ಹೆಚ್ಚುವರಿ ಮತ್ತು ವರ್ಗಾವಣೆ ಪ್ರಕ್ರಿಯೆಗಳ ಕುರಿತು ಮಾನ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಹೆಚ್ಚಿನ ಮಾಹಿತಿ ಇಲ್ಲಿದೆ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಶಾಲಾ ಪಂಚಾಂಗವನ್ನು ಸನ್ಮಾನ್ಯ ರಿತೀಶ ಕುಮಾರ್ ಸಿಂಗ್ (IAS) ಮಾನ್ಯ ಪ್ರಧಾನಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅವರು ಇಂದುತಮ್ಮ ಕಛೇರಿಯಲ್ಲಿ ಬಿಡುಗಡೆಗೊಳಿಸಿ ಹಾಗೂ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಮತ್ತು ಇನ್ನಿತರ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು.

1) ಹೆಚ್ಚುವರಿ ಪ್ರಕ್ರಿಯೆಗಳಿಗಿಂತ ಮೊದಲು ಶಿಕ್ಷಕರ ಬಡ್ತಿ ಪ್ರಕ್ರಿಯೆಗಳನ್ನುಜರುಗಿಸಬೇಕೆಂದು ಒತ್ತಾಯಿಸಲಾಯಿತು

.2) ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಗಳನ್ನು ವಿಷಯವಾರು ಮಾಡದೆ ಶಾಲೆಯಲ್ಲಿಮಂಜೂರಾದ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವಹುದ್ದೆಗಳಿಗೆಅನುಗುಣವಾಗಿ ಮಾಡಲು ವಿನಂತಿಸಲಾಯಿತು

3) ಮಾರ್ಚ್ 31ಕ್ಕೆ ನಿವೃತ್ತಿಯಾಗುವ, ಹುದ್ದೆಗಳನ್ನು ಹೆಚ್ಚುವರಿಸಂದರ್ಭದಲ್ಲಿ ಆ ಹುದ್ದೆಗಳನ್ನೇ ಹೆಚ್ಚುವರಿ ಮಾಡಿ ಉಳಿದಂತೆ ಹೆಚ್ಚುವರಿಪ್ರಕ್ರಿಯೆಗಳನ್ನು ಜರುಗಿಸಲು ವಿನಂತಿಸಲಾಯಿತು.

4) ವಿಲ್ಲಿಂಗ್ನೆಸ್ಸಾಗಿ ಹೆಚ್ಚುವರಿ ಹೋಗುವವರಿಗೆ ಅವಕಾಶ ನೀಡಲುವಿನಂತಿಸಲಾಯಿತು.

5) ಹಿಂದಿ ಶಿಕ್ಷಕರು ದೈಹಿಕ ಶಿಕ್ಷಕರು ಚಿತ್ರಕಲಾ ಶಿಕ್ಷಕರನ್ನು 200ಕ್ಕಿಂತ ಮಕ್ಕಳಸಂಖ್ಯೆ ಹೆಚ್ಚಿದ್ದರೆ ಅಲ್ಲಿಯೇ ಮುಂದುವರಿಸಲು ವಿನಂತಿಸಲಾಯಿತು.

6)2005ರ ನೋಟಿಫಿಕೇಶನ್ ಆದ ಶಿಕ್ಷಕರಿಗೆ NPS ನಿಂದ OPSಗೆಒಳಪಡಿಸಲು ಸುಧೀರ್ಘವಾಗಿ ಚರ್ಚಿಸಲಾಯಿತು.ಈ ಎಲ್ಲಾ ಅಂಶಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಹಿರಿಯಅಧಿಕಾರಿಗಳು ಈ ಕುರಿತು ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದುತಿಳಿಸಿದರು. ಹಾಗೂ ದಿನಾಂಕ – 06.01.2023 ರಂದು ಪ್ರಕಟ ಗೊಳ್ಳುವProvisional Final List ನಲ್ಲಿ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿಶಿಕ್ಷಕರಿಗೆ ಭಾದಕವಾಗದ ರೀತಿಯಲ್ಲಿ ಪ್ರಕ್ರಿಯೆಗಳನ್ನು ಜರುಗಿಸಲಾಗುವುದುಎಂದು ತಿಳಿಸಿದ್ದಾರೆಂದು ಈ ಮೂಲಕ ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆತರಬಯಸುತ್ತೇವೆ.

IMG 20230103 WA0022

KSPSTA ಕ್ಯಾಲೆಂಡರ್

Sharing Is Caring:

Leave a Comment