ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ನಿವೃತ್ತರಾಗುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ | ಗುರುಭ್ಯೋ ನಮಃ

WhatsApp Group Join Now
Telegram Group Join Now

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ

ಗುರುಭ್ಯೋ ನಮಃ

ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಹಚ್ಚಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

IMG 20220629 WA0065 min

ಶ್ರೀಮತಿ ಕಸ್ತೂರಿ.ಎಸ್
ದೈಹಿಕ ಶಿಕ್ಷಣ ಶಿಕ್ಷಕಿ.
ಸ.ಉ.ಪ್ರಾ.ಶಾಲೆ.ತೋಟತ್ತಾಡಿ
ಬೆಳ್ತಂಗಡಿ ತಾಲೂಕು

ಶ್ರೀ ಹೊನ್ನಪ್ಪ ಗೌಡ.ಎಸ್ ಹಾಗೂ ಶ್ರೀಮತಿ ನೇತ್ರಾವತಿ ದಂಪತಿಗಳ ಪುತ್ರಿಯಾಗಿ ದಿನಾಂಕ 30.06.1962 ರಂದು ಜನಿಸಿದ ಇವರು ದಿನಾಂಕ 27.07.1994 ರಂದು ಸೇವೆಗೆ ಸೇರಿ ಸ.ಉ.ಪ್ರಾ.ಶಾಲೆ ತೋಟತ್ತಾಡಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ವಲಯ ತಾಲೂಕು, ಜಿಲ್ಲಾ ಮಟ್ಟದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತರುವಂತೆ ಪ್ರೋತ್ಸಾಹಿಸಿರುತ್ತಾರೆ. 28 ವರ್ಷಗಳ ಕಾಲ ಇಲಾಖೆಗೆ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ‌ ನಿವೃತ್ತ ಜೀವನದ ಶುಭಾಶಯಗಳು.

IMG 20220629 212340 min

ಶ್ರೀ ಗಂಗಾಧರ್
ಸಹ ಶಿಕ್ಷಕರು
ಸ.ಹಿ.ಪ್ರಾ ಶಾಲೆ ಕೆರೆಬಳಿ
ಬಂಟ್ವಾಳ ತಾಲೂಕು

21.11.1998 ರಲ್ಲಿ ಸೇವೆಗೆ ಸೇರಿದ ಇವರು ಸ.ಹಿ.ಪ್ರಾ ಶಾಲೆ ಅಜಿಲಮೊಗರು ಹಾಗೂ ಕೆರೆಬಳಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಭಾರ ಮುಖ್ಯ ಶಿಕ್ಷಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

IMG 20220629 WA0067 min

ಶ್ರೀಮತಿ ಪುಷ್ಪ ಕುಮಾರಿ ಎನ್
ಮುಖ್ಯ ಶಿಕ್ಷಕರು
ಸ.ಹಿ.ಪ್ರಾ.ಶಾಲೆ.ಮುಕ್ವೆ.

ದಿನಾಂಕ 20.06.1962ರಲ್ಲಿ ಜನಿಸಿದ ಇವರು, ದಿನಾಂಕ 09.07.1985 ರಂದು ಸೇವೆಗೆ ಸೇರಿ ಸುದೀರ್ಘ 37ವರ್ಷಗಳ ಕಾಲ ಸೇವೆ ಸಲ್ಲಿಸಿ, ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220629 WA0069 min

ಶ್ರೀಮತಿ ಜಾನಕಿ ಎಂ
ಮುಖ್ಯಗುರುಗಳು
ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹಂಟ್ಯಾರು ಪುತ್ತೂರು ತಾಲೂಕು.

22-06-1962 ರಲ್ಲಿ ಜನಿಸಿದ ಇವರು 02-11-1982 ರಲ್ಲಿ ಸೇವೆಗೆ ಸೇರಿದರು.
ದಿನಾಂಕ 13-08-2001ರಂದು ಮುಖ್ಯ ಗುರುಗಳಾಗಿ ಭಡ್ತಿಗೊಂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕ ಇಲ್ಲಿ ಕರ್ತವ್ಯ ನಿರ್ವಹಿಸಿ 11-08-2016ರಲ್ಲಿ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಂಟ್ಯಾರು ಇಲ್ಲಿಗೆ ವರ್ಗಾವಣೆಗೊಂಡು ಇದುವರೆಗೆ ಸೇವೆ ಸಲ್ಲಿಸಿ ತಮ್ಮ ಸುದೀರ್ಘವಾದ 39 ವರ್ಷಗಳ ಸೇವೆಯಿಂದ ಈ ತಿಂಗಳು ನಿವೃತ್ತ ರಾಗುತ್ತಿದ್ದಾರೆ. ಇವರ ನಿವೃತ್ತ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಸುತ್ತೇವೆ.

