ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ನಿವೃತ್ತರಾದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ ಗುರುಭ್ಯೋ ನಮಃ

WhatsApp Group Join Now
Telegram Group Join Now

ಗುರುಭ್ಯೋ ನಮಃ

ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ

ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

IMG 20230630 WA0084

ಶ್ರೀಮತಿ ಲಕ್ಷ್ಮೀಬಾಯಿ
ಪದವೀಧರೇತರ ಮುಖ್ಯ ಶಿಕ್ಷಕರು
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸಾಳೆತ್ತೂರು,ಬಂಟ್ವಾಳ ತಾಲೂಕು.

ಉಡುಪಿ ತಾಲೂಕಿನ ಹೇರೂರು ಗ್ರಾಮದ ದಿ.ನಾರಾಯಣ ನಾಯ್ಕ್ ಹಾಗೂ ದಿ.ರುಕ್ಮಿಣಿ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹಾಗೂ ಪ್ರೌಢ ಶಿಕ್ಷಣವನ್ನು ನಿರ್ಮಲ ಬ್ರಹ್ಮಾವರ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಕುಮುದಾ ಉಮಾ ಶಂಕರ ಶಿಕ್ಷಕ ತರಬೇತಿ ಸಂಸ್ಥೆ ಕೊಕ್ಕರ್ಣೆ ಉಡುಪಿ ಇಲ್ಲಿ ಪೂರೈಸಿ ದಿನಾಂಕ 01.06.1993 ರಲ್ಲಿ ಸ.ಹಿ.ಪ್ರಾ.ಶಾಲೆ ಪಡು ಪೆರಾರ ಇಲ್ಲಿ ಸೇವೆಗೆ ಸೇರಿದ ಇವರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಬೋಳಿಯಾರು ಮಂಗಳೂರು ಇಲ್ಲಿಗೆ ವರ್ಗಾವಣೆ ಗೊಂಡು 8 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 2006 ರಲ್ಲಿ ಸ.ಹಿ.ಪ್ರಾ.ಶಾಲೆ ನಾರ್ಶ ಮೈದಾನ ಬಂಟ್ವಾಳ ತಾಲೂಕು ಇಲ್ಲಿಗೆ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಕರ್ತವ್ಯ ನಿರ್ವಹಿಸಿ ನಂತರ ದಿನಾಂಕ 10.04.2010 ರಂದು ಸ.ಹಿ.ಪ್ರಾ.ಶಾಲೆ ಮೇಲಂಗಡಿ ಮಂಗಳೂರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ 2016 ರಲ್ಲಿ ಸ.ಹಿ.ಪ್ರಾ.ಶಾಲೆ ಬಜಾಲ್ ಪಡ್ಪು ಮಂಗಳೂರು ಇಲ್ಲಿಗೆ ಹೆಚ್ಚುವರಿಯಾಗಿ ವರ್ಗಾವಣೆ ಗೊಂಡು ಇಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ ದಿನಾಂಕ 05.05.2022 ರಂದು ಪದವೀಧರೇತರ ಮುಖ್ಯ ಶಿಕ್ಷಕಿಯಾಗಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸಾಳೆತ್ತೂರು ಬಂಟ್ವಾಳ ತಾಲೂಕು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0094

ಶ್ರೀ ನಾರಾಯಣ ಪೂಜಾರಿ ಎಸ್ ಕೆ
ಮುಖ್ಯ ಶಿಕ್ಷಕರು
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಜಿ
ವೀರಕಂಭ ಬಂಟ್ವಾಳ ತಾಲೂಕು.

ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಕೊರಗ ಪೂಜಾರಿ ಮತ್ತು ಯಮುನಾ ದಂಪತಿಗಳ ಪುತ್ರನಾಗಿ ಜನಿಸಿದ ಇವರು 1990ರಲ್ಲಿ ಬೆಳ್ತಂಗಡಿ ತಾಲೂಕಿನ ಮಾಯಾ ಶಾಲೆಯಲ್ಲಿ ಸೇವೆಗೆ ಸೇರಿದ ಇವರು ನಂತರ ವಿಟ್ಲ ಮುಡ್ನೂರು ಗ್ರಾಮದ ನಾಟೆಕಲ್ಲು ಶಾಲೆಗೆ ವರ್ಗಾವಣೆ ಗೊಂಡು ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಶಾಲೆಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ತಾಲೂಕಿನಲ್ಲಿ ಗುರುತಿಸುವಂತಹ ಶಾಲೆಯನ್ನಾಗಿ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
2015 ರಲ್ಲಿ ಮಜಿ ಶಾಲೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ 44 ಮಕ್ಕಳಿದ್ದ ಶಾಲೆಯನ್ನು 250 ಮಕ್ಕಳು ದಾಖಲಾಗುವಂತೆ ಮಾಡಿದ ಇವರು ಎಲ್ ಕೆ ಜಿ,ಯುಕೆಜಿ ತರಗತಿ ಪ್ರಾರಂಭ ಮಾಡಿ ಕನ್ನಡದೊಂದಿಗೆ. ಆಂಗ್ಲ ಮಾಧ್ಯಮ ವಿಭಾಗವನ್ನು ತೆರೆಯುವಂತೆ ಮಾಡಿದ ಇವರು, ಶಾಲೆಯಲ್ಲಿ ಕೃಷಿಯ ಬಗ್ಗೆ ಹಲವಾರು ಚಟುವಟಿಕೆಗಳನ್ನು ಮಾಡಿದ ಕಾರಣ 2016-2017 ಹಾಗೂ 2019-2020 ನೇ ಸಾಲಿನಲ್ಲಿ ಸತತವಾಗಿ ಶಾಲೆಗೆ ಜಿಲ್ಲಾ ಪರಿಸರ ಮಿತ್ರ ಪ್ರಶಸ್ತಿ ಹಾಗೂ ಸ್ವಚ್ಚತಾ ಪ್ರಶಸ್ತಿ ಬಂದಿರುತ್ತದೆ.ಶಾಲೆಯ ಏಳಿಗೆಗೆ ಶ್ರಮಿಸಿದ ಇವರಿಗೆ 2016-2017 ನೇ ಸಾಲಿನಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುತ್ತದೆ.ಇವರು ಅನೇಕ ವರ್ಷಗಳಿಂದ ಶಿಕ್ಷಕ ಸಂಘದ ಪದಾಧಿಕಾರಿಯಾಗಿದ್ದು ತಾಲೂಕು ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0085

ಶ್ರೀ ವೀರಣ್ಣ ಶೆಟ್ಟಿ
ಸ.ಉ.ಪ್ರಾ.ಶಾಲೆ ಕನ್ಯಾಡಿ ||
ಬೆಳ್ತಂಗಡಿ ತಾಲೂಕು

ದಿನಾಂಕ 13.01.1999 ರಂದು ಸ.ಹಿ.ಪ್ರಾ.ಶಾಲೆ ದೇವರ ಗುಡ್ಡೆ ಇಲ್ಲಿ ಸೇವೆಗೆ ಸೇರಿದ ಇವರು ನಂತರ ಸ.ಕಿ.ಪ್ರಾ.ಶಾಲೆ ಬೆಳಾಲು ಪೆರಿಯಡ್ಕ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸ್ಥಾಪಕ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಂತರ ಸ.ಕಿ.ಪ್ರಾ.ಶಾಲೆ ಮುಂಡತ್ತೋಡಿ ಉಜಿರೆ ಇಲ್ಲಿ ಸ್ಥಾಪಕ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಂತರ ದಿನಾಂಕ 13.06.2008 ರಲ್ಲಿ ಸ.ಉ.ಹಿ.ಪ್ರಾ.ಶಾಲೆ ಕನ್ಯಾಡಿ || ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0078

ಶ್ರೀಮತಿ ಸುಲೋಚನಾ
ಸ.ಹಿ.ಪ್ರಾ.ಶಾಲೆ ದೇವನಾರಿ
ಬೆಳ್ತಂಗಡಿ ತಾಲೂಕು.


ದಿನಾಂಕ ‌01.09.1998 ರಲ್ಲಿ ಸ.ಮಾ.ಉ.ಹಿ.ಪ್ರಾ.ಶಾಲೆ ನಿಡುವಾಳೆ ಮೂಡಿಗೆರೆ ತಾಲೂಕು ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಸೇವೆಗೆ ಸೇರಿದ ಇವರು ಸಹ ಶಿಕ್ಷಕಿಯಾಗಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 01.08.2010 ರಿಂದ ದಿನಾಂಕ 08.11.2016 ರವರೆಗೆ ಸ.ಕಿ.ಪ್ರಾ.ಶಾಲೆ ಮೊಗ್ರು ಬೆಳ್ತಂಗಡಿ ತಾಲೂಕು ಇಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಂತರ ದಿನಾಂಕ 09.11.2016 ರಲ್ಲಿ ಸ.ಹಿ.ಪ್ರಾ.ಶಾಲೆ ದೇವನಾರಿ ಬೆಳ್ತಂಗಡಿ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0081

ಶ್ರೀಮತಿ ವಸಂತಿ
ಸ.ಹಿ.ಪ್ರಾ ಶಾಲೆ ನಿಡ್ಲೆ
ಬೆಳ್ತಂಗಡಿ ತಾಲೂಕು

ಇವರು ಈ ತಿಂಗಳು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದು ಇವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20230630 WA0016

ಶ್ರೀ ಅಮೀದ್ ಕೆ
ಸ.ಮಾ.ಹಿ.ಪ್ರಾ.ಶಾಲೆ ಕಡಬ.
ಕಡಬ ತಾಲೂಕು

ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ದಿ.ಸೂಫಿ ಬ್ಯಾರಿ ಹಾಗೂ ಪುತ್ತುಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಕೋಡಿಂಬಾಳ ಹಾಗೂ ಕಡಬ ಸರಕಾರಿ ಶಾಲೆಗಳಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಕಡಬ ಪ್ರೌಢ ಶಾಲೆಯಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಶಿಕ್ಷಕ ತರಬೇತಿ ಸಂಸ್ಥೆ ಕೊಡಿಯಾಲ್ ಬೈಲು ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 15.11.1990 ರಲ್ಲಿ ಸ.ಕಿ.ಪ್ರಾ.ಶಾಲೆ ಬೊಕ್ಕಪಟ್ಣ ಬೆಂಗ್ರೆ ಮಂಗಳೂರು ಇಲ್ಲಿ ಸೇವೆಗೆ ಸೇರಿದ ಇವರು ನಂತರ ದಿನಾಂಕ 01.02.1996 ರಲ್ಲಿ ದ.ಕ.ಜಿ.ಪಂ.ಬಂಟ್ರ ಶಾಲೆಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 30.06.2002 ರಲ್ಲಿ ಕಡಬ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿ ನಂತರ ಪ್ರಾಥಮಿಕ ಶಾಲೆ ಕಳಾರ ಇಲ್ಲಿ ಸೇವೆ ಸಲ್ಲಿಸಿ ನಂತರ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಸ.ಮಾ.ಹಿ.ಪ್ರಾ.ಶಾಲೆ ಕಡಬ ಇಲ್ಲಿ ಸೇವೆ ಸಲ್ಲಿಸಿದ ಇವರು 2021 ರಿಂದ ಕಡಬದ ಪ್ರಭಾರ ಸಿ.ಆರ್.ಪಿ.ಆಗಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0092

ಶ್ರೀಮತಿ ಭುವನೇಶ್ವರಿ
ಮುಖ್ಯ ಶಿಕ್ಷಕಿ
ಸ.ಹಿ.ಪ್ರಾ.ಶಾಲೆ ಕೆರೆಕಾಡು
.

ದಿನಾಂಕ 15.07.1985 ರಲ್ಲಿ ಸ.ಪ್ರಾ.ಶಾಲೆ ಕೊಡಿಯಾಲ್ ಬೈಲ್ ಬೆಳ್ತಂಗಡಿ ತಾಲೂಕು ಇಲ್ಲಿ ಸಹ ಶಿಕ್ಷಕಿ ಹಾಗೂ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಂತರ ಸ.ಕಿ.ಪ್ರಾ.ಶಾಲೆ ಅತಿಕಾರಿಬೆಟ್ಟು ಮಂಗಳೂರು ಇಲ್ಲಿಗೆ ವರ್ಗಾವಣೆ ಗೊಂಡು ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಮಾನಂಪಾಡಿ ಮಂಗಳೂರು ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ನಂತರ ಸ.ಕಿ.ಪ್ರಾ.ಶಾಲೆ ಲಿಂಗಪ್ಪಯ್ಯಕಾಡು ಮಂಗಳೂರು ತಾಲೂಕು ಇಲ್ಲಿಗೆ ನಿಯೋಜನೆ ಗೊಂಡು 1 ವರ್ಷ ಸೇವೆ ಸಲ್ಲಿಸಿದ ಇವರು ನಂತರ ಸ. ಹಿ. ಪ್ರಾ.ಶಾಲೆ ಪಡು ಪಣಂಬೂರು ಇಲ್ಲಿಗೆ ವರ್ಗಾವಣೆ ಗೊಂಡು ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ದಿನಾಂಕ 14.06.2014 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ ಕೆರೆಕಾಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0086

ಶ್ರೀಮತಿ ಶಾಲಿನಿ
ಸ.ಮಾ.ಹಿ.ಪ್ರಾ ಶಾಲೆ ಮಳಲಿ
ಮಂಗಳೂರು ದಕ್ಷಿಣ

ಈ ತಿಂಗಳು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಇವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20230630 WA0088

ಶ್ರೀಮತಿ ಮಲ್ಲಿಕಾ ಉಚ್ಚಿಲ್
ಸ.ಹಿ.ಪ್ರಾ ಶಾಲೆ ಮಾಡೂರು
ಮಂಗಳೂರು ದಕ್ಷಿಣ

ಈ ತಿಂಗಳು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಇವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20230630 WA0079

ಶ್ರೀ ಅಹಮದ್ ಕುನ್ನಿ
ಸ.ಹಿ.ಪ್ರಾ ಶಾಲೆ ಆಂಬ್ಲಮೊಗರು
ಮಂಗಳೂರು ದಕ್ಷಿಣ

ಈ ತಿಂಗಳು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಇವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20230630 WA0090

ಶ್ರೀಮತಿ ಶೋಭಾ ಕೆ
ಸ.ಹಿ.ಪ್ರಾ.ಶಾಲೆ ಪಾಡ್ಯಾರು.
ಮೂಡುಬಿದಿರೆ ತಾಲೂಕು

ಶ್ರೀ ಗೋಪಾಲ ಕಂಬಳಿ ಮತ್ತು ಶ್ರೀಮತಿ ಧನವತಿ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಅಂಡಿಂಜೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ವೇಣೂರು ಹೈಸ್ಕೂಲ್ ನಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ತರಬೇತಿ ಸಂಸ್ಥೆ ಕಿನ್ನಿಕಂಬಳ ಇಲ್ಲಿ ಪೂರೈಸಿ 1998 ರಲ್ಲಿ ಬೆಳ್ತಂಗಡಿ ತಾಲೂಕಿನ ಬದನಾಜೆ ಇಲ್ಲಿ ಸೇವೆಗೆ ಸೇರಿದ ಇವರು ನಂತರ 2002 ರಲ್ಲಿ ಗಾಳಿ ಹಳ್ಳಿ ಕ್ರಾಸ್ ತರೀಕೆರೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ 2004 ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಅರಹತೊಳಲು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ನಂತರ 2015 ರಲ್ಲಿ ಸ.ಹಿ.ಪ್ರಾ.ಶಾಲೆ ಪಾಡ್ಯಾರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0093

ಶ್ರೀಮತಿ ಮಾರ್ಗರೇಟ್ ಡಿಸೋಜ
ದ.ಕ.ಜಿ.ಪಂ.ಸ.ಉ.ಹಿ.ಪ್ರಾ.ಶಾಲೆ ಮಾಂಟ್ರಾಡಿ ಮೂಡು
ಬಿದಿರೆ.

ಮಂಗಳೂರು ತಾಲೂಕಿನ ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆಯ ಶ್ರೀ ಜೋನ್ ಡಿಸೋಜ ಮತ್ತು ಶ್ರೀಮತಿ ಲುವಿಝ ಡಿಸೋಜ ದಂಪತಿಗಳ ಪುತ್ರಿಯಾಗಿ ದಿನಾಂಕ 04.06.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಹೈಯರ್ ಪ್ರೈಮರಿ ಏಳಿಂಜೆ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಗರ್ಲ್ಸ್ ಹೈಸ್ಕೂಲ್ ಕಿನ್ನಿಗೋಳಿ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಕಪಿತಾನಿಯೋ ಶಿಕ್ಷಕ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 06.02.1990 ರಲ್ಲಿ ಸ.ಕಿ.ಪ್ರಾ.ಶಾಲೆ ನೆತ್ತೋಡಿ ಇಲ್ಲಿ ಸೇವೆಗೆ ಸೇರಿದ ಇವರು ದಿನಾಂಕ 02.06.1992 ರವರೆಗೆ ಸೇವೆ ಸಲ್ಲಿಸಿ ನಂತರ ದಿನಾಂಕ 03.06.1992 ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಾರೂರು ಹೊಸಂಗಡಿ ಇಲ್ಲಿಗೆ ವರ್ಗಾವಣೆ ಗೊಂಡು ದಿನಾಂಕ 12.08.2013 ರವರೆಗೆ ಸೇವೆ ಸಲ್ಲಿಸಿ ನಂತರ ದಿನಾಂಕ 12.08.2013 ರಲ್ಲಿ ಸ.ಉ.ಹಿ.ಪ್ರಾ.ಶಾಲೆ ಇರುವೈಲು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ದಿನಾಂಕ 25.01.2016 ರವರೆಗೆ ಸೇವೆ ಸಲ್ಲಿಸಿ ನಂತರ ಸ.ಉ.ಹಿ.ಪ್ರಾ.ಶಾಲೆ ಮಾಂಟ್ರಾಡಿ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0091

ಶ್ರೀಮತಿ ವೇದಾವತಿ
ಸ.ಹಿ.ಪ್ರಾ ಶಾಲೆ ಮುಕ್ವೆ
ಪುತ್ತೂರು ತಾಲೂಕು

ಕಾಸರಗೋಡು ಜಿಲ್ಲೆಯ ಅಡ್ಕಸ್ಥಳ ಎ.ಕೆ ಪೂಜಾರಿ ಮತ್ತು ಕಾಂತು ಹೆಂಗ್ಸು ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ನಲ್ಕ ಹಾಗೂ ಅಡ್ಯನಡ್ಕ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಅಡ್ಯನಡ್ಕದಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಸ್ವತಿ ಶಿಕ್ಷಕ ತರಬೇತಿ ಕೇಂದ್ರ ಮಡಿಕೇರಿಯಲ್ಲಿ ಪೂರೈಸಿ ದಿನಾಂಕ 27.01.1996 ರಲ್ಲಿ ಸ.ಕಿ.ಪ್ರಾ.ಶಾಲೆ ಕಿತ್ತಗೆರೆ ಆಲೂರು ಹಾಸನ ಜಿಲ್ಲೆ ಇಲ್ಲಿ ಸೇವೆಗೆ ಸೇರಿದ ಇವರು ನಂತರ ಸ.ಕಿ.ಪ್ರಾ.ಶಾಲೆ ಬೆದ್ರಾಳ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ನಂತರ ಮುಕ್ವೆ ಶಾಲೆಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಶಿಕ್ಷಕರ ಸಂಘಟನೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0089

ಶ್ರೀಮತಿ ರತ್ನಾವತಿ ಕೆ
ಸ.ಹಿ.ಪ್ರಾ. ಶಾಲೆ ಕುಕ್ಕುಜಡ್ಕ
ಸುಳ್ಯ ತಾಲೂಕು

ಇವರು ಮೂಲತಃ ಸುಬ್ರಹ್ಮಣ್ಯ ದವರಾಗಿದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಸುಬ್ರಹ್ಮಣ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದಿರುತ್ತಾರೆ. 12.01.1996 ರಲ್ಲಿ ಶಿಕ್ಷಕಿಯಾಗಿ ಗಟ್ಟಿಗಾರು ಸ.ಕಿ.ಪ್ರಾ.ಶಾಲೆಗೆ ಸೇರ್ಪಡೆಗೊಂಡು ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ 2003 ರಿಂದ 2011 ರ ತನಕ ದೇವಚಳ್ಳ ಸ.ಹಿ.ಪ್ರಾ.ಶಾಲೆಯಲ್ಲಿ, 2011 ರಿಂದ 2014 ರ ವರೆಗೆ ಕ್ಷೇತ್ತ ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು.
2014 ರಿಂದ ಸ.ಹಿ.ಪ್ರಾ.ಶಾಲೆ ಕುಕ್ಕುಜಡ್ಕದಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಜೂ.30 ರಂದು ನಿವೃತ್ತಿಯಾಗಲಿರುವರು. ಇವರ ಪತಿ ಪ್ರಗತಿಪರ ಕೃಷಿಕ ಅನಂತ ಭಟ್ ಕನಿಯಾಲ, ಇಬ್ಬರು ಪುತ್ರರಿದ್ದು ಹಿರಿಯ ಪುತ್ರ ಅಶ್ವಿನ್ ಕೃಷ್ಣ ಇವರು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಪತ್ನಿ ಶ್ರೀಮತಿ ಸಿದ್ಧಿಶ್ರೀ ಇವರು ಭರತನಾಟ್ಯ ಶಿಕ್ಷಕಿಯಾಗಿದ್ದು ಒಂದು ಹೆಣ್ಣುಮಗುವನ್ನು ಹೊಂದಿದ್ದಾರೆ. ಇನ್ನೋರ್ವ ಪುತ್ರ ಆಶ್ವಲ ಭಟ್ ರವರು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುತ್ತಾರೆ. ಪ್ರಸ್ತುತ ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಎಂಬಲ್ಲಿ ವಾಸವಾಗಿರುತ್ತಾರೆ. ಇವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20230630 WA0087

ಶ್ರೀಮತಿ ನಾಗವೇಣಿ
ಸ.ಉ.ಪ್ರಾ. ಶಾಲೆ ಕೋಲ್ಚಾರು
ಸುಳ್ಯ ತಾಲೂಕು

ಮಡ್ತಿಲ ಮನೆತನದ ದಿ.ಶಿವಪ್ಪ ಗೌಡ ಕೊಯಿಲ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಯ ಪುತ್ರಿಯಾಗಿರುವ ಇವರು ಐವರ್ನಾಡು ಗ್ರಾಮದ ದೇರಾಜೆ ಸ.ಕಿ.ಪ್ರಾಥಮಿಕ ಶಾಲೆ ಮತ್ತು ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ ಬಳಿಕ ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ವಿದ್ಯಾಭ್ಯಾಸವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆಯಲ್ಲಿ ಪೂರೈಸಿರುತ್ತಾರೆ. 1986-87 ರಲ್ಲಿ ಕುಶಾಲನಗರದ ಶ್ರೀ ಸತ್ಯಸಾಯಿ ಕಾಲೇಜಿನಲ್ಲಿ ಸಿ.ಪಿ ಎಡ್ ತರಬೇತಿ ಕೋರ್ಸ್ ಮುಗಿಸಿ 1994 ರಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾದರು. ಪ್ರಥಮವಾಗಿ 1994 ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸ.ಹಿ.ಪ್ರಾ.ಶಾಲೆ ಎಲಿಮಲೆ ದೇವಚಳ್ಳದಲ್ಲಿ ವೃತ್ತಿ ಸೇವೆ ಪ್ರಾರಂಭಿಸಿದರು. ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ 2009 ರಲ್ಲಿ ಆಲೆಟ್ಟಿಯ ಕೋಲ್ಚಾರು ಸ.ಉ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡಿರುತ್ತಾರೆ. ಸುದೀರ್ಘ 29 ವರ್ಷದ ವೃತ್ತಿ ಸೇವೆಯ ಸಂದರ್ಭದಲ್ಲಿ ಉತ್ತಮ ತರಗತಿ ಶಿಕ್ಷಕಿಯಾಗಿಯೂ ಗುರುತಿಸಿಕೊಂಡಿದ್ದು, ರಜಾಅವಧಿಯಲ್ಲಿಯೂ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳು ಕ್ರೀಡೆ ಮತ್ತು ಯೋಗದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿಸಿದ್ದಾರೆ. ಶಾಲೆಯಲ್ಲಿ ಸೇವಾದಳ ಸ್ಥಾಪಿಸಿ,ಅದರ ನಿರ್ದೇಶಕರಾಗಿಯೂ ಸೇವೆಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಜೀವನಮೌಲ್ಯವನ್ನು ರೂಢಿಸಲು ಚಟುವಟಿಕೆಗಳನ್ನು ಹಮ್ಮಿಕೊಂಡು ಸದಾ ಕ್ರಿಯಾಶೀಲರಾಗಿರುವ ಇವರ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಹೊಂದಿ ದೇಶ,ವಿದೇಶ ಗಳಲ್ಲಿ ನೆಲೆಸಿರುತ್ತಾರೆ. ಕೊಡುಗೈ ದಾನಿಯೂ ಆಗಿರುವ ಇವರು ಶಾಲೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ಕೈ ಜೋಡಿಸಿದ್ದಾರೆ.

