ಹೆಚ್ಚುವರಿ ಈ ದಿನದ (10/01/23) UPDATE ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

ಸನ್ಮಾನ್ಯ ರಿತೇಶ್ ಕುಮಾರ್ ಸಿಂಗ್ (IAS) ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅವರನ್ನು ಇಂದು ಭೇಟಿ ಮಾಡಲಾಯಿತು. ದಿನಾಂಕ : 10-01-2023

IMG 20230110 WA0021

ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯಾದ್ಯಂತ ಇಂದು ಹೆಚ್ಚುವರಿ ಸಮಸ್ಯೆ ಬಹುತೇಕ ಶಿಕ್ಷಕರನ್ನು ಕಾಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಲಿ ಅವರು ಮಾನ್ಯ ರಿತೇಶ್ ಕುಮಾರ ಸಿಂಗ್ (IAS) ಅವರನ್ನು ಬೆಳಗ್ಗೆ 11 ಗಂಟೆಯಿಂದ ಅತಿ ಕೆಲಸದ ಒತ್ತಡದಲ್ಲಿದ್ದರೂ ಕೂಡ ಮಧ್ಯಾಹ್ನ 3:00 ಗಂಟೆಯವರೆಗೆ ಅವರನ್ನು ಕಾಯ್ದು, ಅವರ ಜೊತೆ ಹೆಚ್ಚುವರಿ ಸಮಸ್ಯೆಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು.

1) ಯಾವುದೇ ಕಾರಣಕ್ಕೂ ವಿಷಯವಾರು ಹೆಚ್ಚುವರಿ ಪ್ರಕ್ರಿಯೆಗಳನ್ನು ಕೈಗೊಳ್ಳಲೇಬಾರದು.

2) ಶಾಲೆಯಲ್ಲಿ ಮಂಜೂರಾದ ಹುದ್ದೆಗಳಿಗೆ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಿಗೆ ಅನುಗುಣವಾಗಿ ಹೆಚ್ಚುವರಿ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕೆಂದು ವಿನಂತಿಸಲಾಯಿತು.

3) ದೈಹಿಕ ಶಿಕ್ಷಕರು ಚಿತ್ರಕಲಾ ಶಿಕ್ಷಕರು ಹಿಂದಿ ಶಿಕ್ಷಕರು ಇಂಗ್ಲೀಷ್ ಶಿಕ್ಷಕರಿಗೂ ಕೂಡ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಲಾಯಿತು.

IMG 20230110 WA0022

4) ಹೆಚ್ಚುವರಿ ಪ್ರಕ್ರಿಯೆಗಳಿಗಿಂತ ಮುಂಚೆ ಬಡ್ತಿ ಪ್ರಕ್ರಿಯೆಗಳನ್ನು ಜರುಗಿಸುವ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.ಮಾನ್ಯ ರವರು ಅತ್ಯಂತ ಸರಳ ಹಾಗೂ ಸಾವಧಾನವಾಗಿ ಎಲ್ಲ ವಿಷಯಗಳನ್ನು ತಿಳಿದುಕೊಂಡು ಮಾನ್ಯ ಆಯುಕ್ತರೊಂದಿಗೆ ಚರ್ಚಿಸಿ ಇಂದು ಸಂಜೆ ಹೆಚ್ಚುವರಿ ಪಟ್ಟಿಯನ್ನು provisinal Final list ಬಿಡುಗಡೆಗೊಳಿಸುವುದಾಗಿ ಅದಕ್ಕೂ ಕೂಡ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗುವುದೆಂದು ತಿಳಿಸಿದರು. ಶೇ 99% ಶಿಕ್ಷಕರನ್ನು ತಾಲೂಕಿನ ಒಳಗಡೆ ತೊಂದರೆಯಾಗದ ರೀತಿಯಲ್ಲಿ ಹೆಚ್ಚುವರಿ ಪ್ರಕ್ರಿಯೆ ಮಾಡುವಂತೆ ನಿರ್ದೇಶನ ನೀಡಲಾಗುವುದೆಂದು ತಿಳಿಸಿದರು. ಇನ್ನುಳಿದ ಪ್ರಕ್ರಿಯೆಗಳ ಬಗ್ಗೆ ಕೂಡ ಮತ್ತೆ ಚರ್ಚಿಸಲಾಗುವುದೆಂದು ತಿಳಿಸಿದರು.

From

KSPSTA BLORE

WhatsApp Group Join Now
Telegram Group Join Now
Sharing Is Caring:

Leave a Comment