ಉದ್ದೇಶ :-
ಬೀಜಗಳ ಮೊಳಕೆ
ಅಗತ್ಯ ಸಾಮಗ್ರಿಗಳು :-
ಕಾಳುಗಳು (ಹೆಸರುಕಾಳು ಅಥವಾ ಕಡಲೆಕಾಳು ಅಥವಾ ಹುರಳಿಕಾಳು) ಪಾತ್ರೆ, ನೀರು, ಬಟ್ಟೆ.
ವಿಧಾನ :-
ಒಂದೇ ರೀತಿಯ ಕಾಳುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ನೀರು ಹಾಕಿ 5-6 ಗಂಟೆ ಇಡಬೇಕು.ನಂತರ ನೀರನ್ನು ತೆಗೆದು ಕಾಳುಗಳನ್ನು ಬಟ್ಟೆಯಲ್ಲಿ ಹಾಕಿ ಕಟ್ಟಿ ಒಂದು ದಿನ ಒಂದು ಪಾತ್ರೆಯಲ್ಲಿ ಮುಚ್ಚಿಇಡಬೇಕು.ಒಂದು ದಿನದ ನಂತರ ಕಾಳುಗಳಿಂದ ಬಿಳಿಯ ರಚನೆ ಬೆಳೆದು ಹೊರ ಬಂದಿರುವುದುಕಂಡು ಬರುತ್ತದೆ.
ತೀಮಾ೯ನ :-
ಬೀಜಗಳು ಮೊಳಕೆಯೊಡೆದು ಬರಲು ಅವುಗಳಿಗೆ ಯೋಗ್ಯ ವಾತಾವರಣ ನೀಡುವುದು ಅಗತ್ಯ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment