ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಿವೃತ್ತರಾದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ ಗುರುಭ್ಯೋ ನಮಃ

WhatsApp Group Join Now
Telegram Group Join Now

ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ

ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

IMG 20230301 WA0094

ಶ್ರೀಮತಿ ಸಿಸಿಲಿಯಾ

ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಜಿ ವೀರಕಂಭ ಬಂಟ್ವಾಳ ತಾಲೂಕು.

ಮಂಗಳೂರಿನ ಇರುವೈಲು ಶ್ರೀ ಆಲ್ಫನ್ಸ್ ಹಾಗೂ ಶ್ರೀಮತಿ ಜುಲಿಯಾನ ದಂಪತಿಗಳ ಪುತ್ರಿಯಾಗಿ ದಿನಾಂಕ 01.03.1963 ರಲ್ಲಿ ಜನಿಸಿದ ಇವರು ದಿನಾಂಕ 26.02.1996 ರಲ್ಲಿ ಬಂಟ್ವಾಳ ತಾಲೂಕಿನ ದೇವಸ್ಯ ಮೂಡೂರು ಶಾಲೆಯಲ್ಲಿ ಸೇವೆಗೆ ಸೇರಿದ ಇವರು 2 ವರ್ಷ 7 ತಿಂಗಳು ಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 23.09.1998 ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಜಿ ವೀರಕಂಭ ಬಂಟ್ವಾಳ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230301 WA0097

ಶ್ರೀಮತಿ ಸುಚೇತಾ

ಮುಖ್ಯ ಶಿಕ್ಷಕಿ.ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕೆದಿಲ ಗಡಿಯಾರ ಬಂಟ್ವಾಳ ತಾಲೂಕು.

ಮಂಗಳೂರು ತಾಲೂಕಿನ ಎಕ್ಕಾರು ಗ್ರಾಮದ ಶ್ರೀ ವೈ ಗೋಪಾಲ ಪೂಜಾರಿ ಹಾಗೂ ಶ್ರೀಮತಿ ಪದ್ಮಾವತಿ ದಂಪತಿಗಳ ಪುತ್ರಿಯಾಗಿ ದಿನಾಂಕ 24.02.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಶಾಲೆಯಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಕಪಿತಾನಿಯೋ ಶಿಕ್ಷಣ ವಿದ್ಯಾಲಯ ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 29.11.1988 ರಲ್ಲಿ ಸೇವೆಗೆ ಸೇರಿದ ಇವರು ಸ.ಹಿ.ಪ್ರಾ.ಶಾಲೆ ಕಲ್ಲಾಡಿ ಮಂಗಳೂರು ಇಲ್ಲಿ ಸುಮಾರು 5 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಅಡ್ಡೂರು ಮಂಗಳೂರು ಇಲ್ಲಿಗೆ ವರ್ಗಾವಣೆ ಗೊಂಡು ಸುಮಾರು 13 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಪಡುಪೆರಾರ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಇವರು 2016 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸ.ಉ.ಪ್ರಾ.ಶಾಲೆ ಕೆದಿಲ ಗಡಿಯಾರ ಬಂಟ್ವಾಳ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೋಸ್ಕರ 2021-2022 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ,”ಅತ್ಯುತ್ತಮ ಶಿಕ್ಷಕಿ” ಪ್ರಶಸ್ತಿಯನ್ನು ಪಡೆದಿದ್ದಾರೆ.ಇವರು ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಶಾಂಭವಿ

ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ದಡ್ಡಿ.

IMG 20230301 WA0098

ಮಂಗಳೂರು ದಕ್ಷಿಣ ದಿನಾಂಕ 21.02.1963 ರಲ್ಲಿ ಜನಿಸಿದ ಇವರು, ದಿನಾಂಕ 19.11.1998 ರಲ್ಲಿ ಸೇವೆಗೆ ಸೇರಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಬಸೀರ ಖಾನಂ

ದ.ಕ.ಜಿ.ಪಂ.ಉರ್ದು ಸ.ಹಿ.ಪ್ರಾ.ಶಾಲೆ ಬಂದರು.

IMG 20230301 WA0083

ಮಂಗಳೂರು ಉತ್ತರ 1994 ರಲ್ಲಿ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಮುಕ್ಕ ಇಲ್ಲಿ ಸೇವೆಗೆ ಸೇರಿದ ಇವರು ನಂತರ ದ.ಕ.ಜಿ.ಪಂ.ಉರ್ದು ಸ.ಹಿ.ಪ್ರಾ.ಶಾಲೆ ಬಂದರು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230301 WA0100

ಶ್ರೀಮತಿ ಲೀಲಾವತಿ ಸುಜಾತ ಮರಿಯನ್ನ ಕೈರನ್
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಾಪಿಕಾಡು ಬಿಜೈ
ಮಂಗಳೂರು ಉತ್ತರ

ಶ್ರೀ ಐ.ಎ.ಕೈರನ್ ಹಾಗೂ ಶ್ರೀಮತಿ ಸುಲೋಚನಾ ಕೈರನ್ ರವರ ಪುತ್ರಿಯಾಗಿ ದಿನಾಂಕ 26.02.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಜೋಸೆಫ್ ಶಾಲೆ ಕಂಕನಾಡಿ ಹಾಗೂ ಸೇಂಟ್ ಸೆಬಾಸ್ಟಿಯನ್ ಶಾಲೆಯಲ್ಲಿ ಪಡೆದು ಪ್ರೌಢ ಶಿಕ್ಷಣವನ್ನು ಸೇಂಟ್ ಆಗ್ನೆಸ್  ಮಂಗಳೂರು ಇಲ್ಲಿ ಪೂರೈಸಿ ನಂತರ ಶಿಕ್ಷಕ ತರಬೇತಿಯನ್ನು ಕಪಿತಾನಿಯೋ ಶಿಕ್ಷಕರ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 21.06.1994 ರಂದು ಸ.ಹಿ.ಪ್ರಾ.ಮಾದರಿ ಶಾಲೆ ಸುಜೀರ್ ಇಲ್ಲಿ ಸೇವೆಗೆ ಸೇರಿದ ಇವರು ನಂತರ ಸ.ಹಿ.ಪ್ರಾ.ಶಾಲೆ ಮಾಡೂರು ಹಾಗೂ ಸ.ಹಿ.ಪ್ರಾ.ಶಾಲೆ ತಲಪಾಡಿ ಪಟ್ನ ಹಾಗೂ ಸ.ಹಿ.ಪ್ರಾ.ಶಾಲೆ ಮಹಾಕಾಳಿ ಪಡ್ಪು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 05.05.2022 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ  ಕಾಪಿಕಾಡು ಬಿಜೈ ಮಂಗಳೂರು ಉತ್ತರ ವಲಯ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230301 WA0103

ಶ್ರೀಮತಿ ಮೊಂತಿನಾ ಡಿಸೋಜಾ

ಸ.ಹಿ.ಪ್ರಾ.ಶಾಲೆ ಕಲ್ಲಮುಂಡ್ಕೂರು

ಮೂಡುಬಿದಿರೆ ತಾಲೂಕು ಬೆಳ್ತಂಗಡಿ ತಾಲೂಕಿನ ವೇಣೂರಿನ ಶ್ರೀ ಲೋರೆನ್ಸ್ ಡಿಸೋಜಾ ಹಾಗೂ ಶ್ರೀಮತಿ ಸಿಸಿಲಿಯಾ ದಂಪತಿಗಳ ಪುತ್ರಿಯಾಗಿ ದಿನಾಂಕ 20.02.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣವನ್ನು ವೇಣೂರಿನಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸೇಕ್ರೆಡ್ ಹಾರ್ಟ್ ಶಿಕ್ಷಕ ತರಬೇತಿ ಸಂಸ್ಥೆ ಬೆಂಗಳೂರು ಇಲ್ಲಿ ಪೂರೈಸಿ ದಿನಾಂಕ 03.08.1998 ರಲ್ಲಿ ಸ.ಹಿ.ಪ್ರಾ.ಶಾಲೆ ಕಲ್ಲಮುಂಡ್ಕೂರು ಇಲ್ಲಿ ಸೇವೆಗೆ ಸೇರಿ ಶಾಲೆಯಲ್ಲಿ ಸೇವಾದಳದ ಘಟಕ ಪ್ರಾರಂಭಿಸಿ 2014 ರಲ್ಲಿ ಮೂಡುಬಿದಿರೆಯಲ್ಲಿ ವಲಯ ಮಟ್ಟದ ಸೇವಾದಳ ಪ್ರಶಸ್ತಿಯನ್ನು ಪಡೆದಿದ್ದಾರೆ. ಸುಮಾರು 24 ವರ್ಷ 6 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230301 WA0101

ಶ್ರೀಮತಿ ಮೋನಿಸ್ ನಾನ್ಸಿ ದೊರೊತಿ

ಸ.ಹಿ.ಪ್ರಾ.ಶಾಲೆ ಕೊಪ್ಪದಕುಮೇರುಮೂಡುಬಿದಿರೆ ತಾಲೂಕು

ಮೂಡುಬಿದಿರೆ ಪಾಡ್ಯಾರು ಸ.ಹಿ.ಪ್ರಾ.ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ನಂತರ ಕಾಟಿಪಳ್ಳ 2ನೇ ಬ್ಲಾಕ್ ಶಾಲೆಗೆ ವರ್ಗಾವಣೆಗೊಂಡು ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕೊಪ್ಪದಕುಮೆರು ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ವಿದ್ಯಾರ್ಥಿಗಳಿಗೆ ನಾಟಕ ನೃತ್ಯ ಸಂಗೀತ ಹಾಗೂ ಇತರ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರೋತ್ಸಾಹಿಸಿ ತರಬೇತಿ ನೀಡಿರುತ್ತಾರೆ.ಅಗಸ್ತ್ಯ ಫೌಂಡೇಶನ್ ನ ಟ್ರೈನಿಂಗ್ ಗಳಲ್ಲಿ ಮಕ್ಕಳನ್ನು ವಿಜ್ಞಾನ ಚಟುವಟಿಕೆಗಳಲ್ಲಿ ತೊಡಗಿಸಿ 2020ರಲ್ಲಿ inspire ಅವಾರ್ಡ್ ಗೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ ಆಗುವಂತೆ ಶ್ರಮಟ್ಟಿರುತ್ತಾರೆ.ಜನಗಣತಿ ಮತ್ತು ಮತದಾರ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಸೇವೆಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೆ ಸಮಾಜಕ್ಕೆ ತಮ್ಮಿಂದ ಇನ್ನಷ್ಟು ಸೇವೆಗಳು ಲಭಿಸಲಿ. ದೇವರು ತಮಗೆ ಆಯುರಾರೋಗ್ಯ, ಐಶ್ವರ್ಯ, ನೆಮ್ಮದಿ ಕರುಣಿಸಲಿ ಮುಂದಿನ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.

WhatsApp Group Join Now
Telegram Group Join Now
Sharing Is Caring:

Leave a Comment