ಇವರ ಪತಿ ಪ್ರಗತಿಪರ ಕೃಷಿಕರಾದ
ಶ್ರೀಧರ ಕೊಯಿಂಗಾಜೆ ಹಾಗೂ ಇಬ್ಬರು ಪುತ್ರರಾದ ಯಶಸ್ ಕೊಯಿಂಗಾಜೆ ಬೆಂಗಳೂರಿನಲ್ಲಿ ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್, ಪತ್ನಿ ಮಮತಾ ಬ್ಯಾಂಕ್ ಉದ್ಯೋಗಿ. ಇನ್ನೋರ್ವ ಪುತ್ರ ತೇಜಸ್ ಕೊಯಿಂಗಾಜೆ ಸಿವಿಲ್ ಇಂಜಿನಿಯರ್.ಪತ್ನಿ ಅನನ್ಯ ಪೈನಾನ್ಸ್ ಉದ್ಯೋಗಿ ಹಾಗು ಭರತನಾಟ್ಯ ಕಲಾವಿದೆ ಆಗಿರುತ್ತಾರೆ. ಇವರು
ಪ್ರಸ್ತುತ ಕೋಲ್ಚಾರಿನ ಕೊಯಿಂಗಾಜೆ ಎಂಬಲ್ಲಿ ವಾಸವಾಗಿರುತ್ತಾರೆ.

IMG 20230630 WA0077

ಶ್ರೀ ಮೋಹನ ಕೆ
ಸ.ಕಿ.ಪ್ರಾ.ಶಾಲೆ ದೇರಾಜೆ ಐವರ್ನಾಡು.
ಸುಳ್ಯ ತಾಲೂಕು

ಮಂಗಳೂರು ಸರಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕ ತರಬೇತಿಯನ್ನು ಪಡೆದ ಇವರು ಸ.ಹಿ.ಪ್ರಾ.ಶಾಲೆ ಕಾಣಿಯೂರು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಅಯ್ಯನ ಕಟ್ಟೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಕಿ.ಪ್ರಾ.ಶಾಲೆ ದೇರಾಜೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 16 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0083

ಶ್ರೀ ಶಶಿಕಲಾ ಪಿ.ಬೊಳ್ಳೂರು
ದೈಹಿಕ ಶಿಕ್ಷಕಿ
ಸ.ಹಿ.ಪ್ರಾ.ಶಾಲೆ ದೇವಚಳ್ಳ.
ಸುಳ್ಯ ತಾಲೂಕು

ಕಂದ್ರಪ್ಪಾಡಿ ಗ್ರಾಮದ ಪಡ್ಪು ದಿ.ಆನಂದ ಗೌಡ ಹಾಗೂ ಶ್ರೀಮತಿ ನಾಗಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ.ಶಾಲೆ ಅಚ್ರಪ್ಪಾಡಿ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಗುತ್ತಿಗಾರು ಸರಕಾರಿ ಪ್ರೌಢ ಶಾಲೆಯಲ್ಲಿ ಪೂರೈಸಿ ದೈಹಿಕ ಶಿಕ್ಷಣ ತರಬೇತಿಯನ್ನು ಬೆಂಗಳೂರಿನ ವೈ.ಎಂ.ಸಿ.ಎ ಸಂಸ್ಥೆಯಲ್ಲಿ ಪೂರೈಸಿ 1994 ರಲ್ಲಿ ಸ.ಮಾ.ಹಿ.ಪ್ರಾ.ಶಾಲೆ ತುಂಬೆ ಇಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆಗೆ ಸೇರಿದ ಇವರು ನಂತರ ಸ.ಉ.ಹಿ.ಪ್ರಾ.ಶಾಲೆ ಕೋಲ್ಚಾರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 2009 ರಲ್ಲಿ ಸ.ಹಿ.ಪ್ರಾ.ಶಾಲೆ ದೇವಚಳ್ಳ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0080

ಶ್ರೀಮತಿ ಮೀನಾಕ್ಷಿ ಕೆ.ಆರ್
ಸ.ಹಿ.ಪ್ರಾ.ಶಾಲೆ ಉಬರಡ್ಕ.
ಸುಳ್ಯ ತಾಲೂಕು

ಆಲೆಟ್ಟಿಯ ಬೂತಕಲ್ಲು ಶಾಲೆಯಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ದೊಡ್ಡ ತೋಟ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ‌12 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 6 ವರ್ಷಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230630 WA0082

ಶ್ರೀಮತಿ ಪದ್ಮ ರಂಗನಾಥ್
ಮುಖ್ಯ ಶಿಕ್ಷಕಿ
ಸ.ಹಿ.ಪ್ರಾ.ಶಾಲೆ ಆಲೆಟ್ಟಿ.
ಸುಳ್ಯ ತಾಲೂಕು

ಇವರು ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣವನ್ನು ಬಳ್ಳಾರಿಯ ಸರಕಾರಿ ಶಾಲೆಯಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಶಿಕ್ಷಕ ತರಬೇತಿ ಸಂಸ್ಥೆ ಬಳ್ಳಾರಿ ಇಲ್ಲಿ ಪೂರೈಸಿ, 1992ರಲ್ಲಿ ಸ.ಹಿ ಪ್ರಾ ಶಾಲೆ ಬಳ್ಳಾರಿ ಇಲ್ಲಿ ಸೇವೆಗೆ ಸೇರಿದ ಇವರು ನಂತರ ಸ.ಕಿ.ಪ್ರಾ.ಶಾಲೆ ಆಲೆಟ್ಟಿ ಗ್ರಾಮದ ನಾಗಪಟ್ಟಣ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ ಪಡ್ಪಿನಂಗಡಿ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಉ.ಹಿ.ಪ್ರಾ.ಶಾಲೆ ಮಂಡೆಕೋಲು ಇಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 2015 ರಲ್ಲಿ ಸ.ಹಿ.ಪ್ರಾ.ಶಾಲೆ ಆಲೆಟ್ಟಿ ಇಲ್ಲಿಗೆ ವರ್ಗಾವಣೆ ಗೊಂಡು ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು 2014-2015 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಪ್ರಶಸ್ತಿ ಹಾಗೂ 2019-2020 ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪಡೆದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ನಿರಂತರ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಗೌರವದ ಸ್ಥಾನ ಪಡೆದ ತಮ್ಮೆಲ್ಲರ ನಿವೃತ್ತ ಜೀವನ ಸುಖಮಯವಾಗಿರಲಿ, ದೇವರು ಆಯುರಾರೋಗ್ಯ, ಐಶ್ವರ್ಯ, ನೆಮ್ಮದಿ ಕರುಣಿಸಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.

WhatsApp Group Join Now
Telegram Group Join Now
Sharing Is Caring:

Leave a Comment