ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ನಿವೃತ್ತರಾಗುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ | ಗುರುಭ್ಯೋ ನಮಃ

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ

ಗುರುಭ್ಯೋ ನಮಃ

ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಹಚ್ಚಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

ಶ್ರೀ ಹೈದರ್ ಬಿ
ಸ.ಉ.ಪ್ರಾ.ಶಾಲೆ.ಪಡಂಗಡಿ
ಬೆಳ್ತಂಗಡಿ ತಾಲೂಕು

ಬಂಟ್ವಾಳ ತಾಲೂಕಿನ ಪುದು ಗ್ರಾಮದ ಬಾಲ್ದಬೆಟ್ಟು ಎಂಬಲ್ಲಿ ಟಿ.ಹೆಚ್.ಹಾಜಬ್ಬ ಮತ್ತು ಶ್ರೀಮತಿ ಐಸಮ್ಮ ದಂಪತಿಗಳ ಸುಪುತ್ರನಾಗಿ ದಿನಾಂಕ 18.07.1962 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಸುಜೀರು ಎಂಬಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸ.ಪ.ಪೂ.ಕಾಲೇಜು ಬೆಂಜನಪದವು ಇಲ್ಲಿ ಪೂರೈಸಿ ಸಿ.ಪಿ.ಎಡ್ ನ್ನು ಎಂ.ಕೆ ಅನಂತರಾಜ ಕಾಲೇಜು ಮೂಡುಬಿದಿರೆ ಇಲ್ಲಿ ಪೂರೈಸಿ ದಿನಾಂಕ 19.02.1996 ರಲ್ಲಿ ಸ.ಉ.ಪ್ರಾ.ಶಾಲೆ ಪಡಂಗಡಿ ಇಲ್ಲಿ ಸೇವೆಗೆ ಸೇರಿದರು. ಸತತ 15 ವರ್ಷಗಳಲ್ಲಿ ಇವರ ಬಾಲಕ/ಬಾಲಕಿಯರ ವಾಲಿಬಾಲ್, ಖೋ-ಖೋ ತಂಡವು ತಾಲೂಕು ಮಟ್ಟದಲ್ಲಿ ಸ್ಪರ್ಧಿಸಿರುವುದು ಹೆಮ್ಮೆಯ ವಿಚಾರ. 2010-2011 ರಲ್ಲಿ ಬಾಲಕಿಯರ ವಾಲಿಬಾಲ್ ವಿಭಾಗ ಮಟ್ಟ , ರಾಜ್ಯ ಮಟ್ಟ, 2012-2013 ರಲ್ಲಿ ಬಾಲಕಿಯರ ವಾಲಿಬಾಲ್ ವಿಭಾಗ ಮಟ್ಟ, ರಾಜ್ಯ ಮಟ್ಟ. 2013-2014 ರಲ್ಲಿ ಬಾಲಕಿಯರ ವಾಲಿಬಾಲ್ ರಾಷ್ಟ್ರ ಮಟ್ಟ(ಜಮ್ಮು-ಕಾಶ್ಮೀರ)ದಲ್ಲಿ 4ನೇ ಸ್ಥಾನ. 2014-2015 ರಲ್ಲಿ ಬಾಲಕರ ಕಬಡ್ಡಿ ವಿಭಾಗ ಮಟ್ಟ,2019-2020 ರಲ್ಲಿ ಬಾಲಕರ ಕಬಡ್ಡಿ ರಾಜ್ಯ/ರಾಷ್ಟ್ರ ಮಟ್ಟದಲ್ಲಿ (ಛತ್ತಿಸ್ಗಡ)3ನೇ ಸ್ಥಾನ ಪಡೆದಿದೆ.2019-2020 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನೀಡುವ “ನಮ್ಮೂರ ಶಾಲೆ ನಮ್ಮೂರ ಯುವ ಜನರು 2019-2020” ಪ್ರಶಸ್ತಿ ಪಡೆಯಲು ಕಾರಣರಾಗಿದ್ದಾರೆ. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ಪಡೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀ ಕೋಮಲ ಚಂದ್ರ ಕೆ
ಮುಖ್ಯ ಶಿಕ್ಷಕರು
ಸ.ಉ.ಪ್ರಾ.ಶಾಲೆ ಚಾರ್ಮಾಡಿ
ಬೆಳ್ತಂಗಡಿ ತಾಲೂಕು