IMG 20220629 WA0068 min

ಶ್ರೀಮತಿ ಸೆಲಿನ್ ಮಾರ್ಗರೇಟ್
ಸಹಶಿಕ್ಷಕಿ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಅಡೆಕ್ಕಲ್ ಪುತ್ತೂರು ತಾಲೂಕು.

22-06-1962 ರಲ್ಲಿ ಜನಿಸಿದ ಇವರು ಜನವರಿ 1999 ರಲ್ಲಿ ಸೇವೆಗೆ ಸೇರಿದರು.
ಸುಮಾರು 23 ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ ಹಾಗೂ ಕಾರ್ಯತತ್ಪರತೆಯಿಂದ ಶಾಲಾ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ತಮ್ಮ ನಿವೃತ್ತಿ ಜೀವನವು ಸುಖ, ನೆಮ್ಮದಿ, ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸುತ್ತೇವೆ.

IMG 20220629 WA0071 min

ಶ್ರೀಮತಿ ಐಡಾ ಡಿಸೋಜಾ
ಸಹಶಿಕ್ಷಕಿ
ಸ.ಉ.ಶಾಲೆ ನರಿಮೊಗರು

ದಿನಾಂಕ 01.10.1962 ರಲ್ಲಿ ಜನಿಸಿದ ಇವರು, ದಿನಾಂಕ 14.02.2001 ರಂದು ಸೇವೆಗೆ ಸೇರಿ ಸುಮಾರು 21 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220629 WA0072 min

ಶ್ರೀಮತಿ ಕಮಲ ಡಿ ಶೆಟ್ಟಿ
ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾ ಶಾಲೆ ಕಾಟಿಪಳ್ಳ .

ದಿನಾಂಕ 24.09.1982 ರಲ್ಲಿಸೇವೆಗೆ ಸೇರಿದ ಇವರು ಸ.ಹಿ.ಪ್ರಾ.ಶಾಲೆ ಬಿದ್ರಕಾನ್ ಸಿದ್ದಾಪುರ ನಂತರ ಸ.ಹಿ.ಪ್ರಾ.ಶಾಲೆ.ಶಿರಸಿ ನಂ 4 ಉತ್ತರಕನ್ನಡ ಹಾಗೂ ಸ.ಹಿ.ಪ್ರಾ.ಶಾಲೆ ಕುದುರೆಮುಖ ಮೂಡಿಗೆರೆ ಚಿಕ್ಕಮಗಳೂರು ಮತ್ತು ಸ.ಹಿ.ಪ್ರಾ.ಶಾಲೆ ಜಂಬ್ಲೆ ಮೂಡಿಗೆರೆ ಚಿಕ್ಕಮಗಳೂರು,
ಸ.ಹಿ.ಪ್ರಾ.ಶಾಲೆ ದೇಲಂತಬೆಟ್ಟು ಮಂಗಳೂರು ಇಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು ಸ.ಮಾ.ಹಿ.ಪ್ರಾ.ಶಾಲೆ ಕಾಟಿಪಳ್ಳ 8 ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220629 WA0073 min

ಶ್ರೀಮತಿ ಸುಮತ ಕುಮಾರಿ
ಸ.ಮಾ.ಹಿ.ಪ್ರಾ. ಶಾಲೆ ಪಡುಪಣಂಬೂರು
ಮಂಗಳೂರು ಉತ್ತರ

ದಿನಾಂಕ16/6/1997 ರಲ್ಲಿ ಸೇವೆಗೆ ಸೇರಿದ ಇವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆರನೇ ವಿಭಾಗ ಕಾಟಿಪಳ್ಳ ಮತ್ತು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಡುಪಣಂಬೂರು ಇಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

IMG 20220629 212231 min

ಶ್ರೀಮತಿ ವೆರೋನಿಕಾ ಜುಲಿಯಾನ ಡಿಸೋಜಾ
ಮುಖ್ಯ ಶಿಕ್ಷಕರು
ಸ.ಮಾ.ಹಿ.ಪ್ರಾ.ಶಾಲೆ ಮಂಗಳೂರು ದಕ್ಷಿಣ ವಲಯ.

ಶ್ರೀ ಜೋಸೆಫ್ ಡಿಸೋಜಾ ಹಾಗೂ ಶ್ರೀಮತಿ ರೋಜಿ ರೊಡ್ರಿಗಸ್ ದಂಪತಿಗಳ ಪುತ್ರಿಯಾಗಿ ದಿನಾಂಕ 05.06.1962 ರಂದು ಜನಿಸಿದ ಇವರು ದಿನಾಂಕ 08.11.1989 ರಲ್ಲಿ ಸ.ಕಿ.ಪ್ರಾ.ಶಾಲೆ ತ್ಯಾಗನದೊಡ್ಡಿ ಮಾಲೂರು ತಾಲೂಕು ಕೋಲಾರ ಜಿಲ್ಲೆ ಇಲ್ಲಿ ಸೇವೆಗೆ ಸೇರಿ ನಂತರ 1991ರಿಂದ2001ರವರೆಗೆ ಸ.ಮಾ.ಹಿ.ಪ್ರಾ.ಶಾಲೆ ಚೇಳೈರು ಇಲ್ಲಿ ಸೇವೆ ಸಲ್ಲಿಸಿ ನಂತರ 2001 ರಿಂದ2012 ರವರೆಗೆ ಸ.ಹಿ.ಪ್ರಾ.ಶಾಲೆ.ಕಾಟಿಪಳ್ಳ 3ನೇ ವಿಭಾಗ ಇಲ್ಲಿ ಸೇವೆ ಸಲ್ಲಿಸಿ ನಂತರ 2012ರಿಂದ 2019 ರವರೆಗೆ ಸ.ಹಿ.ಪ್ರಾ.ಶಾಲೆ ಬೆಂಗ್ರೆ ಕಸಬಾ ಇಲ್ಲಿ ಸೇವೆ ಸಲ್ಲಿಸಿ ನಂತರ 2019ರಿಂದ 2020ರವರೆಗೆ ಸ.ಕಿ.ಪ್ರಾ.ಶಾಲೆ ನಾರ್ಯಬೈಲು ಪುತ್ತೂರು ತಾಲೂಕು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 24.02.2020 ರಿಂದ 30.06.2020 ರವರೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ದ.ಕ.ಜಿ.ಪಂ.ಸ.ಮಾ.ಹಿ.ಪ್ರಾ.ಶಾಲೆ ಮಂಗಳೂರು ದಕ್ಷಿಣ ವಲಯ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220629 WA0070 min

ಶ್ರೀಮತಿ ಅಂಜಲಿ ಕುಮಾರಿ ಯನ್
ಮುಖ್ಯ ಶಿಕ್ಷಕರು.
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಅದ್ಯಪಾಡಿ
ಮಂಗಳೂರು ದಕ್ಷಿಣ.

ಶ್ರೀ ಕಣ್ಣನ್ ಯನ್ ಹಾಗೂ ಶ್ರೀಮತಿ ಅಚ್ಚು ಯನ್ ದಂಪತಿಗಳ ಪುತ್ರಿಯಾಗಿ ದಿನಾಂಕ 01.07.1962ರಂದು ಜನಿಸಿದ ಇವರು ದಿನಾಂಕ 24.07.1993 ರಂದು ಸ.ಮಾ.ಹಿ.ಪ್ರಾ.ಶಾಲೆ ಮರಕಡ ಮಂಗಳೂರು ಉತ್ತರ ಇಲ್ಲಿ ಸೇವೆಗೆ ಸೇರಿ ನಂತರ ವರ್ಗಾವಣೆಗೊಂಡು ದಿನಾಂಕ 21.06.2014 ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಅದ್ಯಪಾಡಿ ಮಂಗಳೂರು ದಕ್ಷಿಣ ಇಲ್ಲಿ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿರುತ್ತಾರೆ. 29ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220629 212300 min

ಶ್ರೀ ಹರಿಪ್ರಸಾದ್ ಉಪಾಧ್ಯಾಯ ಕೆ
ಸ.ಹಿ.ಪ್ರಾ.ಶಾಲೆ ಕೇಪು
ಕಡಬ ತಾಲೂಕು

ಹೊಸಮಠ ಶ್ರೀ ರಾಮಚಂದ್ರ ಉಪಾಧ್ಯಾಯ ಹಾಗೂ ಶ್ರೀಮತಿ ರಮಾದೇವಿ.ಆರ್.ಉಪಾಧ್ಯಾಯ ಇವರ ಸುಪುತ್ರನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಉ.ಪ್ರಾ.ಶಾಲೆ ಕುಟ್ರುಪ್ಪಾಡಿ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಕಡಬ ಇಲ್ಲಿ ಪೂರೈಸಿ, ಜಿಲ್ಲಾ ಶಿಕ್ಷಕ ಶಿಕ್ಷಣ ತರಬೇತಿ ವಿದ್ಯಾಲಯದಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು, ದಿನಾಂಕ 29.10.1982ರಲ್ಲಿ ಸ.ಉ.ಹಿ.ಪ್ರಾ..ಶಾಲೆ.ದರ್ಬೆತ್ತಡ್ಕ ಇಲ್ಲಿ ಸೇವೆಗೆ ಸೇರಿ ನಂತರ 02.06.1992 ರಿಂದ ಸ.ಕಿ.ಪ್ರಾ.ಶಾಲೆ,ವಾಳ್ಯ ಇಲ್ಲಿ ಮುಖ್ಯ ಗುರುಗಳಾಗಿ, ದಿನಾಂಕ 20.03.2007ರಿಂದ ಸ.ಉ.ಹಿ.ಪ್ರಾ.ಶಾಲೆ ಗಂಡಿಬಾಗಿಲು ಇಲ್ಲಿ ಪೂರ್ಣ ಕಾಲಿಕ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿ ಕಾರ್ಯ ನಿರ್ವಹಿಸಿ ನಂತರ 01.06.2011 ರಿಂದ ಬಂಟ್ರ ಆಲಂಕಾರು ,ಕಡಬ ಕ್ಲಸ್ಟರ್ಗಳಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ನಂತರ ದಿನಾಂಕ 10.04.2015 ರಿಂದ ಹಿ.ಪ್ರಾ.ಶಾಲೆ ಕೇಪು ಇಲ್ಲಿ ಸೇವೆ ಸಲ್ಲಿಸಿರುವ
ಇವರು ಕರಕುಶಲ ಕಲೆ, ಏಕಪಾತ್ರಾಭಿನಯ, ಚಿತ್ರ ಕಲೆ,ಕವನ ರಚನೆ, ಕಥಾ ರಚನೆ,ನಾಟಕ ರಚನೆ, ಕಾರ್ಯಕ್ರಮ ನಿರೂಪಣೆ, ಕಾರ್ಯಕ್ರಮಗಳ ಸಂಘಟನೆ ಮುಂತಾದ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಇವರು ಶಾಲಾ ಪ್ರಗತಿಯಲ್ಲಿ ಶಿಕ್ಷಕರೊಂದಿಗೆ ಹಾಗೂ ಎಸ್.ಡಿ.ಎಂ.ಸಿ,ಊರವರೊಂದಿಗೆ ಹೊಂದಿರುವ ಇವರು, ಇತ್ತೀಚೆಗೆ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯಲ್ಲಿ ನಡೆದ ಶಿಕ್ಷಕರ ಸಾಹಿತ್ಯ ಸಮ್ಮೇಳನದಲ್ಲಿ ಕಥಾ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಇವರು ಜಿಲ್ಲಾ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ಸಭೆಗಳಲ್ಲಿ ಭಾಗವಹಿಸಿ, ಎಲ್ಲಾ ವರ್ಗದ ಜನರೊಂದಿಗೆ ಆತ್ಮೀಯರಾಗಿದ್ದು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. 40 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು 1992ರಲ್ಲಿ ವಿಶೇಷ ರಾಜ್ಯ ಪ್ರಶಸ್ತಿ 1994ರಲ್ಲಿ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ಹಾಗೂ ದರ್ಬೇತ್ತಡ್ಕ ಶಾಲೆಯು 1985 ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಾಲಾ ಪ್ರಶಸ್ತಿ ಗಂಡಿಬಾಗಿಲು ಶಾಲಾ ಎಸ್.ಡಿ.ಎಂ.ಸಿ ಯು ತಾಲೂಕು ಮಟ್ಟದ ಉತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿ ಪಡೆದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಹಲವು ವರ್ಷಗಳ ಸಾರ್ಥಕ ಸೇವೆಯಿಂದ ವಿರಮಿಸುತ್ತಿರುವ ತಮ್ಮೆಲ್ಲರ ನಿವೃತ್ತ ಜೀವನವು ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ. ಸುಖಮಯ ಜೀವನ ನಿಮ್ಮದಾಗಲಿ. ಸಮೃದ್ಧಿಯ ತಮ್ಮ ನಿವೃತ್ತ ಜೀವನಕ್ಕೆ ಆತ್ಮೀಯ ಶುಭ ಹಾರೈಕೆಗಳು

WhatsApp Group Join Now
Telegram Group Join Now
Sharing Is Caring:

Leave a Comment