ಉದ್ದೇಶ :- ಕರಗುವಿಕೆ, ಕರಗದಿರುವಿಕೆ ಮತ್ತು ಮುಳುಗುವ, ತೇಲುವ ಪದಾರ್ಥಗಳು.
ಅಗತ್ಯ ಸಾಮಗ್ರಿಗಳು :-
4 ಬೀಕರ್, ಸಕ್ಕರೆ, ಉಪ್ಪು, ಮರಳು, ಮರದ ಹೊಟ್ಟು (ಪುಡಿ), ನೀರು
ವಿಧಾನ :-
ಒಂದೇ ಅಳತೆಯ 4 ಬೀಕರ್ ತೆಗೆದುಕೊಂಡು ಅದರಲ್ಲಿ ಈ ಭಾಗದಷ್ಟು ನೀರು ಹಾಕಬೇಕು. ಪ್ರತಿಯೊಂದರಲ್ಲಿ
ಬೇರೆ ಬೇರೆ ಪದಾರ್ಥ ಅಂದರೆ ಒಂದರಲ್ಲಿ ಸಕ್ಕರೆ, ಇನ್ನೊಂದರಲ್ಲಿ ಉಪ್ಪು ಮತ್ತೊಂದರಲ್ಲಿ ಮರಳು ಕೊನೆಯದರಲ್ಲಿ
ಮರದಪುಡಿ ಹಾಕಿ ಸ್ವಲ್ಪ ಸಮಯ ಕಲಕಿ ಇಡಬೇಕು.

ತೀರ್ಮಾನ :-
ಕೆಲವು ವಸ್ತುಗಳು ನೀರಿನಲ್ಲಿ (ಸಕ್ಕರೆ, ಉಪ್ಪು) ಕರಗುತ್ತವೆ. ಕೆಲ ವಸ್ತುಗಳು (ಮರಳು, ಹೊಟ್ಟು)
ನೀರಿನಲ್ಲಿ ಕರಗುವುದಿಲ್ಲ. ಇನ್ನೂ ಕೆಲವು ವಸ್ತುಗಳು ಮುಳುಗುತ್ತವೆ(ಮರಳು) ಕೆಲವು ನೀರಿನ ಮೇಲೆ ತೇಲುತ್ತವೆ
(ಮರದ ಹೊಟ್ಟು)
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment