---Advertisement---

ಸಾವಿತ್ರಿ ಭಾಯಿ ಪುಲೆ ಪ್ರಶಸ್ತಿ ವಿಜೇತರಾದ ಶ್ರೀಮತಿ ದಾಕ್ಷಾಯಿಣಿ ಇವರ ಶೈಕ್ಷಣಿಕ ಸಾಧನೆಗಳ ಪರಿಚಯ ಇಲ್ಲಿದೆ

By kspstadk.com

Updated On:

Follow Us
---Advertisement---
WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ಇದರ ವತಿಯಿಂದ ಇಂದು ಮಂಡ್ಯದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನದಲ್ಲಿ ರಾಜ್ಯ ಮಟ್ಟದ ಸಾವಿತ್ರಿ ಭಾಯಿ ಪುಲೆ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಪಿಎಂ ಶ್ರೀ ನಾಲ್ಯ ಪದವು ಇಲ್ಲಿಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ದಾಕ್ಷಾಯಿಣಿ ಇವರ ಶೈಕ್ಷಣಿಕ ಸಾಧನೆಗಳು ಇಲ್ಲಿದೆ

ದಾಕ್ಷಾಯಣಮ್ಮ ಎಸ್ ಅವರ ಶ್ರೇಷ್ಠ ಸಾಧನೆಗಳು – ಪಿ.ಎಂ.ಶ್ರಿ. ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನಾಲ್ಯಪದವು

ಶೈಕ್ಷಣಿಕ ಸ್ಥಿತಿ ಸ್ಥಾಪಕತ್ವ ಮತ್ತು ಉತ್ಕ್ರಷ್ಟತೆಯ ಮೈಲಿಗಲ್ಲು

ಮೈಲಿಗಲ್ಲು ಸಾಧನೆ: ಪ್ರಾಥಮಿಕ ಹಾಗೂ ಇಂಗ್ಲಿಷ್ ಮಾಧ್ಯಮದ ಪ್ರಾರಂಭ
2018-19 ಶೈಕ್ಷಣಿಕ ವರ್ಷದಲ್ಲಿ, ಶ್ರೀಮತಿ. ದಾಕ್ಷಾಯಿಣಿ ಅವರ ದೂರದೃಷ್ಟಿ ಹಾಗೂ ಸಮರ್ಪಿತ ನೇತೃತ್ವದ ಫಲವಾಗಿ, ಎಲ್‌.ಕೆ.ಜಿ., ಯು.ಕೆ.ಜಿ ಮತ್ತು 1ರಿಂದ 8ನೇ ತರಗತಿವರೆಗೆ ಇಂಗ್ಲೀಷ್ ಮಾಧ್ಯಮ ಪ್ರಾರಂಭ ಮಾಡಲಾಯಿತು. ಈ ಮಹತ್ವದ ನಿರ್ಧಾರದಿಂದ ಶಾಲೆಯ ದಾಖಲಾತಿ ಹೆಚ್ಚಿಸುವುದರೊಂದಿಗೆ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮುನ್ನಡೆ ನೀಡಲು ಸಾಧ್ಯವಾಯಿತು.
ಸರ್ಕಾರಿ ಶಾಲೆಗಳಿಗೆ ಮಾದರಿ ದೃಷ್ಟಾಂತ
ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದಕ್ಕೆ ಈ ಕ್ರಮ ನೆರವಾಯಿತು. ಶಾಲೆಯ ದಾಖಲಾತಿಯಲ್ಲಿ ಗಣನೀಯ ವೃದ್ಧಿ, ಸರ್ಕಾರಿ ಶಾಲೆಗಳಲ್ಲಿಯೂ ಶ್ರೇಷ್ಠತೆ ಸಾಧಿಸಬಹುದು ಎಂಬುದನ್ನು ತೋರಿಸಿತು. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವುದಕ್ಕಾಗಿ ಇಂಗ್ಲೀಷ್ ಶಿಕ್ಷಣವನ್ನು ತರುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲಾಯಿತು.
ಗುಣಮಟ್ಟದ ಶಿಕ್ಷಣವನ್ನು ಬೆಳೆಸುವುದು
ಕೇವಲ ಏಳು ಮಂದಿ ಸರ್ಕಾರಿ ಖಾಯಂ ಶಿಕ್ಷಕರು ಇದ್ದರೂ, ಶ್ರೀಮತಿ. ದಾಕ್ಷಾಯಿಣಿ ಅವರ ನೇತೃತ್ವದಲ್ಲಿ ವಿದ್ಯಾ ದೀವಿಗೆ ಎಜ್ಯುಕೇಶನಲ್‍ ಚಾರಿಟಬಲ್ ಟ್ರಸ್ಟ್ ಮತ್ತು ದಾನಿಗಳ ಸಹಕಾರದೊಂದಿಗೆ ಗೌರವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದರೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂದಾಳತ್ವ ವಹಿಸಿರುತ್ತಾರೆ.

