ನೀರೆತ್ತುವ ಪಂಪ್ – ವಾರಕ್ಕೊಂದು ವಿಜ್ಞಾನ ಮಾಹಿತಿ (ಪ್ರಯೋಗ 2)

ಪ್ರಯೋಗದ ಶೀರ್ಷಿಕೆ: ನೀರೆತ್ತುವ ಪಂಪ್

WhatsApp Group Join Now
Telegram Group Join Now

ಅಗತ್ಯವಿರುವ ಸಾಮಗ್ರಿಗಳು: ಪ್ಲಾಸ್ಟಿಕ್ ಬಾಟಲ್, ಬೆಂಡಿಂಗ್ ಸ್ಟ್ರಾ, ನೀರು, ಆಹಾರ ತಯಾರಿಕೆಗೆ ಬಳಸುವ ಬಣ್ಣ, ಬಲೂನ್.

ಪ್ರಯೋಗ ಮಾಡುವ ವಿಧಾನ :

ಒಂದು ಪ್ಲಾಸ್ಟಿಕ್ ಬಾಟಲ್ ಮತ್ತು ಬೆಂಡಿಂಗ್ ಸ್ಟ್ರಾ ತೆಗೆದುಕೊಳ್ಳಿ. ಸ್ಟ್ರಾ ದ ಒಂದು ತುದಿ ಬಾಟಲಿಯ ತಳಕ್ಕೆ ತಾಗುವಂತೆ ಮತ್ತು ಮತ್ತೊಂದು ತುದಿ ಪ್ಲಾಸ್ಟಿಕ್ ಬಾಟಲ್ ಇನ್ನೊಂದು ಗೋಡೆಗೆ ತಾಗುವಂತೆ ವಿಡಿಯೋ ನೋಡಿ ಸ್ಟ್ರಾ ವನ್ನು ಫಿಕ್ಸ್ ಮಾಡಿ. ನಂತರ ಬಾಟಲಿಯಲ್ಲಿ ನೀರನ್ನು ಹಾಕಿ ಆಕರ್ಷಣೆಗಾಗಿ ಆಹಾರ ತಯಾರಿಕೆಗೆ ಬಳಸುವ ಬಣ್ಣವನ್ನು ಸೇರಿಸಿ. ನಂತರ ಬಲೂನಿನ ತುಂಬಾ ಗಾಳಿ ತುಂಬಿ ಬಲೂನಿನ ಬಾಯಿಯನ್ನು ಗಟ್ಟಿಯಾಗಿ ಹಿಡಿದು ಬಾಟಲ್ ನ ಬಾಯಿಗೆ ಬಲೂನ್ ಅನ್ನು ವಿಡಿಯೋದಲ್ಲಿ ಕಾಣುವಂತೆ ಸೇರಿಸಿ. ಈ ಬಲೂನಿನ ಮೇಲೆ ಗಾಳಿಯ ಒತ್ತಡದ ಪರಿಣಾಮದಿಂದಾಗಿ ಬಾಟಲ್ ನೀರು ಸ್ಟ್ರಾ ಮೂಲಕ ಹೊರಬರುತ್ತದೆ. ಇದು ನೋಡಲು ಒಂದು ನೀರೆತ್ತುವ ವಾಟರ್ ಪಂಪ್ ತರಹ ಕಾಣುತ್ತದೆ.

ತೀರ್ಮಾನ : ಬಲೂನಿನ ಮೇಲೆ ಗಾಳಿಯ ಸರ್ವತೋಮುಖ ಒತ್ತಡದಿಂದ ನೀರು ಸ್ಟ್ರಾ ದ ಮೂಲಕ ಹೊರಬರುತ್ತದೆ.

IMG 20220216 WA0017 min
ಶ್ರೀ ಮಂಜಪ್ಪ ಅಂಗರಗಟ್ಟಿ

ಶ್ರೀ ಮಂಜಪ್ಪ ಅಂಗರಗಟ್ಟಿ ಇವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ ಬೈಲ್ ಮಂಗಳೂರು ಇಲ್ಲಿ TCH ತರಬೇತಿಯನ್ನು ಪಡೆದು 2008ರಲ್ಲಿ ಅಂಕೋಲಾದಲ್ಲಿ ವಿಜ್ಞಾನ ಶಿಕ್ಷಕರಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಇವರು 20ಕ್ಕೂ ಹೆಚ್ಚು ಬ್ರಿಟಿಷ್ ಕೌನ್ಸಿಲ್ ಇಂಗ್ಲಿಷ್ ತರಬೇತಿಗಳಲ್ಲಿ ಜಿಲ್ಲಾ MRP ಆಗಿ ಮತ್ತು 15ಕ್ಕೂ ಹೆಚ್ಚು ವಿಜ್ಞಾನ ತರಬೇತಿಗಳಲ್ಲಿ MRP ಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಗುರುಚೇತನ ಕಾರ್ಯಕ್ರಮದಲ್ಲಿ ಕೂಡ MRP ಆಗಿ ಕೆಲಸ ನಿರ್ವಹಿಸಿರುತ್ತಾರೆ.
Mob: 93421 38131

WhatsApp Group Join Now
Telegram Group Join Now
Sharing Is Caring:

2 thoughts on “ನೀರೆತ್ತುವ ಪಂಪ್ – ವಾರಕ್ಕೊಂದು ವಿಜ್ಞಾನ ಮಾಹಿತಿ (ಪ್ರಯೋಗ 2)”

Leave a Comment