ಶ್ರೀ ಪದ್ಮನಾಭ ಗೌಡ.ಕೆ ಹಾಗೂ ಶ್ರೀಮತಿ ಶೇಷಮ್ಮ ದಂಪತಿಗಳ ಪುತ್ರನಾಗಿ ದಿನಾಂಕ 30.07.1962 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಆಲೆಟ್ಟಿ ಹಾಗೂ ಪ್ರೌಢ ಶಿಕ್ಷಣವನ್ನು ಹೈಸ್ಕೂಲ್, ಸರಕಾರಿ ಜ್ಯೂನಿಯರ್ ಕಾಲೇಜು ಸುಳ್ಯ, ಶಿಕ್ಷಕ ತರಬೇತಿಯನ್ನು ಸರಸ್ವತಾ ಶಿಕ್ಷಕರ ತರಬೇತಿ ಸಂಸ್ಥೆ ಮಡಿಕೇರಿಯಲ್ಲಿ ಪೂರೈಸಿ ದಿನಾಂಕ 02.09.1993 ರಲ್ಲಿ ಬೆಳ್ತಂಗಡಿ ತಾಲೂಕಿನ ಉಣ್ಣಾಲು ಕಿ.ಪ್ರಾ.ಶಾಲೆ, ಇಲ್ಲಿ ಸೇವೆಗೆ ಸೇರಿದ ಇವರು ನಂತರ 1998ರಲ್ಲಿ ಸ.ಹಿ.ಪ್ರಾ.ಶಾಲೆ ನೆರಿಯ ಇಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು ಸ.ಮಾ.ಹಿ.ಪ್ರಾ.ಶಾಲೆ ಮುಂಡಾಜೆ ಇಲ್ಲಿ ಸೇವೆ ಸಲ್ಲಿಸಿ,2015 ರಲ್ಲಿ ಸ.ಹಿ.ಪ್ರಾ.ಶಾಲೆ,ಇಂದಬೆಟ್ಟು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 24.02.2020 ರಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಸ.ಉ.ಹಿ.ಪ್ರಾ.ಶಾಲೆ ಚಾರ್ಮಾಡಿಗೆ ವರ್ಗಾವಣೆ ಗೊಂಡು ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀ ಸತೀಶ
ಸಹ ಶಿಕ್ಷಕರು.
ಸ.ಕಿ.ಪ್ರಾ.ಶಾಲೆ ಮುಂಡೂರುಪಳಿಕೆ
ಬೆಳ್ತಂಗಡಿ ತಾಲೂಕು

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪಟೇಲರ ಮನೆ ದಿವಂಗತ ಕೊರಗಯ್ಯ ಶೆಟ್ಟಿ ಮತ್ತು ಶ್ರೀಮತಿ ಪಾರ್ವತಿ ಶೆಡ್ತಿ ದಂಪತಿಗಳ ಪುತ್ರನಾಗಿ ದಿನಾಂಕ 11.07.1962 ರಲ್ಲಿ ಜನಿಸಿದ ಇವರು ತೆಕ್ಕಟ್ಟೆ ಹಾಗೂ ಉಡುಪಿ ಜಿಲ್ಲೆಯ ಕೊಕ್ಕರ್ಣೆಯಲ್ಲಿ ವಿಧ್ಯಾಭ್ಯಾಸವನ್ನು ಪೂರೈಸಿ,1999 ರಲ್ಲಿ ಸೇವೆಗೆ ಸೇರಿ ಗ್ರಾಮೀಣ ಕ್ರಪಾಂಕದ ಅಡಿಯಲ್ಲಿ ಮರು ನೇಮಕಾತಿ ಯಾಗಿ ಕರ್ತವ್ಯ ನಿರ್ವಹಿಸಿ ಆ ಶಾಲೆಯಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 31.03.2017 ರಲ್ಲಿ ಕೊಕ್ಕಡ ಗ್ರಾಮದ ಮುಂಡೂರು ಪಳಿಕೆ ಶಾಲೆಗೆ ವರ್ಗಾವಣೆ ಗೊಂಡು ನಂತರ ಶೂನ್ಯ ಶಿಕ್ಷಕರ ಶಾಲೆಯಾದ ಬದಿಪಳಿಕೆಯಲ್ಲಿ ನಿಯೋಜನೆ ಯಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಐರಿ ಹಿಲ್ಡಾ ರೊಡ್ರಿಗಸ್
ಸ.ಉ.ಪ್ರಾ.ಶಾಲೆ.ಅಂಡಿಂಜೆ
ಬೆಳ್ತಂಗಡಿ ತಾಲೂಕು

ಹೊಸಬೆಟ್ಟು ಗ್ರಾಮದ ಶ್ರೀ ಸಿಪ್ರಿಯನ್ ರೊಡ್ರಿಗಸ್ ಮತ್ತು ಶ್ರೀಮತಿ ಸ್ಟೆಲ್ಲಾ ರೊಡ್ರಿಗಸ್ ದಂಪತಿಗಳ ಪುತ್ರಿಯಾಗಿ ದಿನಾಂಕ 22.07.1962 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆ ಹೊಸಬೆಟ್ಟು ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಹೋಲಿ ರೋಜರಿ ಪ್ರೌಢಶಾಲೆ ಮೂಡುಬಿದಿರೆ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಮಂಗಳೂರಿನ ಕಪಿತಾನಿಯೊ ಸಂಸ್ಥೆಯಲ್ಲಿ ಪೂರೈಸಿ, ದಿನಾಂಕ 23.01.1996 ರಂದು ಸ.ಹಿ.ಪ್ರಾ.ಶಾಲೆ ಕೆಮ್ಮಟೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆಗೆ ಸೇರಿ ನಂತರ ಸ.ಕಿ.ಪ್ರಾ.ಶಾಲೆ ಬಡಕೋಡಿ ಹಾಗೂ ಸ.‌ಹಿ.ಪ್ರಾ.ಶಾಲೆ ಪಡ್ಡಂದಡ್ಕ ಇಲ್ಲಿ ಸೇವೆ ಸಲ್ಲಿಸಿ ಹೆಚ್ಚುವರಿ ಆದಾಗ ಸ.ಉ.ಪ್ರಾ.ಶಾಲೆ.ಅಂಡಿಂಜೆ ಆಯ್ಕೆ ಮಾಡಿ ದಿನಾಂಕ 12.06.2019 ರಂದು ಸೇವೆಗೆ ಸೇರಿ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಪೂರ್ಣಿಮಾ.ಎ
ಸ.ಹಿ.ಪ್ರಾ.ಶಾಲೆ, ತಲಪಾಡಿ ಪಟ್ನಾ.
ಮಂಗಳೂರು

ಶ್ರೀ ಗುರುವಪ್ಪ ಹಾಗೂ ಶ್ರೀಮತಿ ಕಮಲ ದಂಪತಿಗಳ ಪುತ್ರಿಯಾಗಿ ದಿನಾಂಕ 17.07.1962 ರಲ್ಲಿ ಜನಿಸಿದ ಇವರು ದಿನಾಂಕ 25.10.1982 ರಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಶಂಭೂರು ಇಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು ,ಸ.ಹಿ.ಪ್ರಾ.ಶಾಲೆ, ಮಂಜನಾಡಿ, ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ, ಕುಂಪಲ ಹಾಗೂ ಸ.ಹಿ.ಪ್ರಾ.ಶಾಲೆ ಪಿಲಾರು ಹಾಗೂ ಸ.ಹಿ.ಪ್ರಾ.ಶಾಲೆ ಮಹಾಕಾಳಿ ಪಡ್ಪು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ತಲಪಾಡಿ ಪಟ್ನಾ ಇಲ್ಲಿ ಸೇವೆ ಸಲ್ಲಿಸಿ ದಿನಾಂಕ 05.05.2022 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಲಲಿತಾಂಬಾ
ಸ.ಹಿ.ಪ್ರಾ.ಶಾಲೆ ಮೂಲ್ಕಿ.
ಮಂಗಳೂರು

ದಿನಾಂಕ 12.06.1996 ರಲ್ಲಿ ಸೇವೆಗೆ ಸೇರಿದ ಇವರು ಸ.ಹಿ.ಪ್ರಾ.ಶಾಲೆ ಮಾಸ್ತಿಕಟ್ಟೆ ಮೂಡುಬಿದಿರೆ, ನಂತರ ವರ್ಗಾವಣೆಗೊಂಡು ಸ.ಹಿ.ಪ್ರಾ.ಶಾಲೆ ಮೂಲ್ಕಿ ಇಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಶಾಲೆ ಹೊಸಪಟ್ಣ ಬೆಳ್ತಂಗಡಿ ತಾಲೂಕು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಮೂಲ್ಕಿ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಇಂದಿರಾ.ಕೆ
ದೈಹಿಕ ಶಿಕ್ಷಕಿ
ಸ.ಹಿ.ಪ್ರಾ.ಶಾಲೆ,ನೆಟ್ಟಾರು
ಸುಳ್ಯ ತಾಲೂಕು

ದಿನಾಂಕ 01.08.1994 ರಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನ ಬಂಟ್ವಾಳ ತಾಲೂಕು ಇಲ್ಲಿ ಸೇವೆಗೆ ಸೇರಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸುಳ್ಯ ತಾಲೂಕು ಹಿ.ಪ್ರಾ.ಶಾಲೆ ಮುಡ್ಕೂರು ಮರ್ಕಂಜ ಇಲ್ಲಿ 2 ವರ್ಷ ಸೇವೆ ಸಲ್ಲಿಸಿ ನಂತರ ದಿನಾಂಕ 11.07.2000 ರಂದು ಸ.ಹಿ.ಪ್ರಾ.ಶಾಲೆ ನೆಟ್ಟಾರು ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ 22ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಗಿರಿಜಾಂಬ.ಬಿ
ಸ.ಉ.ಪ್ರಾ.ಶಾಲೆ ಕಾಂತಮಂಗಲ
ಸುಳ್ಯ ತಾಲೂಕು

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೈಚನಹಳ್ಳಿಯ
ಶ್ರೀ ಬೇಲೂರೆ ಗೌಡ ಮತ್ತು ಶ್ರೀಮತಿ ದೇವಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ದಿನಾಂಕ 30.10.1985 ರಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಸೇವೆಗೆ ಸೇರಿ ನಂತರ ದಿನಾಂಕ 22.07.1991 ರಲ್ಲಿ ಸ.ಉ.ಹಿ.ಪ್ರಾ.ಶಾಲೆ ಕಾಂತಮಂಗಲ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಕರ್ತವ್ಯಕ್ಕೆ ಸೇರಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀ ಫೆಲಿಕ್ಸ್ ಮೋರಾಸ್
ಸಹ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಕೋಟೆಬಾಗಿಲು ‌ಮೂಡುಬಿದಿರೆ

ದಿನಾಂಕ 02.07.1962 ರಂದು ಜನಿಸಿದ ಇವರು ದಿನಾಂಕ 18.01.1996ರಲ್ಲಿ ಸ.ಹಿ.ಪ್ರಾ.ಶಾಲೆ ಕಡಿರುದ್ಯಾವರ ಇಲ್ಲಿ ಸೇವೆಗೆ ಸೇರಿ ನಂತರ ದಿನಾಂಕ 03.12.1996ರಲ್ಲಿ ಸ.ಹಿ.ಪ್ರಾ.ಶಾಲೆ ತೊಡಾರು ಮೂಡುಬಿದಿರೆ ಇಲ್ಲಿಗೆ ವರ್ಗಾವಣೆಗೊಂಡು ದಿನಾಂಕ 27.07.2018 ರವರೆಗೆ ಸೇವೆ ಸಲ್ಲಿಸಿ ನಂತರ ದಿನಾಂಕ 27.07.2018 ರಲ್ಲಿ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ, ಕೋಟೆ ಬಾಗಿಲು ಜನರಲ್ ಮೂಡುಬಿದಿರೆ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಪ್ರಫುಲ್ಲ ಎಮ್ ಶೆಟ್ಟಿ
ಸ.ಹಿ.ಪ್ರಾ.ಶಾಲೆ ಮೂಡುಬಿದಿರೆ III.

ದಿನಾಂಕ 20.07.1962 ರಂದು ಜನಿಸಿದ ಇವರು ಬಿ.ಎ.ಶಿಕ್ಷಣ ಪೂರೈಸಿ ಶಿಕ್ಷಕ ತರಬೇತಿಯನ್ನು ಪಡೆದು ದಿನಾಂಕ 16.01.1996 ರಲ್ಲಿ ಸೇವೆಗೆ ಸೇರಿದ ಇವರು ರಾಷ್ಟ್ರೀಯ ಯೋಗ ತೀರ್ಪುಗಾರರು ಹಾಗೂ ಹಿಂದಿ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು.15 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡುಬಿದಿರೆ ಇಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು, ಇವರು ಶಿಕ್ಷಕರ ದಿನಾಚರಣೆ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಮೋಂತಿ ಮೇರಿ ರೊಡ್ರಿಗಸ್
ಸಹಶಿಕ್ಷಕಿ
ಸ.ಉ.ಪ್ರಾ.ಶಾಲೆ ನರಿಮೊಗರು ಪುತ್ತೂರು ತಾಲೂಕು.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದಿನಾಂಕ : 07-08-1998ರಂದು ಸ.ಉ.ಹಿ.ಪ್ರಾ.ಶಾಲೆ ಸವಣೂರಿಗೆ ಸಹಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ಅಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿರುವಿರಿ.ಅಲ್ಲಿಂದ ದಿನಾಂಕ: 05-07-2008 ರಂದು ವರ್ಗಾವಣೆ ಗೊಂಡು ಸ.ಉ.ಹಿ.ಪ್ರಾ.ಶಾಲೆ ನರಿಮೊಗರು ಇಲ್ಲಿಗೆ ಕರ್ತವ್ಯಕ್ಕೆ ಹಾಜರಾಗಿ ಇದುವರೆಗೆ ಸುಮಾರು 14ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿ ಆಗುತ್ತಿರುವಿರಿ.ಸುಮಾರು 24 ವರ್ಷಗಳ ಕಾಲ ಹಲವಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿ ಅವರ ಬಾಳಿಗೆ ಬೆಳಕಾಗಿದಿರಿ.ನಿಮ್ಮ ನಿವೃತ್ತ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ಶ್ರೀ ಶ್ರೀಧರ ಬೋಳಿಲ್ಲಾಯ
ಸಹಶಿಕ್ಷಕರು
ಸ.ಹಿ.ಪ್ರಾ.ಶಾಲೆ ಬಡಗನ್ನೂರು ಪುತ್ತೂರು ತಾಲೂಕು.

ತಂದೆ: ಬಿ.ಕೆ.ವಾಸುದೇವ ಬೋಳಿಲ್ಲಾಯ
ತಾಯಿ: ಸತ್ಯಭಾಮ
ಜನನ:13-07-1962
ಪ್ರಾಥಮಿಕ ಶಿಕ್ಷಣವನ್ನು ಪಾಣಾಜೆ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸುಬೋಧ ಪ್ರೌಢಶಾಲೆ ಆರ್ಲಪದವಿನಲ್ಲಿ ಮುಗಿಸಿ ಟಿ.ಸಿಚ್ ವೃತ್ತಿ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದಿರುವಿರಿ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದಿನಾಂಕ : 14-01-1999 ರಂದು ಸ.ಹಿ.ಪ್ರಾ.ಶಾಲೆ ಏಕತ್ತಡ್ಕ ಇಲ್ಲಿ ಸಹಶಿಕ್ಷಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ಅಲ್ಲಿ ಸುಮಾರು 16 ವರ್ಷಗಳ ಕಾಲ ಸೇವೆ ಸಲ್ಲಿಸಿರುವಿರಿ.ಅಲ್ಲಿಂದ 2015 ರಲ್ಲಿ ವರ್ಗಾವಣೆ ಗೊಂಡು ಸ.ಉ.ಹಿ.ಪ್ರಾ.ಶಾಲೆ ಬಡಗನ್ನೂರು ಇಲ್ಲಿಗೆ ಕರ್ತವ್ಯಕ್ಕೆ ಹಾಜರಾಗಿ ಇದುವರೆಗೆ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿ ಆಗುತ್ತಿರುವಿರಿ.ಸುಮಾರು 23 ವರ್ಷಗಳ ಕಾಲ ಹಲವಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿ ಅವರ ಬಾಳಿಗೆ ಬೆಳಕಾಗಿದಿರಿ.ನಿಮ್ಮ ನಿವೃತ್ತ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ಶ್ರೀ ಹುಕ್ರಪ್ಪ ನಾಯ್ಕ ಬಿ
ಪದವೀಧರೇತರ ಮುಖ್ಯಗುರುಗಳು ಸ.ಮಾ.ಉ.ಹಿ.ಪ್ರಾ.ಶಾಲೆ ಕಾವು ಪುತ್ತೂರು ತಾಲೂಕು.

