---Advertisement---

ಮುಖ್ಯ ಗುರುಗಳ ಭಡ್ತಿ ಪ್ರಕ್ರಿಯೆ ಪ್ರಮುಖ ದಿನಾಂಕಗಳು

By kspstadk.com

Updated On:

Follow Us
Important dates for the promotion process of h.m
---Advertisement---
WhatsApp Group Join Now
Telegram Group Join Now

2024-25 ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರು ದಿನಾಂಕ: 11-11-2025 ರಲ್ಲಿ ಸೂಚಿಸಿರುವಂತೆ ದಿನಾಂಕ:09-04-2026 ರಂದು ಕರ್ತವ್ಯದಿಂದ ಬಿಡುಗಡೆಗೊಂಡು ದಿನಾಂಕ: 10-04-2026 ರಂದು ವರ್ಗಾವಣೆಗೊಂಡ ಹುದ್ದೆಯ ಕರ್ತವ್ಯಕ್ಕೆ ಹಾಜರಾಗಲು ತಿಳಿಸಲಾಗಿರುತ್ತದೆ.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಉಲ್ಲೇಖ-1 ರ ಜೇಷ್ಠತಾ ನಿಯಮಾನುಸಾರ ದಿನಾಂಕ:01/01/2026 ರಲ್ಲಿದ್ದಂತೆ ಆಯಾ ವೃಂದವಾರು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ, ಸದರಿ ಪಟ್ಟಿಗೆ ಆಕ್ಷೇಪಣೆ/ ಮನವಿ ಸಲ್ಲಿಸಲು ಕಾಲಾವಕಾಶ ನೀಡಬೇಕಿರುತ್ತದೆ.

ಸದರಿ ಆಕ್ಷೇಪಣೆ/ಮನವಿಯಲ್ಲಿನ ಅಂಶಗಳನ್ನು ಬಡ್ತಿ ಪ್ರಾಧಿಕಾರಿಗಳು ನಿಯಮಾನುಸಾರ ಪರಿಶೀಲಿಸಿ ನಿಗದಿತ ಅವಧಿಯೊಳಗೆ ಅಂತಿಮ ಜೇಷ್ಟತಾ ಪ್ರಕಟಿಸಿದ ನಂತರದಲ್ಲಿ ಸದರಿ ಜೇಷ್ಟತಾ ಪಟ್ಟಿಗೆ ಅನುಗುಣವಾಗಿ ಬಡ್ತಿಯನ್ನು ನೀಡಬೇಕಾಗುತ್ತದೆ.


ಸದರಿ ಬಡ್ತಿ ಪ್ರಕ್ರಿಯೆಯನ್ನು 2024-25 ನೇ ಸಾಲಿನಲ್ಲಿ ನಡೆಸಲಾದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹುದ್ದೆಗಳನ್ನು ನೀಡಲಾಗಿರುತ್ತದೆ.

ಜಿಲ್ಲಾವಾರು ಮಂಜೂರಾದ ಹುದ್ದೆಗಳು ಹಾಗೂ ಮಂಜೂರಾದ ಹುದ್ದೆಗಳ ಪೈಕಿ ಬಡ್ತಿ ನೀಡುವ ಸಂದರ್ಭದಲ್ಲಿ ಖಾಲಿ ಭರ್ತಿಯಾಗಿರುವ ಬಗ್ಗೆ ಪರಿಶೀಲಿಸಿಕೊಂಡು ಲಭ್ಯವಾಗುವ ಹುದ್ದೆಗಳನ್ನು ಬಡ್ತಿಗೆ ಪರಿಗಣಿಸಬೇಕಾಗುತ್ತದೆ.

ಪ್ರಸ್ತುತ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಶಿಕ್ಷಕರುಗಳಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಸಂಬಂಧ ಉಲ್ಲೇಖ-07 ರಲ್ಲಿನ ಮಾನದಂಡಗಳನ್ವಯ ಅರ್ಹ ಶಿಕ್ಷಕರ ಬಡ್ತಿ ಪ್ರಸ್ತಾವನೆಯನ್ನು ಪರಿಶೀಲಿಸಿ ನಿಯಮಾನುಸಾರ ಕೆಳಗೆ ಸೂಚಿಸಲಾದ ‘ನಿಯಮ/ಷರತ್ತುಗಳಂತೆ ಕ್ರಮವಹಿಸಲು ಸೂಚಿಸಿದೆ.

1. ಮುಖ್ಯಶಿಕ್ಷಕರ ಬಡ್ತಿಗಾಗಿ ಜಿಲ್ಲಾ ಹಂತದಲ್ಲಿ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳತಕ್ಕದ್ದು, ಆದರೆ ಅಂಗವಿಕಲ ಅಭ್ಯರ್ಥಿಗಳ ಮೀಸಲಾತಿಯನ್ನು ನಿಯಮಾನುಸಾರ ಪರಿಶೀಲಿಸಿ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದ ನಂತರದಲ್ಲಿಯೇ ಬಡ್ತಿ ಪ್ರಕ್ರಿಯೆ ಪ್ರಾರಂಭಿಸತಕ್ಕದ್ದು.

2. ಪ್ರಸ್ತುತ 2024-25 ನೇ ಸಾಲಿನಲ್ಲಿ ನಡೆಸಲಾದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ನಂತರದಲ್ಲಿ ವರ್ಗಾವಣಾ ತಂತ್ರಾಂಶದಲ್ಲಿ ಲಭ್ಯವಿರುವ ಖಾಲಿಹುದ್ದೆಗಳ ಮಾಹಿತಿಯಂತೆ ಯಾವುದೇ ಕಾರಣಕ್ಕೂ ಜಿಲ್ಲೆಗೆ ಮಂಜೂರಾದ ಮುಖ್ಯಶಿಕ್ಷಕರ ಸಂಖ್ಯೆಯ ಮಿತಿಯನ್ನು ಮೀರತಕ್ಕದ್ದಲ್ಲ ಎಂದು ಸ್ಪಷ್ಟಪಡಿಸಿದೆ.

3. ಬಡ್ತಿ ಪ್ರಕ್ರಿಯೆಗೆ ಲಭ್ಯವಾಗುವ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2020 ದಿನಾಂಕ: 27-03-2020 ರ ಅನುಚ್ಚೇದ 3 ರ ಸೂಚನೆಗಳನ್ನು ಅನುಸರಿಸತಕ್ಕದ್ದು

4. ಉಲ್ಲೇಖ-3ರ ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ಜೇಷ್ಠತೆಯಲ್ಲಿ ಪರಿಗಣಿಸಬಹುದಾದ ಎದ್ದುಕಾಣುವ ಅಂಗವೈಕಲ್ಯತೆಯನ್ನು ಉಳ್ಳ ನೌಕರರಿಗೆ ಗ್ರೂಪ್‌ “ಡಿ’ ಮತ್ತು ‘ಸಿ’ ವೃಂದಗಳಿಗೆ ನೀಡುವ ಬಡ್ತಿಯಲ್ಲಿ ಶೇಕಡಾ 4ರಷ್ಟು ಮೀಸಲಾತಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅದರಂತೆ ಅಂತಿಮ ಜೇಷ್ಟತಾ ಪಟ್ಟಿಯಲ್ಲಿ ಅರ್ಹರಿರುವ ರುವ ಎಲ್ಲಾ ಅಂಗವಿಕಲ ಶಿಕ್ಷಕರು ಸಕ್ಷಮ ಪ್ರಾಧಿಕಾರದಿಂದ ‘ಜಿಲ್ಲಾ ವೈದ್ಯಕೀಯ ಮಂಡಳಿಯ ತ್ರಿಸದಸ್ಯ ಸಮಿತಿಯಯಿಂದ ಪಡೆದ ಪ್ರಮಾಣ ಪತ್ರ’ವನ್ನು ಅಥವಾ Permanent disability certificate UDID ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ನಿಯಮಾನುಸಾರ ಕಡ್ಡಾಯವಾಗಿ ಎದ್ದು ಕಾಣುವ ಅಂಗವೈಕಲ್ಯತೆಯ ಪ್ರಮಾಣದ(ಶೇಕಡಾವಾರು) ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.

