ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಳ್ಳಿಗೆ ಸುಖವಿಲ್ಲ – ಬೆಳಕು 3

ಬೆಳಕು

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಳ್ಳಿಗೆ ಸುಖವಿಲ್ಲ

ನಾವು ಯುಗಗಳ ಬಗ್ಗೆ ಓದಿದ್ದೇವೆ.ಅದು ದ್ವಾಪರ ಯುಗ ಆಗಿರಬಹುದು,ತ್ರೇತಾಯುಗವಾಗಿರಬಹುದು,ಕೊನೆಯದಾಗಿ ಕಲಿಯುಗ.ಅಂದ್ರೆ ಕಲ್ಕಿ ಇಲ್ಲಿ ಅಧಿಪತಿ. ಇಲ್ಲಿ ಸತ್ಯಕ್ಕೆ ಬೆಲೆಯಿಲ್ಲ‌.ಹಾಗಾಂತ ಇಲ್ಲವೇ ಇಲ್ವ ಇದೆ,ಸುಳ್ಳು ಸ್ವಲ್ಪ ವಿಜ್ರಂಭಿಸಿ ಮತ್ತೆ ನಿಧಾನವಾಗಿ ಸೋಲುತ್ತಾ ಬರುತ್ತದೆ.ನಾವು ಕಥೆಯಲ್ಲಿ ಓದುವ ಎಲ್ಲಾ ಘಟನೆಗಳನ್ನು ಗಮನಿಸುವ,ಅಲ್ಲಿ ಎರಡು ಪಂಗಡಗಳು ಎದ್ದು ಕಾಣುತ್ತವೆ.ಒಂದು ಸತ್ಯದ ಕಡೆಯ ಪಂಗಡ,ಇನ್ನೊಂದು ಸುಳ್ಳು,ಕಪಟ,ಅನ್ಯಾಯ, ವಂಚನೆ, ಮೋಸ,ಪಿತೂರಿ,ಅನಾಗರಿಕತೆ ಗಳ ಪಂಗಡ.ಇವೆರಡರಲ್ಲಿ ಅನ್ಯಾಯದ ಕಡೆಗೆ ಜನ ಬಲ,ಬೆಂಬಲ ಜಾಸ್ತಿ,ಅಲ್ಲಿ ನ್ಯಾಯವನ್ನು ಅಪಹಾಸ್ಯ ಮಾಡಲಾಗುತ್ತದೆ. ನ್ಯಾಯದ ಬಗ್ಗೆ ಮಾತನಾಡುವವರ ಸ್ವರ ಕ್ಷೀಣವಾಗುತ್ತದೆ.ಅನ್ಯಾಯದ ಅಟ್ಟಹಾಸ ಮೇರೆಮೀರುತ್ತದೆ.ಅಲ್ಲಿ ನ್ಯಾಯವಂತರು ತಲೆ ತಗ್ಗಿಸಲೇ ಬೇಕಾಗುತ್ತದೆ.ಆದರೆ ಅದು ಕ್ಷಣಿಕ. ವೀರಾಧಿವೀರರಾದ ಪಾಂಡವರೆದುರಿಗೇ ದ್ರೌಪದಿಗೆ ಅವಮಾನವಾಗುತ್ತದೆ,ಆದರೆ ಅದೇ ಘಟನೆ ಶತ್ರುಗಳ ಸರ್ವನಾಶಕ್ಕೆ ಕಾರಣವಾಗುತ್ತದೆ.

ಹಾಗೇಯೇ ಇಂದಿನ ಕಾಲದಲ್ಲಿ ಕೆಲವು ಅಹಿತಕರ ಘಟನೆಗಳು, ನ್ಯಾಯದ ಪರ ಮಾತನಾಡುವವರ ಪಂಗಡದಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಇರುತ್ತಾರೆ,ಅವರು ಎಷ್ಟು ವಾದಿಸಿದರೂ ಅದು ಅರಣ್ಯರೋಧನವಾಗುತ್ತದೆಯೇ ಹೊರತು ಅದಕ್ಕೆ ತೂಕ ಬರುವುದಿಲ್ಲ.
ಅದೇ ರೀತಿ ಇಂದು ವಿಶ್ವದಲ್ಲಿ ದೇಶ ,ದೇಶಗಳ ನಡುವೆ ಶೀತಲ ಸಮರ ಆಗುತ್ತಲೇ ಇರುತ್ತದೆ.ದುಷ್ಟ ಶಕ್ತಿಗಳು,ಅಂದರೆ ಭಯೋತ್ಪಾದನೆ, ಅರಾಜಕತೆ, ಧರ್ಮಾಂಧತೆ.ಹೀಗೆ ಹಲವು ದೇಶಗಳು ಒಂದೆಡೆಯಾದರೆ,ನ್ಯಾಯದ ಮಾರ್ಗದಲ್ಲಿ ,ನಾವೆಲ್ಲರೂ ಒಂದೇ ,ಅಹಿಂಸೆಯೇ ನಮ್ಮ ಪರಮೋಚ್ಚ ಧ್ಯೇಯ ಎಂದು ಭಾವಿಸುವ ರಾಷ್ಟ್ರಗಳ ಸಂಖ್ಯೆ ಕಡಿಮೆ.
ಆದರೆ ಕೊನೆಗೆ ಗೆಲ್ಲುವುದು ಸತ್ಯ.


