ಉದ್ದೇಶ :- ಮರುಭೂಮಿ ಸಸ್ಯಗಳ ಹೊಂದಾಣಿಕೆ
ಅಗತ್ಯ ಸಾಮಗ್ರಿಗಳು :-
ಪಾಪಸುಕಳ್ಳಿಯ ಒಂದು ಕುಂಡ, ಬೇರೆ ಸಾಮಾನ್ಯ ಸಸ್ಯದ ಒಂದು ಕುಂಡ ,2 ಪಾಲಿಥಿನ್ ಚೀಲ
ವಿಧಾನ :-
ಪಾಪಸುಕಳ್ಳಿ & ಸಾಮಾನ್ಯ ಗಿಡದ ಕುಂಡಗಳಿಗೆ ಚೆನ್ನಾಗಿ ನೀರು ಹಾಕಿ ಅವುಗಳನ್ನು ಪಾಲಿಥಿನ್ಹಾಳೆಯಿಂದ ಮುಚ್ಚಿ ಕೆಳಗೆ ದಾರದಿಂದ ಭದ್ರವಾಗಿ ಕಟ್ಟಬೇಕು. ನಂತರ ಆ ಕುಂಡಗಳನ್ನು ಬಿಸಿಲಿನಲ್ಲಿ ಇಡಿಸುಮಾರು 1-2 ಗಂಟೆ ನಂತರ ಪಾಲಿಥಿನ್ ಹಾಳ ಹೊರತೆಗೆದು ನೋಡಿ.ಪಾಪಸುಕಳ್ಳಿ ಹಾಕಿದ ಚೀಲದ ಒಳಗೆ ನೀರಿನ ಹನಿಗಳು ಕಡಿಮೆ ಪ್ರಮಾಣದಲ್ಲಿ ಅಂಟಿಕೊಂಡಿದ್ದು, ಸಾಮಾನ್ಯಗಿಡಕ್ಕೆ ಹಾಕಿದ ಚೀಲದ ಒಳಗೆ ಬಾಷ್ಪವಿಸರ್ಜನೆ ಹೆಚ್ಚಾಗಿ ಹೆಚ್ಚು ನೀರು ಹನಿ ಸಂಗ್ರಹವಾಗಿರುತ್ತವೆ.
ತೀರ್ಮಾನ :-ಮರುಭೂಮಿ ಸಸ್ಯಗಳು ತಮ್ಮನ್ನು ತಾವು ಆ ವಾತಾವರಣಕ್ಕೆ ಹೊಂದಿಸಿಕೊಳ್ಳಲು ಕಡಿಮೆ ಪ್ರಮಾಣವನ್ನುಬಾಷ್ಪ ವಿಸರ್ಜನೆ ಮಾಡುತ್ತವೆ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment