ವಾರಕ್ಕೊಂದು ವಿಜ್ಞಾನ ಮಾಹಿತಿ ಜಲಮಾಲಿನ್ಯ(ಪ್ರಯೋಗ 11)

WhatsApp Group Join Now
Telegram Group Join Now

ಉದ್ದೇಶ :- ಜಲಮಾಲಿನ್ಯ ಹೇಗೆ ಉಂಟಾಗುತ್ತದೆ ಎಂಬುದನ್ನು ಕಂಡು ಹಿಡಿಯುವುದು.

ಅಗತ್ಯ ಸಾಮಗ್ರಿಗಳು :

.● ದೊಡ್ಡ ಗಾಜಿನ ಅಥವಾ ಪ್ಲಾಸ್ಟಿಕ್ಜಾರ್(ಇವು ಲಭ್ಯವಿಲ್ಲದಿದ್ದಲ್ಲಿ ಒಂದು ಚಿಕ್ಕಬಕೆಟ್ ಅನ್ನು ತೆಗೆದುಕೊಳ್ಳಬಹುದು)

  • ನೀರು
  • ಮಣ್ಣು
  • ಯಾವುದಾದರೂ ಎಣ್ಣೆ,
  • ಕಸ(ಹಸಿ ಅಥವಾ ಒಣ)

ವಿಧಾನ :-

ಒಂದು ಜಾರ್ ನಲ್ಲಿ ಅರ್ಧದವರೆಗೆ ನೀರು ತೆಗೆದುಕೊ, ಅದರಲ್ಲಿ ಮೊದಲಿಗೆ ಒಂದಿಷ್ಟು ಮಣ್ಣನ್ನು ಹಾಕು.ನಂತರ ಒಂದಿಷ್ಟು ಕಸ ಹಾಕು. ಆಮೇಲೆ ಸ್ವಲ್ಪ ಎಣ್ಣೆ ಹಾಕು. ಒಣ ಕಡ್ಡಿಯಿಂದ ನೀರನ್ನು ಕಲಕು.

1667113792106

ನೀರನ್ನು ಕಲಕಿದ ಮೇಲೆ ತಕ್ಷಣ ಅದರಲ್ಲಾದ ಬದಲಾವಣೆಗಳನ್ನು ಮತ್ತು ಒಂದು ದಿನದ ನಂತರ ಆದಬದಲಾವಣೆಯನ್ನು ಗಮನಿಸು. ಅದರ ಬಣ್ಣ ಹಾಗೂ ವಾಸನೆಯನ್ನು ಗಮನಿಸು. ನೀರಿನ ರುಚಿ ನೋಡಬೇಡ. ನೀನುಕಂಡ ಬದಲಾವಣೆಗಳನ್ನು ನಿನ್ನ ಗೆಳೆಯರೊಂದಿಗೆ ಚರ್ಚಿಸು.

ತೀರ್ಮಾನ :-

• ನೀರು ತಿಳಿಯಾಗಿರದ ರಾಡಿಯಂತಾಗುತ್ತದೆ..

• ನೀರಿನ ಬಣ್ಣದಲ್ಲಿ ಬದಲಾವಣೆಯಾಗಿರುತ್ತದೆ.ಈ ಪ್ರಯೋಗದ ವಿಡೀಯೋನೋಡಲು ಚಿತ್ತವನ್ನು ಕ್ಲಿಕ್ ಮಾಡಿ

• ನೀರಿಗೆ ಒಂದು ಬಗೆಯ ದುರ್ವಾಸನೆ ಬಂದಿರುತ್ತದೆ..

• ನೀರು ಅಶುದ್ಧವಾಗಿರುತ್ತದೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

WhatsApp Group Join Now
Telegram Group Join Now
Sharing Is Caring:

Leave a Comment