ತಂದೆ: ಚೋಮನಾಯ್ಕ
ತಾಯಿ: ಪಾರ್ವತಿ
ಜನನ:25-09-1962
ಪತ್ನಿ: ಶ್ರೀಮತಿ ಜಾನಕಿ ಮುಖ್ಯಗುರುಗಳು ಸ.ಉ.ಹಿ.ಪ್ರಾ.ಶಾಲೆ ಪೇರಲ್ತಡ್ಕ
ಪ್ರಾಥಮಿಕ ಶಿಕ್ಷಣವನ್ನು ನೆಟ್ಟಣಿಗೆ ಮುಡ್ನೂರು ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಕೊಂಬೆಟ್ಟು ಪ್ರೌಢಶಾಲೆ ಪುತ್ತೂರಿನಲ್ಲಿ ಮುಗಿಸಿ ಟಿ.ಸಿಚ್ ವೃತ್ತಿ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದಿರುವಿರಿ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದಿನಾಂಕ : 29-09-1982 ರಂದು ಸ.ಕಿ.ಪ್ರಾ.ಶಾಲೆ ಪುಣ್ಚಪಾಡಿ ಇಲ್ಲಿ ಏಕೋಪಾಧ್ಯಾಯ ಶಾಲೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ಶಿಕ್ಷಕ ಸೇವೆಯನ್ನು ಪ್ರಾರಂಭಿಸಿದಿರಿ.ಅಲ್ಲಿಂದ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಶಾಲೆ ಆಲಂತಡ್ಕ,ಮಣಿಕ್ಕರ ಹಾಗೂ ಇರ್ದೆಉಪ್ಪಳಿಗೆ ಯಲ್ಲಿ ಕರ್ತವ್ಯ ನಿರ್ವಹಿಸಿರುವಿರಿ. 21-11-2002ರಲ್ಲಿ ಮುಖ್ಯಗುರುಗಳಾಗಿ ಬಡ್ತಿ ಗೊಂಡು ಸ.ಹಿ.ಪ್ರಾ.ಶಾ.ದೂಮಡ್ಕ ದಲ್ಲಿ ಸೇವೆ ಸಲ್ಲಿಸಿದಿರಿ.ತದನಂತರ 12-02-2016ರಲ್ಲಿ ಪದವೀಧರೇತರ ಮುಖ್ಯಗುರುಗಳಾಗಿ ಬಡ್ತಿ ಗೊಂಡು ಸ.ಮಾ.ಉ.ಹಿ.ಪ್ರಾ.ಶಾಲೆ ಕಾವು ಇಲ್ಲಿ ಇದುವರೆಗೆ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿ ಆಗುತ್ತಿರುವಿರಿ.ಸುಮಾರು 40 ವರ್ಷಗಳ ಕಾಲ ಹಲವಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿ ಅವರ ಬಾಳಿಗೆ ಬೆಳಕಾಗಿದಿರಿ ಅಲ್ಲದೇ ಸಂಸ್ಥೆಯ ಉನ್ನತಿಗಾಗಿ ಶ್ರಮಿಸಿದ್ದೀರಿ.ನಿಮ್ಮ ನಿವೃತ್ತ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ಶ್ರೀ ಉದಯ ಕುಮಾರ್ ಎಸ್
ಮುಖ್ಯಗುರುಗಳು ಸ.ಹಿ.ಪ್ರಾ.ಶಾಲೆ ನಿಡ್ಪಳ್ಳಿ ಪುತ್ತೂರು ತಾಲೂಕು.

ತಂದೆ: ಕೃಷ್ಣಯ್ಯ ಎಸ್
ತಾಯಿ: ಸುಮತಿ
ಜನನ:21-07-1962
ಪ್ರಾಥಮಿಕ ಶಿಕ್ಷಣವನ್ನು ಕಿರಿಯ ಪ್ರಾಥಮಿಕ ಶಾಲೆ ಕೊಯಿಲ ಬಡಗನ್ನೂರು ಮತ್ತು ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ ಹಾಗೂ ಪ್ರೌಢ ಶಿಕ್ಷಣವನ್ನು ಪಂಚಲಿಂಗೇಶ್ವರ ಪ್ರೌಢಶಾಲೆ ಈಶ್ವರಮಂಗಲದಲ್ಲಿ ಮುಗಿಸಿ ಟಿ.ಸಿಚ್ ವೃತ್ತಿ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದಿರುವಿರಿ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದಿನಾಂಕ : 26-07-1993 ರಂದು ಸ.ಕಿ.ಪ್ರಾ.ಶಾಲೆ ಸಜಂಕಾಡಿಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ಶಿಕ್ಷಕ ಸೇವೆಯನ್ನು ಪ್ರಾರಂಭಿಸಿದಿರಿ.ಅಲ್ಲಿಂದ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಶಾಲೆ ಕೊಯಿಲ ಬಡಗನ್ನೂರು ಇಲ್ಲಿ ಕರ್ತವ್ಯ ನಿರ್ವಹಿಸಿರುವಿರಿ. 03-03-2020ರಲ್ಲಿ ಮುಖ್ಯಗುರುಗಳಾಗಿ ಬಡ್ತಿ ಗೊಂಡು ಸ.ಹಿ.ಪ್ರಾ.ಶಾಲೆ ನಿಡ್ಪಳ್ಳಿಯಲ್ಲಿ ಇದುವರೆಗೆ ಸೇವೆ ಸಲ್ಲಿಸಿ ಇಂದು ನಿವೃತ್ತಿ ಆಗುತ್ತಿರುವಿರಿ.ಸುಮಾರು 29 ವರ್ಷಗಳ ಕಾಲ ಹಲವಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿ ಅವರ ಬಾಳಿಗೆ ಬೆಳಕಾಗಿದಿರಿ ಅಲ್ಲದೇ ಸಂಸ್ಥೆಯ ಉನ್ನತಿಗಾಗಿ ಶ್ರಮಿಸಿದ್ದೀರಿ.ಪುತ್ತೂರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಶಿಕ್ಷಕರ ಧ್ವನಿಯಾಗಿ ಕೆಲಸ ನಿರ್ವಹಿಸಿರುವಿರಿ. ನಿಮ್ಮ ನಿವೃತ್ತ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ಶ್ರೀಮತಿ ಕುಶಲ ಎ
ಸ.ಹಿ.ಪ್ರಾ.ಶಾಲೆ,ಬಿ ಮೂಡ ಬಂಟ್ವಾಳ ತಾಲೂಕು

ಶ್ರೀ ರಮೇಶ ಹಾಗೂ ಶ್ರೀಮತಿ ಕಮಲ ದಂಪತಿಗಳ ಪುತ್ರಿಯಾಗಿ ದಿನಾಂಕ 15.07.1962 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆ ಅತ್ತಾವರ ಹಾಗೂ ಸ.ಹಿ.ಪ್ರಾ.ಶಾಲೆ ವಾಣಿ ವಿಲಾಸ ಹಾಸನ ಹಾಗೂ ಪ್ರೌಢ ಶಿಕ್ಷಣವನ್ನು
ಸರಕಾರಿ ಫ್ರೌಢ ಶಾಲೆ ಗಂಧದ ಕೋಟೆ ಹಾಸನ ಇಲ್ಲಿ ಪೂರೈಸಿ ಪಿಯುಸಿ ವಿದ್ಯಾಭ್ಯಾಸವನ್ನು ಸರಕಾರಿ ಪದವಿಪೂರ್ವ ಕಾಲೇಜು ಮಂಗಳೂರು ಹಾಗೂ ಶಿಕ್ಷಕ ತರಬೇತಿಯನ್ನು ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಬಲ್ಮಠ ಮಂಗಳೂರು ಇಲ್ಲಿ ಪೂರೈಸಿ, 1988 ರಲ್ಲಿ ಸ.ಹಿ.ಪ್ರಾ.ಶಾಲೆ ದೇವಶ್ಯಮೂಡೂರು ಬಂಟ್ವಾಳ ತಾಲೂಕು ಇಲ್ಲಿ ಸೇವೆಗೆ ಸೇರಿ ಸುಮಾರು 13 ವರ್ಷಗಳ ಕಾಲ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ 2001 ರಂದು ಮುಖ್ಯ ಗುರುಗಳಾಗಿ ಭಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ, ನಡುಮೊಗರು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 26.07.2002 ರಂದು ಸ.ಹಿ.ಪ್ರಾ.ಶಾಲೆ,ಬಿ.ಮೂಡ ಬಂಟ್ವಾಳ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ರೋಜಿ ಲೋಬೋ
ಸ.ಹಿ.ಪ್ರಾ ಶಾಲೆ ಅಲೆಟ್ಟಿ
ಬಂಟ್ವಾಳ ತಾಲೂಕು

ಶ್ರೀ ಬರ್ನಾಡ್ ಲೋಬೋ ಹಾಗೂ ಶ್ರೀಮತಿ ಎವ್ಲಿನ್ ನಜ್ರೆಸ್ ದಂಪತಿಗಳ ಪುತ್ರಿಯಾಗಿ ದಿನಾಂಕ 06.07.1962 ರಲ್ಲಿ ಜನಿಸಿದ ಇವರು ಒಂದರಿಂದ ಐದನೇ ತರಗತಿ ವಿದ್ಯಾಭ್ಯಾಸವನ್ನು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಸೋರ್ನಾಡು ಬಂಟ್ವಾಳ ಇಲ್ಲಿ ಪೂರೈಸಿ ಆರನೇ ತರಗತಿ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆ ಕೊಯಿಲ ಹಾಗೂ ಏಳನೇ ತರಗತಿಯಿಂದ ಎಸ್.ಎಸ್.ಎಲ್.ಸಿ.ವರೆಗಿನ ಶಿಕ್ಷಣವನ್ನು ಸಂತ ಜೋಸೆಫರ ಪ್ರೌಢ ಶಾಲೆ ಕುಂದಾಪುರ ಇಲ್ಲಿ ಪೂರೈಸಿ ಶಿಕ್ಷಕರ ತರಬೇತಿಯನ್ನು ಸಂತ ಅನ್ನರ ಶಿಕ್ಷಕಿಯರ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 12.01.1996 ರಂದು ಹಿರಿಯ ಪ್ರಾಥಮಿಕ ಶಾಲೆ ಖಂಡಿಗ ಕೊಳ್ನಾಡು ಬಂಟ್ವಾಳ ಇಲ್ಲಿ ಸೇವೆಯನ್ನು ಆರಂಭಿಸಿ ನಂತರ ದಿನಾಂಕ 16.10.1999 ರಿಂದ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಹಚ್ಚಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ

ಶ್ರೀ ಪರಮೇಶ್ವರಯ್ಯ ಜಿ

ಶ್ರೀ ರಾಮ ಐಹಾಳ ಹಾಗೂ ಪಾರ್ವತಿ ಜಿ. ದಂಪತಿಗಳ ಸುಪುತ್ರನಾಗಿ ಬಂಟ್ವಾಳ ತಾಲೂಕಿನಕಲ್ಲಡ್ಕದ ಗುಂಡರು ಮನೆಯಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಹಾಗೂ ಪ್ರೌಢಶಿಕ್ಷಣವನ್ನುಶಾರದಾ ಪ್ರೌಢಶಾಲೆಪಾಣೆಮಂಗಳೂರು , ಶಿಕ್ಷಕರ ತರಬೇತಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿಸಂಸ್ಥೆ ಮಂಗಳೂರು ದಿನಾಂಕ 22. 09.1994ರಂದು ಸರಕಾರಿ ಹಿರಿಯ ಪಾಥಮಿಕ ಶಾಲೆ ಕುತ್ಲೂರುಬೆಳ್ತಂಗಡಿ ತಾಲೂಕು ಇಲ್ಲಿ ಸೇವೆಗೆ ಸೇರಿ ನಂತರ ದಿನಾಂಕ: 30.05.1998ರಿಂದ 29.11. 2006 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದಾದರ, ಬಂಟ್ವಾಳ ತಾಲೂಕು 29.05 2006ರಿಂದ 30.11.2016 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಮಲಿ ಬಂಟ್ವಾಳ ತಾಲೂಕು 01.1.2016 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಡಿಡ್ಯ, ವಿಟ್ಲ ಬಂಟ್ವಾಳ ತಾಲೂಕು , 30.07.2022ರ ವರೆಗೆ28ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ , ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

ಶ್ರೀಮತಿ ಆಶೋಲಿನ್ ಫರ್ನಾಂಡಿಸ್

ದಿನಾಂಕ 21.07 .1962 ರಂದು ಪೌಲ್, ಫೆರ್ನಾಂಡಿಸ್ ಮತ್ತು ಕಾರ್ಮಿಣ್ ಫೆರ್ನಾಂಡಿಸ್ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ದಿನಾಂಕ08.02.1996ರಂದು ದ.ಕ.ಜಿ.ಪಂ.ಮಾದರಿ ಓ.ಪ್ರಾ.ಶಾಲೆ ಚೆನ್ನೈ ತೋಡಿ ಇಲ್ಲಿ ಸೇವೆಗೆ ಸೇರಿದರು. ದಿನಾಂಕ 23.06.2009ರಂದು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಕಡ್ತಾಲಬೆಟ್ಟು ಇಲ್ಲಿ ಕರ್ತವ್ಯ ನಿರ್ವಹಿಸಿ ಸುಮಾರು 13ವರ್ಷಗಳ ಕಾಲ ನಲಿಕಲಿ ತರಗತಿಯನ್ನು ನಿರ್ವಹಿಸಿ, ಬೋಧನೆಯಲ್ಲಿ ತಮ್ಮದೇ ಆದ ವೈಜ್ಞಾನಿಕ ಪ್ರಯೋಗಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಸುದೀರ್ಘವಾದ 26 ವರ್ಷ 5 ತಿಂಗಳುಗಳ ಕಾಲ ಶಿಕ್ಷಕಿಯಾಗಿ ಸಾರ್ಥಕ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

ಚಾರ್ಲ್ಸ್ ವೇಗಸ್

ಡೊಮಿನಿಕ್ ಲಾರೆನ್ಸ್ ವೇಗಸ್ ಹಾಗೂ ಎಲಿಜಬೆತ್ ಪಿಂಟೊ ದಂಪತಿಗಳಮಗನಾಗಿ 18-07-1962ರಂದು ಜನಿಸಿದ ಇವರು ಉತ್ತಮಶಿಕ್ಷಣವನ್ನು ಪಡೆದು ದಿನಾಂಕ 12.08.1993ರಂದು ಬೆಂಗಳೂರು ನಗರ ಜಿಲ್ಲೆಯ ಸ.ಹಿ.ಪ್ರಾ.ಶಾಲೆಚಿಕ್ಕಹೊಸಹಳ್ಳಿಯಲ್ಲಿ ಸೇವೆಗೆ ಸೇರಿ 01.08.1997ರಿಂದ 18.06. 2009ರವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಕಡೇಶಾಲ್ಯ 18.06. 2009 ರಿಂದ 05.10.2013 ರವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ,ಬಂಟ್ವಾಳ ಹಾಗೂ 05.10.2013ರಿಂದ 31.07.2022ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರು ಕಲ್ಲಡ್ಕ ಇಲ್ಲಿ ಕರ್ತವ್ಯ ನಿರ್ವಹಿಸಿ ಕಲಿಕೆಯಲ್ಲಿ ಹಿಂದುಳಿದಮಕ್ಕಳಿಗೆ ಕೈಗೊಂಡ ಚಿಣ್ಣರ ಅಂಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿ ನಿಮ್ಮ ಅಮೂಲ್ಯವಾದ ಸೇವೆಯನ್ನು 29 ವರ್ಷಗಳ ಕಾಲ ಶಿಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸಿ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಹೊಂದಿರುತ್ತೀರಿ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಪ್ರೇಮ ಕುಮಾರಿ ಕೆ.

ದ.ಕ.ಜಿ.ಪಂ.ಹಿ.ಪ್ರಾ ಬಾಳ್ತಿಲ, ಬಂಟ್ವಾಳ ರಾಮಣ್ಣ ರೈ ಮತ್ತು ಲೀಲಾವತಿ ದಂಪತಿಗಳ ಪುತ್ರಿಯಾಗಿ 20. 07.1962ರಂದು ಬಾಳ್ತಿಲ(ಕಾಡಬೆಟ್ಟು)ಜನಿಸಿದ ಇವರು ದಿನಾಂಕ 15.08.1998 ರಂದುದ.ಕ.ಜಿ.ಪಂ.ಹಿ.ಪ್ರಾ ಬಾಳ್ತಿಲ, ಬಂಟ್ವಾಳ ತಾಲೂಕು ಇಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿ ಸುಮಾರು 24 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ, ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

ಶ್ರೀಮತಿ ದೇವಕಿ ಅಮ್ಮ.ಪಿ

.ಸ.ಹಿ ಪ್ರಾ. ಶಾಲೆ ನೀರ್ಕಜೆ ಬಂಟ್ಟಾಳದಿನಾಂಕ 30.06.1962ರಂದು ಜನಿಸಿದ ಇವರುದಿನಾಂಕ 29.07.1993 ರಲ್ಲಿ ಸೇವೆಗೆ ಸೇರಿ ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿಲ ಹಾಗೂ ಬಂಟ್ವಾಳ ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲಇಲ್ಲಿ ದಿನಾಂಕ 18.06.1996 ರಿಂದ 05 .05 2022ರವರೆಗೆ ಸಹ ಶಿಕ್ಷಕಿಯಾಗಿ ಮತ್ತು ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ನಂತರ ಪೂರ್ಣಕಾಲಿಕ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಹೊಂದಿ ದಿನಾಂಕ 06.05. 2022ರಿಂದ30.07.2022ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕಜೆ, ಬಂಟ್ವಾಳ ತಾಲೂಕು ಇವರು ಸುಮಾರು 29 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು*

ಶ್ರೀಮತಿ ಮೇರಿ ಪಿರೇರಾ.ಜೆ

ದಿನಾಂಕ 01.08.1962ರಂದು ಕಡೇಶ್ವಾಲ್ಯ ಗ್ರಾಮದ ಜಡ್ತಿಲ ಊರಿನಲ್ಲಿ ಶ್ರೀಯುತ ಮನ್ವೆಲ್ ಪಿರೇರಾ ಹಾಗೂ ಸಿಸಿಲ್ಯಾ ಪಿರೇರಾದಂಪತಿಗಳ ಸುಪುತ್ರಿಯಾಗಿ ಜನಿಸಿದಿನಾಂಕ 24.08.1994ರಲ್ಲಿ ಸೇವೆಗೆ ಸೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೊಳಿಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮ್ಡೇಲು ಇಲ್ಲಿ ದಿನಾಂಕ 19.06.2003ರಂದು ಸೇವೆಯನ್ನು 27ವರ್ಷ 11 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳುಹಲವು ವರ್ಷಗಳ ಸಾರ್ಥಕ ಸೇವೆಯಿಂದ ವಿರಮಿಸುತ್ತಿರುವ ತಮ್ಮೆಲ್ಲರ ನಿವೃತ್ತ ಜೀವನವು ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ. ಸುಖಮಯ ಜೀವನ ನಿಮ್ಮದಾಗಲಿ. ಸಮೃದ್ಧಿಯ ತಮ್ಮ ನಿವೃತ್ತ ಜೀವನಕ್ಕೆ ಆತ್ಮೀಯ ಶುಭ ಹಾರೈಕೆಗಳು

ಶ್ರೀಮತಿ ಶೋಭಾ

ಶ್ರೀಮತಿ ಶೋಭಾ ಅವರು ಮಂಗಳೂರಿನ ಬೋಳಾರದ ಶ್ರೀ ಕೊರಗ ಸಪಲ್ಯ ಮತ್ತು ಶ್ರೀಮತಿ ರಾಧಾದಂಪತಿಯ ಮಗಳಾಗಿ 1962 ಜುಲೈ 21ರಂದು ಜನಿಸಿದರು. . 1994 ಅಕ್ಟೋಬರ್ 1ರಂದು ಬೆಳ್ತಂಗಡಿ ತಾಲ್ಲೂಕಿನ ಮರೋಡಿ ಗ್ರಾಮದ ಕೂಕಬೆಟ್ಟುಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಹಶಿಕ್ಷಕಿಯಾಗಿ ಸರ್ಕಾರಿ ಸೇವೆಗೆ ಪಾದರ್ಪಣೆಗೊಂಡರು. ನಮ್ಮೂರಿನ ಶಾಲೆಯಲ್ಲಿ ಐದು ವರ್ಷಗಳಕಾಲ ಅಪೂರ್ವ ಸೇವೆ ಸಲ್ಲಿಸಿ, 1999 ಜನವರಿ 29ರಂದು ವರ್ಗಾವಣೆಗೊಂಡು ಮಂಗಳೂರು ತಾಲ್ಲೂಕಿನ ಹರೇಕಳ ಗ್ರಾಮದ ರಾಜಗುಡ್ಡಶಾಲೆಗೆ ಸೇವೆಗೆ ಸೇರಿರುತ್ತಾರೆ. 21ವರ್ಷಗಳ ಕಾಲ ಅದೇ ಶಾಲೆಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಹಚ್ಚಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ

ಹಲವು ವರ್ಷಗಳ ಸಾರ್ಥಕ ಸೇವೆಯಿಂದ ವಿರಮಿಸುತ್ತಿರುವ ತಮ್ಮೆಲ್ಲರ ನಿವೃತ್ತ ಜೀವನವು ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ. ಸುಖಮಯ ಜೀವನ ನಿಮ್ಮದಾಗಲಿ. ಸಮೃದ್ಧಿಯ ತಮ್ಮ ನಿವೃತ್ತ ಜೀವನಕ್ಕೆ ಆತ್ಮೀಯ ಶುಭ ಹಾರೈಕೆಗಳು

.

.

ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಹಚ್ಚಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ

.

Sharing Is Caring:

Leave a Comment