2022-23 ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8 ನೇ ತರಗತಿ ಮೌಲ್ಯಾಂಕನ ದ ಇಲಾಖೆ ಮತ್ತು ವಿವಿಧ ತಾಲೂಕುಗಳ ಮಾದರಿ ಪ್ರಶ್ನೆ ಪತ್ರಿಕೆಗಳು

ಇಲಾಖೆಯಿಂದ ಬಿಡುಗಡೆ ಮಾಡಿರುವ 5 ಮತ್ತು 8 ನೇ ತರಗತಿ ಮೌಲ್ಯ ಮಾಪನದ ಮಾದರಿ ಪ್ರಶ್ನೆ ಪತ್ರಿಕೆಗಳು

First language English

ಡಯಟ್ ಹಾಸನ ವತಿಯಿಂದ ತಯಾರಾದ 5ನೇ ತರಗತಿ ಮೌಲ್ಯ0ಕನ ಪ್ರಶ್ನೆ ಪತ್ರಿಕೆಗಳು ಕನ್ನಡ ಗಣಿತ ಪರಿಸರ ಮತ್ತು ಇಂಗ್ಲೀಷ್ ವಿಷಯಗಳ ಪ್ರಶ್ನೆ ಪತ್ರಿಕೆಗಳು

ಸುಳ್ಯ ತಾಲೂಕು

ಶಾಲಾ ಹಂತದ ಪೂರ್ವ ಸಿದ್ಧತಾ ಮಾದರಿ ಪ್ರಶ್ನೆ ಪತ್ರಿಕೆ

ಹಾಸನ ಜಿಲ್ಲೆ

ನಂಜನಗೂಡು ತಾಲೂಕು

8ನೇ ತರಗತಿ

5 ನೇ ತರಗತಿ

ಪ್ರಥಮ ಭಾಷೆ /First language

ದ್ವಿತೀಯ ಭಾಷೆ ಕನ್ನಡ /second language

ಗಣಿತ/ಕನ್ನಡ ಮಾಧ್ಯಮ

ಆಂಗ್ಲ ಮಾಧ್ಯಮ mathematics

ಪರಿಸರ ಅಧ್ಯಯನ/ಕನ್ನಡ ಮಾಧ್ಯಮ

ಪರಿಸರ ಅಧ್ಯಯನ/ಆಂಗ್ಲ ಮಾಧ್ಯಮ

ತೃತೀಯ ಭಾಷೆ ಹಿಂದಿ / Third language Hindi

8ನೇ ತರಗತಿ

ಪ್ರಥಮ ಭಾಷೆ /First language

ದ್ವಿತೀಯ ಭಾಷೆ ಕನ್ನಡ /second language

ವಿಜ್ಞಾನ /ಕನ್ನಡ ಮಾಧ್ಯಮ

ವಿಜ್ಞಾನ / ಆಂಗ್ಲ ಮಾಧ್ಯಮ

ಸಮಾಜ ವಿಜ್ಞಾನ /ಕನ್ನಡ ಮಾಧ್ಯಮ

ಸಮಾಜ ವಿಜ್ಞಾನ ಆಂಗ್ಲ ಮಾಧ್ಯಮ

ಗಣಿತ /ಕನ್ನಡ ಮಾಧ್ಯಮ

ಗಣಿತ / ಆಂಗ್ಲ ಮಾಧ್ಯಮ

ತೃತೀಯ ಭಾಷೆ /Third language


ಶ್ರೀ ಎಚ್ ಎನ್ ಗೋಪಾಲಕೃಷ್ಣ ನಿರ್ದೇಶಕರು
ಕರ್ನಾಟಕ ರಾಜ್ಯ ಮೌಲ್ಯಾಂಕನ ಮಂಡಳಿ

5 ಹಾಗು 08 ನೇ ತರಗತಿ ಮೌಲ್ಯಾಂಕನ


ಐದು ಮತ್ತು ಎಂಟನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆಗೆ ಸಂಬಂಧಿಸಿದಂತೆ ಸಂವಾದ ಕಾರ್ಯಕ್ರಮದ ಅಂಶಗಳು


1) ಇದು ಪಬ್ಲಿಕ್ ಪರೀಕ್ಷೆಯಲ್ಲ, ಇದೊಂದು ಮೌಲ್ಯಾಂಕನ ಪರೀಕ್ಷೆಯಾಗಿದೆ.
2) 5 ಮತ್ತು 8ನೇ ತರಗತಿಯ ಮಕ್ಕಳಿಗೆ ಒಂದು ಹಂತದ ಕಲಿಕೆಯ ಪರೀಕ್ಷೆ.
3) ಇದೊಂದು ಸಾಧನವಾಗಿದೆ.
4) ಈ ಪರೀಕ್ಷೆಯು ಎರಡನೇ ಸೆಮಿಸ್ಟರ್ ಗೆ ಸಂಬಂಧಿಸಿದೆ.
5) ನವಂಬರ್ ದಿಂದ ಮಾರ್ಚ್ ವರೆಗಿನ ಕಲಿಕಾಂಶಕ್ಕೆ ಸಂಬಂಧಿಸಿದ ಪರೀಕ್ಷೆ ಇರುತ್ತದೆ.
6) ರಾಜ್ಯ ಪಠ್ಯಕ್ರಮಕ್ಕೆ ಅನುಗುಣವಾಗಿ ಇಡೀ ರಾಜ್ಯಾದ್ಯಂತ ಒಂದೇ ರೀತಿಯ ಪ್ರಶ್ನೆ ಪತ್ರಿಕೆ ಇರುತ್ತದೆ.
7) ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳನ್ನು ಸ್ಥಾಪನೆ.
8)SATS ನಂಬರ್ ವಿದ್ಯಾರ್ಥಿಯ ರಜಿಸ್ಟರ್ ನಂಬರ್ ಆಗಿರುತ್ತದೆ.
9) ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಣೆ ಮಾಡಲಾಗುವುದು.
10) 5ನೇ ವರ್ಗದ 57933 ಶಾಲೆಗಳಿಗೆ ಹಾಗೂ 8 ನೇ ವರ್ಗದ 24400 ಶಾಲೆಗಳಿಗೆ ಈ ಪರೀಕ್ಷೆ ನಡೆಸಲಾಗುವದು._
11) ಕಲಿಕಾಂಶ ಆಧಾರದ ಮೇಲೆ ಪ್ರಶ್ನೆ ಪತ್ರಿಕೆ ರಚನೆ ಆಗಿರುತ್ತದೆ.
12) ಎರಡು – ಮೂರು ದಿನಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಇಲಾಖೆ ವತಿಯಿಂದ ಬಿಡುಗಡೆ ಮಾಡಲಾಗುವುದು.
13) ಮಾರ್ಚ್ 9 ರಿಂದ 18ರವರೆಗೆ ಈ ಪರೀಕ್ಷೆ ನಡೆಸಲಾಗುವುದು.
14) ಐದನೇ ವರ್ಗದ ಉತ್ತರ ಪತ್ರಿಕೆಗಳು ಆಯಾ ತಾಲೂಕಿನಲ್ಲಿ ಮೌಲ್ಯಮಾಪನ ಮಾಡಲಾಗುವುದು.
15) 8ನೇ ವರ್ಗದ ಉತ್ತರ ಪತ್ರಿಕೆಗಳು ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ವರ್ಗಾಯಿಸಿ ಮೌಲ್ಯಮಾಪನ ಮಾಡಲಾಗುವುದು.
16)SATS ನಲ್ಲಿ ಫಲಿತಾಂಶವನ್ನು ನಮೂದಿಸುವುದು._
17) ಪ್ರಶ್ನೆ ಪತ್ರಿಕೆ ಸಹಿತ ಉತ್ತರ ಪತ್ರಿಕೆಯನ್ನು ಒದಗಿಸಲಾಗುವುದು.
18) ಪ್ರಶ್ನೆ ಪತ್ರಿಕೆಯು ಐವತ್ತು ಅಂಕಗಳಿಗೆ ನಿಗದಿಪಡಿಸಲಾಗಿದೆ.
19) ಅದರಲ್ಲಿ 10 ಅಂಕಗಳು ಮೌಖಿಕ ಪ್ರಶ್ನೆಗಳಿಗೆ ಸಂಬಂಧಿಸಿರುತ್ತದೆ.
ಹಾಗೂ 40 ಅಂಕಗಳು ಲಿಖಿತ ಪ್ರಶ್ನೆಗಳಿಗೆ ಸಂಬಂಧಿಸಿರುತ್ತದೆ.
20) 40 ಅಂಕಗಳ ಲಿಖಿತ ಪ್ರಶ್ನೆಗಳಲ್ಲಿ 50% (20 ಅಂಕ )ಪ್ರಶ್ನೆಗಳು ಬಹು ಆಯ್ಕೆ ಪ್ರಶ್ನೆಗಳಿದ್ದರೆ, 50% (20ಅಂಕ )ಪ್ರಶ್ನೆಗಳು ವಿವರಣೆ ಪ್ರಶ್ನೆ ಇರುತ್ತವೆ._
21) ಇದೊಂದು ಕಲಿಕಾ ಸಂತಸದ ಪರೀಕ್ಷೆಯಾಗಿದೆ.
22) ಮುಂದೆ ಬರುವ ಪಬ್ಲಿಕ್ ಪರೀಕ್ಷೆಗಳಿಗೆ ಮೌಲ್ಯಾಂಕನ ಪರೀಕ್ಷೆಯು ಒಂದು ಅನುಭವವನ್ನು ಕೊಡುತ್ತದೆ.
23) ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಪರೀಕ್ಷೆಗೆ ತಯಾರಿ ಅನಿವಾರ್ಯ.
24) ಗ್ರೇಡನ್ನು ನಮೂದಿಸುತ್ತದೆ.
25) ಕರೋನ ನಂತರ ಕಲಿಕೆಯ ಯನ್ನು ತಿಳಿಯುವ ಸಾಧನವಾಗಿದೆ.
26) 40 ಅಂಕಗಳಿಗೆ ಸಮಯ 2 ಗಂಟೆ ನಿಗಧಿಪಡಿಸಲಾಗಿದೆ.

S.A.S – ಕಲಿಕಾ ಸಾಧನ ಸಮೀಕ್ಷೆ ಗೆ (5 ಮತ್ತು 8 ನೇ ತರಗತಿ ಮೌಲ್ಯಾಂಕನ) ಸಂಬಂಧಿಸಿದಂತೆ ಇಂದು ನೆಡೆದ ರೇಡಿಯೋ ಸಂವಾದ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಗೋಪಾಲಕೃಷ್ಣ ರವರು ನೀಡಿದ ಮಾಹಿತಿ.

IMG 20230122 WA0021
IMG 20230122 WA0019
IMG 20230122 WA0020
IMG 20230122 WA0018
IMG 20230122 WA0017

2018- 19ನೇ ಸಾಲಿನ ಪ್ರಶ್ನೆ ಪತ್ರಿಕೆಗಳು
ಪರೀಕ್ಷೆ ತಯಾರಿಗೆ ಸಹಕಾರಿಯಾಗಬಲ್ಲ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೆಳಗೆ ನೀಡಲಾಗಿದೆ.ಈ ಪ್ರಶ್ನೆ ಪತ್ರಿಕೆಗಳನ್ನು ವಾಟ್ಸಾಪ್ ಮತ್ತು ಇತರ ಮೂಲಗಳಿಂದ ಸಂಗ್ರಹಿಸಲಾಗಿದೆ.

ಇಂಗ್ಲಿಷ್ ಮಾಧ್ಯಮ

ಮಾದರಿ ಪ್ರಶ್ನೆ ಪತ್ರಿಕೆ5 ನೇ ತರಗತಿ added on 9/02/2023

Sharing Is Caring:

3 thoughts on “2022-23 ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8 ನೇ ತರಗತಿ ಮೌಲ್ಯಾಂಕನ ದ ಇಲಾಖೆ ಮತ್ತು ವಿವಿಧ ತಾಲೂಕುಗಳ ಮಾದರಿ ಪ್ರಶ್ನೆ ಪತ್ರಿಕೆಗಳು”

  1. ನಿಮಗೆ 4 ನೇ ವರ್ಗದ 3 ,4 ರೂಪನಾತ್ಮಕ, 2 ನೇ ಸಂಕಲನಾತ್ಮಕ ಪ್ರಶ್ನೆ ಪತ್ರಿಕೆ ಮಾದರಿಗಳನ್ನು ಕಳಿಸಿ. 5 ನೇ ವರ್ಗದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕಳಿಸಿದ್ದು ಬಹಳ ಉಪಯುಕ್ತವಾಗಿವೆ ಧನ್ಯವಾದಗಳು

    Reply
  2. 5 ನೇ ತರಗತಿಯ ಕನ್ನಡ ಪ್ರಶ್ನೆ ಪತ್ರಿಕೆ ಕಳುಹಿಸಿ ತುಂಬಾ ಉಪಕಾರ ಮಾಡಿದ್ದೀರಿ. ಎಲ್ಲಾ ಪ್ರಶ್ನೆ ಪತ್ರಿಕೆ ಮಾದರಿ ಪರೀಕ್ಷೆ ಮಾಡಿದ್ದೇನೆ. ಮತ್ತು ತುಂಬಾ ಮಂದಿಗೆ ಹಂಚಿದ್ದೇನೆ. ನಿಮಗೆ ತುಂಬು ಹೃದಯದ ಧನ್ಯವಾದಗಳು.

    Reply

Leave a Comment