ಅವರ ಪ್ರಮುಖ ಸಾಧನೆಗಳು:
✅ ಶಿಕ್ಷಕ-ವಿದ್ಯಾರ್ಥಿ ಅನುಪಾತ ಉತ್ತಮಗೊಳಿಸಿ, ವೈಯಕ್ತಿಕ ಗಮನಕ್ಕೆ ಅವಕಾಶ.
✅ ನಾವೀನ್ಯತೆ ಹಾಗೂ ಆಧುನಿಕ ಬೋಧನಾ ವಿಧಾನಗಳನ್ನು ತರಲು ಶಿಕ್ಷಕರಿಗೆ ಪ್ರೇರಣೆ.
✅ ಸರ್ಕಾರಿ ಮಿತಿಗಳ ಹೊರತಾಗಿಯೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಯಿತು.
ಅಭಿವೃದ್ಧಿಯತ್ತ ಹಾದಿ – ಸಮುದಾಯದ ಪ್ರಭಾವ
ಶ್ರೀಮತಿ. ದಾಕ್ಷಾಯಿಣಿ ಅವರ ಯೋಜಿತ ನೇತೃತ್ವದ ಪರಿಣಾಮವಾಗಿ, ಶಾಲೆಯ ಗುಣಮಟ್ಟ ಏರಿಕೆ ಕಂಡು, ಇತರ ಸರ್ಕಾರಿ ಶಾಲೆಗಳಿಗೂ ಪ್ರೇರಣೆಯಾಗಿ ಬದಲಾಗಿದೆ. ಅವರು ರೂಪಿಸಿದ ಸಮುದಾಯ-ಆಧಾರಿತ ಶಿಕ್ಷಣ ಮಾದರಿ, ಇತರ ಶಾಲೆಗಳಿಗೂ ಮಾರ್ಗದರ್ಶಿಯಾಗುತ್ತಿದೆ.

ಶ್ರೀಮತಿ. ದಾಕ್ಷಾಯಿಣಿ ಅವರ ಮುನ್ನಡೆಯಲ್ಲಿ ಯಶಸ್ವಿ ಶಾಲಾ ಕಾರ್ಯಕ್ರಮಗಳು

  1. ಸ್ವಚ್ಚತೆ ಜಾಗೃತಿ ಅಭಿಯಾನ
    ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಮನೋಭಾವವನ್ನು ಬೆಳೆಸಲು, ಪ್ರತಿ ದಿನ ತರಗತಿಗಳ ಪರಿಶೀಲನೆನಡೆಸಿ ಶಾಲಾ ಪ್ರಾರ್ಥನಾ ಅವಧಿಯಲ್ಲಿ ಸ್ವಚ್ಛ ತರಗತಿಗಳನ್ನು ಗುರುತಿಸಿ ಬಿಳಿ ಬಣ‍್ಣದ ಧ್ವಜವನ್ನು ನೀಡಿ ಪ್ರೋತ್ಸಾಹ .
  2. ಹಾಜರಾತಿ ಉತ್ತೇಜನ ಕಾರ್ಯಕ್ರಮ
    ನಿಯಮಿತ ಹಾಜರಾತಿ ಪ್ರೋತ್ಸಾಹಿಸಲು, ಪಿಂಕ್ ಫ್ಲಾಗ್ ಪ್ರಶಸ್ತಿ ನೀಡುವ ಯೋಜನೆಯನ್ನು ಆರಂಭಿಸಿದರು.
    ✅ ಫಲಿತಾಂಶ: ಹಾಜರಾತಿ ಹೆಚ್ಚಳ, ಗೈರುಹಾಜರಾತಿ ಪ್ರಮಾಣ ಕಡಿಮೆ.
  3. ಶಿಸ್ತಿನ ಹಾಗೂ ಹೊಣೆಗಾರಿಕೆಯ ಅಭಿಯಾನ
    ವಿದ್ಯಾರ್ಥಿಗಳ ಶಿಸ್ತು ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸಲು, ನೀಲಿ ಫ್ಲಾಗ್ ಪ್ರಶಸ್ತಿ ಘೋಷಿಸಿದರು.
    ???? ಫಲಿತಾಂಶ : ವಿದ್ಯಾರ್ಥಿಗಳ ಆತ್ಮವಿಶ್ವಾಸ, ಸಮಯಪಾಲನೆ ಹಾಗೂ ಸಂಸ್ಕಾರ ವೃದ್ಧಿ.
  4. “ಸ್ಮಾರ್ಟ್ ವಿದ್ಯಾರ್ಥಿ ಮತ್ತು ಶಿಕ್ಷಕ” ಗುರುತಿಸುವಿಕೆ ಕಾರ್ಯಕ್ರಮ
    ???? ಸ್ಮಾರ್ಟ್ ವಿದ್ಯಾರ್ಥಿ ಬ್ಯಾಡ್ಜ್ – ಅಕಾಡೆಮಿಕ್ ಸಾಧನೆ, ಸೃಜನಶೀಲತೆ ಮತ್ತು ನಾಯಕತ್ವಕ್ಕೆ.
    ???? ಸ್ಮಾರ್ಟ್ ಶಿಕ್ಷಕ ಬ್ಯಾಡ್ಜ್ – ನಾವೀನ್ಯತೆ ಹಾಗೂ ವಿದ್ಯಾರ್ಥಿ ಬೆಳವಣಿಗೆಯಲ್ಲಿ ಪ್ರಭಾವ ಬೀರುವ ಶಿಕ್ಷಕರಿಗೆ.
  5. ವಿದ್ಯಾರ್ಥಿ ಗುರುತಿಸುವಿಕೆ ಮತ್ತು ಬಹುಮಾನ ಯೋಜನೆ
    ???? ಪ್ರಶಸ್ತಿಗಳು:
    ✅ ಹಾಜರಾತಿ ಉತ್ತೇಜನ (Attendance Excellence Award)

✅ ಇಂಗ್ಲಿಷ್ ಪ್ರಗತಿ (English Proficiency Award)
✅ ಗಣಿತ ಪ್ರತಿಭೆ (Mathematics Whiz Award)
✅ ಒಟ್ಟಾರೆ ಉತ್ತಮ ಪ್ರದರ್ಶನ (Overall Performer Award)
✅ ವರ್ತನೆಯಲ್ಲಿ ಉತ್ತಮ ಬದಲಾವಣೆ (Behavioral Change Award)
ವಿದ್ಯಾರ್ಥಿಗಳ ಸಾಧನೆಗೆ ಸ್ಟಾರ್ಸ್ .
???? ವಿದ್ಯಾರ್ಥಿಗಳಿಗೆ ಸ್ವಚ್ಛತೆ, ಹಾಜರಾತಿ ಮತ್ತು ಕಲಿಕೆಯಲ್ಲಿ ಸಾಧನೆಗಾಗಿ ನಕ್ಷತ್ರಗಳು ನೀಡಲಾಗುತ್ತವೆ.

  1. ಶಿಕ್ಷಕರ ಗುರು ಕಾಣಿಕೆಯ ಮೂಲಕ ತರಗತಿ ಅಭಿವೃದ್ಧಿ ಯೋಜನೆ
    ದಾಕ್ಷಾಯಿಣಿಯವರ ನಾವೀನ್ಯತ ಆಲೋಚನೆಯಿಂದ ಪ್ರತಿ ತಿಂಗಳು ಶಿಕ್ಷಕರಿಂದ ಆಗುವ ಒಂದಷ್ಟು ಮೊತ್ವನ್ನು ಕಾಣಿಕೆಯ ರೂಪದಲ್ಲಿ ನೀಡಿ ತಿಂಗಳ ಕೊನೆಯಲ್ಲಿ ಲಕ್ಕಿ ಡ್ರಾ ತೆಗೆಯುವ ಮೂಲಕ
    ಈ ಸಂಪೂರ್ಣ ಮೊತ್ತವನ್ನು ಡ್ರಾದಲ್ಲಿ ಪಡೆದ ತರಗತಿ ಶಿಕ್ಷಕರಿಗೆ ನೀಡುವುದು. ಆ ಮೊತ್ತದಿಂದ ತಮ್ಮ ತರಗತಿಗೆ ಅಗತ್ಯವಿರುವ ಬೋಧನಾ ಸಾಮಾಗ್ರಿಗಳನ್ನು ಖರೀದಿಸಿ ಉಪಯೋಗಿಸುವ ಮೂಲಕ ಶಿಕ್ಷಕರು ತಮ್ಮ ತಮ್ಮ ತರಗತಿಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
    ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನವೀನ ಕಾರ್ಯಕ್ರಮಗಳು
  2. ಎಫ್.ಎಲ್.ಎನ್ ವಿದ್ಯಾರ್ಥಿಗಳ ಕಲಿಕೆಗೆ ಪ್ರೇರಣೆ : ಎಲ್.ಕೆ.ಜಿ. ಯಿಂದ 8ನೇ ತರಗತಿಯವರೆಗೂ ಕಲಿಕೆಯಲ್ಲಿ ನಿಧಾನಗತಿಯಲ್ಲಿ ಕಲಿಯುವ ಮಕ್ಕಳನ್ನು ಗುರುತಿಸಿ ಎಫೆ.ಎಲ್.ಎನ್ ಕಾರ್ಯಕ್ರಮದಡಿಯಲ್ಲಿ ವಿಶೇಷ ಚಟುವಟಿಕೆಯೊಂದಿಗೆ ಮಕ್ಕಳ ಕಲಿಕೆಗೆ ಬೆಂಬಲ. ಮಧ್ಯಾಹ್ಮ 03:00 ರಿಂದ 03:30 ಗಂಟೆಯವರೆಗೂ ಎಫ್.ಎಲ್.ಎನ್ ವಿದ್ಯಾರ್ಥಿಗಳು ತಮಗೆ ನಿಯೋಜಿಸಿದ ಸಂಭಂಧಿಸಿದ ಶಿಕ್ಷಕರ ಬಳಿ ತೆರಳಿ ಕಲಿಕೆಯಲ್ಲಿ ಯಶಸ್ವಿಯನ್ನು ಸಾಧಿಸಿರುತ್ತಾರೆ.
  3. ಪ್ರತಿದಿನ ಸಾಮಾನ್ಯ ಜ್ಞಾನ : ಪ್ರತಿದಿನ ಶಾಲಾ ಪ್ರಾರ್ಥನಾ ಸಮಯದಲ್ಲಿ ದಿನಕ್ಕೊಮದು ಪ್ರಶ್ನೆಯನ್ನು ಕೇಳುವ ಮೂಲಕ ವಿದ್ಯಾರ್ಥಿಗಳ,ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲಾಗುವುದು.
  4. ಪುಸ್ತಕ ವಿಮರ್ಶೆ ಕಾರ್ಯಕ್ರಮ : ಪ್ರತಿದಿನ ಶಾಲಾ ಪ್ರಾರ್ಥನಾ ಅವಧಿಯಲ್ಲಿ ಪುಸ್ತಕ ಪರಿಚಯ ನಡೆಸುವ ಮೂಲಕ ಮಕ್ಕಳಲ್ಲಿ ಪುಸ್ತಕಗಳ ಓದುವ ಅಭಿರುಚಿ ಮತ್ತು ಪುಸ್ತಕಗಳನ್ನು ಅರ್ಥೈಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
  5. ಪ್ರತಿ ದಿನ ಪ್ರಾಣಾಯಾಮ ಅಭ್ಯಾಸ : ಪ್ರತಿದಿನ ಪ್ರಾರ್ಥನಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಣಾಯಾಮವನ್ನು ಕಲಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ , ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲಿ ಸಹಕಾರಿಯಾಗಿದೆ.
    “ಗ್ರಂಥಾಲಯಕ್ಕೆ ಪುಸ್ತಕದ ” ಅಭಿಯಾನ : ತಮ್ಮ ವಿಶೇಷ ದಿನಗಳನ್ನು ಆಚರಿಸುವಾಗ ಶಾಲೆಯ ಗ್ರಂಥಾಲಯಕ್ಕೆ ಕೊಡುಗೆ ನೀಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು.
  6. * ಜನ್ಮದಿನ ಪುಸ್ತಕ ದೇಣಿಗೆ *: ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದಂದು ಶಾಲೆಯ ಗ್ರಂಥಾಲಯಕ್ಕೆ ಪುಸ್ತಕವನ್ನು ದಾನ ಮಾಡುತ್ತಾರೆ.
    2 * ವಿಶೇಷ ದಿನ ಸೆಲೆಬ್ರೇಷನ್ *: ಸಾಧನೆಯ ಮೈಲಿಗಲ್ಲುಗಳು ಅಥವಾ ಕುಟುಂಬ ಆಚರಣೆಗಳಂತಹ ಇತರ ವಿಶೇಷ ದಿನಗಳಲ್ಲಿ ವಿದ್ಯಾರ್ಥಿಗಳು ಪುಸ್ತಕವನ್ನು ದಾನ ಮಾಡಬಹುದು.
    “ತಾಯಿಗೆ ಒಂದು ಗಿಡ” ಪರಿಸರ ಅಭಿಯಾನ : ಮಕ್ಕಳು ತಮ್ಮ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ಪರಿಸರ ಪ್ರೇಮ ಬೆಳೆಸಲು ವಿಶೇಷ ಕಾರ್ಯಕ್ರಮ.
  7. ವಿದ್ಯಾರ್ಥಿ ಭವಿಷ್ಯದ ಯೋಜನೆ – ತಜ್ಞರ ಉಪನ್ಯಾಸ ಸರಣಿ : ಉದ್ಯೋಗ ಮಾರ್ಗದರ್ಶನ, ಪ್ರೇರಣೆ ಮತ್ತು ಸಮುದಾಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಜ್ಞರಿಂದ ಉಪನ್ಯಾಸ.
  8. ಶಾಲಾ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ: ಶಾಲಾ ಹಿರಿಯ ವಿದ್ಯಾರ್ಥಿಗಳ ಸಮ್ಮೇಳನವನ್ನು ಆಯೋಜಿಸುವ ಮೂಲಕ, ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಪ್ರೇರಣೆ ನೀಡಲಾಯಿತು. ‘ನನ್ನ ಶಾಲೆಗೆ ನನ್ನ ಸೇವೆ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಕಾಣಿಕೆ ಡಬ್ಬವನ್ನು ನೀಡಿ, ಶಾಲೆಯ ಅಭಿವೃದ್ಧಿಗೆ ಕೈಜೋಡಿಸಲು ಪ್ರೋತ್ಸಾಹಿಸಲಾಯಿತು. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ದಾಕ್ಷಾಯಿಣಿ ಅವರ ಕಾರ್ಯ ಶ್ಲಾಘನೀಯ.
  9. ನೂತನ ಸಭಾಂಗಣ : ವಿದ್ಯಾರ್ಥಿಗಳು ಒಟ್ಟುಗೂಡಲು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದಾನಿಗಳ ಸಹಕಾರದಿಂದ ನೂತನ ಸಭಾಂಗಣದ ವ್ಯವಸ್ಥೆ.
  10. ಸಮುದಾಯದ ಸಹಭಾಗಿತ್ವ : ಸಮುದಾಯದ ಸಹಭಾಗಿತ್ವದ ಮೂಲಕ ಶಾಲೆಯಲ್ಲಿ ಅನೇಕ ಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ.
  • ಸಮುದಾಯದ ಬೆಂಬಲದಿಂದ ಶಾಲೆಯು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಮತ್ತು ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ.
  • ಸಮುದಾಯದ ಸಹಭಾಗಿತ್ವವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುತ್ತದೆ.
  • ಶಾಲಾ ಆವರಣದ ಸ್ವಚ್ಛತೆ: ಸಮುದಾಯದ ಸಹಕಾರದಿಂದ ಶಾಲಾ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲಾಗಿದೆ.
  • ಸಾಂಸ್ಕೃತಿಕ ಕಾರ್ಯಕ್ರಮಗಳು: ಸಮುದಾಯದ ಕಲಾವಿದರು ಮತ್ತು ತಜ್ಞರ ಸಹಾಯದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
  • ಕ್ರೀಡಾ ಚಟುವಟಿಕೆಗಳು: ಸಮುದಾಯದ ಕ್ರೀಡಾಪಟುಗಳು ಮತ್ತು ತರಬೇತುದಾರರ ಸಹಾಯದಿಂದ ಕ್ರೀಡಾ ತರಬೇತಿ ಮತ್ತು ಸ್ಪರ್ಧೆಗಳನ್ನು ನಡೆಸಲಾಗಿದೆ.
  • ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ: ಸಮುದಾಯದ ವೃತ್ತಿಪರರು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದ್ದಾರೆ.
  • ಸಮಗ್ರ ಆರೋಗ್ಯ ತಪಾಸಣೆ: ಸಮುದಾಯದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಶಾಲೆಯಲ್ಲಿ ಸಮಗ್ರ ಆರೋಗ್ಯ ತಪಾಸಣೆಗಳನ್ನು ನಡೆಸಿದ್ದಾರೆ.
  • ಹಸಿರು ಶಾಲೆ ಕಾರ್ಯಕ್ರಮಗಳು: ಸಮುದಾಯದ ಪರಿಸರ ತಜ್ಞರ ಸಹಕಾರದೊಂದಿಗೆ ಶಾಲೆಯಲ್ಲಿ ಹಸಿರು ಶಾಲೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
    ಸಮುದಾಯದ ಸಹಭಾಗಿತ್ವದಿಂದಾದ ಪ್ರಯೋಜನಗಳು:
  • ವಿದ್ಯಾರ್ಥಿಗಳ ಕಲಿಕೆಯ ಮಟ್ಟದಲ್ಲಿ ಹೆಚ್ಚಳ.
  • ಶಾಲೆಯ ಮೂಲಸೌಕರ್ಯಗಳ ಅಭಿವೃದ್ಧಿ.
  • ಶಾಲೆಯ ಮತ್ತು ಸಮುದಾಯದ ನಡುವೆ ಬಾಂಧವ್ಯ ಹೆಚ್ಚಳ.
  • ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಹೆಚ್ಚಳ
  • ಶಾಲೆಯಲ್ಲಿ ಶಿಕ್ಷಕರ ಮತ್ತು ಪೋಷಕರ ನಡುವಿನ ಸಂಬಂಧ ಸುಧಾರಣೆ.
    ಈ ಚಟುವಟಿಕೆಗಳು ಸಮುದಾಯದ ಸಹಭಾಗಿತ್ವದಿಂದ ಯಶಸ್ವಿಯಾಗಿ ನೆರವೇರಿವೆ.

ಶ್ರೀಮತಿ. ದಾಕ್ಷಾಯಿಣಿ ಅವರ ಶ್ರೇಷ್ಠ ನಾಯಕತ್ವಕ್ಕೆ ಕೃತಜ್ಞತೆ ಮತ್ತು ಪ್ರಶಂಸೆ

ಶ್ರೀಮತಿ. ದಾಕ್ಷಾಯಿಣಿ ಅವರು ಕೇವಲ ಮುಖ್ಯೋಪಾಧ್ಯಾಯರಲ್ಲದೆ, ಅವರ ನೇತೃತ್ವದಲ್ಲಿ ಶಾಲೆಯು ಹೊಸ ಆಯಾಮಗಳನ್ನು ತಲುಪಿದ ಒಂದು ಶ್ರೇಷ್ಠ ಶಿಕ್ಷಣ ಮಂದಿರವಾಗಿದೆ. ಅವರ ದೂರದೃಷ್ಟಿಯ ನಿರ್ಧಾರಗಳು, ವಿದ್ಯಾರ್ಥಿ ಕಲಿಕೆಯ ಮೇಲೆ ಅಪಾರ ಪ್ರೀತಿ, ಮತ್ತು ಶಿಕ್ಷಣವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ನಿಸ್ವಾರ್ಥ ಶ್ರಮ ಇವುಗಳೆಲ್ಲಾ ಶಾಲೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ.