ಆದ್ದರಿಂದ ನಾವು ಮನುಷ್ಯರು,ಬುದ್ದಿ ಜೀವಿಗಳು,ಪರಸ್ಪರ ಸಹಕಾರ, ಸಹಭಾಗಿತ್ವ, ಸಹಬಾಳ್ವೆ, ಹೊಂದಾಣಿಕೆ, ಹೃದಯವಂತಿಕೆ,ಪ್ರೀತಿಯಿಂದ ಬಾಳಬೇಕು.
ನಾನು,ನನ್ನದು,ನನ್ನಿಂದ, ನಾನೇ ಎನ್ನುವ ಅಹ೦,ಎಲ್ಲವೂ ನನಗೇ ಬೇಕು,ನಾನು ಹೇಳಿದ್ದೇ ಆಗ್ಬೇಕು,ಬೇರೆ ಯಾರು ಮುಂದೆ ಹೋಗ್ಬಾರದು ಎನ್ನುವ ಕುಬ್ಜ ಮನಸ್ಸಿನ, ಧಿಮಾಕು ,ಕೊಬ್ಬು ಹೊಂದಿರುವ,ಹೇಸಿಗೆಯೇ ಆಹಾರ ಎಂದು ಭಾವಿಸುವವರು ಇರುವ ಈ ಸಮಾಜದಲ್ಲಿ ನ್ಯಾಯಕ್ಕೆ ಜಯ ಸಿಗುವಾಗ ಸ್ವಲ್ಪ ತಡವಾಗಬಹುದು,ಆದರೆ ಸಿಗುವುದು,ಅಥವಾ ಗೆಲ್ಲುವುದು ಗ್ಯಾರಂಟಿ. ಒಂದು ದೀಪ ಆರುವ ಮುನ್ನ ಒಮ್ಮೆ ಜೋರು ಉರಿಯುತ್ತದೆ.ಹಾಗೇಯೇ ಅನ್ಯಾಯ ಕೂಡ,ಹಾಗೆಯೇ ಸುಳ್ಳು ಕೂಡ.
ಆದರೆ ಎಲ್ಲಿಯಾದರೂ ನ್ಯಾಯಯತವಾಗಿ ಹೋರಾಡುವವರು ರೊಚ್ಚಿಗೆದ್ದರೆ ಅದನ್ನು ಹತೋಟಿಗೆ ತರುವುದು ಸುಲಭವಲ್ಲ.ಉದಾಹರಣೆಗೆ ಶ್ರೀಲಂಕಾವನ್ನು ತೆಕೊಳ್ಳುವ ಅಲ್ಲಿಯ ಜನ ದೇಶದ ಆಡಳಿತವನ್ನು ಬಹಳ ತಾಳ್ಮೆಯಿಂದ ಸಹಿಸಿಕೊಂಡು ಹೋದರು.ದುರಾಡಳಿತ ಮಿತಿ ಮೀರಿದಾಗ ಜನರು ತಮ್ಮ ಸಹನೆಯನ್ನು ಕಳೆದುಕೊಂಡರು. ರಾಜಭವನದೊಳಗೆ ನುಗ್ಗಿ ಧ್ವಂಸ ಮಾಡಿದರು.ಅದೇ ರೀತಿಯಲ್ಲಿ ಮೊನ್ನೆ ಚೆನೈಯಿಯಲ್ಲಿ ಒಂದು ಕಾಲೇಜು ವಿರುದ್ಧ ಜನರ ಆಕ್ರೋಶ ಮಿತಿ ಮೀರಿ ಕಾಲೇಜನ್ನೇ ಹುಡಿ ಹುಡಿ ಮಾಡಿದರು.ಆದುದರಿಂದ ನಮಗೆ ಶಕ್ತಿಯಿದೆ,ಬೆಂಬಲವಿದೆ,ಅಧಿಕಾರದ ಅನುಭವವಿದೆ,ಎಂದುಕೊಂಡು ವೈಭಿಚಾರ ಮಾಡಲು ಹೊರಟ್ರೆ ಜನ,ಸಮಾಜ ಬುದ್ದಿ ಕಲಿಸುತ್ತಾರೆ.ಜನರ ತಾಳ್ಮೆ,ಆಕ್ರೋಶವನ್ನು ಪರೀಕ್ಷೆ ಮಾಡಬಾರದು.
ತಾನು ಒಮ್ಮೆ ಅಧಿಕಾರವನ್ನು ಪಡೆದು,ಅದನ್ನು ಅನುಭವಿಸಿದ ನಂತರ ಇನ್ನೊಬ್ಬರಿಗೆ ಬಿಟ್ಟುಕೊಡಬೇಕು.ಇದು ರಾಜ ಧರ್ಮ.ಅದು ಬಿಟ್ಟು ಮತ್ತೂ ನನಗೇ ಬೇಕು ಎನ್ನುವ ಮೊಂಡುತನ ಯಾರಿಗೂ ಶೋಭೆಯನ್ನು ತರುವುದಿಲ್ಲ.ಅದಕ್ಕೆ ಶ್ರೀಕೃಷ್ಣ ಪರಮಾತ್ಮ ಹೇಳಿದ್ದು,’ಸತ್ಯ ಮೇವ ಜಯತೇ’ಎಂದು.ಸತ್ಯಕ್ಕೆ ಸಾವಿಲ್ಲ ,ಸುಳ್ಳಿಗೆ ಸುಖವಿಲ್ಲ.
ಇದು ಎಲ್ಲಾ ರಂಗಗಳಿಗೂ ಅನ್ವಯವಾಗುತ್ತದೆ. ಮನುಷ್ಯ ಮನುಷ್ಯನಾಗಿಯೇ ಇರಬೇಕು ಹೊರತು ,ಮಂದಿ’ಯಾಗಬಾರದು.
✍️ಬಿಕೆ ಸವಣೂರು.

IMG 20221207 WA0012
ಶ್ರೀ ಬಾಲಕೃಷ್ಣ ಸವಣೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383

Sharing Is Caring:

Leave a Comment