ಮೀ. ಉದ್ದ 4.5 ಸೆಂ.ಮೀ. ಅಗಲ, 4.5 ಸೆಂ.ಮೀ. ಎತ್ತರವಿರುವಂತೆ ಮಾಡಿಕೊಳ್ಳಿ ಅದರ ಒಂದು ಮುಖಕ್ಕೆ ಅದೇ ಪಾರದರ್ಶಕ ಹಾಳೆ ಅಂಟಿಸಿ ಅದನ್ನು ಮೊದಲೇ ತಯಾರಿಸಿಕೊಂಡ ಕೊಳವೆಯಲ್ಲಿ ಸೇರಿಸಿ ಹೊರಗಿನ ದೃಶ್ಯವನ್ನು ನೋಡಿರಿ ಸ್ವಲ್ಪ ಹಿಂದೆ-ಮುಂದೆ ಜರುಗಿಸಿ ಸ್ಪಷ್ಟ ಚಿತ್ರ ಪಡೆಯಿರಿ

ತೀರ್ಮಾನ :–
ಅದೇ ಪಾರದರ್ಶಕ ಪರದೆಯ ಮೇಲೆ ತಲೆ ಕೆಳಗಾದ ಬಿಂಬ ಕಾಣುತ್ತದೆ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment