ಉದ್ದೇಶ :- ದ್ರವ ವಸ್ತುವಿನಲ್ಲಿ ಕಣಗಳು ಸ್ವಲ್ಪ ವಿರಳವಾಗಿರುತ್ತವೆ.
ಅಗತ್ಯ ಸಾಮಗ್ರಿಗಳು :- ಎರಡು ಅಳತೆಯ ಜಾಡಿಗಳು, ಗೋಲಿಗಳು, ಸಕ್ಕರ
ವಿಧಾನ :-
- ಎರಡು ಅಳತೆಯ ಜಾಡಿಗಳನ್ನು ತೆಗೆದುಕೊಳ್ಳಿ
- ಎರಡರಲ್ಲೂ ಒಂದೇ ಪ್ರಮಾಣದ ನೀರು ತುಂಬಿ , ಆಗ ಎರಡೂ ಜಾಡಿಗಳಲ್ಲಿ ನೀರಿನ ಮಟ್ಟಸಮನಾಗಿರುತ್ತದೆ
- ಈಗ ಒಂದು ಜಾಡಿಯಲ್ಲಿ ಮೂರು ಗೋಲಿಗಳನ್ನು ಇನ್ನೊಂದರಲ್ಲಿ ಅಷ್ಟೇ ತೂಕದ ಸಕ್ಕರೆಯನ್ನು ಹಾಕಿ.
- ಎರಡೂ ಜಾಡಿಗಳಲ್ಲಿಯ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ.
- ಸಕ್ಕರೆ ಹಾಕಿದ ಜಾಡಿಯೊಳಗಿನ ನೀರನ್ನು ,ಸಕ್ಕರೆ ಕರಗುವವರೆಗೆ ಚಮಚದಿಂದ ಚೆನ್ನಾಗಿ ಕಲಕಿ
- ರಿಸಕ್ಕರೆ ಕರಗಿದ ಬಳಿಕ ಅದರಲ್ಲಿಯ ನೀರಿನಮಟ್ಟವು ಮೊದಲಿನಷ್ಟಕ್ಕೆ ಇಳಿಯುತ್ತದೆ.
- ಅಂದರೆ ಸಕ್ಕರೆ ಹಾಕಿದರೂ ನೀರಿನ ಗಾತ್ರದಲ್ಲಿ ಯಾವ ವ್ಯತ್ಯಾಸವೂ ಉಂಟಾಗಲಿಲ್ಲ.
- ಇದರ ಅರ್ಥ ದ್ರವವಸ್ತುವಿನಲ್ಲಿ ಕಣಗಳು ವಿರಳವಾಗಿದ್ದು ಅವುಗಳ ಮಧ್ಯೆ ಸಕ್ಕರೆ ಕಣಗಳುಸೇರಿಕೊಂಡಿರುತ್ತವೆ.
ತೀರ್ಮಾನ :- ದ್ರವ ವಸ್ತುವಿನಲ್ಲಿ ಕಣಗಳು ಸ್ವಲ್ಪ ವಿರಳವಾಗಿರುತ್ತವೆ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment