ಪ್ರಶಸ್ತ್ 2.0 ಆಪ್ ಮೂಲಕ CWSN / ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಲು (Part-1 Screening) ಶಿಕ್ಷಕರು ಅನುಸರಿಸಬೇಕಾದ ಕ್ರಮಗಳು:
🔹 ಹಂತ 1: ಲಾಗಿನ್ ಆಗುವುದು (Teacher Login)
Prashasth 2.0 ಆಪ್ ಓಪನ್ ಮಾಡಿ (Play Store ನಿಂದ ಅಪ್‌ಡೇಟ್ ಮಾಡಿಕೊಳ್ಳಿ).
Teacher ರೋಲ್ ಆಯ್ಕೆಮಾಡಿ Proceed ಕ್ಲಿಕ್ ಮಾಡಿ.
ಶಾಲೆಯ U-DISE Code, ಮೊಬೈಲ್ ಸಂಖ್ಯೆ & ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ (ಅಗತ್ಯವಿದ್ದರೆ Login with OTP ಬಳಸಿ).
Verify Yourself ಪುಟದಲ್ಲಿ ವಿವರ ಪರಿಶೀಲಿಸಿ, ಚೆಕ್‌ಬಾಕ್ಸ್ ಟಿಕ್ ಮಾಡಿ Verify and Confirm ನೀಡಿ.
🔹 ಹಂತ 2: ಸ್ಕ್ರೀನಿಂಗ್ ಪ್ರಿಫರೆನ್ಸ್ (Preference Setup)
Configure Screening Preference ಕ್ಲಿಕ್ ಮಾಡಿ.
ಭಾಷೆಯನ್ನು (Preferred Language) ಆಯ್ಕೆಮಾಡಿ (ಕನ್ನಡ/ಇಂಗ್ಲಿಷ್).
60 ಪ್ರಶ್ನೆಗಳ ಮಾದರಿಯನ್ನು ತಿಳಿಯಲು Download Part 1 Screening Template ಪಿಡಿಎಫ್ ಡೌನ್‌ಲೋಡ್ ಮಾಡಿ ನೋಡಿ.
ನಂತರ Submit and Continue ನೀಡಿ.
🔹 ಹಂತ 3: ಮಕ್ಕಳ ಪಟ್ಟಿ ಪರಿಶೀಲನೆ (Student List)
Part 1 Screening ಕ್ಲಿಕ್ ಮಾಡಿ (HM ನಿಮಗೆ ಅಸೈನ್ ಮಾಡಿದ ತರಗತಿಗಳು ಇಲ್ಲಿರುತ್ತವೆ).
ತರಗತಿ ಆಯ್ಕೆಮಾಡಿದಾಗ ಮಕ್ಕಳ ಪಟ್ಟಿ ಕಾಣಿಸುತ್ತದೆ. ಯು-ಡೈಸ್ ಹಾಗೂ ಶಾಲಾ ಹಾಜರಾತಿಗೆ ಮಕ್ಕಳ ಸಂಖ್ಯೆ ತಾಳೆಯಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ.
🔹 ಹಂತ 4: ಸಿಡಬ್ಲ್ಯೂಎಸ್ಎನ್ ಮಕ್ಕಳನ್ನು ಸ್ಕಿಪ್ ಮಾಡುವುದು (Skip Screening)
ಈಗಾಗಲೇ UDID ಕಾರ್ಡ್ / ವೈದ್ಯಕೀಯ ಪ್ರಮಾಣಪತ್ರ ಹೊಂದಿರುವ CWSN ಮಕ್ಕಳಿದ್ದರೆ:
ಮಗುವಿನ ಹೆಸರಿನ ಮುಂದಿನ 3 ಚುಕ್ಕೆಗಳನ್ನು (Options) ಕ್ಲಿಕ್ ಮಾಡಿ Skip Screening ಆಯ್ಕೆಮಾಡಿ.
ಕಾರಣದಲ್ಲಿ Already Identified as CWSN ಎಂದು ಸೆಲೆಕ್ಟ್ ಮಾಡಿ ಸ್ಕಿಪ್ ಮಾಡಿ.
🔹 ಹಂತ 5: ಕನ್ಸರ್ನ್ ಲಿಸ್ಟ್‌ಗೆ ಸೇರಿಸುವುದು (Move Students)
ವಿದ್ಯಾರ್ಥಿಗಳನ್ನು ಸೆಲೆಕ್ಟ್ ಮಾಡಿ Move Students ಕ್ಲಿಕ್ ಮಾಡಿ:
Student with Concern: 60 ಪ್ರಶ್ನೆಗಳಲ್ಲಿ ಮಗುವಿಗೆ ಯಾವುದಾದರೂ ಒಂದು ಸಮಸ್ಯೆ/ಲಕ್ಷಣ ಅನ್ವಯಿಸುತ್ತದೆ ಎನಿಸಿದರೆ ಈ ಲಿಸ್ಟ್‌ಗೆ ಸೇರಿಸಿ.
Student with No Concern: ಮಗುವಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ, ಎಲ್ಲ 60 ಪ್ರಶ್ನೆಗಳು ಅನ್ವಯಿಸುವುದಿಲ್ಲ ಎನಿಸಿದರೆ ಮಾತ್ರ ಈ ಲಿಸ್ಟ್‌ಗೆ ಸೇರಿಸಿ.
🔹 ಹಂತ 6: ಸ್ಕ್ರೀನಿಂಗ್ ಪೂರ್ಣಗೊಳಿಸುವುದು (Start Screening)
ಮಗುವಿನ ಹೆಸರಿನ ಮುಂದಿರುವ Start Screening ಕ್ಲಿಕ್ ಮಾಡಿ.
ಪ್ರಶ್ನೆಗಳನ್ನು ಓದಿ:
ವರ್ತನೆ/ಸಮಸ್ಯೆ ಕಂಡುಬಂದರೆ Tick (✓) ಮಾಡಿ.
ಅನ್ವಯಿಸದಿದ್ದರೆ Uncheck (ಖಾಲಿ) ಬಿಡಿ.
Next ನೀಡುತ್ತಾ 60 ಪ್ರಶ್ನೆಗಳನ್ನು ಮುಗಿಸಿ.
Preview ಪುಟದಲ್ಲಿ ಪರಿಶೀಲಿಸಿ, ಕೊನೆಯಲ್ಲಿ Submit Screening ಕ್ಲಿಕ್ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಿ.
📌 ಗಮನಿಸಿ: ಮಾಹಿತಿಯನ್ನು ಯು-ಡೈಸ್ ಹಾಗೂ ಶಾಲಾ ದಾಖಲೆಗಳ ಆಧಾರದ ಮೇಲೆ ನಿಖರವಾಗಿ ನಮೂದಿಸಿ.
