ವಾರಕ್ಕೊಂದು ವಿಜ್ಞಾನ ಮಾಹಿತಿ ಶಾಖದಿಂದ ನೀರಾವಿ (ಪ್ರಯೋಗ 8)

WhatsApp Group Join Now
Telegram Group Join Now


ಉದ್ದೇಶ :-
ನೀರು ಶಾಖದಿಂದ ಆವಿಯಾಗುತ್ತವೆ ಎಂಬುದನ್ನು ಕಂಡು ಹಿಡಿಯುವುದು.


ಅಗತ್ಯ ಸಾಮಗ್ರಿಗಳು :-

  • ಬೀಕರ್
  • ನೀರು
  • ಮದ್ಯಸಾರ ದೀಪ
  • ಸ್ಟ್ಯಾಂಡ್
IMG 20221007 WA0026

ವಿಧಾನ :-


ನಿನ್ನ ಶಿಕ್ಷಕರ ಮಾರ್ಗದರ್ಶನದಲ್ಲಿ ಬೀಕರನ್ನು ಸ್ಟ್ಯಾಂಡ್ ಮೇಲೆ ಇಡು. ಅದರೊಳಗೆ ಕಾಲು ಭಾಗ ನೀರನ್ನು ಹಾಕು. ಮದ್ಯಸಾರ ದೀಪದ ಸಹಾಯದಿಂದ ಬೀಕರನ್ನು ಕಾಯಿಸು.

ಸ್ವಲ್ಪ ಹೊತ್ತಿನ ಬಳಿಕ ಬೀಕರಲ್ಲಿನ ನೀರನ್ನು ಗಮನಿಸು, ಬೀಕರಲ್ಲಾಗುತ್ತಿರುವ ಬದಲಾವಣೆಯನ್ನು ಗಮನಿಸು.


ತೀರ್ಮಾನ :-

  • ನೀರು ಕುದಿಯತೊಡಗುತ್ತದೆ.
  • ಸ್ವಲ್ಪ ಹೊತ್ತಿನ ಬಳಿಕ ನೀರು ಆವಿಯಾಗಲು ಪ್ರಾರಂಭವಾಗುತ್ತದೆ.
  • ಇದರಿಂದ ನೀರನ್ನು ಬಿಸಿ ಮಾಡಿದಾಗ ನೀರು ಆವಿಯಾಗುತ್ತದೆ ಎಂದು ತಿಳಿಯುತ್ತದೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

WhatsApp Group Join Now
Telegram Group Join Now
Sharing Is Caring:

Leave a Comment