ಉದ್ದೇಶ :- ನೀರಿನ ಶುದ್ಧಿಕರಣ (ಮಣ್ಣು ಮಿಶ್ರಿತ ನೀರು)
ಅಗತ್ಯ ಸಾಮಗ್ರಿಗಳು :-
ಬೀಕರ್, ಸ್ಟ್ಯಾಂಡ್, ಆಲಿಕೆ, ಸೋಸುಕಾಗದ, ನೀರು, ಮಣ್ಣು
ವಿಧಾನ :-
ಸ್ಟ್ಯಾಂಡ್ ನ್ನು ಸಿದ್ಧಪಡಿಸಿ ಅದಕ್ಕೆ ಅಲಿಕೆ ಜೋಡಿಸಬೇಕು. ಸೋಸು ಕಾಗದವನ್ನು ಅಲಿಕ ಆಕಾರದಲ್ಲಿ ಮಡಚಿಕೊಂಡು ಅದರಲ್ಲಿ ಇಡಬೇಕು, ಮಣ್ಣು ಮಿಶ್ರಿತ ನೀರನ್ನು ನಿಧಾನವಾಗಿ ಆಲಿಕೆಯಲ್ಲಿ ಸುರಿಯಬೇಕು ಅದರ ಕೆಳಗೆ ನೀರು ಸಂಗ್ರಹಿಸಲು ಬೀಕರ್ ಇಡಬೇಕು.
ಸೋಸುಕಾಗದದಲ್ಲಿ ಸೂಕ್ಷ್ಮ ರಂದ್ರಗಳಿದ್ದು, ಅವು ನೀರನ್ನು ಸೋಸಿ ಮಣ್ಣಿನ ಕಣಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಮಣ್ಣು ರಹಿತವಾದ ನೀರು ಕೆಳಗೆ ಬೀಕರ್ ನಲ್ಲಿ ಸಂಗ್ರಹವಾಗುತ್ತದೆ.
ತೀರ್ಮಾನ :
ಸೋಸು ಕಾಗದದ ಮೂಲಕ ಮಣ್ಣು ಮಿಶ್ರಿತ ನೀರನ್ನು ಶುದ್ಧಿಕರಿಸಬಹುದು (ಕುಡಿಯಲು ಯೋಗ್ಯವಲ್ಲ)
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment