EMPLOYEE SELF SERVICE -ESS ಕುರಿತು ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ನೌಕರರು ಕಡ್ಡಾಯವಾಗಿ ಹೆಚ್‌ಆರ್‌ಎಂಎಸ್‌ನನೌಕರರ ಸ್ವಯಂ ಸೇವ (Employee Self Service-ESS) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ

ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗಲು ಹೆಚ್‌ಆರ್ ಎಂಎಸ್ ನಿರ್ದೇಶನಾಲಯವು ನೌಕರರ ಸೇವೆ
(Employee Self Service-ESS) ಪೋರ್ಟಲ್‌ಅನ್ನು ಸಿದ್ಧಪಡಿಸಿದೆ. ಸದರಿ ಪೋರ್ಟಲ್ ಬಳಕೆದಾರರ
ಸ್ನೇಹಿಯಾಗಿದ್ದು, ಈ ಕೆಳಕಂಡಂತೆ ಹಲವು ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ರಾಜ್ಯ ಸರ್ಕಾರದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿ
ವರ್ಗದವರು ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಯ ವ್ಯಾಪ್ತಿಗೆ ಬರುವ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಯೋಜನೆಗಳಡಿ ಮಾಡಿಸಿದ ವಿಮಾ ಪಾಲಿಸಿಗಳ ಮಾಹಿತಿಯನ್ನು HRMS-ESS Login ನಲ್ಲಿ ಭರ್ತಿ ಮಾಡಲು ಸಹ ಈಗಾಗಲೇ ತಿಳಿಸಿರುತ್ತಾರೆ.

ಆದುದರಿಂದ ರಾಜ್ಯ ಸರ್ಕಾರದ ಪ್ರತಿ ಸಿಬ್ಬಂದಿಗಳ ತಮ್ಮದೇ ಆದ ವೇತನ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್‌ಲೋಡ್ ಪಡೆ ದುಕೊಳ್ಳಲು ಮಾಡಿಕೊಳ್ಳುವ ಸದುಪಯೋಗವನ್ನು HRMSESS Login(https://hrmsess.karnataka.gov.in) ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು ಹಾಗೂ ಪ್ರತಿ ಸಿಬ್ಬಂದಿಗಳು ESS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು, ಸದರಿ ಸೌಲಭ್ಯವನ್ನು
ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿಕೊಳ್ಳಲು ಈ ಮೂಲಕ ತಿಳಿಸಿದೆ. ಹಾಗೂ ತಮ್ಮ ಎಲ್ಲಾ ಉದ್ಯೋಗಿಗಳು ಮೇ-2024ರ ಮೊದಲು ಈ ಪೋರ್ಟಲ್‌ನಲ್ಲಿ ನೋಂದಾಯಿಸಲು ಅನುವುಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ.

WhatsApp Group Join Now
Telegram Group Join Now
Sharing Is Caring:

Leave a Comment