ವಾರಕ್ಕೊಂದು ವಿಜ್ಞಾನ ಮಾಹಿತಿ ದ್ರವ ವಸ್ತುವಿನಲ್ಲಿ ಕಣಗಳು ಸ್ವಲ್ಪ ವಿರಳವಾಗಿರುತ್ತವೆ. ( ಪ್ರಯೋಗ 20)

ಉದ್ದೇಶ :- ದ್ರವ ವಸ್ತುವಿನಲ್ಲಿ ಕಣಗಳು ಸ್ವಲ್ಪ ವಿರಳವಾಗಿರುತ್ತವೆ.

ಅಗತ್ಯ ಸಾಮಗ್ರಿಗಳು :- ಎರಡು ಅಳತೆಯ ಜಾಡಿಗಳು, ಗೋಲಿಗಳು, ಸಕ್ಕರ

ವಿಧಾನ :-

  • ಎರಡು ಅಳತೆಯ ಜಾಡಿಗಳನ್ನು ತೆಗೆದುಕೊಳ್ಳಿ
  • ಎರಡರಲ್ಲೂ ಒಂದೇ ಪ್ರಮಾಣದ ನೀರು ತುಂಬಿ , ಆಗ ಎರಡೂ ಜಾಡಿಗಳಲ್ಲಿ ನೀರಿನ ಮಟ್ಟಸಮನಾಗಿರುತ್ತದೆ
  • ಈಗ ಒಂದು ಜಾಡಿಯಲ್ಲಿ ಮೂರು ಗೋಲಿಗಳನ್ನು ಇನ್ನೊಂದರಲ್ಲಿ ಅಷ್ಟೇ ತೂಕದ ಸಕ್ಕರೆಯನ್ನು ಹಾಕಿ.
  • ಎರಡೂ ಜಾಡಿಗಳಲ್ಲಿಯ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ.
  • ಸಕ್ಕರೆ ಹಾಕಿದ ಜಾಡಿಯೊಳಗಿನ ನೀರನ್ನು ,ಸಕ್ಕರೆ ಕರಗುವವರೆಗೆ ಚಮಚದಿಂದ ಚೆನ್ನಾಗಿ ಕಲಕಿ
  • ರಿಸಕ್ಕರೆ ಕರಗಿದ ಬಳಿಕ ಅದರಲ್ಲಿಯ ನೀರಿನಮಟ್ಟವು ಮೊದಲಿನಷ್ಟಕ್ಕೆ ಇಳಿಯುತ್ತದೆ.
  • ಅಂದರೆ ಸಕ್ಕರೆ ಹಾಕಿದರೂ ನೀರಿನ ಗಾತ್ರದಲ್ಲಿ ಯಾವ ವ್ಯತ್ಯಾಸವೂ ಉಂಟಾಗಲಿಲ್ಲ.
  • ಇದರ ಅರ್ಥ ದ್ರವವಸ್ತುವಿನಲ್ಲಿ ಕಣಗಳು ವಿರಳವಾಗಿದ್ದು ಅವುಗಳ ಮಧ್ಯೆ ಸಕ್ಕರೆ ಕಣಗಳುಸೇರಿಕೊಂಡಿರುತ್ತವೆ.
1670679487700

ತೀರ್ಮಾನ :- ದ್ರವ ವಸ್ತುವಿನಲ್ಲಿ ಕಣಗಳು ಸ್ವಲ್ಪ ವಿರಳವಾಗಿರುತ್ತವೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

Sharing Is Caring:

Leave a Comment