ವಾರಕ್ಕೊಂದು ವಿಜ್ಞಾನ ಮಾಹಿತಿ ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಸಸ್ಯಗಳು ತಮ್ಮ ಆಹಾರವನ್ನು ತಯಾರಿಸುತ್ತವೆ (ಪ್ರಯೋಗ 15)

ಉದ್ದೇಶ :-

ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಸಸ್ಯಗಳು ತಮ್ಮ ಆಹಾರವನ್ನು ತಯಾರಿಸುತ್ತವೆ.

ಅಗತ್ಯ ಸಾಮಗ್ರಿಗಳು :-

ಎರಡು ಮಣ್ಣಿನ ಕುಂಡಗಳು ,ಶೇಂಗಾ ಬೀಜಗಳು ,ನೀರು

ವಿಧಾನ :

ಎರಡು ಮಣ್ಣಿನ ಕುಂಡಗಳನ್ನು ತೆಗೆದುಕೊಂಡು ,ಎರಡರಲ್ಲಿಯೂ ಶೇಂಗಾ ಬೀಜಗಳನ್ನುಬಿತ್ತುವುದು.ತದನಂತರ ಒಂದು ಕುಂಡವನ್ನು ಬಿಸಿಲು ಬೀಳುವ ಜಾಗದಲ್ಲಿಯೂ ಮತ್ತೊಂದನ್ನು ಕತ್ತಲಿರುವಜಾಗದಲ್ಲಿಡುವುದು ಪ್ರತಿನಿತ್ಯವೂ ಸ್ವಲ್ಪ ನೀರನ್ನು ಎರಡೂ ಕುಂಡಕ್ಕೂ ಹಾಕುತ್ತಿರು. ಹದಿನೈದು ದಿನಗಳ ನಂತರ ಅವುಗಳಲ್ಲಿ ಕಂಡುಬರುವ ಬದಲಾವಣೆಗಳನ್ನು ಗಮನಿಸುವುದು.

IMG 20221116 WA0065

ಬಿಸಿಲು ಬೀಳುವ ಜಾಗದಲ್ಲಿನ ಕುಂಡದಲ್ಲಿ ಬೀಜವು ಉತ್ತಮ ಸಸಿಯಾಗಿ ಬೆಳೆದಿರುತ್ತದೆ ಆದರೆ ಕತ್ತಲಿನಲ್ಲಿ ನ ಕುಂಡದಲ್ಲಿ ಬೀಜವು ಬೆಳೆದಿರುವುದಿಲ್ಲ.

ತೀಮಾ೯ನ :-ಪಾಯಗಳ.ಕಾರ್ಬನ್ ಜ

ಸಸ್ಯಗಳು ತಮ್ಮ ಆಹಾರವನ್ನು ತಯಾರಿಸುವುದಕ್ಕೆ ಸೂರ್ಯನ ಶಕ್ತಿ ಅವಶ್ಯಕತೆ ಇದೆ. ಇದರಿಂದ ಸಸ್ಯಗಳು ಉತ್ತಮ ಬೆಳವಣಿಗೆ ಹೊಂದುತ್ತದೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

Sharing Is Caring:

Leave a Comment