ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ
ಹಲವು ವರ್ಷಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ…..
ಶ್ರೀಮತಿ ನಿವೇದಿತಾ ಕೆ
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೊಳ್ವಾರು ಪುತ್ತೂರು ತಾಲೂಕು
ತಂದೆ: ಶ್ರೀ ಕೆ.ಸರ್ವೋತ್ತಮ ಪ್ರಭುತಾಯಿ: ಶ್ರೀಮತಿ ಇಂದಿರಾ ಬಾಯ್ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸರ್ಕಾರಿ ಶಾಲೆ ಹಾರಾಡಿ ಹಾಗೂ ಕೊಂಬೆಟ್ಟುನಲ್ಲಿ ಪೂರೈಸಿ, ಶಿಕ್ಷಕ ತರಬೇತಿಯನ್ನು ಶಿಕ್ಷಕರ ತರಬೇತಿ ಕೇಂದ್ರ ಬಲ್ಮಠ ಮಂಗಳೂರು ಇಲ್ಲಿ ಪಡೆದಿರುವಿರಿ. 12-01-1996ರಂದು ಸ.ಹಿ.ಪ್ರಾ.ಶಾಲೆ ಸಬ್ಬಡ್ಕ ಕೊಳ್ತಿಗೆ ಗ್ರಾಮ ಪುತ್ತೂರು ತಾಲೂಕುನಲ್ಲಿ ಸಹಶಿಕ್ಷಕಿಯಾಗಿ ಶಿಕ್ಷಣ ಇಲಾಖೆಗೆ ಸೇರಿದಿರಿ. ಅಲ್ಲಿಂದ 06-03-2004ರಲ್ಲಿ ವರ್ಗಾವಣೆ ಹೊಂದಿ ಸ.ಹಿ.ಪ್ರಾ.ಶಾಲೆ ಕುಂಬ್ರಕ್ಕೆ ಬಂದಿರಿ.ಅಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ ಅಲ್ಲಿಂದ 06-08-2010ರಂದು ಈ ಶಾಲೆಗೆ ವರ್ಗಾವಣೆ ಪಡೆದು ಇದುವರೆಗೂ 13 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಸುಮಾರು 27 ವರ್ಷಗಳ ಕಾಲದ ವೃತ್ತಿ ಜೀವನಕ್ಕೆ ನಿವೃತ್ತಿಯಾಗುತ್ತಿರುವಿರಿ. ಅಪಾರ ಶಿಷ್ಯ ಬಳಗಕ್ಕೆ ಜ್ಞಾನಾರ್ಜನೆ ಮಾಡಿ ಅವರ ಬಾಳಿಗೆ ಬೆಳಕಾದಿರಿ. ತಮ್ಮ ನಿವೃತ್ತ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು
ಶ್ರೀಮತಿ ಸಾವಿತ್ರಿ ಕೆ
ಸ.ಹಿ. ಪ್ರಾ. ಶಾಲೆ ಸಜಂಕಾಡಿ. ಪುತ್ತೂರು ತಾಲೂಕು ಬೆಳ್ತಂಗಡಿ ತಾಲೂಕು
ಇಳಂತಿಲ ಗ್ರಾಮದ ಕಾಯರ್ಪಾಡಿ ಮನೆಯ ಶ್ರೀಮತಿ ಶಾಂತಾ ಮತ್ತು ಶ್ರೀ ರಾಮಭಟ್ಟರ ಪ್ರಥಮ ಪುತ್ರಿಯಾಗಿ 17/04/64 ರಂದು ಜನನ. ಪ್ರಾಥಮಿಕ ವಿದ್ಯಾಭ್ಯಾಸ: ಸ.ಹಿ.ಪ್ರಾ. ಶಾಲೆ ಕಾಯರ್ಪಾಡಿ. ಪ್ರೌಢಶಿಕ್ಷಣ: ಸ.ಪ್ರೌ.ಶಾಲೆ. ಕೊಂಬೆಟ್ಟು. ಪ.ಪೂ. ಶಿಕ್ಷಣ: ಸ.ಪ.ಪಂ.ಕಾಲೇಜು. ಸುಳ್ಯ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪದವಿ ಮತ್ತು ವಿಶೇಷ ಶಿಕ್ಷಣದಲ್ಲಿ B.Ed. ದಿನಾಂಕ 03/08/1998 ರಂದು ಸ.ಹಿ.ಪ್ರಾಥಮಿಕ ಶಾಲೆ ಕುಂಟಿಕಾನದಲ್ಲಿ ಕರ್ತವ್ಯಕ್ಕೆ ಸೇರ್ಪಡೆ. 13/08/2005 ರಿಂದ ಸುಮಾರು ಏಳು ವರ್ಷಗಳ ಕಾಲ IERT ಯಾಗಿ ಕರ್ತವ್ಯ ನಿರ್ವಹಿಸಿದ್ದೀರಿ. 2012-13 ರಿಂದ ಅನುಕ್ರಮವಾಗಿ ಮೂರು ವರ್ಷಗಳ ಅವಧಿಯಲ್ಲಿ ಸ.ಹಿ.ಪ್ರಾಥಮಿಕ ಶಾಲೆ ಕೊಳ್ತಿಗೆ ಮತ್ತು ನೆಟ್ಟಣಿಗೆ ಮೂಡ್ನೂರಿನಲ್ಲಿ ಕರ್ತವ್ಯ ನಿರ್ವಹಿಸಿ 2018-19 ರಿಂದ ಇದುವರೆಗೆ ಸ.ಹಿ.ಪ್ರಾಥಮಿಕ ಶಾಲೆ ಸಜಂಕಾಡಿಯಲ್ಲಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿಯಾಗುತ್ತಿದ್ದೀರಿ.ತನ್ನ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.
ಶ್ರೀಮತಿ ಪ್ರಶಾಂತ ಕುಮಾರಿ ಕೆ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂರ್ಬಡ್ಕ ಪುತ್ತೂರು ತಾಲೂಕು
ಸೇವೆಗೆ ಸೇರಿದ ದಿನಾಂಕ: 01-12-1999ಸೇವೆಗೆ ಸೇರಿದ ಶಾಲೆ: ಸ.ಹಿ.ಪ್ರಾ.ಶಾಲೆ ಸಾಮೆತ್ತಡ್ಕ ಪುತ್ತೂರು ತಾಲೂಕು ದಿನಾಂಕ:30-09-2019ರಿಂದ ವರ್ಗಾವಣೆ ಹೊಂದಿ ಇದುವರೆಗೆ ಸ.ಕಿ.ಪ್ರಾ.ಶಾಲೆ ಕೊಂರ್ಬಡ್ಕ ಇಲ್ಲಿ ಸೇವೆ ಸಲ್ಲಿಸುತ್ತಿದ್ದೀರಿ.ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ವೃತ್ತಿ ಜೀವನಕ್ಕೆ ನಿವೃತ್ತಿಯಾಗುತ್ತಿರುವಿರಿ. ಅಪಾರ ಶಿಷ್ಯ ಬಳಗಕ್ಕೆ ಜ್ಞಾನಾರ್ಜನೆ ಮಾಡಿ ಅವರ ಬಾಳಿಗೆ ಬೆಳಕಾದಿರಿ. ತಮ್ಮ ನಿವೃತ್ತ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು
.ಶ್ರೀ ಕಿರಣ್ ರಾಜ್
ಮುಖ್ಯಗುರುಗಳುಸರ್ಕಾರಿ ಹೀಗೆ ಪ್ರಾಥಮಿಕ ಶಾಲೆ ತೆಗ್ಗು ಪುತ್ತೂರು ತಾಲೂಕು
ಸೇವೆಗೆ ಸೇರಿದ ವರ್ಷ 1986ಸೇವೆಗೆ ಸೇರಿದ ಶಾಲೆ: ಸ.ಹಿ.ಪ್ರಾ.ಶಾಲೆ ದೂಮಡ್ಕ ವರ್ಗಾವಣೆ ಹೊಂದಿ ಸೇವೆ ಸಲ್ಲಿಸಿದ ಶಾಲೆಗಳು: ದರ್ಬೆತ್ತಡ್ಕ, ಕುರಿಯ ಪುತ್ತೂರು ತಾಲೂಕು. 2002ರಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ವೃತ್ತಿ ಜೀವನಕ್ಕೆ ನಿವೃತ್ತಿಯಾಗುತ್ತಿರುವಿರಿ. ಅಪಾರ ಶಿಷ್ಯ ಬಳಗಕ್ಕೆ ಜ್ಞಾನಾರ್ಜನೆ ಮಾಡಿ ಅವರ ಬಾಳಿಗೆ ಬೆಳಕಾದಿರಿ. ತಮ್ಮ ನಿವೃತ್ತ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ರೇವತಿ ಪಿ
ದೈಹಿಕ ಶಿಕ್ಷಣ ಶಿಕ್ಷಕಿ.ಸ.ಹಿ.ಪ್ರಾ.ಶಾಲೆ ಕಾಣಿಯೂರು.ಕಡಬ
ದಿನಾಂಕ 27.07.1994 ರಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಕೊಯಿಲ ಬಂಟ್ವಾಳ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ನಂತರ ದಿನಾಂಕ 06.02.1996 ರಂದು ಸ.ಹಿ.ಪ್ರಾ.ಶಾಲೆ ಕುದ್ಮಾರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 1 ವರ್ಷ ನಿಯೋಜನೆ ಗೊಂಡು ಸ.ಹಿ.ಪ್ರಾ.ಶಾಲೆ ಬೆಳಂದೂರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕಾಣಿಯೂರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಅನುಸೂಯ ಬಾಯಿ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೋರುಗುಡ್ಡೆ ಮೂಡುಬಿದಿರೆ.1987 ರಲ್ಲಿ ಶ್ರೀ ನಿತ್ಯಾನಂದ ಅನುದಾನಿತ ಹಿ.ಪ್ರಾ.ಶಾಲೆ ಪುಚ್ಚಮೊಗರು ಇಲ್ಲಿ ಸೇವೆಗೆ ಸೇರಿದ ಇವರು ನಂತರ 02.08.1993 ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಒಂಟಿಕಟ್ಟೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ 03.08.1998 ರಲ್ಲಿ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಪುಚ್ಚಮೊಗರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ 01.07.2009 ರಲ್ಲಿ ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಗುತ್ತು ಕರಿಂಜೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ದಿನಾಂಕ 18.05.2022 ರವರೆಗೆ ಸೇವೆ ಸಲ್ಲಿಸಿ ನಂತರ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೋರು ಗುಡ್ಡೆ ಇಲ್ಲಿ 18.05.2022 ರಿಂದ ಇಲ್ಲಿಯವರೆಗೆ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
*ಶ್ರೀಮತಿ ಹೇಮಲತಾ
ಸ.ಕಿ.ಪ್ರಾ.ಶಾಲೆ ಗುಂಡುಕಲ್ಲು ಮೂಡುಬಿದಿರೆ.
1992 ರಲ್ಲಿ ಸ.ಹಿ.ಪ್ರಾ.ಶಾಲೆ ಶಿರ್ಲಾಲು ಕಾರ್ಕಳ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ನಂತರ ವರ್ಗಾವಣೆ ಗೊಂಡು ಸ.ಕಿ.ಪ್ರಾ.ಶಾಲೆ ಮೂಡುಕೋಣಾಜೆ ಮೂಡುಬಿದಿರೆ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಅಳಿಯೂರು ಹಾಗೂ ಸ.ಕಿ.ಪ್ರಾ.ಶಾಲೆ ಗುಂಡುಕಲ್ಲು ಮೂಡುಬಿದಿರೆ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.ಶ್ರೀಮತಿ ಸ
ಶ್ರೀಮತಿ ಸುಶೀಲಾ.ಪಿ.ಜಿ
ಸ.ಮಾ.ಹಿ.ಪ್ರಾ.ಶಾಲೆ ಸುಬ್ರಹ್ಮಣ್ಯ.
ಸುಳ್ಯ ತಾಲೂಕು
ದಿನಾಂಕ 21.01.1986 ರಲ್ಲಿ ಸ.ಹಿ.ಪ್ರಾ.ಶಾಲೆ ತೆಗ್ಗು ಪುತ್ತೂರು ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ಸಹ ಶಿಕ್ಷಕಿಯಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 11.08.2001 ರಿಂದ 2005 ರವರೆಗೆ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಂತರ ದಿನಾಂಕ 05.07.2005 ರಲ್ಲಿ ಸ.ಹಿ.ಪ್ರಾ.ಶಾಲೆ ಕಟ್ಟತ್ತಾರು ಇಲ್ಲಿ ಸೇವೆ ಸಲ್ಲಿಸಿದ ಇವರು ನಂತರ 03.01.2008 ರಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಸುಬ್ರಹ್ಮಣ್ಯ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಬಾಬು ಕೆ
ಸ.ಉ.ಹಿ.ಪ್ರಾ.ಶಾಲೆ ದೊಡ್ಡತೋಟ ಸುಳ್ಯ ತಾಲೂಕು.
ದಿನಾಂಕ 01.06.1963 ರಲ್ಲಿ ಜನಿಸಿದ ಇವರು ದಿನಾಂಕ 16.01.1986 ರಲ್ಲಿ ಸ.ಕಿ.ಪ್ರಾ.ಶಾಲೆ ಪೆರ್ಲ ಬೆಳ್ತಂಗಡಿ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ನಂತರ ದಿನಾಂಕ 18.06.1987 ರಂದು ಸ.ಕಿ.ಪ್ರಾ.ಶಾಲೆ ಕುಟ್ಟಿಕಳ ಬೆಳ್ತಂಗಡಿ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 19.09.1994 ರಂದು ಸ.ಕಿ.ಪ್ರಾ.ಶಾಲೆ ಹಾಸನಡ್ಕ ಸುಳ್ಯ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ನಂತರ ದಿನಾಂಕ 15.10.1999 ರಂದು ಸ.ಹಿ.ಪ್ರಾ.ಶಾಲೆ ಕೋಟೆ ಮುಂಡುಗಾರು ಸುಳ್ಯ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಸ.ಉ.ಹಿ.ಪ್ರಾ.ಶಾಲೆ ಕುಟ್ಟಿಕಳ ಬೆಳ್ತಂಗಡಿ ತಾಲೂಕು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಉ.ಹಿ.ಪ್ರಾ.ಶಾಲೆ ದೇವರಕಾನ ಸುಳ್ಯ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಉ.ಹಿ.ಪ್ರಾ.ಶಾಲೆ ದೊಡ್ಡ ತೋಟ ಸುಳ್ಯ ತಾಲೂಕು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಜಗದೀಶ ಗೌಡ
ಮುಖ್ಯ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಎಡಮಂಗಲ.
ಇವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರೇವತಿ ಎಸ್
ಮುಖ್ಯ ಶಿಕ್ಷಕಿ.
ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಮಠದಬೆಟ್ಟು ಎಂಬಲ್ಲಿ ಶ್ರೀ ವಾಮನ ಮತ್ತು ಶ್ರೀಮತಿ ಅಪ್ಪಿ ದಂಪತಿಗಳ ಪುತ್ರಿಯಾಗಿ ದಿನಾಂಕ 01.06.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಸರಪಾಡಿ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸ್ವಾಮಿ ವಿವೇಕಾನಂದ ಕಾಲೇಜು ಎಡಪದವು ಹಾಗೂ ಶಿಕ್ಷಣ ತರಬೇತಿಯನ್ನು ಮಂಗಳೂರಿನಲ್ಲಿ ಪೂರೈಸಿ, ದಿನಾಂಕ 25.10.1982 ರಲ್ಲಿ ಸ.ಹಿ.ಪ್ರಾ.ಶಾಲೆ ಸರಪಾಡಿಯಲ್ಲಿ ಸಹ ಶಿಕ್ಷಕಿಯಾಗಿ ಸೇವೆಗೆ ಸೇರಿದ ಇವರು ನಂತರ ಪುತ್ತೂರು ತಾಲೂಕಿನ ಬಲ್ಯ ಗ್ರಾಮದ ದೇರಾಜೆ ಶಾಲೆಗೆ ವರ್ಗಾವಣೆ ಗೊಂಡು ಇಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಮಾ.ಹಿ.ಪ್ರಾ.ಶಾಲೆ ಮಾಣಿ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ ಬಿಳಿಯೂರು ಇಲ್ಲಿ ಸೇವೆ ಸಲ್ಲಿಸಿ ನಂತರ ಪದೋನ್ನತಿ ಹೊಂದಿ ಪದವೀಧರೇತರ ಮುಖ್ಯ ಶಿಕ್ಷಕಿಯಾಗಿ ಸ.ಮಾ.ಹಿ.ಪ್ರಾ.ಶಾಲೆ ಮಂಚಿ ಕುಕ್ಕಾಜೆ ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸೆಲಿನ್ ಡಿಸೋಜ
ಸಹ ಶಿಕ್ಷಕಿ.
ದ.ಕ.ಜಿ.ಪಂ.ಉ.ಉರ್ದು. ಸಿ.ಪ್ರಾ.ಶಾಲೆ ಕಾವಳಕಟ್ಟೆ ಕಾವಳಮೂಡೂರು ಗ್ರಾಮ ಬಂಟ್ವಾಳ.
ದಿನಾಂಕ 01.06.1963 ರಲ್ಲಿ ಜನಿಸಿದ ಇವರು ದಿನಾಂಕ 28.11.2003 ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಕ್ಕೂರು ಬೆಟ್ಟಂಪಾಡಿ ಪುತ್ತೂರು ಇಲ್ಲಿ ಸೇವೆಗೆ ಸೇರಿದ ಇವರು ದಿನಾಂಕ 07.10.2016 ರವರೆಗೆ ಸೇವೆ ಸಲ್ಲಿಸಿ ನಂತರ ದಿನಾಂಕ 08.10.2016 ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಾವಳಕಟ್ಟೆ ಕಾವಳಮೂಡೂರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಮಲ್ಲಿಕಾ ಕೆ.ಎಸ್
ಸ.ಹಿ.ಪ್ರಾ ಶಾಲೆ ಪಡಇಬಆಗಇಲಉ
ಬಂಟ್ವಾಳ ತಾಲೂಕು
ಶ್ರೀ ಸುಂದರ ಗೌಡ ಹಾಗೂ ಶ್ರೀಮತಿ ಹೊನ್ನಮ್ಮ.ಎ ಇವರ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ರಾಮಣ್ಣ ಗೌಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕನಕಮಜಲು ಹಾಗೂ ಪ್ರೌಢ ಶಿಕ್ಷಣವನ್ನು ಸೀತಾ ರಾಘವ ಪ್ರೌಢ ಶಾಲೆ ಪೆರ್ನಾಜೆ ಇಲ್ಲಿ ಪೂರೈಸಿ ಶಿಕ್ಷಣ ತರಬೇತಿಯನ್ನು ಸರ್ವೋದಯ ಮಹಿಳಾ ಶಿಕ್ಷಕ ತರಬೇತಿ ಕೇಂದ್ರ ವಿರಾಜಪೇಟೆ ಇಲ್ಲಿ ಪೂರೈಸಿ ದಿನಾಂಕ 03.08.1998 ರಲ್ಲಿ ಕೇಪು ಶಾಲೆಯಲ್ಲಿ ಸೇವೆಗೆ ಸೇರಿದ ಇವರು ನಂತರ ಹೆಚ್ಚುವರಿಯಾಗಿ ವರ್ಗಾವಣೆ ಗೊಂಡುa ಪಡಿಬಾಗಿಲು ಶಾಲೆಯಲ್ಲಿ ಸೇವೆಗೆ ಸೇರಿ ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರಾಧಾ ಕುಮಾರಿ
ಸ.ಉ.ಹಿ.ಪ್ರಾ.ಶಾಲೆ ಕಲ್ಮಂಜ ನರಿಂಗಾನ ಗ್ರಾಮ ಬಂಟ್ವಾಳ
ದಿನಾಂಕ 18.05.1963 ರಲ್ಲಿ ಜನಿಸಿದ ಇವರು, ದಿನಾಂಕ 05.06.1996 ಸೇವೆಗೆ ಸೇರಿದ ಇವರು ಸುಮಾರು 27 ವರ್ಷ 11 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಲಕ್ಷ್ಮೀಕಾಂತ ಆಚಾರ್ಯ
ಸ.ಹಿ.ಪ್ರಾ.ಶಾಲೆ ಶ್ರೀನಿವಾಸ ನಗರ.
ಬಂಟ್ವಾಳ ತಾಲೂಕು
ಶ್ರೀ ಸುಬ್ರಾಯ ಆಚಾರ್ಯ ಹಾಗೂ ಶ್ರೀಮತಿ ಜಯಲಕ್ಷ್ಮಿ ದಂಪತಿಗಳ ಪುತ್ರನಾಗಿ ದಿನಾಂಕ 01.06.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಅಜ್ಜಿಬೆಟ್ಟು ಚೆನ್ನೈತ್ತೋಡಿ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ವಿವೇಕಾನಂದ ಕಾಲೇಜು ಎಡಪದವು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಶಿಕ್ಷಕ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಪೂರೈಸಿ, ದಿನಾಂಕ 13.01.1996 ರಲ್ಲಿ ಓಡಿಲ್ನಾಲ ಬೆಳ್ತಂಗಡಿ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು 4 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಮೂಡುಪಡುಕೋಡಿ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 5 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಅಜ್ಜಿಬೆಟ್ಟು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 17.03.2011 ರಲ್ಲಿ ಸ.ಹಿ.ಪ್ರಾ.ಶಾಲೆ ಶ್ರೀನಿವಾಸ ನಗರ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಮೌರಿಸ್ ಡಿಸೋಜ
ಪಡು ಬೊಂಡಂತಿಲ.
ಸ.ಹಿ.ಪ್ರಾ.ಶಾಲೆ ದಡ್ಡಲಕಾಡು.
ಬಂಟ್ವಾಳ ತಾಲೂಕು
ಇವರು ಸಂತ ಜೋಸೆಫರ ಸ.ಹಿ.ಪ್ರಾ. ಶಾಲೆ ಮೇರಮಜಲು ಹಾಗೂ ರೊಜಾರಿಯೋ ಶಾಲೆ ಮಂಗಳೂರು ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಪೆರ್ಲ ಸ.ಹಿ.ಪ್ರಾ.ಶಾಲೆ ಬಿಯಾಪಾದೆ ಹಾಗೂ ಸ.ಹಿ.ಪ್ರಾ.ಶಾಲೆ ಪಕ್ಕಳಪಾದೆ ಇಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಂತರ ತುಂಬೆ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಸ.ಹಿ.ಪ್ರಾ.ಶಾಲೆ ದಡ್ಡಲಕಾಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಬಿ.ಅಬ್ದುಲ್ ಖಾದರ್
ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಪುದ್ದೋಟು ಬಂಟ್ಟಾಳ ತಾಲೂಕು
ತಂದೆ: ಬಿ.ಎ.ರಹಿಮಾನ್ ಮಾಸ್ಟತಾಯಿ: ವಿ.ಬಿ.ಫಾತಿಮಪತ್ನಿ: ಶಕೀನಮಕ್ಕಳು: ಶಬೀಬ್ ರಹ್ಮಾನ್,ಫಾತಿಮ ಶಬೀಹ ವಿಳಾಸ: ಕೆಳಗಿನಪೇಟೆ,ಬಂಟ್ವಾಳತರಬೇತಿಯ ನಂತರ ನಂದಾವರ ಸ.ಹಿ.ಪ್ರಾ.ಶಾಲೆಯಲ್ಲಿ 8 ವರ್ಷ ಫ್ರೀ.ಸರ್ವಿಸ್1996 ಜನವರಿ 13 ರಂದು ಪುತ್ತೂರು ತಾಲೂಕಿನ ಪಾಣಾಜೆ ಸ.ಮಾ.ಶಾಲೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆ. ನಂತರ ಸಜಿಪ ಮುನ್ನೂರು,ಮಲಾಯಿಬೆಟ್ಟು ಶಾಲೆಯಲ್ಲಿ ಕರ್ತವ್ಯ ನಿರ್ವಹಣೆ ಈತನ್ಮದ್ಯೆ ಅಕ್ಷರ ದಾಸೋಹ ಕಚೇರಿಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿ ಹೆಚ್ಚುವರಿಯ ನಂತರ ನರಿಕೊಂಬು ಶಾಲೆಗೆ ವರ್ಗಾವಣೆ, ಅಲ್ಲದೆ ಒಂದುವರೆ ವರ್ಷ ಸ.ಮೂಡ ಕ್ಲಸ್ಟರಿನ ಸಿ.ಆರ್.ಪಿ.ಯಾಗಿ ನಿಯೋಜನೆಗೊಂಡು ಕಾರ್ಯ ನಿರ್ವಹಣೆ.2019 ಮಾರ್ಚ್ ತಿಂಗಳಲ್ಲಿ ಪಠ್ಯಪುಸ್ತಕ ಮಳಿಗೆಗೆ ನಿಯೋಜನೆ. ನಂತರ ಮಂಚಿಯ ಪುದ್ದೋಟು ಶಾಲೆಗೆ ನಿಯೋಜನೆಗೊಂಡದ್ದು,ಸತತ 4 ವರ್ಷಗಳಿಂದ ಪಠ್ಯಪುಸ್ತಕ ಮತ್ತು ಸಮವಸ್ತ್ರ ಹಂಚಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತೇನೆ.ಸ.ಮುನ್ನೂರು ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕನಾಗಿ ಕರ್ತವ್ಯ ಸಲ್ಲಿಸಿದ ಸಂದರ್ಭದಲ್ಲಿ“ಜನ ಮೆಚ್ಚಿದ ಶಿಕ್ಷಕ” ಪ್ರಶಸ್ತಿ ಲಭಿಸಿದೆ.ನರಿಕೊಂಬು ಶಾಲೆಯಲ್ಲಿ ಒಂದು ವರ್ಷ ಪ್ರಭಾರ ಮುಖ್ಯ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸಲಾಗಿದೆ.2022 ರ ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆಯಂದು “ಇಲಾಖಾ ವಿಶೇಷ ಸೇವಾ ಪ್ರಶಸ್ತಿ” ಲಭಿಸಿರುತ್ತದೆ.
ಶ್ರೀಮತಿ ಶ್ರೀಮತಿ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೈಕಂಪಾಡಿ.
ಮಂಗಳೂರು ಉತ್ತರ
ದಿನಾಂಕ 12.01.1996 ರಲ್ಲಿ ಸ.ಹಿ.ಪ್ರಾ.ಶಾಲೆ ನೀರ್ಕೆರೆ ಮೂಡುಬಿದಿರೆ ವಲಯ ಇಲ್ಲಿ ಸೇವೆಗೆ ಸೇರಿದ ಇವರು ನಂತರ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಶಾಲೆ ಹಂಡೇಲು ಮೂಡುಬಿದಿರೆ ಇಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಶಾಲೆ ಬೊಳ್ಳೂರು ಮಂಗಳೂರು ಉತ್ತರ ಇಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಶಾಲೆ ಬೈಕಂಪಾಡಿ ಮಂಗಳೂರು ಉತ್ತರ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಜಯಲತ ಬೋಳೂರು
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೊಕ್ಕಪಟ್ಟಣ 06
ಮಂಗಳೂರು ಉತ್ತರ
ದಿನಾಂಕ 27.11.1998 ರಲ್ಲಿ ಸೇವೆಗೆ ಸೇರಿದ ಇವರು ಬೋಳಂತೂರು, ಗೋಳ್ತಮಜಲು, ಮೂಡಂಬೈಲು ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಇವರು ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ದುಲ್ಸಿನ್ ಡಿಸೋಜ
ಸ.ಹಿ.ಪ್ರಾ.ಶಾಲೆ ನಡುಗೋಡು
ದಿನಾಂಕ 17.08.1993 ರಲ್ಲಿ ಸೇವೆಗೆ ಸೇರಿದ ಇವರು ಸ.ಕಿ.ಪ್ರಾ.ಶಾಲೆ ಕೊಳಗಟ್ಟ ಹುಣಸೂರು ತಾಲೂಕು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ ಪ್ರಾ.ಶಾಲೆ ಸೇತುವೆ ಹುಣಸೂರು ತಾಲೂಕು ಇಲ್ಲಿ ಸೇವೆ ಸಲ್ಲಿಸಿದ ಇವರು ನಂತರ ವರ್ಗಾವಣೆ ಗೊಂಡು ಸ.ಕಿ.ಪ್ರಾ.ಶಾಲೆ ಕಡಂದಲೆ ಪಿ ಬಿ ಮೂಡುಬಿದಿರೆ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕೆರೆಕಾಡು ಮಂಗಳೂರು ಇಲ್ಲಿ ಸೇವೆ ಸಲ್ಲಿಸಿದ ಇವರು ನಂತರ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಶಾಲೆ ನಡುಗೋಡು ಮಂಗಳೂರು ಉತ್ತರ ವಲಯ ಇಲ್ಲಿ ಸೇವೆ ಸಲ್ಲಿಸಿದ ಇವರು ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ವಸಂತಿ ಪಿ
ದ.ಕ.ಜಿ.ಪಂ.ಕಿ.ಪ್ರಾ.ಶಾಲೆ
ಸೂಟರ್ ಪೇಟೆ ವೆಲೆನ್ಸಿಯ
ಮಂಗಳೂರು ದಕ್ಷಿಣ.
ದಿನಾಂಕ 01.12.1989 ರಲ್ಲಿ ಸೇವೆಗೆ ಸೇರಿದ ಇವರು ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ನಿರಂತರ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಗೌರವದ ಸ್ಥಾನ ಪಡೆದ ತಮ್ಮೆಲ್ಲರ ನಿವೃತ್ತ ಜೀವನವು ಸುಖಮಯವಾಗಿರಲಿ, ದೇವರು ಆಯುರಾರೋಗ್ಯ, ಐಶ್ವರ್ಯ, ನೆಮ್ಮದಿ ಕರುಣಿಸಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.