ಅವರು ಶಾಲೆಯ ಭವಿಷ್ಯವನ್ನು ಉಜ್ವಲಗೊಳಿಸಲು ಅಸಾಧಾರಣ ದಕ್ಷತೆ ಮತ್ತು ದೃಢ ಸಂಕಲ್ಪವನ್ನು ಪ್ರದರ್ಶಿಸಿದ್ದಾರೆ. ಅವರು ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ, ವಿದ್ಯಾರ್ಥಿಗಳನ್ನು ಕೇವಲ ಪಠ್ಯ ವಿಷಯದ ಸಾಧನೆಗೇ ಸೀಮಿತಗೊಳಿಸದೆ, ಜ್ಞಾನ, ನೈತಿಕತೆ ಮತ್ತು ಸಂಸ್ಕಾರಗಳನ್ನೂ ಹೊಂದಿದ ಪ್ರಜ್ಞಾವಂತ ನಾಗರಿಕರಾಗಿ ರೂಪಿಸಲು ಶ್ರಮಿಸಿದ್ದಾರೆ.
ಅವರ ಕಾರ್ಯಕ್ಷೇತ್ರದಲ್ಲಿ ಅವಿಸ್ಮರಣೀಯ ಕೊಡುಗೆಗಳು:
✨ ನಾವು ಕಾಣಬಹುದಾದ ನಾವೀನ್ಯತೆ: ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಪರಿಚಯ ಸೇರಿದಂತೆ ಹಲವಾರು ಶೈಕ್ಷಣಿಕ ಬದಲಾವಣೆಗಳ ಹಿಂದಿರುವ ಪ್ರಮುಖ ಶಕ್ತಿಯೇ ಅವರು.
✨ ನಾವೀನ್ಯತೆ ಮತ್ತು ಉತ್ಸಾಹ: ಶಿಕ್ಷಣದ ಹೊಸ ಹೊಸ ವಿಧಾನಗಳನ್ನು ಜಾರಿಗೆ ತರಲು ಮತ್ತು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಬೆಳೆಸಲು ಶ್ರಮಿಸಿದ್ದಾರೆ.
✨ ಸಮುದಾಯದ ಒಡನಾಟ: ಶಾಲೆಯ ಮುನ್ನೋಟಕ್ಕಾಗಿ ದಾನಿಗಳನ್ನು, ಪೋಷಕರನ್ನು ಮತ್ತು ಸಮುದಾಯದ ಹಲವರನ್ನು ಒಳಗೊಳ್ಳುವ ಮೂಲಕ ಸಮುದಾಯ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿದ್ದಾರೆ.
✨ ನಾಯಕತ್ವ ಮತ್ತು ಪ್ರೇರಣೆ: ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು, ಹೊಸ ಶಿಕ್ಷಣ ನೀತಿಗಳನ್ನು ಜಾರಿಗೆ ತರುವುದು, ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು – ಈ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಅವರಿಗೆ ಸಂಧಿರುವ ಪ್ರಶಸ್ತಿಗಳು
“ ಪ್ರಶಸ್ತಿಯೆನ್ನುವುದು ನಾವು ಹುಡುಕಿಕೊಂಡು ಹೋಗಬಾರದು ಅದೇ ನಮ್ಮನ್ನು ಹುಡುಕಿಕೊಂಡು ಬರಬೇಕು.” ಎಂಬ ಮಾತಿನಂತೆ ಇವರ ಕಾರ್ಯ ದಕ್ಷತೆ, ನಿಸ್ವಾರ್ಥ ಸೇವಾ ಮನೋಭಾವಕ್ಕೆ ಇವರಿಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ .
2019-20 ನೇ ಸಾಲಿನಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆದ “ಜಿಲ್ಲಾಮಟ್ಟದ ಗಣರಾಜ್ಯೋತ್ಸವ ದಿನಾಚರಣೆ” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ
2023-24ನೇ ಸಾಲಿನ ದಕ್ಷಿಣಕನ್ನಡ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
2023-24 ನೇ ಸಾಲಿನ ಶಿಕ್ಷಕರ ಸಹಕಾರಿ ಸಂಘದ ವತಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
2024-25 ನೇ ಸಾಲಿನಲ್ಲಿ “ಹಸಿರು ಶಾಲೆ” ಪ್ರಶಸ್ತಿ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ, ದೊಡ್ಡಬಳ್ಳಾಪುರ
2024-25 ನೇ ಸಾಲಿನಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ ರಾಜ್ಯದ ಉತ್ತಮ ಮುಖ್ಯ ಶಿಕ್ಷಕಿ “ಶಿಕ್ಷಕ ಪ್ರಕಾಶ” ಪ್ರಶಸ್ತಿ,
2024-25ನೇ ಸಾಲಿನ ದೆಹಲಿ ನೀಪ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ನ್ಯಾಷನಲ್ ಲೀಡರ್ಶಿಪ್ ಕಾನ್ಫರೆನ್ಸ್ ನಲ್ಲಿ ಕರ್ನಾಟಕದ 2 ಶಾಲೆಗಳಲ್ಲಿ ನಮ್ಮ ಶಾಲೆಯ ಮುಖ್ಯಶಿಕ್ಷಕರಾಗಿ ಇವರ ಭಾಗವಹಿಸುವಿಕೆ ಉತ್ತಮ ಶಿಕ್ಷಕ ಪ್ರಶಸ್ತಿ, ಯೆನೆಪೋಯ ಸಂಸ್ಥೆ

ಅವರು ರೂಪಿಸಿದ ಶೈಕ್ಷಣಿಕ ದಾರಿಯಲ್ಲಿ, ಅನೇಕ ಶಾಲೆಗಳು ಮಾದರಿಯಾಗಲು ಪ್ರಯತ್ನಿಸುತ್ತಿವೆ. ಅವರ ನಿಸ್ವಾರ್ಥ ಸೇವೆ, ಶಿಕ್ಷಣದ ಮೇಲಿನ ಪ್ರಾಮಾಣಿಕ ಒಲವು, ಮತ್ತು ನಿರಂತರ ಶ್ರಮವು ನಮಗೆಲ್ಲರಿಗೂ ಪಾಠವಾಗಿದೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment