ಮಾದರಿ ಶಾಲೆಯ ಕುರಿತು Update ಮಾಹಿತಿ ದಿನಾಂಕ 02/07/22

IMG 20220703 WA0023

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ
ಗುಣಮಟ್ಟವನ್ನು ಉತ್ತಮಪಡಿಸಲು ಹೋಬಳಿ
ಮಟ್ಟದಲ್ಲಿ ಮೂಲಭೂತ ಸೌಕರ್ಯವಿರುವ ಶಾಲೆಗಳನ್ನು
ಮಾದರಿ ಶಾಲೆಗಳಾಗಿ ಉನ್ನತೀಕರಿಸಲಾಗುವುದು
“.

  • ಅತಿ ಹೆಚ್ಚು ಮಕ್ಕಳಿರುವ ಶಾಲೆಗಳನ್ನು ಮೊದಲನೇ ಆದ್ಯತೆಯಾಗಿ ಪರಿಗಣಿಸುವುದು.
  • ಆಯ್ಕೆ ಮಾಡಿರುವ ಶಾಲೆಗಳಲ್ಲಿ 1 ರಿಂದ 8ನೇ ತರಗತಿ ಅಥವಾ 1 ರಿಂದ 10ನೇ ತರಗತಿ ಲಭ್ಯವಿರಬೇಕು. ಕೇವಲ 8 ರಿಂದ 10ನೇ ತರಗತಿಯ ಶಾಲೆಗಳನ್ನು ಆಯ್ಕೆ ಮಾಡುವಂತಿಲ್ಲ.
  • ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆ.ಪಿ.ಎಸ್) ನ್ನು ಆಯ್ಕೆ ಮಾಡುವಂತಿಲ್ಲ.
  • ಶಾಲೆ ನಡೆಸಲು ಅಗತ್ಯ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಹೊಂದಿರಬೇಕು.
  • ಭವಿಷ್ಯದಲ್ಲಿ ತರಗತಿಗಳನ್ನು ವಿಸ್ತರಿಸಬೇಕಾದಲ್ಲಿ ಸ್ಥಳದ ಲಭ್ಯತೆ ಇರುವಂತಹ ಶಾಲೆಗಳನ್ನು ಆಯ್ಕೆ ಮಾಡುವುದು.

ಈ ಎಲ್ಲಾ ಮಾನದಂಡಗಳನ್ನು ಹೊಂದಿರುವಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 6 ಶಾಲೆಗಳನ್ನು ಆಯ್ಕೆ
ಮಾಡುವುದು. ಈಗಾಗಲೇ ಪಟ್ಟಿಯಲ್ಲಿ ಸೇರಿಸಿಲ್ಲದ ಮತ್ತು ಮೇಲಿನ ಎಲ್ಲಾ ಮಾನದಂಡಗಳನ್ನು ಹೊಂದಿರುವಂತಹ
ಶಾಲೆಗಳಿದ್ದಲ್ಲಿ ಶಾಲೆಗಳನ್ನು ಪಟ್ಟಿಗೆ ಮತ್ತೊಮ್ಮೆ ಸೇರಿಸಲು ಅವಕಾಶವಿರುತ್ತದೆ. ಆಯ್ಕೆ ಮಾಡಿದ ಶಾಲೆಗಳಿಗೆ
ಹೆಚ್ಚುವರಿಯಾಗಿ ಅವಶ್ಯವಿರುವ ಶಿಕ್ಷಕರು, ಬೇಕಾಗಿರುವ ಮೂಲಭೂತ ಸೌಕರ್ಯ, ಗುಣಮಟ್ಟ ಶಿಕ್ಷಣಕ್ಕಾಗಿ ಬೇಕಾಗಿರುವ
ಇತರ ಸೌಕರ್ಯಗಳಿಗೆ ಆಗಬಹುದಾದ ಅಂದಾಜು ವೆಚ್ಚದ ಮಾಹಿತಿಯನ್ನು ಸಹ ನೀಡುವುದು. ಗೂಗಲ್ ಶೀಟ್‌ನ್ನು
(ಮೇಲಿನ ಲಿಂಕ್) ಬಳಸಿ, ಆದ್ಯತೆಯಲ್ಲಿ ಆಯ್ಕೆಯಾಗುವ ಶಾಲೆಗಳ ಪಟ್ಟಿಯನ್ನು ಮಾತ್ರ ಉಳಿಸಿಕೊಂಡು ಉಳಿದ
ಶಾಲೆಗಳನ್ನು ಪಟ್ಟಿಯಿಂದ ಕೈ ಬಿಡುವುದು. ಈ ಕಾರ್ಯವು ತುರ್ತು ಇರುವುದರಿಂದ ಮಾಹಿತಿಯನ್ನು ದಿನಾಂಕ: 08-07-
2022ರೊಳಗೆ
ನೀಡಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದಿನಾಂಕ 02/07/22

IMG 20220703 WA0025

Sharing Is Caring:

Leave a Comment