5.ಬಡ್ತಿ ಪ್ರಕ್ರಿಯೆಗೆ ಪರಿಗಣಿಸಲಾಗುವ ಶಿಕ್ಷಕರ ಮೂಲ ಸೇವಾಪುಸ್ತಕ/ ಇಇಡಿಎಸ್ ತಂತ್ರಾಂಶದಲ್ಲಿನ ಸೇವಾ ಮಾಹಿತಿಯನ್ವಯ ಗೈರುಹಾಜರಿ/ಅಮಾನತ್ತು/ಶಿಸ್ತುಕ್ರಮ ಹಾಗೂ ಇತರೆ ವ್ಯತಿರಿಕ್ತ ಷರಾ ಇರುವ ಬಗ್ಗೆ ಬಡ್ತಿ ಪ್ರಾಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸತಕ್ಕದ್ದು

6. ಒಂದು ವೇಳೆ ಸುಳ್ಳು ದಾಖಲಾತಿ ನೀಡಿ ಬಡ್ತಿ ಪಡೆದಿದಲ್ಲಿ ಅಂತಹಾ ಶಿಕ್ಷಕರನ್ನು ಶಿಸ್ತು ಕ್ರಮಕ್ಕೆ ಒಳಪಡಿಸಿ ಅಂತಹಾ ಶಿಕ್ಷಕರಿಗೆ ನೀಡುರುವ ಬಡ್ತಿಯನ್ನು ರದ್ದುಪಡಿಸಿ ಶಿಸ್ತುಕ್ರಮ ಜರುಗಿಸಲಾಗುವುದು.

7. ಉಲ್ಲೇಖ:2-6 ರಲ್ಲಿನ ಅಂಗವೈಕಲ್ಯ ಮೀಸಲಾತಿ ಅನುಷ್ಟಾನ ಕ್ರಮ ಬ್ಯಾಕ್ ಲಾಗ್, ಮೀಸಲಾತಿಯ ಬಿಂದು, ರೋಸ್ಟ‌ರ್ ಗುರುತಿಸುವಿಕೆ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.

8. ಪ್ರಸ್ತುತ ದಿನಾಂಕಕ್ಕೆ ಚಾಲ್ತಿಯಲ್ಲಿರುವ ಉಲ್ಲೇಖ-09 ಮತ್ತು 10 ರ ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿರುವ 100 ಸೈಕಲ್ ರೋಸ್ಟರ್ ನ್ನು ಪಾಲಿಸತಕ್ಕದ್ದು.

9. ಬಡ್ತಿ ಪ್ರಕ್ರಿಯೆಯಲ್ಲಿ ಪರಿಗಣಿಸಲಾದ ಅರ್ಹ ಅಂಗವಿಕಲ ಅಭ್ಯರ್ಥಿಗಳಿಗೆ ಜೇಷ್ಟತೆಯ ಆಧಾರದ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಮೊದಲ ಆಧ್ಯತೆ ನೀಡುವುದು.

10.ಬಡ್ತಿ ಹಾಗೂ ಕೌನ್ಸಿಲಿಂಗ್‌ ಪ್ರಕ್ರಿಯೆಯಲ್ಲಿ ಬಡ್ತಿ ಮುಂದೂಡಲು/ನಿರಾಕರಿಸಲು ಇಚ್ಚಿಸುವ ಶಿಕ್ಷಕರಿಂದ ಕಡ್ಡಾಯವಾಗಿ ಮುಚ್ಚಳಿಕೆ ಪತ್ರ ಪಡೆದುಕೊಳ್ಳುವುದು.

11. ಮುಖ್ಯಶಿಕ್ಷಕರಿಗೆ ಬಡ್ತಿ ನೀಡುವ ಪ್ರಾಧಿಕಾರಿ ಜಿಲ್ಲಾ ಉಪನಿರ್ದೇಶಕರೇ ಆಗಿರುವುದರಿಂದ ಜಿಲ್ಲಾ ಹಂತದಲ್ಲಿ ಬಡ್ತಿ ಪ್ರಕ್ರಿಯೆಗೆ ಅಗತ್ಯ ಪೂರ್ವಭಾವಿ ತಯಾರಿಗಳನ್ನು ಮಾಡಿಕೊಂಡು ಯಾವುದೇ ಲೋಪಗಳಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ತಿಳಿಸಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳಾದಲ್ಲಿ ಬಡ್ತಿ ಪ್ರಾಧಿಕಾರಿಯಾದ ಉಪನಿರ್ದೆಶಕರು(ಆಡಳಿತ) ನೇರಹೊಣೆಗಾರರನ್ನಾಗಿ ಮಾಡಲಾಗುವುದು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment