ಉದ್ದೇಶ :- ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ.
ಅಗತ್ಯ ಸಾಮಗ್ರಿಗಳು :-3 ಆಯಾತಾಕಾರದ ಒಂದೇ ಅಳತೆಯ ಕಾರ್ಡಶೀಟ್ ಮೇಣದ ಬತ್ತಿ, ಟೇಬಲ್, ಸೂಜಿ,
ವಿಧಾನ :-ಮೂರು ಕಾರ್ಡಶೀಟಗಳನ್ನು ತೆಗೆದುಕೊಂಡು ಸಮಾಂತರವಾಗಿ ಜೋಡಿಸಿ ಒಂದೇ ಸ್ಥಳದಲ್ಲಿ ಇಟ್ಟು ಮೂರುಕಾರ್ಡಶೀಟಗಳಿಗೆ ರಂದ್ರಗಳನ್ನು ಮಾಡಿಕೊಳ್ಳಬೇಕು. ನಂತರ ಟೇಬಲ್ ಮೇಲೆ 10 ಸೆಂ.ಮೀ. ಅಂತರದಲ್ಲಿ 3ಕಾರ್ಡಶೀಟ್ ಗಳನ್ನು ಸಮಾಂತರವಾಗಿ ಇಟ್ಟು ಒಂದು ಬದಿ ಮೇಣದ ಬತ್ತಿ ಇಟ್ಟು ಇನ್ನೊಂದು ಬದಿ ರಂದ್ರದ ಮೂಲಕವೀಕ್ಷಿಸಿ, ದೀಪ ಕಾಣುತ್ತದೆ. ನಂತರ ಮಧ್ಯದ ಕಾರ್ಡಶೀಟ್ ಸ್ಥಾನಬದಲಿಸಿ ಇಟ್ಟು ಮೇಣದಬತ್ತಿ ವೀಕ್ಷಿಸಿ ನೋಡಿ.(6ಕಾರ್ಡಶೀಟ್ ನಲ್ಲಿ ಇರುವ ರಂದ್ರಗಳು ಸರಳ ರೇಖೆಯಲ್ಲಿದ್ದಾಗ ದೀಪ ಕಾಣುತ್ತದೆ. ಸರಳ ರೇಖೆಯಲ್ಲಿಇಲ್ಲದಿದ್ದಾಗ ದೀಪ ಕಾಣುವುದಿಲ್ಲ.
ತೀಮಾ೯ನ :-ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ.ಇದೇ ಪ್ರಯೋಗವನ್ನು ಸರಳ & ಇನ್ನೊಂದು ಬಾಗಿದ ಕೊಳವೆಯಿಂದ ಮೇಣದ ಬತ್ತಿ ವೀಕ್ಷಣೆ ಮಾಡಿ ಇದೇಪ್ರಯೋಗ ಮಾಡಬಹುದು.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment