ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ನಿವೃತ್ತರಾಗುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ | ಗುರುಭ್ಯೋ ನಮಃ

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ

ಗುರುಭ್ಯೋ ನಮಃ

ಸಹಸ್ರ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಹಚ್ಚಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

IMG 20220830 WA0022 min

ಶ್ರೀ ಸಹಸ್ರನಾಮ
ಸ.ಹಿ.ಪ್ರಾ.ಶಾಲೆ ಕೆದ್ದಳಿಕೆ
ಬಂಟ್ವಾಳ ತಾಲೂಕು

ಕಾರಿಂಜೆಯ ಮಾಡ್ತಿಮಾರ್ ಮನೆಯ ಶ್ರೀ ಕೆ.ರಾಮಚಂದ್ರ ಆಚಾರ್ಯ ಮತ್ತು ಶ್ರೀಮತಿ ಕೆ.ಮೋಹಿನಿ ದಂಪತಿಗಳ ಪುತ್ರನಾಗಿ ದಿನಾಂಕ 07.08.1962 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಥೋಮಸ್ ಹಿರಿಯ ಪ್ರಾಥಮಿಕ ಶಾಲೆ ವಗ್ಗ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಪುಂಜಾಲಕಟ್ಟೆ ಇಲ್ಲಿ ಪೂರೈಸಿ, ಶಿಕ್ಷಕ ತರಬೇತಿಯನ್ನು ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಪೂರೈಸಿ, ದಿನಾಂಕ 10.01.1996 ರಲ್ಲಿ ಬೆಳ್ತಂಗಡಿ ತಾಲೂಕಿನ ನಡ ಸ.ಹಿ.ಪ್ರಾ.ಶಾಲೆ ಇಲ್ಲಿ ಸೇವೆಗೆ ಸೇರಿ ಸುಮಾರು 7ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 01.07.2003 ರಲ್ಲಿ ಸ.ಹಿ.ಪ್ರಾ.ಶಾಲೆ ಕೆದ್ದಳಿಕೆ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸುಮಾರು 19 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220830 WA0024 min

ಶ್ರೀ ಚಂದ್ರಶೇಖರ.ಕೆ
ಸ.ಹಿ.ಪ್ರಾ.ಶಾಲೆ ಕೂತ್ಕುಂಜ
ಸುಳ್ಯ ತಾಲೂಕು

ಶ್ರೀ ಅಂಬಾಡಿ ಪಾಟಾಳಿ ಮತ್ತು ಶ್ರೀಮತಿ ಗಂಗಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣವನ್ನು ಪುತ್ತೂರಿನಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಮಂಗಳೂರು ಡಯೆಟ್ ನಲ್ಲಿ ಪೂರೈಸಿ ಸಿ.ಪಿ.ಎಡ್.ಪದವಿಯನ್ನು ಮೂಡುಬಿದಿರೆಯ ಎನ್.ಕೆ.ಅನಂತರಾಜ್ ಕಾಲೇಜ್ ಆಫ್ ಫಿಸಿಕಲ್ ಇಲ್ಲಿ ಪೂರೈಸಿದ ಇವರು, 1996 ರಲ್ಲಿ ಸ.ಹಿ.ಪ್ರಾ.ಶಾಲೆ ಪಂಬೆತ್ತಾಡಿಯಲ್ಲಿ ಸೇವೆಗೆ ಸೇರಿದ ಇವರು ನಂತರ 2005ರಲ್ಲಿ ಸ.ಕಿ.ಪ್ರಾ.ಶಾಲೆ ಪಾಂಡಿಗದ್ದೆ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸುಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 2014ರಲ್ಲಿ ಸ.ಹಿ.ಪ್ರಾ.ಶಾಲೆ ಕೂತ್ಕುಂಜ ಇಲ್ಲಿ ಸೇವೆಗೆ ಸೇರಿ ಶಾಲೆಯ ಅಭ್ಯುದಯಕ್ಕೆ ಕೊಡುಗೆಯನ್ನು ನೀಡಿದ ಇವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಉತ್ತಮ ಯೋಗ ತರಬೇತುದಾರರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220830 WA0026 min

ಶ್ರೀಮತಿ ಸೀತಾ
ಸ.ಹಿ.ಪ್ರಾ ಶಾಲೆ ನಾಗತೀರ್ಥ
ಸುಳ್ಯ ತಾಲೂಕು

ಪುತ್ತೂರು ತಾಲೂಕಿನ ವೀರಮಂಗಲ ಶ್ರೀ ಸೋಮಪ್ಪ ಗೌಡ ಹಾಗೂ ಶ್ರೀಮತಿ ಉಮ್ಮಕ್ಕ ದಂಪತಿಗಳ ಪುತ್ರಿಯಾಗಿ ದಿನಾಂಕ 30.08.1962 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ.ಶಾಲೆ ವೀರಮಂಗಲ ಹಾಗೂ ಸ.ಹಿ.ಪ್ರಾ.ಶಾಲೆ ನರಿಮೊಗರುವಿನಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸಂತ ವಿಕ್ಟರಣಾ ಬಾಲಿಕಾ ಪ್ರೌಢಶಾಲೆ ಪುತ್ತೂರು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಸ್ವತಿ ಶಿಕ್ಷಕರ ತರಬೇತಿ ಸಂಸ್ಥೆ ಮಡಿಕೇರಿ ಮಡಿಕೇರಿಯಲ್ಲಿ ಪೂರೈಸಿದ ಇವರು ದಿನಾಂಕ 27.09.1994 ರಲ್ಲಿ ಸ.ಹಿ.ಪ್ರಾ.ಶಾಲೆ ಮಡಪ್ಪಾಡಿ ಇಲ್ಲಿ ಸೇವೆಗೆ ಸೇರಿ ಇಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 03.10.1998 ರಲ್ಲಿ ನಾಗತೀರ್ಥ ಶಾಲೆಗೆ ವರ್ಗಾವಣೆ ಗೊಂಡು ಸೇವೆ ಸಲ್ಲಿಸಿ ನಂತರ ದಿನಾಂಕ 17.07.2000 ರಿಂದ ದಿನಾಂಕ 01.12.2002 ರವರೆಗೆ ಪ್ರಭಾರ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220830 WA0025 min

ಶ್ರೀಮತಿ ವಾಣಿಶ್ರೀ ಬಿ
ದ.ಕ.ಜಿ.ಪಂ.ಉರ್ದು.ಹಿ.ಪ್ರಾ.ಶಾಲೆ ಕಲ್ಲಾಪು ಪಟ್ಲ.
ಮಂಗಳೂರು ದಕ್ಷಿಣ

ಶ್ರೀ ಶ್ರೀಧರ್ ಹಾಗೂ ಶ್ರೀಮತಿ ಕಮಲಾಕ್ಷಿ ದಂಪತಿಗಳ ಪುತ್ರಿಯಾಗಿ ದಿನಾಂಕ 08.08.1962 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಮೈಸೂರಿನಲ್ಲಿ ಹಾಗೂ ಪದವಿ ಪೂರ್ವ ಶಿಕ್ಷಣ ಬೆಂಗಳೂರಿನಲ್ಲಿ ಶಿಕ್ಷಕ ಶಿಕ್ಷಣ ತರಬೇತಿಯನ್ನು ಬೆಂಗಳೂರಿನಲ್ಲಿ ಪೂರೈಸಿದ ಇವರು ದಿನಾಂಕ 13.08.1993 ರಲ್ಲಿ ಬೆಂಗಳೂರು ಉತ್ತರ ವಲಯ ( ತರಬನಹಳ್ಳಿ) ಇಲ್ಲಿ ಸೇವೆಗೆ ಸೇರಿದ ಇವರು ನಂತರ 1995 ರಿಂದ 2001ರವರೆಗೆ ಬೆಂಗಳೂರಿನ ಬಸವೇಶ್ವರ ನಗರ ಮಾದರಿ ಶಾಲೆ ಇಲ್ಲಿ ಸೇವೆ ಸಲ್ಲಿಸಿ ನಂತರ 2001 ರಿಂದ 2002 ರವರೆಗೆ ಮಂಗಳೂರು ಬಿಜೈ ಕಾಪಿಕಾಡ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಂತರ 2002 ರಿಂದ 2006 ರವರೆಗೆ ಮಂಗಳೂರು ನಗರ ( ಉತ್ತರ) ಅತ್ತಾವರ ಇಲ್ಲಿ ಸಿ ಆರ್ ಪಿ ಯಾಗಿ ಕರ್ತವ್ಯ ನಿರ್ವಹಿಸಿ ನಂತರ 2006 ರಿಂದ 2011 ರವರೆಗೆ ಸ.ಕಿ.ಪ್ರಾ.ಶಾಲೆ ಸೂಟರ್ ಪೇಟೆ ಇಲ್ಲಿ ಸೇವೆ ಸಲ್ಲಿಸಿ ನಂತರ 2011 ರಿಂದ 2014 ರವರೆಗೆ ಮಂಗಳೂರು ದಕ್ಷಿಣ ಬೋಳಾರ ಇಲ್ಲಿ ಸಿ ಆರ್ ಪಿ ಯಾಗಿ ಕರ್ತವ್ಯ ನಿರ್ವಹಿಸಿ ನಂತರ ವರ್ಗಾವಣೆ ಗೊಂಡು ಜಿ.ಪಂ.ಉರ್ದು. ಹಿ.ಪ್ರಾ.ಶಾಲೆ ಕಲ್ಲಾಪು ಪಟ್ಲ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220830 WA0023 min

ಶ್ರೀಮತಿ ರೇಣುಕಾದೇವಿ ಎಸ್
ಸ.ಹಿ.ಪ್ರಾ.ಶಾಲೆ.ಬೆಂಗ್ರೆ ಕಸಬಾ
ಮಂಗಳೂರು ಉತ್ತರ

ದಿನಾಂಕ 07.08.1962 ರಲ್ಲಿ ಜನಿಸಿದ ಇವರು ದಿನಾಂಕ 18.11.1999 ರಲ್ಲಿ ಸೇವೆಗೆ ಸೇರಿ ಸುಮಾರು 22 ವರ್ಷ 9 ತಿಂಗಳುಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220830 WA0021 min

ಶ್ರೀಮತಿ ಸುಲೋಚನಾ ಕೆ
ಸ.ಹಿ.ಪ್ರಾ.ಶಾಲೆ ಕಬಕ ಪುತ್ತೂರು ತಾಲೂಕು.

ತಂದೆ: ಶ್ರೀ ಕೆ ಬಾಬು ಆಳ್ವ
ತಾಯಿ: ಶ್ರೀಮತಿ ಪದ್ಮಾವತಿ ಆಳ್ವ
ಜನನ:26-08-1962
ಪ್ರಾಥಮಿಕ ಶಿಕ್ಷಣವನ್ನು ಕಿರಿಯ ಪ್ರಾಥಮಿಕ ಶಾಲೆ ಅನಂತಾಡಿ ಮತ್ತು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ಪುತ್ತೂರು ಇಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ ಟಿ.ಸಿಚ್ ವೃತ್ತಿ ಶಿಕ್ಷಣವನ್ನು ರೋಸಾ ಮಿಸ್ತಿಕಾ ಶಿಕ್ಷಕರ ಶಿಕ್ಷಣ ಕೇಂದ್ರ ಮಂಗಳೂರಿನಲ್ಲಿ ಪಡೆದಿರುವಿರಿ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದಿನಾಂಕ : 06-07-1985 ರಂದು ಸ.ಕಿ.ಪ್ರಾ.ಶಾಲೆ ಏಮಾಜೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ಶಿಕ್ಷಕ ಸೇವೆಯನ್ನು ಪ್ರಾರಂಭಿಸಿದಿರಿ.ಅಲ್ಲಿಂದ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಶಾಲೆ ಕಂಬಳಬೆಟ್ಟುಲ್ಲಿ 3ವರ್ಷ, ತದನಂತರ ಸ.ಹಿ.ಪ್ರಾ.ಶಾ.ನೆಲ್ಲಿಕಟ್ಟೆಯಲ್ಲಿ 14 ವರ್ಷ ಕರ್ತವ್ಯ ನಿರ್ವಹಿಸಿರುವಿರಿ. ನಂತರ 2008ರಲ್ಲಿ ಮುಖ್ಯಗುರುಗಳಾಗಿ ಬಡ್ತಿ ಗೊಂಡು ಸ.ಹಿ.ಪ್ರಾ.ಶಾಲೆ ಕಬಕದಲ್ಲಿ ಇದುವರೆಗೆ 14ವರ್ಷ ಸೇವೆ ಸಲ್ಲಿಸಿ ಇಂದು ನಿವೃತ್ತಿ ಆಗುತ್ತಿರುವಿರಿ.ಸುಮಾರು 37 ವರ್ಷಗಳ ಕಾಲ ಹಲವಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿ ಅವರ ಬಾಳಿಗೆ ಬೆಳಕಾಗಿದಿರಿ ಅಲ್ಲದೇ ಸಂಸ್ಥೆಯ ಉನ್ನತಿಗಾಗಿ ಶ್ರಮಿಸಿದ್ದೀರಿ.ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ತಾವು ತಾಲೂಕು ಹಂತದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವಿರಿ. ನಿಮ್ಮ ನಿವೃತ್ತ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ಸೇವೆಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೇ ತಮ್ಮಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಲಭಿಸಲಿ, ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ನೀಡಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ. ತಮಗೆಲ್ಲರಿಗೂ ನಿವೃತ್ತ ಜೀವನದ ಶುಭಾಶಯಗಳು.

Sharing Is Caring:

Leave a Comment