ವಾರಕ್ಕೊಂದು ವಿಜ್ಞಾನ ಮಾಹಿತಿ ಪರಿಸರದಲ್ಲಿ ಲಭ್ಯವಿರುವ ವಸ್ತುಗಳು ಹೇಗೆ ಉಂಟಾಗಿವೆ?( ಪ್ರಯೋಗ 18)

ಉದ್ದೇಶ :-

ಪರಿಸರದಲ್ಲಿ ಲಭ್ಯವಿರುವ ವಸ್ತುಗಳು ಹೇಗೆ ಉಂಟಾಗಿವೆ?

IMG 20221201 WA0069


ಅಗತ್ಯ ಸಾಮಗ್ರಿಗಳು :

ಸುಣ್ಣದ ಪುಡಿ ( ಚಾಕ್ ಪೀಸ್) , ಗಾಜಿನ ಪಟ್ಟಿ, ಭೂತಗನ್ನಡಿ


ವಿಧಾನ :

ಸೀಮೆಸುಣ್ಣದ ವುಡಿಯನ್ನು ತೆಗೆದುಕೊ. ಅದನ್ನು ಬೆರಳಿನಿಂದ ಮುಟ್ಟು ನಿನ್ನ ಬೆರಳಿಗೆ ಅಂಟಿಕೊಂಡ ಸಣ್ಣ
ಸಣ್ಣ ಕಣಗಳನ್ನು ಗಾಜಿನ ಪಟ್ಟಿಯ ಮೇಲೆ ನಿಧಾನವಾಗಿ ಚಿಮುಕಿಸು .ಒಂದು ಪೀನ ಮಸೂರ (ಭೂತಗನ್ನಡಿ) ದ
ಸಹಾಯದಿಂದ ಆ ಸಣ್ಣ ಸಣ್ಣ ಕಣಗಳನ್ನು ಸೂಕ್ಷ್ಮವಾಗಿ ಗಮನಿಸು

ಆ ಸಣ್ಣ ಸಣ್ಣ ಕಣಗಳನ್ನು ಮತ್ತೆ ಪುಡಿ ಮಾಡಲು ಸಾಧ್ಯವೇ ? ಗಮನಿಸು

ತೀಮಾ೯ನ :


ನಾವು ಸೀಮೆ ಸುಣ್ಣದ ಪುಡಿಯನ್ನು ಎಷ್ಟೇ ಸಣ್ಣ ಸಣ್ಣ ಪುಡಿಮಾಡಿದರೂ ಕೊನೆಗೆ
ಇನ್ನೂ ಚಿಕ್ಕದು ಮಾಡಲಾಗದ ಸಣ್ಣ ಕಣಗಳನ್ನು ಕಾಣುತ್ತೇವೆ.ಇವುಗಳಿಂದಲೇ ಪರಿಸರದಲ್ಲಿ ಲಭ್ಯವಿರುವ ವಸ್ತುಗಳು
ಉಂಟಾಗಿವೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

Sharing Is Caring:

Leave a Comment