ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಿವೃತ್ತರಾದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ ಗುರುಭ್ಯೋ ನಮಃ

ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ

ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

IMG 20230831 WA0044

ಶ್ರೀಮತಿ ಶಾರದಾ
ಮುಖ್ಯ ಶಿಕ್ಷಕರು
ದ.ಕ.ಜಿ.ಪಂ.ಉ.ಪ್ರಾ.ಶಾಲೆ ಬದನಾಜೆ ಉಜಿರೆ ಗ್ರಾಮ ಬೆಳ್ತಂಗಡಿ ತಾಲೂಕು.

ಶ್ರೀ ಡಿ.ವಿ.ಮಂಜ ಹಾಗೂ ಶ್ರೀಮತಿ ಕುಂಞಮ್ಮ ದಂಪತಿಗಳ ಸುಪುತ್ರಿಯಾಗಿ ದಿನಾಂಕ 05.08.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸಂತ ಜಾನ್ ರ ಚರ್ಚ್ ಶಾಲೆ ಕೊಕ್ಕಡ ಹಾಗೂ ಪ್ರೌಢ ಶಿಕ್ಷಣವನ್ನು ಸಂತ ತೆರೆಸಾ ಪ್ರೌಢ ಶಾಲೆ ಬೆಳ್ತಂಗಡಿಯಲ್ಲಿ ಪೂರೈಸಿದ ಇವರು 1984 ರಲ್ಲಿ ಸ.ಕಿ.ಪ್ರಾ.ಶಾಲೆ ಕೂಕ್ರಬೆಟ್ಟು ನಂತರ ಸ.ಹಿ.ಪ್ರಾ.ಶಾಲೆ ಬನ್ನೆಂಗಳ ಇಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿದ ಇವರ ಸೇವೆಯನ್ನು 1991 ರಲ್ಲಿ ಸರಕಾರ ಖಾಯಂಗೊಳಿಸಿದ ನಂತರ ಸಹ ಶಿಕ್ಷಕಿಯಾಗಿ ಸ.ಹಿ.ಪ್ರಾ.ಶಾಲೆ ಬನ್ನೆಂಗಳ ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 25.02.2004 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ದಿನಾಂಕ 11.08.2016 ರವರೆಗೆ ಸೇವೆ ಸಲ್ಲಿಸಿ ನಂತರ ಸ.ಉ.ಹಿ.ಪ್ರಾ.ಶಾಲೆ ಬದನಾಜೆ ಇಲ್ಲಿಗೆ ಪದವೀಧರೇತರ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230831 WA0043

ಶ್ರೀಮತಿ ಯಮುನಾ
ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕರಿಕಳ
ಸುಳ್ಯ ತಾಲೂಕು

ಶ್ರೀಮತಿ ಕಮಲ ಮತ್ತು ಬೆಳಿಯಪ್ಪ ಗೌಡರ ಪುತ್ರಿ ಯಾಗಿ ಕಲ್ಮಡ್ಕ ಗ್ರಾಮದ ಹಾಲು ಗದ್ದೆ ಎಂಬಲ್ಲಿ 01/09/1963ರಲ್ಲಿ ಜನನ. ತನ್ನ ಪ್ರಾಥಮಿಕ ಶಿಕ್ಷಣವನ್ನು ಕಲ್ಮಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ವಿದ್ಯಾ ಬೋಧಿ ನೀ ಹೈ ಸ್ಕೂಲ್ ಬಾಳಿಲ, ಟಿಸಿಹೆಚ್ ತರಬೇತಿಯನ್ನು ಶಿಕ್ಷಕ್ರಾ ತರಬೇತಿ ಸಂಸ್ಥೆ ಬಲ್ಮಠ ಮಂಗಳೂರು ಇಲ್ಲಿ ಪೂರೈಸಿರುತ್ತಾರೆ
21/11/1994ರಲ್ಲಿ ಬೆಳ್ತಂಗಡಿ ತಾಲೂಕಿನ ತುರ್ಕಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇವೆಗೆ ಸೇರಿ ,ತದನಂತರ 1995 ರಿಂದ 2004ರ ತನಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಾಂಡಿಗದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ, 2004 ರಿಂದ 2015ರ ತನಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಮಡ್ಕ ಶಾಲೆಯಲ್ಲಿ ಸೇವೆ ಸಲ್ಲಿಸಿ, 2015 ರಿಂದ 2023ರ ಆಗಸ್ಟ್ 31ರ ತನಕ ಕರಿಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿರುತ್ತೀರಿ. ಸುಧೀರ್ಘ 28 ವರ್ಷ 11 ತಿಂಗಳು ಸೇವಾ ಅವಧಿ ಪೂರೈಸಿ 31 8 2023 ರಂದು ನಿವೃತ್ತಿ ಹೊಂದಿರುತ್ತೀರಿ. ನಿಮ್ಮ ಸೇವಾ ಅವಧಿಯಲ್ಲಿ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುತ್ತೀರಿ .ನಿಮ್ಮ ನಿವೃತ್ತ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುತ್ತೇವೆ.

IMG 20230831 WA0045

ಶ್ರೀಮತಿ ಶೋಭಾ ಪಿ.ಕೆ
ದ.ಕ.ಜಿ.ಪಂ.ಉ.ಪ್ರಾ.ಶಾಲೆ ಮಂಕುಡೆ ಬಂಟ್ವಾಳ ತಾಲೂಕು.

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪಡಾರು ಶ್ರೀ ಕೃಷ್ಣ ಭಟ್ ಹಾಗೂ ಶ್ರೀಮತಿ ಪಿ.ಕೆ ಸುಶೀಲಾ ದಂಪತಿಗಳ ಪುತ್ರಿಯಾಗಿ ದಿನಾಂಕ 05.08.1963 ರಲ್ಲಿ ಜನಿಸಿದ ಇವರು ದಿನಾಂಕ 26.03.1990 ರಲ್ಲಿ ಸ.ಕಿ.ಪ್ರಾ.ಶಾಲೆ ವಿದ್ಯಾಗಿರಿ ಕಡಂದಲೆ ಮೂಡುಬಿದಿರೆ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ದಿನಾಂಕ 17.08.1992 ರವರೆಗೆ ಸೇವೆ ಸಲ್ಲಿಸಿ ನಂತರ ಸಜಿಪ ನಡು ಶಾಲೆಯಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಕೊಡಂಗಾಯಿ ಶಾಲೆಗೆ ವರ್ಗಾವಣೆ ಗೊಂಡು ಇಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 03.06.2019 ರಲ್ಲಿ ಅನಿಲಕಟ್ಟೆ ಶಾಲೆಗೆ ವರ್ಗಾವಣೆ ಗೊಂಡು ಇಲ್ಲಿ 3 ವರ್ಷ ಸೇವೆ ಸಲ್ಲಿಸಿ ದಿನಾಂಕ 06.05.2022 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸ.ಉ.ಹಿ.ಪ್ರಾ.ಶಾಲೆ ಮಂಕುಡೆ ಬಂಟ್ವಾಳ ತಾಲೂಕು ಇಲ್ಲಿ ಸೇವೆ ಸಲ್ಲಿಸಿದ ಇವರು 2003-2004 ನೇ ಸಾಲಿನಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಹಾಗೂ 1992 ರಿಂದ ಭಾರತ ಸೇವಾದಳ ತರಬೇತಿ ಪಡೆದು ಶಾಲೆಗಳಲ್ಲಿ ಸೇವಾದಳವನ್ನು ತೆರೆದು ಸಕ್ರಿಯವಾಗಿ ಉತ್ತಮವಾಗಿ ನಡೆಸಿಕೊಂಡು ಮಕ್ಕಳಲ್ಲಿ ಉನ್ನತ ದೇಶಾಭಿಮಾನ ಮೂಡಿಸಿದ ಇವರಿಗೆ ಈ ಉನ್ನತ ಸೇವೆಗಾಗಿ ಉತ್ತಮ ಶಾಖಾನಾಯಕಿ ಎಂದು ಗುರುತಿಸಿ ಸೇವಾದಳದಲ್ಲಿ ಸನ್ಮಾನ ಸ್ವೀಕರಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230831 WA0046

ಶ್ರೀಮತಿ ಜೆ ಜಯಲಕ್ಷ್ಮಿ
ದ.ಕ.ಜಿ.ಪಂ.ಉ.ಪ್ರಾ ಶಾಲೆ ಪಂಜಿಮೊಗರು ಮಂಗಳೂರು ಉತ್ತರ

29.8.1963 ರಲ್ಲಿ ಜನಿಸಿದ ಇವರು 08.07.1985 ರಲ್ಲಿ ಸೇವೆಗೆ ಸೇರಿ ತಮ್ಮ 38 ವರ್ಷಗಳ ಸುದೀರ್ಘ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

ಶಿಕ್ಷಕರ ಹೆಸರು : ಶ್ರೀ ಮತಿ ಲೀಲಾವತಿ

ಶಾಲೆ : ಸ.ಹಿ.ಪ್ರಾ.ಶಾಲೆ ಕಲ್ಮಂಜ

ನರಿಂಗಾನ ಗ್ರಾಮ ಜನನ ದಿನಾಂಕ: 27/08/1963 ಸ್ಥಳ: ಬ್ರಹ್ಮಾವರ (ಜಾಂತಾರು ಗ್ರಾಮ)ವಿದ್ಯಾರ್ಹತೆ: puc Tchಪ್ರಾಥಮಿಕ ದಿಂದ ಫ್ರೌಡ ವಿದ್ಯಾ ಭ್ಯಾಸ :ನಿರ್ಮಲ ಗರ್ಲ್ಸ್ ಹೈಸ್ಕೂಲು ಬ್ರಹ್ಮಾವರ PUC :- SMS ಜೂನಿಯರ್ ಕಾಲೇಜು ಬ್ರಹ್ಮಾವರTCH: ಹೆಣ್ಮಕ್ಕಳ ಸರಕಾರಿ ಮಾಧ್ಯಮಿಕ ಮತ್ತು ಶಿಕ್ಷಕ ತರಬೇತಿ ಸಂಸ್ಥೆ ಉಡುಪಿಸೇವೆಗೆ ಸೇರಿದ ದಿನಾಂಕ : 13/09/1993ಸಹಶಿಕ್ಷಕಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೀಕಣೆ ತೆಂಕಮಿಜಾರು ಗ್ರಾಮ ಮೂಡಬಿದಿರೆ (ತಾ) ವರ್ಗಾವಣೆ ಗೊಂಡು 06/08/1998 ರಿಂದ 31/08/2023 ರವರೆಗೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜ ಒಟ್ಟು 30 ವರ್ಷಗಳ ಸೇವೆ ಸದಾ ಚಟುವಟಿಕೆಯಿಂದ ಇದ್ದು ಸಹೋದ್ಯೋಗಿಗಳಲ್ಲಿ ಪೋಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮೀಯತೆಯನ್ನು ಹೊಂದಿರುವ ಶಿಕ್ಷಕಿಯಾಗಿದ್ದಾರೆ

ನಿರಂತರ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಗೌರವದ ಸ್ಥಾನ ಪಡೆದ ತಮ್ಮೆಲ್ಲರ ನಿವೃತ್ತ ಜೀವನ ಸುಖಮಯವಾಗಿರಲಿ ದೇವರು ಆಯುರಾರೋಗ್ಯ, ಐಶ್ವರ್ಯ, ನೆಮ್ಮದಿ ಕರುಣಿಸಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.

Sharing Is Caring:

Leave a Comment