ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ
ಗುರುಭ್ಯೋ ನಮಃ
ಹಲವು ವರ್ಷಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ…..
ಶ್ರೀ ವಿಶ್ವನಾಥ
ದೈಹಿಕ ಶಿಕ್ಷಕರು
ಕೆ ಪಿ ಎಸ್ ಶಾಲೆ
ಪುಂಜಾಲಕಟ್ಟೆ. ಬೆಳ್ತಂಗಡಿ
ದಿನಾಂಕ 06.03.1963 ರಂದು ಉಜಿರೆ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು ವಿದ್ಯಾಭ್ಯಾಸವನ್ನು ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳಲ್ಲಿ ಪೂರೈಸಿ, ದೈಹಿಕ ಶಿಕ್ಷಣ ತರಬೇತಿಯನ್ನು ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಹೇಮಾವತಿ ಮಹಾವಿದ್ಯಾಲಯದಲ್ಲಿ ಪೂರೈಸಿ ನಂತರ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದು ದೈಹಿಕ ಶಿಕ್ಷಣ ತರಬೇತಿ ಮುಗಿಸಿದ ಕೂಡಲೇ DLRC ನೇರ ನೇಮಕಾತಿಯ ಮೂಲಕ ದೈಹಿಕ ಶಿಕ್ಷಣ ಶಿಕ್ಷಕರಾಗಿ ಮಂಗಳೂರು ತಾಲೂಕಿನ ಚೇಳ್ಯಾರು ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಸೇವೆಗೆ ಸೇರಿದ ಇವರು 3 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು ಸ.ಮಾ.ಹಿ.ಪ್ರಾ.ಶಾಲೆ ಮುಂಡಾಜೆ ಇಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ತರಬೇತಿಗೊಳಿಸಿ ಹೋಬಳಿ, ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಶಾಲೆಯ ಹಾಗೂ ವಿದ್ಯಾರ್ಥಿಗಳ ಕೀರ್ತಿ ಪತಾಕೆಯನ್ನು ಹಾರಿಸಿದ ಇವರು ನಂತರ ವರ್ಗಾವಣೆ ಗೊಂಡು ಕೆ ಪಿ ಎಸ್ ಶಾಲೆ ಪುಂಜಾಲಕಟ್ಟೆ ಇಲ್ಲಿ ಸೇವೆಗೆ ಸೇರಿದ ಇವರು 2022-2023 ರ ಶೈಕ್ಷಣಿಕ ಸಾಲಿನಲ್ಲಿ ಕೆ ಪಿ ಎಸ್ ಶಾಲೆ ವಲಯ ತಾಲೂಕು ಮಟ್ಟದಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಪಡೆಯಲು ಶ್ರಮವಹಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ವಸಂತಿ ಕೆ
ಸ.ಹಿ.ಪ್ರಾ.ಶಾಲೆ ಪೆರಿಂಜೆ. ಬೆಳ್ತಂಗಡಿ ತಾಲೂಕು.
ದಿನಾಂಕ 03.03.1963 ರಲ್ಲಿ ಜನಿಸಿದ ಇವರು ದಿನಾಂಕ 29.03.1990 ರಲ್ಲಿ ಸ.ಕಿ.ಪ್ರಾ.ಶಾಲೆ ಪೆರೋಡಿ ಬೆಳುವಾಯಿ ಮೂಡುಬಿದಿರೆ ಇಲ್ಲಿ ಸೇವೆಗೆ ಸೇರಿದ ಇವರು ನಂತರ ದಿನಾಂಕ 07.06.1993 ರಲ್ಲಿ ಸ.ಹಿ.ಪ್ರಾ.ಶಾಲೆ ಬೆಳುವಾಯಿ (ಚರ್ಚ್ ಬಳಿ ) ಮೂಡುಬಿದಿರೆ ಇಲ್ಲಿಗೆ ವರ್ಗಾವಣೆ ಗೊಂಡು ಸುಮಾರು 6 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 15.10.1999 ರಲ್ಲಿ ಸ ಹಿ.ಪ್ರಾ.ಶಾಲೆ ಮೂಡುಬಿದಿರೆ-3 ಮೂಡುಬಿದಿರೆ ವಲಯ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 11 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 04.08.2010 ರಲ್ಲಿ ಸ.ಹಿ ಪ್ರಾ.ಶಾಲೆ ಕೋಟೆಬಾಗಿಲು ಜನರಲ್ ಮೂಡುಬಿದಿರೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 28.06.2018 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ ಪೆರಿಂಜೆ ಬೆಳ್ತಂಗಡಿ ತಾಲೂಕು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ರಾಮಕೃಷ್ಣ ಪ್ರಭು
ಸ.ಕಿ.ಪ್ರಾ ಶಾಲೆ ಕುಜಿಲಬೆಟ್ಟು
ಬಂಟ್ವಾಳ
ದಿನಾಂಕ 29.03.1963 ರಂದು ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ಮಾರಿಬೆಟ್ಟು ಶ್ರೀ ದೇವಣ್ಣ ಪ್ರಭು ಹಾಗೂ ಶ್ರೀಮತಿ ಶಾಂಭವಿಯವರ ಪುತ್ರನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ವಗ್ಗ ನಿರ್ಖಾನ ಶಾಲೆಯಲ್ಲಿ ಪೂರೈಸಿ 1988ರಿಂದ 1994 ರವರೆಗೆ ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ನೀಡುವ ಸಲುವಾಗಿ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ 1994 ರಲ್ಲಿ ರಾಮನಗರದ ಇರುಳಿಗರಿದೊಡ್ಡಿ ಶಾಲೆಯಲ್ಲಿ ಸೇವೆಯನ್ನು ಪ್ರಾರಂಭಿಸಿ ನಂತರ 1997 ರಲ್ಲಿ ಬಾಳ್ತಿಲ ಶಾಲೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸಿ ನಂತರ 2000ನೇ ಇಸವಿಯಲ್ಲಿ ಕುಜ್ಲುಬೆಟ್ಟು ಶಾಲೆಗೆ ವರ್ಗಾವಣೆಗೊಂಡು ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಸುಸಜ್ಜಿತ ಕೊಠಡಿಗಳು, ಅಡಿಕೆ ತೋಟ, ತರಕಾರಿ ವನ, ಮಾಡಿದ್ದು, ಇವರು 2002 ರಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಹಾಗೂ ಶಿಕ್ಷಕರಿಗೆ ನಡೆದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇವರು ಸುಮಾರು 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸುಲೋಚನಾ ಕೆ
ಮುಖ್ಯಗುರುಗಳು
ಸ.ಹಿ.ಪ್ರಾ.ಶಾಲೆ ಕೋಡಿಂಬಾಡಿ ಪುತ್ತೂರು ತಾಲೂಕು
ಸೇವೆಗೆ ಸೇರಿದ ದಿನಾಂಕ: 02-09-1993
ಶಾಲೆ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಳೆಪಾಡಿ ಮಂಗಳೂರು ತಾಲೂಕು.
ವರ್ಗಾವಣೆ ಹೊಂದಿದ ದಿನಾಂಕ:16-11-1998ರಲ್ಲಿ ಸ.ಹಿ.ಪ್ರಾ.ಶಾ.ಪಡುಮಲೆ ಪುತ್ತೂರು ತಾಲೂಕಿನಲ್ಲಿ ಸುಮಾರು 7 ವರ್ಷಗಳ ಕಾಲ ಸೇವೆ ಸಲ್ಲಿಸಿ ದಿನಾಂಕ:06-06-2005 ರಂದು ಸ.ಹಿ.ಪ್ರಾ.ಶಾಲೆ ಕೋಡಿಂಬಾಡಿ ಇಲ್ಲಿಗೆ ಬಂದರು. ದಿನಾಂಕ:30-04-2022ರಂದು ಮುಖ್ಯಗುರುಗಳಾಗಿ ಮುಂಬಡ್ತಿ ಹೊಂದಿರುವಿರಿ. ಇದರ ಮಧ್ಯೆ ಕೆಲವು ವರುಷಗಳ ಕಾಲ ಸ.ಹಿ.ಪ್ರಾ.ಶಾಲೆ ಬನ್ನೂರು ಇಲ್ಲಿಗೆ ನಿಯೋಜನೆ ಮೇರೆಗೆ ತೆರಳಿ ಸೇವೆ ಸಲ್ಲಿಸಿರುವಿರಿ.
ಸುಮಾರು 30 ವರುಷಗಳ ಕಾಲ ಸಾರ್ಥಕ ಶೈಕ್ಷಣಿಕ ಸೇವೆ ಸಲ್ಲಿಸಿ ಅಪಾರ ವಿದ್ಯಾರ್ಥಿ ಸಮೂಹಕ್ಕೆ ಜ್ಞಾನಾರ್ಜನೆಗೈದು ಅವರ ಜೀವನಕ್ಕೆ ಬೆಳಕಾಗಿದಿರಿ. ಇಂದು ಸರ್ಕಾರಿ ಶಿಕ್ಷಣ ಸೇವೆಗೆ ನಿವೃತ್ತಿ ಹೊಂದುತ್ತಿರುವ ನಿಮ್ಮ ನಿವೃತ್ತಿ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಮುಕ್ತ
ಸ.ಹಿ.ಪ್ರಾ.ಶಾಲೆ ಉರುಮಣೆ
ಮಂಗಳೂರು ದಕ್ಷಿಣ
ದಿನಾಂಕ 24.03.1963 ರಲ್ಲಿ ಜನಿಸಿದ ಇವರು ದಿನಾಂಕ 28.07.1994 ರಲ್ಲಿ ಸೇವೆಗೆ ಸೇರಿ ಸುಮಾರು 29 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಶಾರದಾ ಐಲ್
ಸ.ಹಿ.ಪ್ರಾ.ಶಾಲೆ ಮೀನಾದಿ.
ದಿನಾಂಕ 15.03.1963 ರಲ್ಲಿ ಜನಿಸಿದ ಇವರು ದಿನಾಂಕ 08.07.1985 ರಲ್ಲಿ ಸ.ಹಿ.ಪ್ರಾ.ಶಾಲೆ ಅಂಬ್ಲಮೊಗರು ಇಲ್ಲಿ ಸೇವೆಗೆ ಸೇರಿ ನಂತರ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ ಅಜ್ಜಿನಡ್ಕದಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 18.08.2018 ರಲ್ಲಿ ಸ.ಹಿ.ಪ್ರಾ.ಶಾಲೆ ಮೀನಾದಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಪದ್ಮಾವತಿ ಕೆ
ಮುಖ್ಯ ಶಿಕ್ಷಕಿ.
ಸ.ಹಿ.ಪ್ರಾ.ಶಾಲೆ ಮುರುಳ್ಯ ಶಾಂತಿ ನಗರ ಸುಳ್ಯ ತಾಲೂಕು.
ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕಲ್ಲಂಗಳ ಶ್ರೀಚೋಮಗೌಡ ಹಾಗೂ ಶ್ರೀಮತಿ ಗೋಪಿ ದಂಪತಿಗಳ ಪುತ್ರಿಯಾಗಿ ದಿನಾಂಕ 01.04.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಕೇಪು ಹಾಗೂ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಶ್ರೀ ಸತ್ಯ ಸಾಯಿ ಜ್ಯೂನಿಯರ್ ಕಾಲೇಜು ಅಳಿಕೆಯಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಕಪಿತಾನಿಯೋ ಶಿಕ್ಷಕ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 19.07.1985 ರಲ್ಲಿ ಸ.ಹಿ.ಪ್ರಾ.ಶಾಲೆ ಶಾಲೆತ್ತಡ್ಕ ಬೆಳ್ತಂಗಡಿ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ಸುಮಾರು 4 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 13.02.1989 ರಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಬಂಟ್ವಾಳ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 5 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 08.06.1994 ರಲ್ಲಿ ಸುಳ್ಯ ತಾಲೂಕಿನ ಸ.ಮಾ.ಹಿ.ಪ್ರಾ.ಶಾಲೆ ಪಂಜ ಇಲ್ಲಿಗೆ ವರ್ಗಾವಣೆ ಗೊಂಡು ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 30.06.2014 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ ಮುರುಳ್ಯ ಶಾಂತಿ ನಗರ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು
ನಿರಂತರ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಗೌರವದ ಸ್ಥಾನ ಪಡೆದ ತಮ್ಮೆಲ್ಲರ ನಿವೃತ್ತ ಜೀವನ ಸುಖಮಯವಾಗಿರಲಿ. ದೇವರು ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.