ಉದ್ದೇಶ :-
ಜಲಚಕ್ರ ಹೇಗೆ ಉಂಟಾಗುತ್ತದೆ ಎಂಬುದನ್ನು ಕಂಡುಹಿಡಿಯುವುದು.
ಅಗತ್ಯ ಸಾಮಗ್ರಿಗಳು :-
●ಒಂದು ಗಾಜಿನ ಲೋಟ ಅಥವಾ ಒಂದು ಸಣ್ಣದಾದ ಪ್ಲಾಸ್ಟಿಕ್ ಜಾರ್
●ಬಿಸಿಯಾದ ನೀರು
●ಒಂದು ಚಿಕ್ಕದಾದ ತಟ್ಟೆ
ಏಳೆಂಟು ಐಸ್ ತುಂಡುಗಳು
ವಿಧಾನ
ಒಂದು ಗಾಜಿನ ಲೋಟವನ್ನು ತೆಗೆದುಕೊ, ಗಾಜಿನ ಲೋಟದ ಬದಲು ಒಂದು ಪಾರದರ್ಶಕ ಸಣ್ಣ ಜಾರ್‌ಅನ್ನು ತೆಗೆದುಕೊಂಡರೂ ನಡೆಯುತ್ತದೆ. ಈಗ ಇದರಲ್ಲಿ ಅರ್ಧದಷ್ಟು ಬಿಸಿಯಾದ ನೀರನ್ನು ಹಾಕು, ಹೀಗೆ ನೀರುಹಾಕುವಾಗ ಶಿಕ್ಷಕಕರ ಅಥವಾ ಹಿರಿಯರ ಸಹಾಯ ತೆಗೆದುಕೊ. ನಂತರ ಈ ಲೋಟದ ಮೇಲೆ ಒಂದು ತಟ್ಟೆಯನ್ನುಇಡು, ಅದರ ಮೇಲೆ ಏಳೆಂಟು ಐಸ್ ತುಂಡುಗಳನ್ನು ಹಾಕು. ಹತ್ತರಿಂದ ಹದಿನೈದು ನಿಮಿಷದವರೆಗೆ ಕಾದು ನೋಡು.
ಜಲಚಕ್ರಚರ್ಚಿಸು.19 | ಪ್ರಯೋಗ ದರ್ಪಣ, ವಿಜ್ಞಾನ ಪ್ರಯೋಗಗಳ ಕೈಪಿಡಿತೀರ್ಮಾನ :-ಮಂಜುಗಡ,(ಐಸ್ ತುಂಡುಗಳು
ಲೋಟದ ಒಳಗೆ ಉಂಟಾಗುವ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸು, ನಿನ್ನ ಗೆಳೆಯರೊಂದಿಗೆ ಚರ್ಚಿಸು
ಬಿಸಿಯಾದ ನೀರುಈ ಪ್ರಯೋಗದ ವಿಲೋನೋನೋಡಲು ಚಿತ್ರವನ್ನು ಕ್ಲಿಕ್ ಮಾಡಿ
ತೀರ್ಮಾನ
- ಲೋಟದ ಒಳಭಾಗದಲ್ಲಿ ಸುತ್ತಲೂ ಸೂಕ್ಷ್ಮವಾದ ನೀರಿನ ಹನಿಗಳು ರೂಪುಗೊಂಡಿರುತ್ತವೆ
- ಸ್ವಲ್ಪ ಹೊತ್ತಿನ ನಂತರ ತಟ್ಟೆಯ ಕೆಳಭಾಗದಲ್ಲಿನ ನೀರಿನ ಹನಿಗಳು ನಿಧಾನವಾಗಿ ಲೋಟದೊಳಕ್ಕೆಬೀಳಲು ಪ್ರಾರಂಭಿಸುತ್ತವೆ.
- .ಇಲ್ಲಿ ನೀರಾವಿಯು(ಆವೀಕರಣ) ಮೇಲಕ್ಕೆ ಹೋಗುತ್ತದೆ. ಮೇಲೆ ಐಸ್ ತುಂಡುಗಳಿರುವ ಕಾರಣ ನೀರಾವಿತಂಪಾಗಿ ಮತ್ತೆ ಸೂಕ್ಷ್ಮವಾದ ನೀರಿನ ಹನಿಗಳಾಗುತ್ತವೆ(ಸಾಂದ್ರೀಕರಣ). ಬಹಳ ತಂಪಾದಾಗ ಭಾರವಾದಹನಿಗಳು ಮತ್ತೇ ಲೋಟದೊಳಗೆ ಬೀಳುತ್ತವೆ.
- ಹೀಗೆ ನಮ್ಮ ವಾತಾವರಣದಲ್ಲಿ ಕರೆ,ಕೊಳ,ನದಿ ಹಾಗೂ ಸಮುದ್ರದಲ್ಲಿನ ನೀರು ಸೂರ್ಯನ ಶಾಖದಿಂದಕಾದು ನೀರಾವಿಯಾಗಿ ಮೇಲೇರುತ್ತದೆ. ಮೇಲೆ ಹೋದಂತ ತಂಪಾಗಿ ಸಾಂದ್ರೀಕರಣಗೊಳ್ಳುತ್ತದೆ. ಇದನ್ನೇ ನಾವುಮೋಡ ಎನ್ನುತ್ತೇವೆ. ಈ ಮೋಡ ಗಾಳಿಯಿಂದ ತಂಪಾಗಿ ಭಾರವಾದ ದೊಡ್ಡ ದೊಡ್ಡ ಹನಿಗಳು ಮಳೆಯ ರೂಪದಲ್ಲಿಭೂಮಿಗೆ ಬೀಳುತ್ತವೆ. ಇದನ್ನೇ ನಾವು ಜಲಚಕ್ರ ಎನ್ನುತ್ತೇವೆ.
ಹೀಗೆ ನಮ್ಮ ವಾತಾವರಣದಲ್ಲಿ ಕರೆ,ಕೊಳ,ನದಿ ಹಾಗೂ ಸಮುದ್ರದಲ್ಲಿನ ನೀರು ಸೂರ್ಯನ ಶಾಖದಿಂದಕಾದು ನೀರಾವಿಯಾಗಿ ಮೇಲೇರುತ್ತದೆ. ಮೇಲೆ ಹೋದಂತ ತಂಪಾಗಿ ಸಾಂದ್ರೀಕರಣಗೊಳ್ಳುತ್ತದೆ. ಇದನ್ನೇ ನಾವುಮೋಡ ಎನ್ನುತ್ತೇವೆ. ಈ ಮೋಡ ಗಾಳಿಯಿಂದ ತಂಪಾಗಿ ಭಾರವಾದ ದೊಡ್ಡ ದೊಡ್ಡ ಹನಿಗಳು ಮಳೆಯ ರೂಪದಲ್ಲಿಭೂಮಿಗೆ ಬೀಳುತ್ತವೆ. ಇದನ್ನೇ ನಾವು ಜಲಚಕ್ರ ಎನ್ನುತ್ತೇವೆ.
:-
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment