---Advertisement---

ವಾರಕ್ಕೊಂದು ವಿಜ್ಞಾನ ಮಾಹಿತಿ ಕಸ ವಿಂಗಡಣೆ (ಪ್ರಯೋಗ 12)

By kspstadk.com

Updated On:

Follow Us
Science experiment 12
---Advertisement---
WhatsApp Group Join Now
Telegram Group Join Now

ಉದ್ದೇಶ :-ಕೊಳೆಯುವ ಕಸ ಹಾಗೂ ಕೊಳೆಯದ ಕಸಗಳು ಯಾವುವು ಎಂಬುದನ್ನು ಕಂಡು ಹಿಡಿಯುವುದು.

ಅಗತ್ಯ ಸಾಮಗ್ರಿಗಳು :-

ಒಂದು ಗಾಜಿನ ಸೀಸ(ಅಥವಾ ಖಾಲಿ ಹೂವಿನ ಕುಂಡ)

• ಹೊಲದ ಮಣ್ಣು,ಹತ್ತಿಯ ಚೂರುಗಳು,ಪ್ಲಾಸ್ಟಿಕ್ ಚೂರುಗಳು,ರಬ್ಬರ್ ತುಂಡುಗಳು

• ಒಣಗಿದ ಎಲೆಗಳು

• ತರಕಾರಿ ಸಿಪ್ಪೆಗಳು

• ಬಳೆಯ ಚೂರುಗಳು

ವಿಧಾನ :

ಒಂದು ಗಾಜಿನ ಸೀಸ ಅಥವಾ ಹೂವಿನ ಕುಂಡದಲ್ಲಿ ಅರ್ಧದಷ್ಟು ಹೊಲದ ಮಣ್ಣನ್ನು ಹಾಕು. ಅದಕ್ಕೆ ಸ್ವಲ್ಪನೀರನ್ನು ಸಿಂಪಡಿಸು. ಅದರ ಮೇಲೆ ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ಹಾಕು. ಅವುಗಳ ಮೇಲೆ ಮತ್ತಷ್ಟು ಮಣ್ಣನ್ನುಹಾಕಿ ನೀರು ಸಿಂಪಡಿಸು. ವಾರಕ್ಕೆ ಒಂದು ಬಾರಿ ಈ ಪದಾರ್ಥಗಳನ್ನು ಆಗಾಗ ತಿರುವಿ ಹಾಕು. 3 ರಿಂದ 4 ವಾರಗಳನಂತರ ಈ ಕುಂಡದೊಳಗಿನ ಮಣ್ಣನ್ನೆಲ್ಲ ಒಂದು ದಿನಪತ್ರಿಕೆಯ ಮೇಲೆ ಹಾಕು.

1667736267781

3-4 ವಾರಗಳಲ್ಲಿ ಆಗಾಗ ಮಣ್ಣನ್ನು ತಿರುವಿ ಹಾಕುವಾಗ ಮಣ್ಣಿನಲ್ಲಿರುವ ವಸ್ತುಗಳಲ್ಲಾಗುತ್ತಿರುವಬದಲಾವಣೆಗಳನ್ನು ಗಮನಿಸು. 3-4 ವಾರದ ನಂತರ ಮಣ್ಣಿನಲ್ಲಿರುವ ವಸ್ತುಗಳನ್ನು ಗಮನಿಸು.

ತೀರ್ಮಾನ :-

ಹತ್ತಿಯ ಚೂರುಗಳು, ಒಣಗಿದ ಎಲೆಗಳು, ತರಕಾರಿ ಸಿಪ್ಪೆಗಳು ಬಹುಪಾಲು ಕೊಳೆತಿರುತ್ತವೆ.ರಬ್ಬರ ತುಂಡುಗಳು, ಪ್ಲಾಸ್ಟಿಕ್ ಚೂರುಗಳು, ಬಳಯ ಚೂರುಗಳು ಕೂಳತಿರುವುದಿಲ್ಲ.ಅಂದರೆ ಹತ್ತಿಯ ಚೂರುಗಳು, ಒಣಗಿದ ಎಲೆಗಳು, ತರಕಾರಿ ಸಿಪ್ಪೆಗಳು ಮುಂತಾದ ಕಸಗಳು ಬೇಗನೇಕೂಳೆಯುವ ಕಸವಾಗಿವೆ.ಆದರೆ ಬಳೆಯ ಚೂರುಗಳು, ರಬ್ಬರ್ ತುಂಡುಗಳು, ಪ್ಲಾಸ್ಟಿಕ್ ಚೂರುಗಳು ಬೇಗನೆ ಕೊಳೆಯದಕಸಗಳಾಗಿವೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment