---Advertisement---

ಸರ್ಕಾರಿ ಶಾಲೆಗಳಲ್ಲಿ ಎಸ್‌ಡಿಎಂಸಿ ಸಭೆಗಳ ನಿರ್ವಹಣೆಗೆ ₹13.63 ಕೋಟಿ ಅನುದಾನ ಬಿಡುಗಡೆ

By kspstadk.com

Published On:

Follow Us
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 2026-27ನೇ ಸಾಲಿನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸಭೆಗಳನ್ನು ವ್ಯವಸ್ಥಿತವಾಗಿ ನಡೆಸಲು ಸಮಗ್ರ ಶಿಕ್ಷಣ ಕರ್ನಾಟಕವು ₹13.63 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ರಾಜ್ಯದ ಒಟ್ಟು 45,466 ಸರ್ಕಾರಿ ಶಾಲೆಗಳಲ್ಲಿ ಎಸ್‌ಡಿಎಂಸಿ ಸಭೆಗಳನ್ನು ಆಯೋಜಿಸಲು ಹಾಗೂ ಅಗತ್ಯ ದಾಖಲೀಕರಣಕ್ಕಾಗಿ ಪ್ರತಿ ಶಾಲೆಗೆ ವಾರ್ಷಿಕ ₹3,000ರಂತೆ ಒಟ್ಟು ₹1,363.98 ಲಕ್ಷ (₹13.63 ಕೋಟಿ) ಅನುದಾನವನ್ನು ಅನುಮೋದಿಸಲಾಗಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರತಿ ಶಾಲೆಯಲ್ಲಿ ಒಟ್ಟು ನಾಲ್ಕು ಸಭೆಗಳನ್ನು ನಡೆಸಬೇಕಾಗಿದ್ದು, ಮೊದಲ ಕಂತಿನಲ್ಲಿ ಎರಡು ಸಭೆಗಳಿಗೆ ತಲಾ ₹500ರಂತೆ ಒಟ್ಟು ₹1,000 ಹಣವನ್ನು ಎಸ್‌ಡಿಎಂಸಿ ಹೊಂದಿರುವ ಎಲ್ಲಾ ಶಾಲೆಗಳಿಗೆ ಬಿಡುಗಡೆ ಮಾಡಲಾಗಿದೆ.

ಮೊದಲನೇ ಎಸ್‌ಡಿಎಂಸಿ ಸಭೆಯನ್ನು ನವೆಂಬರ್ 16ರಿಂದ 23ರವರೆಗೆ ನಡೆಸಲು ಸೂಚಿಸಲಾಗಿದೆ. ಸಭೆಯಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ದಿನಾಚರಣೆಯ ಮಹತ್ವ, ನವೆಂಬರ್ 26ರ ಸಂವಿಧಾನ ದಿನಾಚರಣೆ, ಸಂವಿಧಾನದ ಆಶಯಗಳು, ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಕೊಡುಗೆಗಳ ಕುರಿತು ಚರ್ಚಿಸಬೇಕಿದೆ. ಜೊತೆಗೆ ಮಾಸಿಕ ಕಲಿಕಾಫಲ ಆಧಾರಿತ CCE ಚಟುವಟಿಕೆಗಳ ಅನುಷ್ಠಾನ ಹಾಗೂ ರಾಜ್ಯದ 590 ಪಿಎಂ ಶ್ರೀ (PM SHRI) ಶಾಲೆಗಳ ಭೌತಿಕ ಮತ್ತು ಶೈಕ್ಷಣಿಕ ಸೌಲಭ್ಯಗಳ ಅಭಿವೃದ್ಧಿ ಕುರಿತು ಚರ್ಚಿಸಲು ಸೂಚಿಸಲಾಗಿದೆ.

ಎರಡನೇ ಸಭೆಯನ್ನು ಡಿಸೆಂಬರ್ 14ರಿಂದ 19ರವರೆಗೆ ನಡೆಸಬೇಕಿದೆ. ಮೊದಲ ಸಭೆಯ ನಿರ್ಣಯಗಳ ಅನುಷ್ಠಾನದ ಪರಿಶೀಲನೆ, FA-3 ರೂಪಣಾತ್ಮಕ ಮೌಲ್ಯಮಾಪನ, SATSನಲ್ಲಿ ಅಂಕಗಳ ದಾಖಲಾತಿ, ಶಾಲಾ ವಾರ್ಷಿಕೋತ್ಸವ ಹಾಗೂ ಶೈಕ್ಷಣಿಕ ಪ್ರವಾಸಗಳ ಆಯೋಜನೆ ಕುರಿತು ಚರ್ಚಿಸಿ ಅನುಮೋದನೆ ಪಡೆಯಬೇಕು. ಅಲ್ಲದೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳ ಅಂತಿಮ ಸಿದ್ಧತೆಯ ಬಗ್ಗೆಯೂ ಅವಲೋಕನ ನಡೆಸಬೇಕಿದೆ.

ಬಿಡುಗಡೆಯಾದ ಅನುದಾನವನ್ನು ಎಸ್‌ಡಿಎಂಸಿ ಸಭೆಗಳಿಗೆ ಅಗತ್ಯವಿರುವ ಸಾಹಿತ್ಯದ ಜೆರಾಕ್ಸ್ ಹಾಗೂ ಸಭೆಯಲ್ಲಿ ಭಾಗವಹಿಸುವವರಿಗೆ ಟೀ, ಕಾಫಿ ಮತ್ತು ತಿಂಡಿ ವ್ಯವಸ್ಥೆ ಮಾಡಲು ಬಳಸಿಕೊಳ್ಳಲು ಸೂಚಿಸಲಾಗಿದೆ. ಪ್ರತಿಯೊಂದು ಸಭೆಯ ಛಾಯಾಚಿತ್ರಗಳು ಮತ್ತು ವರದಿಯನ್ನು ssksdmc@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ಶಾಲೆಗಳಿಂದ ಉಪಯೋಗಿತ ಪ್ರಮಾಣಪತ್ರಗಳನ್ನು ಕ್ರೋಢೀಕರಿಸಿ ಕಡ್ಡಾಯವಾಗಿ ಮಾರ್ಚ್ 31, 2027ರೊಳಗೆ ರಾಜ್ಯ ಕಚೇರಿಗೆ ಸಲ್ಲಿಸಬೇಕೆಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Google Drive File

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment