ವಾಟರ್ ಓಲ್ಟಾ ಮೀಟರ್ – ವಾರಕ್ಕೊಂದು ವಿಜ್ಞಾನ ಮಾಹಿತಿ (ಪ್ರಯೋಗ 3)


ಪ್ರಯೋಗದ ಹೆಸರು : ವಾಟರ್ ಓಲ್ಟಾ ಮೀಟರ್


ಅಗತ್ಯವಿರುವ ಸಾಮಗ್ರಿಗಳು : ಒಂದು ಪ್ಲಾಸ್ಟಿಕ್ ಕಪ್, ಎರಡು ಗ್ರಾಫಿಟ್ ಕಡ್ಡಿಗಳು, ಉಪ್ಪು, ನೀರು, ಒಂದು ಬ್ಯಾಟರಿ.


ಪ್ರಯೋಗ ಮಾಡುವ ವಿಧಾನ :

ಒಂದು ಪ್ಲಾಸ್ಟಿಕ್ ಲೋಟವನ್ನು ತೆಗೆದುಕೊಂಡು ಅದರ ತಳ ಭಾಗಕ್ಕೆ ಒಂದು HW ಬ್ಯಾಟರಿಯ ಧನಾಗ್ರ ಮತ್ತು ಋಣಾಗ್ರ ಗಳನ್ನು ಸ್ಪರ್ಶಿಸಿ ಮಾರ್ಕ್ ಮಾಡಿಕೊಳ್ಳಬೇಕು. ನಂತರ ಮಾರ್ಕ್ ಮಾಡಿಕೊಂಡ ಜಾಗದಲ್ಲಿ ಎರಡು ಚಿಕ್ಕ ರಂದ್ರಗಳನ್ನು ಮಾಡಿ ನಂತರ ರಂಧ್ರಗಳ ಮೂಲಕ ಎರಡು ಗ್ರಾಫೈಟ್ ಕಡ್ಡಿಗಳನ್ನು ಸೇರಿಸಬೇಕು. ಈಗ ಲೋಟದಲ್ಲಿ ಅರ್ಧದಷ್ಟು ನೀರನ್ನು ತೆಗೆದುಕೊಳ್ಳಿ. ಲೋಟದ ತಳಭಾಗಕ್ಕೆ ಹೆಚ್ ಡಬ್ಲ್ಯೂ ಬ್ಯಾಟರಿಯನ್ನು 2 ಗ್ರಾಫಿಟ್ ಕಡ್ಡಿಗಳಿಗೆ ತಾಗಿಸಿದಾಗ ತೋಟದ ಒಳಗೆ ಕಾಣುವ ಒಂದು ಗ್ರಾಫೈಟ್ ಕಡ್ಡಿಯ ಮೇಲೆ ಗುಳ್ಳೆಗಳು ಬರುತ್ತಿರುವುದನ್ನು ಕಾಣುವಿರಿ ಇದು ಆಕ್ಸಿಜನ್ ಆಗಿರುತ್ತದೆ. ಇನ್ನೊಂದು ನಾನು ಗ್ರಾಫೈಟ್ ಕಡ್ಡಿಯ ಮೇಲೆ ನೊರೆಭರಿತ ನೀರು ಓಡುತ್ತಿರುವಂತೆ ಕಾಣುತ್ತದೆ ಇದು ಹೈಡ್ರೋಜನ ಆಗಿರುತ್ತದೆ. ಆಕ್ಸಿಜನ್ ಮತ್ತು ಹೈಡ್ರೋಜನ್ ಗಳ ಬಿಡುಗಡೆಯನ್ನು ನೋಟದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾಣಲು ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ. ಇದನ್ನು ನಾವು ವಾಟರ್ ವೊಲ್ಟಾ ಮೀಟರ್ ಎನ್ನುತ್ತೇವೆ. ಇದರಿಂದ ತಿಳಿದು ಬರುವುದೇನು? ವಿಚಾರಿಸಿ.


ತೀರ್ಮಾನ : ನೀರು ಹೈಡ್ರೋಜನ್ ಮತ್ತು ಆಕ್ಸಿಜನ್ ಧಾತುಗಳ ಸಂಯೋಜನೆಯಾಗಿದೆ.

IMG 20220216 WA0017 min
ಶ್ರೀ ಮಂಜಪ್ಪ ಅಂಗರಗಟ್ಟಿ

ಶ್ರೀ ಮಂಜಪ್ಪ ಅಂಗರಗಟ್ಟಿ ಇವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ ಬೈಲ್ ಮಂಗಳೂರು ಇಲ್ಲಿ TCH ತರಬೇತಿಯನ್ನು ಪಡೆದು 2008ರಲ್ಲಿ ಅಂಕೋಲಾದಲ್ಲಿ ವಿಜ್ಞಾನ ಶಿಕ್ಷಕರಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಇವರು 20ಕ್ಕೂ ಹೆಚ್ಚು ಬ್ರಿಟಿಷ್ ಕೌನ್ಸಿಲ್ ಇಂಗ್ಲಿಷ್ ತರಬೇತಿಗಳಲ್ಲಿ ಜಿಲ್ಲಾ MRP ಆಗಿ ಮತ್ತು 15ಕ್ಕೂ ಹೆಚ್ಚು ವಿಜ್ಞಾನ ತರಬೇತಿಗಳಲ್ಲಿ MRP ಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಗುರುಚೇತನ ಕಾರ್ಯಕ್ರಮದಲ್ಲಿ ಕೂಡ MRP ಆಗಿ ಕೆಲಸ ನಿರ್ವಹಿಸಿರುತ್ತಾರೆ.
Mob: 93421 38131

Sharing Is Caring:

Leave a Comment