ಉದ್ದೇಶ :- ಪದಾರ್ಥಗಳನ್ನು ಬೇರ್ಪಡಿಸುವಿಕೆ
ಅಗತ್ಯ ಸಾಮಗ್ರಿಗಳು :-
ಮರಳು ಜರಡಿ,
ಹಿಟ್ಟು, ತೌಡಿನ ಮಿಶ್ರಣ, ನೀರು, ಬೀಕರ್ ತಯಾರಿಸಿಟ್ಟ ಟೀ ಕಾಯಿಯನ್ನು ಒಳಗೊಂಡ ಸಸ್ಯ
ವಿಧಾನ :-
4 ವಿದ್ಯಾರ್ಥಿಗಳನ್ನು ಕರೆದು 1ನೇ ವಿದ್ಯಾರ್ಥಿಗೆ ತೌಡು ಮಿಶ್ರಿತ ಹಿಟ್ಟು, 2ನೇ ವಿದ್ಯಾರ್ಥಿಗೆ ನೀರು &
ಮರಳು ಸೇರಿದ ಬೀಕರ್, 3ನೇ ವಿದ್ಯಾರ್ಥಿಗೆ ಟೀ, 4ನೇ ವಿದ್ಯಾರ್ಥಿಗೆ ಧಾನ್ಯದ ಕಾಯಿಯನ್ನೊಳಗೊಂಡ ಸಸ್ಯ ನೀಡಿ ಅವುಗಳಲ್ಲಿನ ಪದಾರ್ಥಗಳನ್ನು ತಮಗೆ ತಿಳಿದ ಹಾಗೆ ಬೇರ್ವಡಿಸಲು ಸೂಚಿಸುವುದು.
1ನೇ ವಿದ್ಯಾರ್ಥಿ ತೌಡು ಮಿಶ್ರಿತ ಹಿಟ್ಟನ್ನು ಜರಡಿ ಹಿಡಿದು ಬೇರ್ಪಡಿಸುವುದು,
2ನೇ ವಿದ್ಯಾರ್ಥಿ ಮರಳು ಮಿಶ್ರಿತ ನೀರನ್ನು ನಿಧಾನವಾಗಿ ಬಸಿಯುವಿಕೆಯಿಂದ ಬೇರ್ಪಡಿಸುತ್ತಾನೆ.
3ನೇ ವಿದ್ಯಾರ್ಥಿ ಮಾಡಿಟ್ಟ ಟೀಯನ್ನು ಜರಡಿ ಹಿಡಿದು ಅದರಲ್ಲಿನ ಟೀ ಪುಡಿ ಬೇರ್ಪಡಿಸುತ್ತಾನೆ.
4ನೇ ವಿದ್ಯಾರ್ಥಿ ಧಾನ್ಯ ಒಳಗೊಂಡ ಸಸ್ಯವನ್ನು ಬಡಿಯುವುದರಿಂದ ಸಸ್ಯ ಮತ್ತು ಕಾಯಿ (ಧಾನ್ಯ)
ಬೇರ್ಪಡಿಸುತ್ತಾನೆ.
ತೀರ್ಮಾನ : >
ವಸ್ತುಗಳನ್ನು ಬೇರೆ ಬೇರೆ ವಿಧಾನಗಳಿಂದ ಅವುಗಳಲ್ಲಿನ ಘಟಕಗಳನ್ನು (ಉಪಯುಕ್ತ ಅಥವಾ
ನಿರುಪಯುಕ್ತ) ಬೇರ್ಪಡಿಸಬೇಕಾಗುತ್ತದೆ, ಎಲ್ಲದಕ್ಕೂ ಒಂದೇ ವಿಧಾನ ಅನ್ವಯವಾಗುವುದಿಲ್ಲ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment