ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಪ್ರಿಲ್ ತಿಂಗಳಿನಲ್ಲಿ ನಿವೃತ್ತರಾದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ ಗುರುಭ್ಯೋ ನಮಃ

WhatsApp Group Join Now
Telegram Group Join Now

ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

IMG 20240430 WA0143

ಶ್ರೀಮತಿ ರಾಜೇಶ್ವರಿ ಬಿ ಎಸ್
ಸ.ಹಿ.ಪ್ರಾ ಶಾಲೆ ಪಡ್ಲಾಡಿ ಲಾಯಿಲ
ಬೆಳ್ತಂಗಡಿ ತಾಲೂಕು

ಇಂದು ನಿವೃತ್ತಿಯಾಗುತ್ತಿರುವ ತಾವು ಬಾಜಿಮಾರು ನಿವೃತ್ತ ಮುಖ್ಯ ಶಿಕ್ಷಕರಾದ ಸೇಸಪ್ಪ ಗೌಡ ವಸುಮತಿ ಅವರ ಮಗಳಾಗಿರುತ್ತಾರೆ.
ಸ.ಹಿ.ಪ್ರಾ.ಶಾಲೆ ಬದನಾಜೆ ಯಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಮುಂದಿನ ವಿದ್ಯಾಭ್ಯಾಸವನ್ನು ಉಜಿರೆ SDMC ಶಿಕ್ಷಣ ಸಂಸ್ಥೆಗಳಲ್ಲಿ ಮುಗಿಸಿರುತ್ತೀರಿ.
1985 ರಿಂದ 1998ರ ವರೆಗೆ ಬದನಾಜೆ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿದು ತಾಲೂಕಲ್ಲಿ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿಯನ್ನು ಪಡೆದಿರುತ್ತೀರಿ. 1998 ರಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸರಕಾರಿ ಉನ್ನತೀಕರಿಸಿದ ಶಾಲೆ ಕೊಯ್ಯೂರು ಕಸಬಾ ಇಲ್ಲಿ ತನ್ನ ವೃತ್ತಿ ಬದುಕನ್ನು ಪ್ರಾರಂಭಿಸಿ ಸ್ಕೌಟ್ ಗೈಡಲ್ಲಿ ಹಿಮಾಲಯ ವುಡ್ ಬ್ಯಾಜ್ ಪ್ರಶಸ್ತಿಯನ್ನು ಪಡೆದಿರುತ್ತಿರಿ, ಬಳಿಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಲಾಯಿಲ ಇಲ್ಲಿ ಸೇವೆ ಸಲ್ಲಿಸಿದ್ದು ದಿನಾಂಕ 30 -04-2024 ರಂದು ಸೇವಾ ನಿವೃತ್ತಿ ಪಡೆಯುತ್ತಿದ್ದೀರಿ.
1984 85ನೇ ಎರಡು ವರ್ಷದಲ್ಲಿ ಮಹಿಳಾ ಯಕ್ಷಗಾನದಲ್ಲಿ ಭಾಗವಹಿಸಿ ಅನೇಕ ಕಡೆ ಪ್ರದರ್ಶನಗಳನ್ನು ಕೊಟ್ಟಿರುತ್ತೀರಿ, ಅದೇ ರೀತಿ ಗಮಕ, ನೃತ್ಯ, ರಂಗಕಲೆ, ನಾಟಕಗಳಲ್ಲಿ ಮಕ್ಕಳ ಮನಸ್ಸನ್ನು ಗೆದ್ದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತಮ್ಮ ಕೊಡುಗೆ ಸ್ಮರಣೀಯ,ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ಗುರುತಿಸಿಕೊಂಡು ತಮ್ಮ ಚಿಕ್ಕಪ್ಪರಾದ ನಿವೃತ್ತ ಶಿಕ್ಷಕರು ಬಾಬಾ ಉಜಿರೆ ಇವರ ಮಾರ್ಗದರ್ಶನದಿಂದ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿರುತ್ತೀರಿ,
ತಮಗೆ ಅತ್ಯಂತ ಗೌರವ ಅಭಿಮಾನದಿಂದ ಶುಭಾಶಯಗಳನ್ನು ಕೋರುತ್ತೇವೆ.

IMG 20240430 WA0145

ಶ್ರೀಮತಿ ಸೊಬಿನಾ ಎನ್ ನೊರೋನ್ಹ
ಪ್ರ.ಮುಖ್ಯಗುರುಗಳು
ಸ.ಮಾ.ಹಿ.ಪ್ರಾ.ಶಾಲೆ ಆರ್ಯಾಪು ಪುತ್ತೂರು ತಾಲೂಕು


