---Advertisement---

ವಾರಕ್ಕೊಂದು ವಿಜ್ಞಾನ ಮಾಹಿತಿ ಮಣ್ಣು ಹಿಡಿದಿಡುವ ಬೇರು (ಪ್ರಯೋಗ 6)

By kspstadk.com

Updated On:

Follow Us
Science experiment 6
---Advertisement---
WhatsApp Group Join Now
Telegram Group Join Now

ಉದ್ದೇಶ :-

ಬೇರಿನ ಕಾರ್ಯಗಳನ್ನು ಕಂಡು ಹಿಡಿಯುವುದು.

ಅಗತ್ಯ ಸಾಮಗ್ರಿಗಳು :-
  • ನಾಲ್ಕು ಪ್ಲಾಸ್ಟಿಕ್ ಡಬ್ಬಿಗಳು
  • ಕಪ್ಪು ಮಣ್ಣು,
  • ಹುರುಳಿ ಕಾಳುಗಳು/ಗೋಧಿ ಕಾಳುಗಳು,
  • ನೀರು
ವಿಧಾನ :-
ಈ ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ ಎರಡೂ ಪ್ಲಾಸ್ಟಿಕ್ ಡಬ್ಬಗಳಲ್ಲಿ ಕಪ್ಪು ಮಣ್ಣನ್ನು ತುಂಬು. ಸ್ವಲ್ಪ
ನೀರನ್ನು ಚಿಮುಕಿಸು. ಒಂದು ಚಿಪ್ಪಿನೊಳಗೆ ಒಂದು ರಾತ್ರಿ ನೆನೆಸಿಟ್ಟ ಹುರುಳಿ ಅಥವಾ ಗೋಧಿ ಕಾಳುಗಳನ್ನು ಬಿತ್ತನೆ
ಮಾಡು. ಮತ್ತೇ ಸ್ವಲ್ಪ ನೀರನ್ನು ಚಿಮುಕಿಸು. ಇನ್ನೊಂದು ಚಿಪ್ಪಿನೊಳಗೆ ಏನನ್ನೂ ಬಿತ್ತನೆ ಮಾಡಬೇಡ. ಸ್ವಲ್ಪ
ನೀರನ್ನು ಚಿಮುಕಿಸು. ಹೀಗೆ ಒಂದು ವಾರದವರೆಗೆ ಪ್ರತಿ ದಿನ ಎರಡು ಸಲ ನೀರು ಚಿಮುಕಿಸುತ್ತಿರು.
 
 
 
1665121067584
ಹೀಗೆ ಬಿತ್ತನೆ ಮಾಡಿದ ಡಬ್ಬದೊಳಗೆ ಏನನ್ನು ಕಾಣುತ್ತಿಯಾ ಗಮನಿಸು. ಬಿತ್ತನೆ ಮಾಡದ ಡಬ್ಬದೊಳಗೆ
ಏನನ್ನು ಕಾಣುತ್ತೀಯಾ ಗಮನಿಸು. ಎರಡೂ ಪ್ಲಾಸ್ಟಿಕ್ ಡಬ್ಬದಲ್ಲಿನ ಮಣ್ಣನ್ನು ಸೂಕ್ಷ್ಮವಾಗಿ ಗಮನಿಸು.
ತೀರ್ಮಾನ :-
  • ಒಂದು ವಾರದ ನಂತರ ಬಿತ್ತನೆ ಮಾಡಿದ ಪ್ಲಾಸ್ಟಿಕ್ ಡಬ್ಬದೊಳಗೆ ಸಸಿಗಳು ಬೆಳೆದಿರುತ್ತವೆ.
  • ಹುರುಳಿ.ಗೋಧಿ ಕಾಳುಗಳು ಸಸಿಯಾಗಿ ಅವುಗಳ ಬೇರಿಗೆ ಮಣ್ಣು ಅಂಟಿಕೊಂಡಿರುತ್ತದೆ.
  • ಬೇರುಗಳು ಮಣ್ಣನ್ನು ಭದ್ರವಾಗಿ ಹಿಡಿದು ಸಸ್ಯಕ್ಕೆ ಆಧಾರವನ್ನು ನೀಡುತ್ತವೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment