FIT INDIA ಶಾಲಾ ಸಪ್ತಾಹ ಕಾರ್ಯಕ್ರಮದ ಹೆಚ್ಚಿನ ವಿವರ ಇಲ್ಲಿದೆ

ಫಿಟ್ ಇಂಡಿಯಾ ಕಾರ್ಯಕ್ರಮವು ರಾಷ್ಟ್ರವ್ಯಾಪಿ ಆಂದೋಲನವಾಗಿದ್ದು, ವಿದ್ಯಾರ್ಥಿಗಳು ದೈಹಿಕ
ಚಟುವಟಿಕೆಗಳಲ್ಲಿ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ಆರೋಗ್ಯಕರ ಮತ್ತು ಸದೃಢವಾಗಿರುವಂತೆ
ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಸದರಿ ಕಾರ್ಯಕ್ರಮದಲ್ಲಿ ರಾಜ್ಯದ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳನ್ನು
ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ, ಅವರನ್ನು ದೈಹಿಕ ಮತ್ತು ಮಾನಸಿಕವಾಗಿ
ಸದೃಢಗೊಳಿಸುವುದಾಗಿದೆ.

ಈ ಕಾರ್ಯಕ್ರಮವು ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಮಂತ್ರಾಲಯದಡಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ದಿನಾಂಕ:15.01.2023ರವರೆಗೆ
ಹಮ್ಮಿಕೊಳ್ಳಬೇಕಾಗಿದೆ.

ಈ ಕುರಿತಂತೆ ಕೆಳಗಿನ ಮಾರ್ಗಸೂಚಿಗಳ ಪ್ರಕಾರ ಕ್ರಮ ಕೈಗೊಳ್ಳುವುದು

  • ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು https://fitindia.gov.in/fit-
    india-school-week ಯಲ್ಲಿ ಮೊದಲು ನೋಂದಾಯಿಸಿ ನಂತರ 15.01.2023ರೊಳಗೆ ಫಿಟ್ ಇಂಡಿಯಾ
    ಶಾಲಾ ಸಪ್ತಾಹವನ್ನು 06 ದಿನಗಳು ಕಡ್ಡಾಯವಾಗಿ ಹಮ್ಮಿಕೊಳ್ಳುವುದು, ಈ ಜ್ಞಾಪನದೊಂದಿಗೆ
    ನೋಂದಣಿಯ ಪ್ರಕ್ರಿಯೆ ಬಗ್ಗೆ ಎಂ.ಒ.ಇ ನ ಜ್ಞಾಪನ ಲಗತ್ತಿಸಿದೆ.
  • ನೋಂದಾಯಿಸಿದ ಶಾಲೆಗಳು ಕಾರ್ಯಕ್ರಮವನ್ನು ಆಯೋಜಿಸಿ ಅದರ ಫೋಟೋ ಮತ್ತು ವಿಡಿಯೊ ಗಳನ್ನು
    ಮೇಲೆ ನೀಡಿರುವ ವೆಬ್ ಸೈಟ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡುವುದು, ಅಪ್‌ಲೋಡ್ ಮಾಡಿದ
    ನಂತರ ಡಿಜಿಟಲ್ ಪ್ರಶಸ್ತಿ ಪತ್ರವನ್ನು ಡೌನೋಡ್ ಮಾಡಿಕೊಂಡು, ವಿವರವನ್ನು ರಾಜ್ಯ ಕಚೇರಿಗೆ
    ನೀಡುವುದು.
  • ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರು ಜಿಲ್ಲಾ ದೈಹಿಕ
    ಶಿಕ್ಷಣಾಧಿಕಾರಿಗಳನ್ನು ಜಿಲ್ಲಾ ನೋಡಲ್ ಅಧಿಕಾರಿಯಾಗಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕು ದೈಹಿಕ
    ಶಿಕ್ಷಣಾಧಿಕಾರಿಗಳನ್ನು ತಾಲ್ಲೂಕು ನೋಡಲ್ ಅಧಿಕಾರಿಯಾಗಿ ನೇಮಿಸುವುದು.
  • ಉಪನಿರ್ದೇಶಕರು (ಆಡಳಿತ) ರವರು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳೊಂದಿಗೆ ಕಾರ್ಯಕ್ರಮದ ವಿವರ
    ಮತ್ತು ಅನುಷ್ಠಾನ ಕುರಿತಂತೆ ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲ್ಲೂಕು ದೈಹಿಕ
    ಶಿಕ್ಷಣಾಧಿಕಾರಿಗಳ ಸಭೆ ಆಯೋಜಿಸಿ, ಮಾಹಿತಿ ಪಡೆದು ರಾಜ್ಯ ಕಚೇರಿಗೆ ನೀಡುವುದು.
  • ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ
    ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಕರೆದು ಕಾರ್ಯಕ್ರಮ ಅನುಷ್ಠಾನ ಕುರಿತು ಕ್ರಮ ಕೈಗೊಳ್ಳುವಂತೆ
    ಸೂಚಿಸುವುದು.
  • ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರು ಕೆಳಕಂಡ ಪಟ್ಟಿಯಲ್ಲಿರುವಂತೆ
    ದಿನದ ಚಟುವಟಿಕೆಗಳನ್ನು ಕಡ್ಡಾಯವಾಗಿ ಆಯೋಜಿಸುವುದು. ಈ ಕುರಿತು ಸಾಕಷ್ಟು ಮುಂಚಿತವಾಗಿಯೇ ಶಾಲಾ ಹಂತದ ಯೋಜನೆ ಸಿದ್ಧಪಡಿಸಿಕೊಳ್ಳುವಂತೆ ಸೂಚಿಸುವುದು.
ದಿನ ಚಟುವಟಿಕೆಯ ವಿವರ
1.ಆರಂಭಿಕ ದಿನ – ವಾರ್ಷಿಕ
ಕ್ರೀಡಾಕೂಟ
2.2ಫಿಟೈಸ್ ಪ್ರಾಮುಖ್ಯತೆ – ಚರ್ಚಾಸ್ಪಧೆ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ತಯಾರಿಕಾ
ಸ್ಪರ್ಧೆ ಚಟುವಟಿಕೆಗಳನ್ನು ಆಯೋಜಿಸುವುದು.
3.ಸಾಂಪ್ರದಾಯಿಕ ಆಟಗಳನ್ನು ಆಯೋಜಿಸುವುದು.
4.ವಿದ್ಯಾರ್ಥಿಗಳ ಕೇಲೋ ಇಂಡಿಯಾ ಫಿಟೈಸ್ ಮೌಲ್ಯಮಾಪನ ಮಾಡುವುದು.
5.5ಫಿಟ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್ ಮೂಲಕ ಸಮುದಾಯದ ಫಿಟ್ಟಿಸ್
ಮೌಲ್ಯಮಾಪನ ಮಾಡುವುದು.

6.ಯೋಗಾ ಮತ್ತು ಧ್ಯಾನ

ಫಿಟ್ ಇಂಡಿಯಾ ಶಾಲಾ ಸಪ್ತಾಹ ಕಾರ್ಯಕ್ರಮದಲ್ಲಿ ಕೈಗೊಳ್ಳಲಾಗುವ ವಿವಿಧ ಚಟುವಟಿಕೆಗಳ ಕುರಿತು
ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲು ಕ್ರಮವಹಿಸುವುದು.

Sharing Is Caring:

Leave a Comment