ತಂದೆ: ಮೌರೀಸ್ ನೊರೋನಾ
ತಾಯಿ: ಜುಲಿಯಾನ ಪಿಂಟೋ
ಜನನ ದಿನಾಂಕ: 10.04.1964
ಜನನ ಸ್ಥಳ: ಬಂಟ್ವಾಳದ ಪೆರ್ಣೆ.
ಸೇವೆಗೆ ಸೇರಿದ ದಿನಾಂಕ: 18.01.1996
ಪ್ರಭಾರ ಮುಖ್ಯಶಿಕ್ಷಕರಾಗಿ ಸೇವೆ ಪ್ರಾರಂಭ: 01.06.2022
ಸೇವೆ ಸಲ್ಲಿಸಿದ ಶಾಲೆಗಳು: ಸ.ಹಿ.ಪ್ರಾ.ಶಾಲೆ ಬೊಬ್ಬೆಕೇರಿ, ಸ.ಉ.ಹಿ.ಪ್ರಾ.ಶಾ. ಹಾರಾಡಿ ಹಾಗೂ ಸ.ಮಾ.ಹಿ.ಪ್ರಾ.ಶಾಲೆ ಆರ್ಯಾಪು.
ಸುಮಾರು 23 ವರ್ಷಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಇಂದು ನಿವೃತ್ತರಾಗುತ್ತಿರುವಿರಿ. ಪುತ್ತೂರಿನ ಮುಕ್ರಂಪಾಡಿಯಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ತಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

IMG 20240430 WA0144

ಶ್ರೀಮತಿ ವೀಣಾ ಕುಮಾರಿ
ಸ.ಹಿ.ಪ್ರಾ.ಶಾಲೆ ಕೊಯ್ಕುಡೆ
ಮಂಗಳೂರು ಉತ್ತರ

ದಿನಾಂಕ 23.07.1994 ರಲ್ಲಿ ಸೇವೆಗೆ ಸೇರಿದ ಇವರು ಸದ್ಭಾವನಾ ನಗರ ಕಾರ್ಕಳ ಹಾಗೂ ಗಾಂಧಿ ಶತಾಬ್ದಿ ಮಲ್ಪೆ ಉಡುಪಿ, ಕಾಟಿಪಳ್ಳ 5 ನೇ ವಿಭಾಗ ಇಲ್ಲಿ ಸೇವೆ ಸಲ್ಲಿಸಿ ನಂತರ ಸಿ ಆರ್ ಪಿ ಯಾಗಿ ಸೇವೆ ಸಲ್ಲಿಸಿದ ಇವರು ನಂತರ ಪರಪಾದೆ ಶಾಲೆ ಮಂಗಳೂರು ,ದರ್ಖಾಸು ಸುಳ್ಯ , ಬೊಳ್ಳೂರು ಶಾಲೆ ಇಲ್ಲಿ ಸೇವೆ ಸಲ್ಲಿಸಿದ ಇವರು ನಂತರ ಸ.ಹಿ.ಪ್ರಾ.ಶಾಲೆ ಕೊಯ್ಕುಡೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240430 WA0147

ಶ್ರೀಮತಿ ಯಶೋಧ ಬಿ
ಸ ಹಿ ಪ್ರಾ ಶಾಲೆ ಗಾಂಧಿನಗರ
ಮಂಗಳೂರು ಉತ್ತರ

19.9.1987 ರಂದು ಸೇವೆಗೆ ಸೇರಿದ ಇವರು ತಮ್ಮ 36ವರ್ಷಗಳ ಸುದೀರ್ಘ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240430 WA0146

ಶ್ರೀಮತಿ ಶಾರದಾ ಕೆ
ಸಹಶಿಕ್ಷಕಿ
ಸ.ಮಾ.ಹಿ.ಪ್ರಾ.ಶಾಲೆ ಅರಂತೋಡು
ಸುಳ್ಯ ತಾಲೂಕು

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕದಿಕಡ್ಕ ಕಲ್ಲಾಜೆ ಶ್ರೀಯುತ ಕುಂಞಣ್ಣ ಗೌಡ ಹಾಗೂ ಶ್ರೀಮತಿ ತಿಮ್ಮಕ್ಕ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಕದಿಕಡ್ಕ ಮತ್ತು ಜಾಲ್ಸೂರಿನಲ್ಲಿ , ಪ್ರೌಢ ಶಿಕ್ಷಣವನ್ನು ಶ್ರೀ ಸೀತಾ ರಾಘವ ಪ್ರೌಢಶಾಲೆ ಪೆರ್ನಾಜೆಯಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಕೊಕ್ಕರ್ಣೆಯಲ್ಲಿ ಪೂರೈಸಿ, ದಿನಾಂಕ 13.02.1996 ರಲ್ಲಿ ಸ.ಹಿ.ಪ್ರಾ.ಶಾಲೆ ಕೊಡಿಯಾಲ ಇಲ್ಲಿ ಸಹ ಶಿಕ್ಷಕಿಯಾಗಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಕಿ.ಪ್ರಾ.ಶಾಲೆ ಕಳುಬೈಲು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಅರಂತೋಡು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240430 WA0148

ಶ್ರೀಮತಿ ವಾರಿಜಾ ಬಿ
ಸ ಹಿ ಪ್ರಾ ಶಾಲೆ ಕದಿಕಡ್ಕ
ಸುಳ್ಯ ತಾಲೂಕು

ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ತಮಗೆ ನಿವೃತ್ತ ಜೀವನದ ಶುಭಾಶಯಗಳು.

ಸೇವೆಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೆ ಸಮಾಜಕ್ಕೆ ತಮ್ಮಿಂದ ಇನ್ನಷ್ಟು ಸೇವೆಗಳು ಲಭಿಸಲಿ. ದೇವರು ತಮಗೆ ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತಿದ್ದೇವೆ.

WhatsApp Group Join Now
Telegram Group Join Now
Sharing Is Caring:

Leave a Comment