ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ
ಗುರುಭ್ಯೋ ನಮಃ
ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.
ಶ್ರೀಮತಿ ಸವಿತಾ
ಸ.ಹಿ.ಪ್ರಾ.ಶಾಲೆ.ಕೆದಿಲ ಗಡಿಯಾರ
ಬಂಟ್ವಾಳ ತಾಲೂಕು.
ಶ್ರೀ ಕೃಷ್ಣ ಭಟ್ ಹಾಗೂ ಶ್ರೀಮತಿ ಸುನಂದಾ ದಂಪತಿಗಳ ಪುತ್ರಿಯಾಗಿ ದಿನಾಂಕ 16.11.1962 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಕಡಿರುದ್ಯಾವರ ಬೆಳ್ತಂಗಡಿ ಹಾಗೂ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆ ಪುತ್ತೂರು ತಾಲೂಕು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ಶಿಕ್ಷಕರ ವಿದ್ಯಾಲಯ ಕಿನ್ನಿಕಂಬಳ ಇಲ್ಲಿ ಪೂರೈಸಿ, ದಿನಾಂಕ 01.08.1994 ರಲ್ಲಿ ಸೇವೆಗೆ ಸೇರಿದ ಇವರು ಸ.ಹಿ.ಪ್ರಾ.ಶಾಲೆ ಸವಣೂರು ಪುತ್ತೂರು ತಾಲೂಕು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಪೌತ್ರಕೋಡಿ ಹಾಗೂ ಸ.ಹಿ.ಪ್ರಾ.ಶಾಲೆ ಕೆದಿಲ ಗಡಿಯಾರ ಬಂಟ್ವಾಳ ತಾಲೂಕು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಪುಷ್ಪಾವತಿ.ಕೆ.ಬಿ
ಸ.ಉ.ಪ್ರಾ.ಶಾಲೆ ಬಿಳಿನೆಲೆ ಕೈಕಂಬ.
ದಿನಾಂಕ 07.11.1962 ರಲ್ಲಿ ಜನಿಸಿದ ಇವರು
ಸ.ಕಿ ಪ್ರಾ.ಶಾಲೆ ನೇಲ್ಯಡ್ಕ ಪುತ್ತೂರು ಇಲ್ಲಿ ಸೇವೆಗೆ ಸೇರಿದರು.ನಂತರ ಸ.ಹಿ.ಪ್ರಾ.ಶಾಲೆ ಬಂಟ್ರ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಉ.ಪ್ರಾ.ಶಾಲೆ ಬಿಳಿನೆಲೆ ಇಲ್ಲಿಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸಿ ದಿನಾಂಕ 06.05.2022 ರಂದು ಮುಖ್ಯ ಶಿಕ್ಷಕಿಯಾಗಿ ನೇಮಕಗೊಂಡು ಸುಮಾರು 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸುಮತಿ ಪಿ
ಸ.ಹಿ.ಪ್ರಾ.ಶಾಲೆ ಬಿಳಿನೆಲೆ ಬೈಲು.
ದಿನಾಂಕ 09.11.1962 ರಲ್ಲಿ ಜನಿಸಿದ ಇವರು ದಿನಾಂಕ 16.07.1985 ರಲ್ಲಿ ಸ.ಹಿ.ಪ್ರಾ.ಶಾಲೆ ಕೇಳದಪೇಟೆ ಬೆಳ್ತಂಗಡಿ ತಾಲೂಕು ಇಲ್ಲಿ ಸೇವೆಗೆ ಸೇರಿದರು. ನಂತರ ಸ.ಮಾ.ಹಿ.ಪ್ರಾ.ಶಾಲೆ ಕಡಬ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಉ.ಪ್ರಾ.ಶಾಲೆ ಐತ್ತೂರು ಹಾಗೂ ಸ.ಹಿ.ಪ್ರಾ.ಶಾಲೆ ಬಿಳಿನೆಲೆ ಬೈಲು ಇಲ್ಲಿ ಸೇವೆ ಸಲ್ಲಿಸಿ ದಿನಾಂಕ 30.06.2014 ರಲ್ಲಿ ಸ.ಹಿ.ಪ್ರಾ.ಶಾಲೆ ಬಿಳಿನೆಲೆ ಬೈಲು ಇಲ್ಲಿ ಮುಖ್ಯ ಶಿಕ್ಷಕಿಯಾಗಿ ನೇಮಕಗೊಂಡ ಇವರು ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು
ಶ್ರೀಮತಿ ನಳಿನಿ
ಸ.ಹಿ.ಪ್ರಾ.ಶಾಲೆ
ಬಡಗ ಎಕ್ಕಾರು.
ಮಂಗಳೂರು ಉತ್ತರ
ದಿನಾಂಕ 09.02.1990 ರಲ್ಲಿ ಸ.ಕಿ.ಪ್ರಾ.ಶಾಲೆ ಮೊಗೆರಡ್ಕ, ಪುತ್ತೂರು ಇಲ್ಲಿ ಸೇವೆಗೆ ಸೇರಿದ ಇವರು ದಿನಾಂಕ 07.06.1992 ರಲ್ಲಿ ಸ.ಕಿ.ಪ್ರಾ.ಶಾಲೆ ಕಿಲೆಂಜೂರು, ಮಂಗಳೂರು ಇಲ್ಲಿಗೆ ವರ್ಗಾವಣೆ ಗೊಂಡು ಸೇವೆ ಸಲ್ಲಿಸಿ ನಂತರ ದಿನಾಂಕ 26.07.2013 ರಲ್ಲಿ ಸ.ಹಿ.ಪ್ರಾ.ಶಾಲೆ ಬಡಗಎಕ್ಕಾರು ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು
ಶ್ರೀಮತಿ ಪದ್ಮಾವತಿ ಎನ್
ಸ.ಹಿ.ಪ್ರಾ.ಶಾಲೆ ಎಡಪದವು
ಮಂಗಳೂರು ದಕ್ಷಿಣ
ದಿನಾಂಕ 15.11.1962 ರಲ್ಲಿ ಜನಿಸಿದ ಇವರು ದಿನಾಂಕ 01.12.1988 ರಲ್ಲಿ ಸೇವೆಗೆ ಸೇರಿ ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ನಾರಾಯಣ ನಾಯ್ಕ ಪಿ
ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು ಪುತ್ತೂರು ತಾಲೂಕು
ಜನನ:17-11-1962
ತಂದೆ: ಹುಕ್ರನಾಯ್ಕ ಪೈಂತಿಮುಗೇರು
ತಾಯಿ:ದೇವಕಿ
ವಿದ್ಯಾಭ್ಯಾಸ:1ರಿಂದ5: ಸ.ಕಿ.ಪ್ರಾ.ಶಾ.ಇರ್ದೆಬೆಟ್ಟಂಪಾಡಿ
6-7 :ಸ.ಹಿ.ಪ್ರಾ.ಶಾ.ಇರ್ದೆ ಉಪ್ಪಳಿಗೆ
8-10 :ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ
ಪಿಯುಸಿ:ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರು
ಟಿ.ಸಿ.ಎಚ್:ಡಯಟ್ ಮಂಗಳೂರು ಪಡೆದಿರುವಿರಿ.
ಕರಿಹಲಗೆ ಯೋಜನೆಯಡಿಯಲ್ಲಿ 01-02-1990ರಂದು ಸ.ಕಿ.ಪ್ರಾ.ಶಾಲೆ ನೂಜಿಬೈಲು ಪುತ್ತೂರು ತಾಲೂಕುನಲ್ಲಿ ಸಹಶಿಕ್ಷಕ ರಾಗಿ ಶಿಕ್ಷಣ ಇಲಾಖೆಗೆ ಸೇರಿದಿರಿ.ಅಲ್ಲಿಂದ ವರ್ಗಾವಣೆ ಹೊಂದಿ ಕೈಕಾರ ಶಾಲೆಗೆ ಹೋಗಿರುವಿರಿ.22-03-2007ರಲ್ಲಿ ಮುಖ್ಯಗುರುಗಳಾಗಿ ಬಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ ಕೃಷ್ಣಗಿರಿ ಬಂಟ್ವಾಳ ತಾಲೂಕುಗೆ ಹೋಗಿರುವಿರಿ.ಅಲ್ಲಿಂದ ಹೆಚ್ಚುವರಿ ವರ್ಗಾವಣೆ ಹೊಂದಿ 01-06-2019ರಂದು ಸ.ಉ.ಹಿ.ಪ್ರಾ.ಶಾಲೆ ಬಡಗನ್ನೂರು ಬಂದು ಇದುವರೆಗೂ ಸೇವೆ ಸಲ್ಲಿಸಿ ಸುಮಾರು 32 ವರ್ಷಗಳ ಕಾಲದ ವೃತ್ತಿ ಜೀವನಕ್ಕೆ ನಿವೃತ್ತಿಯಾಗುತ್ತಿರುವಿರಿ.ಅಪಾರ ಶಿಷ್ಯ ಬಳಗವನ್ನು ಹೊಂದಿರುವ ತಾವು ಅವರ ಬಾಳಿಗೆ ಬೆಳಕಾಗಿದಿರಿ.ನಿಮ್ಮ ನಿವೃತ್ತ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀ ವಾಸುದೇವ ಆಚಾರ್ಯ
ಸ.ಹಿ.ಪ್ರಾ ಶಾಲೆ ಪಾಡ್ಯಾರು
ಮೂಡುಬಿದಿರೆ ತಾಲೂಕು
ಶ್ರೀ ಸಣ್ಣಯ್ಯ ಆಚಾರ್ಯ ಹಾಗೂ ಶ್ರೀಮತಿ ಭವಾನಿ ದಂಪತಿಗಳ ಪುತ್ರನಾಗಿ ದಿನಾಂಕ 01.12.1962 ರಲ್ಲಿ ಜನಿಸಿದ ಇವರು ದಿನಾಂಕ 11.03.1996 ರಲ್ಲಿ ಸೇವೆಗೆ ಸೇರಿದರು. 2013 ರಿಂದ 01.06.2017 ರವರೆಗೆ ಸಿ.ಆರ್.ಪಿ ಯಾಗಿ ಕರ್ತವ್ಯ ನಿರ್ವಹಿಸಿ, ಜಿಲ್ಲಾ ನಲಿ ಕಲಿ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಜಿಲ್ಲಾ ಗಣಿತ ಕಲಿಕಾ ಆಂದೋಲನದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ತೀರ್ಥರಾಮ ಎ.ವಿ
ಸ.ಉ.ಪ್ರಾ.ಶಾಲೆ ಜಯನಗರ ಸುಳ್ಯ.
ದಿನಾಂಕ 29.11.1962 ರಲ್ಲಿ ಜನಿಸಿದ ಇವರು ದಿನಾಂಕ 09.07.1985 ರಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಕಲ್ಲಬೆಟ್ಟು ಮೂಡುಬಿದಿರೆ ಇಲ್ಲಿ ಸೇವೆಗೆ ಸೇರಿದರು. ನಂತರ ಕೆ.ಪಿ.ಎಸ್.ಬೆಳ್ಳಾರೆ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 15.07.1999 ರಲ್ಲಿ ಸ.ಉ.ಪ್ರಾ.ಶಾಲೆ ಜಯನಗರ ಸುಳ್ಯ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ವತ್ಸಲಾ ಜೋಗಿಮುಖ್ಯ ಗುರುಗಳು
ಬಬ್ಬುಕಟ್ಟೆ ಶಾಲೆ ಮಂಗಳೂರು ದಕ್ಷಿಣ
ನಿರಂತರ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಗೌರವದ ಸ್ಥಾನ ಪಡೆದ ತಮ್ಮೆಲ್ಲರ ನಿವೃತ್ತ ಜೀವನ ಸುಖಮಯವಾಗಿರಲಿ. ದೇವರು ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ನೀಡಿ ಕರುಣಿಸಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.