ರಾಜ್ಯದ ಶಿಕ್ಷಕರ ಹೋರಾಟದ ರೂಪುರೇಷೆಗಳು

IMG 20230228 WA0047

ರಾಜ್ಯದ ಶಿಕ್ಷಕರ ಹೋರಾಟದ ರೂಪರೇಷೆಗಳು

ದಿನಾಂಕ: 01-03-2023ರಂದು ನಡೆಯುವ ಅನಿರ್ಧಿಷ್ಟ ಅವಧಿಯ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿರುವ ಕುರಿತು ರಾಜ್ಯ ಸಮಸ್ತ ಶಿಕ್ಷಕರು ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಂಡು ಹೋರಾಟವನ್ನು ಯಶಸ್ವಿಗೊಳಿಸುವುದು

ದಿನಾಂಕ: 23-02-2023ರಂದು ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ7ನೇ ವೇತನ ಆಯೋಗದ ಜಾರಿನೂತನ ಪಿಂಚಣಿ ಯೋಜನೆಯನ್ನು (NPS) ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸಬೇಕೆಂಬ 2 ಬೇಡಿಕೆಗಳ ಈಡೇರಿಕೆಗೆ ರಾಜ್ಯದ ಸಮಸ್ತ ಶಿಕ್ಷಕರು ಬೆಂಬಲಿಸಿ ಸಂಪೂರ್ಣ ಶಾಲೆಗಳನ್ನು ಬಂದ್ ಮಾಡಿ ಕರ್ತವ್ಯಕ್ಕೆ ಗೈರು ಹಾಜರಾಗುವುದು.

👉ಪರೀಕ್ಷಾ ಸಿದ್ಧತೆಯಾಗಲೀ ಅಥವಾ ಆನ್‌ಲೈನ್ ಕಾರ್ಯಗಳಾದ SATS,, SSLC Work, ವಿದ್ಯಾರ್ಥಿ ವೇತನ ಹಾಗೂ ಬಿಸಿಯೂಟದ SMS, ನಿಷ್ಠಾ, ದೀಕ್ಷಾ ತರಬೇತಿ ಹೀಗೆ ಯಾವುದೇ ಆನ್‌ಲೈನ್ ಕಾರ್ಯಗಳನ್ನು ಮಾಡದಿರುವುದು ಜೊತೆಗೆ ಇನ್ನಿತರ ವಿಷಯಗಳ ಬಗ್ಗೆ ಕೂಡ ಪಾಲಕರ ಗಮನಕ್ಕೆ ತಂದು ನಮ್ಮ ಬೇಡಿಕೆಗಳ ಮಹತ್ವ ಹಾಗೂ ಹೋರಾಟದ ಅನಿವಾರ್ಯತೆ ಬಗ್ಗೆ ತಿಳಿಸುವುದು

👉ಶಾಲೆಗಳಲ್ಲಿ ಬಿಸಿಯೂಟದ ಸಿಬ್ಬಂದಿಯವರಿಗೂ/ SDMC ಅಧ್ಯಕ್ಷರು, ಸದಸ್ಯರಿಗೆ ನಮ್ಮ ಹೋರಾಟದ ಬಗ್ಗೆ ತಿಳಿಸಿ ಬಿಸಿಯೂಟವನ್ನು ಕೂಡ ಸ್ಥಗಿತಗೊಳಿಸುವುದು ಹಾಗೂ ಮಕ್ಕಳು ಶಾಲೆಗೆ ಬರದಂತೆ ತಿಳಿಸುವುದು

👉ಅತಿಥಿ ಶಿಕ್ಷಕರಿಗೂ ಕೂಡ ತಿಳಿಸಿ ಅವರು ಕೂಡ ಶಾಲೆಗಳಿಗೆ ಬರದಂತೆ ವಿನಂತಿಸಿ ಸಂಪೂರ್ಣವಾಗಿ ಶಾಲೆಗಳನ್ನು ಬಂದ್ ಮಾಡಿ ಸಮಸ್ತ ಶಿಕ್ಷಕರು ಶಾಲಾ ಕರ್ತವ್ಯಕ್ಕೆ ಗೈರು ಹಾಜರಾಗಿ ಹೋರಾಟಕ್ಕೆ ಬೆಂಬಲಿಸುವುದು

👉BLOಗಳಾಗಿ ಹಾಗೂ ಚುನಾವಣೆ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಸ್ಥಳೀಯರಿಗೆ ಹೋರಾಟದ ಮಹತ್ವವನ್ನು ತಿಳಿಸಿ ಹೋರಾಟದಲ್ಲಿ ಭಾಗವಹಿಸಿ ಹೋರಾಟವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಲು ಈ ಮೂಲಕ ತಿಳಿಸಲಾಗಿದೆ .

ಸರ್ಕಾರವು ಕೂಡ ರಾಜ್ಯದ ನೌಕರರ/ಶಿಕ್ಷಕರ 2 ಪ್ರಮುಖ ಬೇಡಿಕೆಗಳಾದ:-

👉7ನೇ ವೇತನ ಆಯೋಗದ ವರದಿಯ ವಿಳಂಬತೆ ಹಿನ್ನಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸಬೇಕು

👉ನೂತನ ಪಿಂಚಣಿ ಯೋಜನೆಯನ್ನು (NPS) ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸಲೇಬೇಕೆಂದು ವಿನಂತಿಸುತ್ತಾ ಮೇಲಿನ ಅಂಶಗಳಂತೆ ರಾಜ್ಯದ ಸಮಸ್ತ ಶಿಕ್ಷಕರು ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೋಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ಏನೇ ಬರಲಿ ಒಗ್ಗಟ್ಟಿರಲಿ; ಸಂಘ ಶಕ್ತಿ ಚಿರಾಯುವಾಗಲಿ

ಇಂದ,

ಶಂಭುಲಿಂಗನಗೌಡ ಪಾಟೀಲ

ಅಧ್ಯಕ್ಷರು

ಚಂದ್ರಶೇಖರ್ ನುಗ್ಗಲಿ

ಪ್ರಧಾನ ಕಾರ್ಯದರ್ಶಿ

ಕ.ರಾ.ಪ್ರಾ.ಶಾ.ಶಿ. ಸಂಘ (ರಿ) ಬೆಂಗಳೂರು

Sharing Is Caring:

Leave a Comment