ಉದ್ದೇಶ :-
ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ
ಅಗತ್ಯ ಸಾಮಗ್ರಿಗಳು :
ಗಾಜಿನ ಜಾಡಿ, ಕಲ್ಲು , ದಾರ
ವಿಧಾನ :-
ಗಾಜಿನ ಜಾಡಿಯೊಂದನ್ನು ತೆಗೆದುಕೊಂಡು ಅದರ ಕಂಠಪೂರ್ತಿ ನೀರು ತುಂಬಿ ತಟ್ಟೆಯ ಮೇಲಿಡು ,ಜಾಡಿಯ ಗಾತ್ರಕ್ಕೆ ಮೀರದಂತ ಆರಿಸಿದ ಶುಭ್ರ ಕಲ್ಲೊಂದನ್ನು ನಿಧಾನವಾಗಿ ಚಿತ್ರದಲ್ಲಿ ಕಾಣಿಸಿದಂತೆ ಇಳಿಬಿಡು .ಕಲ್ಲನ್ನು ಇಳಿಬಿಟ್ಟಾಗ ಜಾಡಿಯಲ್ಲಿರುವ ನೀರು ಏನಾಯಿತು ?
ಜಾಡಿಯಿಂದ ನೀರು ಹೊರಚೆಲ್ಲಿತು.
ತೀಮಾ೯ನ :-
ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment