ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಿವೃತ್ತರಾದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ ಗುರುಭ್ಯೋ ನಮಃ

ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ

WhatsApp Group Join Now
Telegram Group Join Now

ಗುರುಭ್ಯೋ ನಮಃ

ಹಲವು ವರ್ಷಗಳ ಸತತ ಸೇವೆಯಿಂದ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

IMG 20221031 WA0016

ಶ್ರೀಮತಿ ಜೋಯ್ಸ್ ಗ್ರೆಟ್ಟಾ ಪಿಂಟೋ

ಸ.ಹಿ.ಪ್ರಾ.ಶಾಲೆ ಮಂಚಿ ಕುಕ್ಕಾಜೆ.

ದಿನಾಂಕ 02.10.1962 ರಲ್ಲಿ ಮೊಡಂಕಾಪುವಿನಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಇನ್ ಫ್ಯಾಂಟ್ ಜೀಸಸ್ ವಿದ್ಯಾ ಸಂಸ್ಥೆ ಮೊಡಂಕಾಪು ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಕಾರ್ಮೆಲ್ ಕಾನ್ವೆಂಟ್ ಮೊಡಂಕಾಪು ಇಲ್ಲಿ ಪೂರೈಸಿ ಸೈಂಟ್ ಆನ್ಸ್ ಕಾಲೇಜಿನಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದ ಇವರು 1983 ರಲ್ಲಿ ಸೇವೆಗೆ ಸೇರಿದ ಇವರು 1998 ರವರೆಗೆ ವಿವಿಧ ಖಾಸಗಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಂತರ ದಿನಾಂಕ 13.01.1999 ರಲ್ಲಿ ಸ.ಹಿ.ಪ್ರಾ.ಶಾಲೆ ಕೈಕಾರ ಪುತ್ತೂರು ಇಲ್ಲಿ ಸಹ ಶಿಕ್ಷಕಿಯಾಗಿ ಸರಕಾರಿ ಸೇವೆಗೆ ಸೇರಿ ನಂತರ ದಿನಾಂಕ 19.07.2000 ರಲ್ಲಿ ಸ.ಹಿ.ಪ್ರಾ.ಶಾಲೆ ಮಂಚಿ ಕುಕ್ಕಾಜೆ ಇಲ್ಲಿಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20221031 WA0017

ಶ್ರೀ ಸುಂದರ ಭಟ್

ಸ.ಕಿ.ಪ್ರಾ ಶಾಲೆ ಓಟೆಪಡ್ಪು ಬಂಟ್ವಾಳ

ದಿನಾಂಕ 11.10.1962 ರಲ್ಲಿ ಶ್ರೀ ನಾರಾಯಣ ಭಟ್ ಹಾಗೂ ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಜಂಕಿಲ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಬನುಮಯ್ಯ ಪ್ರೌಢಶಾಲೆ ಮೈಸೂರು ಹಾಗೂ ಶಿಕ್ಷಕ ತರಬೇತಿಯನ್ನು ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಮೈಸೂರು ಇಲ್ಲಿ ಪೂರೈಸಿ,ಮಾನಸ ಗಂಗೋತ್ರಿ ಮೈಸೂರು ಇಲ್ಲಿ ಸಂಸ್ಕ್ರತ M.A ಪದವಿ ಪಡೆದ ಇವರು ದಿನಾಂಕ 01.12.2003 ರಂದು ಸ.ಪ್ರಾ.ಶಾಲೆ ಪೆರಾಜೆ ಗ್ರಾಮ ಕಡಬ ತಾಲೂಕು ಇಲ್ಲಿ ಸೇವೆಗೆ ಸೇರಿ ನಂತರ 2007 ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಪುತ್ತೂರು ತಾಲೂಕು ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ 2009 ರಲ್ಲಿ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಮುಂಡ್ಯೂರು ಶಾಲೆಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ 3 ವರ್ಷಗಳ ಕಾಲ ಕರೋಪಾಡಿ ಗ್ರಾಮದ ಪಂಬತ್ತಾಜೆ ಶಾಲೆಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸಿ ನಂತರ 2016-2017 ರಲ್ಲಿ ಹೆಚ್ಚುವರಿ ಗೊಂಡು ಕಿ.ಪ್ರಾ.ಶಾಲೆ ಕನ್ಯಾನ ನಿರ್ಪಾಜೆ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಓಟೆಪಡ್ಪು ಶಾಲೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಿ 2022-2023ನೇ ಸಾಲಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆ ಬಂಟ್ವಾಳ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20221031 WA0018

ಶ್ರೀಮತಿ ಫ್ಲಾವಿಯ ಯಂ ತಾವ್ರೋ

ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಅತ್ತಾವರ.

ಮಂಗಳೂರು ದಕ್ಷಿಣ ಇವರು 40 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20221031 WA0019

ಶ್ರೀಮತಿ ಪುಷ್ಪ.ಎಸ್ದ

.ಕ.ಜಿ.ಪಂ ಹಿ.ಪ್ರಾ.ಶಾಲೆ ಒಂಭತ್ತುಕೆರೆ ಮಂಗಳೂರು ದಕ್ಷಿಣ

.ದಿನಾಂಕ 26.10.1962 ರಲ್ಲಿ ಜನಿಸಿದ ಇವರು, ದಿನಾಂಕ 01.12.1988 ರಲ್ಲಿ ಸೇವೆಗೆ ಸೇರಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20221031 WA0015

ಶ್ರೀಮತಿ ಮಾರ್ಸೇ ಲೀನಾ ಲೀಡಾ ಪಿಂಟೋ

ಸ.ಉ.ಪ್ರಾ.ಶಾಲೆ ಹಿರೆಬಂಡಾಡಿ ಪುತ್ತೂರು ತಾಲೂಕು.ದ.ಕ

ತಂದೆ- ಶ್ರೀ ವಲೇರಿಯನ್ ಪಿಂಟೋ ಪುದು ಬಂಟ್ವಾಳ ತಾಲೂಕುತಾಯಿ- ಶ್ರೀಮತಿ ಸಿಸಿಲಿಯಾ ಪಿಂಟೋ ಜನನ: 21-10-1962ಪ್ರಾಥಮಿಕ ಶಿಕ್ಷಣವನ್ನು ಪುದು ಬಂಟ್ವಾಳ ತಾಲೂಕು ಮತ್ತು ಉಪ್ಪಿನಂಗಡಿಯಲ್ಲಿ, ಪ್ರೌಢ ಶಿಕ್ಷಣವನ್ನು ಮೊಡಂಕಾಪು ಬಂಟ್ವಾಳ ಮತ್ತು ಪದವಿಪೂರ್ವ ಶಿಕ್ಷಣ SVS ಬಂಟ್ವಾಳ ಕಾಲೇಜಿನಲ್ಲಿ ಮುಗಿಸಿ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆಯಲು ಶಿಕ್ಷಕಿಯರ ತರಬೇತಿ ಕೇಂದ್ರ ವಿರಾಜಪೇಟೆ ಮಡಿಕೇರಿ ಇಲ್ಲಿಗೆ ಸೇರಿದರು. ಶಿಕ್ಷಣದ ಮೇಲೆ ಅಪಾರ ಕಾಳಜಿ ಇರುವ ತಾವು 1997ನೇ ಇಸವಿಯಲ್ಲಿ ಸ.ಹಿ.ಪ್ರಾ.ಶಾ.ಹಿರ್ತಡ್ಕ ಇಲ್ಲಿ ಸೇವೆಗೆ ಸೇರಿ ಸುಮಾರು 14ವರ್ಷಗಳ ಕಾಲ ಸೇವೆ ಸಲ್ಲಿಸಿದರು.ತದನಂತರ 2011ರಿಂದ ವರ್ಗಾವಣೆ ಗೊಂಡು ಇದುವರೆಗೆ ಸ.ಉ.ಹಿ.ಪ್ರಾ.ಶಾ.ಹಿರೇಬಂಡಾಡಿಯಲ್ಲಿ ಸೇವೆ ಸಲ್ಲಿಸಿ ಇದೀಗ ಸುಮಾರು 25 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಕೊಳ್ಳುತ್ತಿದ್ದಾರೆ.ತನ್ನ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.

IMG 20221031 WA0022

ರತ್ನಾವತಿ ಪಿ

ಸ.ಹಿ.ಪ್ರಾ ಶಾಲೆ ಐವರ್ನಾಡುಸುಳ್ಯ ತಾಲೂಕು

ಕನಕಮಜಲು ಗ್ರಾಮದ ಪಲ್ಲತ್ತಡ್ಕ ಮನೆ ನಿವೃತ್ತ ಶಿಕ್ಷಕ ದಿ.ಹೊನ್ನಪ್ಪ ಗೌಡ ಮತ್ತು ಲಕ್ಷ್ಮೀ ದಂಪತಿಗಳ ಪುತ್ರಿಯಾದ ರತ್ನಾವತಿ ದೇರಾಜೆ ಅ.2 1962 ರಂದು ಜನಿಸಿದರು.ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಕಾರ್ ನಲ್ಲಿ,ಫ್ರೌಡಶಾಲಾ ಶಿಕ್ಷಣವನ್ನು ಪೆರ್ನಾಜೆ ಯಲ್ಲಿ ಪಡೆದು ಅನಂತರ ಟಿ.ಸಿ.ಹೆಚ್ ಅನ್ನು ಸರ್ವೋದಯ ಮಹಿಳೆಯರ ತರಬೇತಿ ವಿದ್ಯಾಲಯ ವಿರಾಜಪೇಟೆಯಲ್ಲಿ ಮುಗಿಸಿದರು ನಂತರ ಅರಂತೋಡು ಗ್ರಾಮದ ದೇರಾಜೆ‌‌ ಮನೆ ಕರುಣಾಕರ‌ ಗೌಡ ಇವರನ್ನು‌ ಮದುವೆಯಾದರು.ನಂತರ 14.11.1998 ರಂದು ಸರಕಾರಿ ಹಿರಿಯ ‌ಪ್ರಾಥಮಿಕ ಶಾಲೆ ಐವರ್ನಾಡಿಗೆ ಸಹಶಿಕ್ಷಕಿಯಾಗಿ ಸೇವೆಗೆ‌ ಸೇರಿದರು.ಮಗ ಜಗತ್ ದೇರಾಜೆ ಸುಳ್ಯ ನ್ಯಾಯಾಲದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ,ಮಗಳು ವಿನುತ ದೇರಾಜೆ ಸುಳ್ಯ ಲೋಕೋಪಯೋಗಿ ಇಲಾಖೆಯಲ್ಲಿ ತಾಂತ್ರಿಕ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೇ ತಮ್ಮಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಲಭಿಸಲಿ. ಆ ಭಗವಂತ ನಿಮಗೆ ಆಯುರಾರೋಗ್ಯ,ಐಶ್ವರ್ಯ, ನೆಮ್ಮದಿ ನೀಡಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.

WhatsApp Group Join Now
Telegram Group Join Now
Sharing Is Caring:

Leave a Comment