ಅಕ್ಟೋಬರ್ 22 ರಂದು ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯ ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ. ಶಿಕ್ಷಕರ ಸಂಘ ರಿ ಬೆಂಗಳೂರು
ದಕ್ಷಿಣ ಕನ್ನಡ ಜಿಲ್ಲೆ

ಜಿಲ್ಲಾಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸರಕಾರಿ ನೌಕರರ ಭವನ ಬಂಟ್ವಾಳ ತಾಲೂಕು ಇಲ್ಲಿ ದಿನಾಂಕ 22/10/22 ರಂದು ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು

IMG 20221023 WA0002

⭐ಜಿಲ್ಲಾ ಮಟ್ಟದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು,ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲು ಶಿಕ್ಷಕರಿಗಾಗಿ ಸಂಭ್ರಮ ದಿನವನ್ನು ಮುಂದಿನ ದಿನಗಳಲ್ಲಿ ಆಯೋಜಿಸುವುದೆಂದು ತೀರ್ಮಾನಿಸಲಾಯಿತು.

⭐ ಜಿಲ್ಲಾ ಮಟ್ಟದಲ್ಲಿ ಶಿಕ್ಷಕರ ಸಮ್ಮೇಳನ ಮತ್ತು ವಾರ್ಷಿಕ ಮಹಾ ಸಭೆಯನ್ನು ಆಯೋಜಿಸುವುದೆಂದು ತೀರ್ಮಾನಿಸಲಾಯಿತು

⭐ದಸರಾ ರಜೆಯು ಸೇರಿದಂತೆ,ರಜೆಯಲ್ಲಿ ಆಗಿರುವ ವ್ಯತ್ಯಾಸವನ್ನು ಸರಿ ಪಡಿಸಿ ಈ ಮೊದಲಿನಂತೆ ರಜೆಯನ್ನು ನೀಡುವಂತೆ ಒತ್ತಡ ಹೇರಲು ರಾಜ್ಯ ಸಂಘಕ್ಕೆ ಮನವಿ ನೀಡುವುದೆಂದು ತೀರ್ಮಾನಿಸಲಾಯಿತು

⭐ಅಕ್ಷರ ದಾಸೋಹ ಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹಾರದ ಕುರಿತು ರಾಜ್ಯ ,ಜಿಲ್ಲಾ ,ತಾಲೂಕು ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು

⭐ ಒತ್ತಡ ರಹಿತವಾಗಿ ಕೆಲಸ ನಿರ್ವಹಿಸಲು ಜಿಲ್ಲೆಯಾದ್ಯಂತ ಅಕ್ಷರ ದಾಸೋಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಏಕರೂಪದಲ್ಲಿ ನಿರ್ವಹಿಸುವ ಕುರಿತು ಜಿಲ್ಲೆಯಿಂದ ಸೂಕ್ತ ಮಾಹಿತಿಯನ್ನು ತಾಲೂಕಿಗೆ ನೀಡುವಂತೆ ಮನವಿ ನೀಡುವುದೆಂದು ತೀರ್ಮಾನಿಸಲಾಯಿತು

IMG 20221023 WA0003

⭐ಶಿಶುಪಾಲನ ರಜೆಯನ್ನು ಮಂಜೂರಾತಿ ಯ ಕುರಿತು ಆಗುತ್ತಿರುವ ತೊಂದರೆಗಳ ಕುರಿತು ಇಲಾಖಾ ಅಧಿಕಾರಿಗಳ ಗಮನಕ್ಕೆ ತರುವುದೆಂದು ತೀರ್ಮಾನಿಸಲಾಯಿತು

⭐ ಮುಖ್ಯ ಗುರುಗಳ ವೇತನ ವ್ಯತ್ಯಾಸವನ್ನು ಸರಿಪಡಿಸಲು ಕೈಗೊಂಡಿರುವ ಕ್ರಮಗಳ ಕುರಿತು ರಾಜ್ಯ ಹಂತದಿಂದ ಮಾಹಿತಿ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ತಿಳಿಸುವುದೆಂದು ನಿರ್ಣಯಿಸಲಾಯಿತು.ಶೀಘ್ರ ಕ್ರಮ ಕೈಗೊಳ್ಳುವಂತೆ ರಾಜ್ಯ ಸಂಘವನ್ನು ಒತ್ತಾಯಿಸುವುದೆಂದು ತೀರ್ಮಾನಿಸಲಾಯಿತು

⭐ದೈಹಿಕ ಶಿಕ್ಷಕರಿಗೆ ವರ್ಗಾವಣೆ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ರಾಜ್ಯ ಸಂಘದ ಗಮನಕ್ಕೆ ತರುವುದೆಂದು ತೀರ್ಮಾನಿಸಲಾಯಿತು

⭐ಹಿಂದಿ ಶಿಕ್ಷಕರ ಸಮಸ್ಯೆಯ ಕುರಿತು ಚರ್ಚಿಸಲಾಯಿತು

⭐2007/2008 ರಲ್ಲಿ ನೇಮಕಾತಿ ಹೊಂದಿರುವ ಕೆಲವು ಶಿಕ್ಷಕರ ವೇತನದಲ್ಲಿ ಆಗಿರುವ ವ್ಯತ್ಯಾಸವನ್ನು ಸರಿಪಡಿಸಲು ಈಗಾಗಲೇ ಮನವಿ ಸಲ್ಲಿಸಲಾಗಿದ್ದು ಸರಿ ಪಡಿಸಲು ಅಗತ್ಯ follow up ಮಾಡುವುದೆಂದು ತೀರ್ಮಾನಿಸಲಾಯಿತು

⭐ಶಿಕ್ಷಕರ ಕಲ್ಯಾಣ ನಿಧಿ,KGID,EEDS ಸೇವೆಗಳು ಆನ್ಲೈನ್ ಆಗಿರುವುದನ್ನು ಸ್ವಾಗತಿಸಿ,ಈ ಕುರಿತು ಶಿಕ್ಷಕರಿಗೆ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳುವುದೆಂದು,ಅಗತ್ಯ ಕಂಡು ಬಂದಲ್ಲಿ ಸಂಘಟನೆಯ ವತಿಯಿಂದ ಕಾರ್ಯಗಾರ ಹಮ್ಮಿಕೊಳ್ಳುವುದೆಂದು ತೀರ್ಮಾನಿಸಲಾಯಿತು

⭐ತಾಲೂಕುವಾರು ವಿವಿಧ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರದ ಕುರಿತು ಚರ್ಚಿಸಲಾಯಿತು

IMG 20221023 WA0004

⭐ಮುಂದಿನ ಜಿಲ್ಲಾ ಸರ್ವ ಸದಸ್ಯರ ಕಾರ್ಯಕಾರಿಣಿ ಸಭೆಯನ್ನು ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ ನವೆಂಬರ್ ಮೊದಲ ಶನಿವಾರದಂದು ಹಮ್ಮಿಕೊಳ್ಳುವುದೆಂದು ತೀರ್ಮಾನಿಸಲಾಯಿತು

⭐ GPT ಶಿಕ್ಷಕರ ನೇಮಕಾತಿಗೆ ಮೊದಲು ಸೇವಾ ನಿರತ ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸಲು ರಾಜ್ಯ ಹಂತದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಭೆಯ ಗಮನಕ್ಕೆ ತರಲಾಯಿತು

⭐ನಿಶ್ಚಿತ ಪಿಂಚಣಿಗಾಗಿ ನಡೆಯುವ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು

ಸಭೆಯಲ್ಲಿ ನೂತನವಾಗಿ ಪುತ್ತೂರು ತಾಲೂಕಿನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಶ್ರೀ ನವೀನ್ ರೈ ಮತ್ತು ಕಾರ್ಯದರ್ಶಿ ನಾಗೇಶ್ ಪಾಟಾಳಿ ಇವರನ್ನು ಅಭಿನಂದಿಸಲಾಯಿತು.ಊಟದ ವ್ಯವಸ್ಥೆಗೆ ಸಹಕರಿಸಿದ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶ್ರೀ ಅಮಿತಾನಂದ ಹೆಗ್ಡೆ ಇವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸಲಾಯಿತು, ಸ್ಥಳಾವಕಾಶ ನೀಡಿ ಸಹಕರಿಸಿದ ಬಂಟ್ವಾಳ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸಲಾಯಿತು

ಶಿಕ್ಷಕರ ಸೇವೆಯೇ ಸಂಘದ ಗುರಿ

ವಂದನೆಗಳೊಂದಿಗೆ

ವಿಮಲ್ ನೆಲ್ಯಾಡಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ( ರಿ) ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆ

WhatsApp Group Join Now
Telegram Group Join Now
Sharing Is Caring:

Leave a Comment