ವರ್ಗಾವಣೆ ಪ್ರಾರಂಭ ಆಗುತ್ತಿದ್ದು ಶಿಕ್ಷಕರು ಕಡ್ಡಾಯವಾಗಿ EEDS ಪರಿಶೀಲಿಸಿ ತಪ್ಪಿದ್ದಲ್ಲಿ ಕೂಡಲೇ ಸರಿ ಪಡಿಸಿ ಹೆಚ್ಚಿನ ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

ಬಟವಾಡೆ ಅಧಿಕಾರಿಗಳಾದಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಛೇರಿಮುಖ್ಯಸ್ಥರುಗಳಿಗೆ ಈ ಮೂಲಕ ಸೂಚಿಸುವುದೇನೆಂದರೆ ಕರ್ನಾಟಕ ವಿಧಾನ ಸಭಾ ಚುನಾವಣೆಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಶಿಕ್ಷಕರ ವರ್ಗಾವಣೆಗಳನ್ನುಚಾಲನೆಗೊಳಿಸಲಾಗುತ್ತಿದ್ದು ಶಿಕ್ಷಕರ ಇತ್ತೀಚಿನ ಸೇವಾ ವಿವರಗಳನ್ನು ಅವರ ಸೇವಾ ವಹಿಯಂತೆಪರಿಶೀಲಿಸಿ ಇ ಇ ಡಿ ಎಸ್ ತಂತ್ರಾಂಶದಲ್ಲಿ ಇಂದೀಕರಿಸಿ ಅಂತಿಮಗೊಳಿಸಬೇಕಾದ ಅನಿವಾರ್ಯತೆಇರುತ್ತದೆ.

ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಅಂಶಗಳನ್ನೊಳಗೊಂಡ ಶಿಕ್ಷಕರ ಸೇವಾ ವಿವರಗಳನ್ನುಮತ್ತೊಮ್ಮೆ ಪರಿಶೀಲಿಸಿಸೇವಾ ವಿವರಗಳನ್ನು ಇಇಡಿಎಸ್ ತಂತ್ರಾಂಶದಲ್ಲಿಇಂದೀಕರಿಸಲು ಮತ್ತೊಮ್ಮೆ ಸೂಚಿಸಲಾಗಿದೆ.

1. ಶಿಕ್ಷಕರ ಕ್ರಮಬದ್ಧವಾದ ಕೆ ಜಿ ಐ ಡಿ ಸಂಖ್ಯೆ ನಮೂದಾಗಿರುವ ಬಗ್ಗೆ.

2. ಶಿಕ್ಷಕರ ಹೆಸರು ಕ್ರಮಬದ್ಧವಾಗಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿರುವ ಬಗ್ಗೆ

3. ಶಿಕ್ಷಕರ ಜನ್ಮ ದಿನಾಂಕ, ಸೇವೆಗೆ ಸೇರಿದ ದಿನಾಂಕ, ಪ್ರಸ್ತುತ ವೃಂದಕ್ಕೆ ಸೇರಿದ ದಿನಾಂಕ


4. ಶಿಕ್ಷಕರ ಸೇವಾ ವಿವರದಲ್ಲಿ ಯಾವುದೇ ಕಲಂ ಖಾಲಿ ಉಳಿಯಬಾರದು.

5. ಅನುದಾನಿತ ಶಿಕ್ಷಕರನ್ನು ಸರ್ಕಾರಿ ಶಾಲಾ ಶಿಕ್ಷಕರೆಂದು ನಮೂದಾಗಿದ್ದಲ್ಲಿ ಪರಿಶೀಲಿಸಿಸರಿಪಡಿಸಬೇಕು.


6. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲಾ ಶಿಕ್ಷಕರೆಂದು ನಮೂದಾಗಿದ್ದಲ್ಲಿ ಪರಿಶೀಲಿಸಿಸರಿಪಡಿಸಬೇಕು


7ಕಾರ್ಯನಿರ್ವಹಿಸುತ್ತಿರುವ ವಲಯ ( ಎ ಬಿ ಸಿ ಜೋನ್ )ಪರಿಶೀಲಿಸಬೇಕು


8. ಶಿಕ್ಷಕರ ಆದ್ಯತೆಗಳ (EXEMPTION) ಪರಿಶೀಲಿಸಿ ಇಂದೀಕರಣ ಅವಶ್ಯವಿದ್ದಲ್ಲಿಇಂದೀಕರಿಸುವುದು.


9.ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ ಮ್ಯಾಪಿಂಗ್ ಆಗಿರುವ ಬಗ್ಗೆ.


10. ಶಿಕ್ಷಕರ ಬೋಧನಾ ವಿಷಯ ನೇಮಕಾತಿ ಆದೇಶದಂತೆನಮೂದಾಗಿರಬೇಕು,ಖಾಯಂಪೂರ್ವ ಅವಧಿ ಘೋಷಣೆ ಮಾಹಿತಿ ನಮೂದಾಗಿರಬೇಕು ಮತ್ತು SPOUSEDETAILS ನಮೂದಾಗಿರಬೇಕು.


11. ನಿವೃತ್ತಿ ಹೊಂದಿದವರನ್ನು ತಂತ್ರಾಂಶದಿಂದ EXIT ಮಾಡಿರಬೇಕು


12. ಸಸ್ಪೆಂಡ್ ಆಗಿರುವ ಶಿಕ್ಷಕರ ಮಾಹಿತಿಯನ್ನು ಅವರ ಸೇವಾ ವಿವರದಲ್ಲಿ ನಮೂದಿಸಿರಬೇಕು.ಹಾಗೂ ಇನ್ನಿತರ ಪ್ರಮುಖ ಸೇವಾ ವಿವರಗಳನ್ನು ಪರಿಶೀಲಿಸಿ ಇಂದೀಕರಿಸಬೇಕು.

ಆದ್ದರಿಂದ ಇಲಾಖೆಯ ಬಟವಾಡೆ ಅಧಿಕಾರಿಗಳಾದ ಪ್ರೌಢಶಾಲಾ ಮುಖ್ಯೋಪಾಧ್ಯಾಯರುಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ ಕಛೇರಿಗಳ ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ/ಅಧಿಕಾರಿಗಳ ಸೇವಾವಹಿಗಳನ್ನು ಪರಿಶೀಲಿಸಿ ನಿಖರ ಮಾಹಿತಿಗಳನ್ನು ದಿನಾಂಕ:-03/06/2023 ರೊಳಗೆ ಇಇಡಿಎಸ್ ತಂತ್ರಾಂಶದಲ್ಲಿ ಇಂದೀಕರಿಸಿಅಂತಿಮಗೊಳಿಸಿರುವ ಬಗ್ಗೆ ಖುದ್ದು ಪರಿಶೀಲಿಸಿ ಖಚಿತಪಡಿಸಲು ಸೂಚಿಸಿದೆ.

ಮುಂದುವರೆದು ನಿಖರ ಸೇವಾ ವಿವರಗಳನ್ನು ಇಂದೀಕರಿಸದೇ ಮುಂದಿನ ದಿನಗಳಲ್ಲಿವ್ಯತ್ಯಾಸಗಳಾದಲ್ಲಿ ಸಂಬಂದಿಸಿದ ಬಟವಾಡೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು. ಹಾಗೂ ತದನಂತರದಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಬರುವ ಮನವಿಗಳನ್ನುಪರಿಗಣಿಸಲಾಗುವುದಿಲ್ಲ.ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರು ಪರಿಶೀಲನಾ ವರದಿಯನ್ನು ದಿನಾಂಕ:-03/06/2023ರೊಳಗೆ ಈ ಕಛೇರಿಗೆ ಸಲ್ಲಿಸುವಂತೆ ತಿಳಿಸಿದೆ.

ಆತ್ಮೀಯ ಶಿಕ್ಷಕ ಮಿತ್ರರರೇ,*ಇಲ್ಲಿಯವರೆಗೂ ನಮ್ಮ (ಶಿಕ್ಷಕರ) ವರ್ಗಾವಣೆಯು TDS ಮಾಹಿತಿಯ ಆಧಾರದ ಮೇಲೆ ನಡೆಯುತ್ತಿತ್ತು. ಆದರೆ ಇನ್ನುಮುಂದೆ *ಶಿಕ್ಷಣ ಮಿತ್ರ /EEDS* ತಂತ್ರಾಂಶದ ಮೂಲಕ ನಡೆಯಲಿದೆ,ಆದ್ದರಿಂದ ತಮ್ಮ ಸೇವಾ ಮಾಹಿತಿ ಈ ಕೆಳಗಿನ ಹಂತಗಳನ್ನು ಉಪಯೋಗಿಸಿ ಪರಿಶೀಲಿಸಿಕೊಳ್ಳಿ,ತಪ್ಪುಗಳಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಹಂತಗಳು

1) ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಆಗ ಒಂದು ಪುಟ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಮೇಲ್ಬಾಗದಲ್ಲಿ ಇರುವ EEDS ಮೇಲೆ ಕ್ಲಿಕ್ ಮಾಡಿ.

https://sts.karnataka.gov.in/EEDS/login/loadLoginPage.htm

2) ನಂತರ EEDS ಅಲ್ಲಿ User I’d ಮತ್ತು Password ನಿಮ್ಮ ಶಾಲೆಯ SATS ಗೆ ಇರುವುದನ್ನು ಬಳಸಿ, ಶಾಲೆಯ Option ಮೇಲೆ Click ಮಾಡಿ login ಆಗಿ.

3) EEDS ಲಾಗಿನ್ ಆದ ಮೇಲೆ, Employee adding ಅಲ್ಲಿ ನಿಮ್ಮ ಶಾಲೆಯ ಶಿಕ್ಷಕರ ಮತ್ತು ಸಿಬ್ಬಂದಿ ಅವರ ಹೆಸರು ಇದೆಯ ನೋಡಿ.

4) KGID ನಂಬರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸೇವಾ ವಿವರದ ಮಾಹಿತಿಯ ಪುಟ ತೆರೆದುಕೊಳ್ಳುತ್ತದೆ.

5) ನಿಮ್ಮ ಸೇವಾ ಮಾಹಿತಿಯನ್ನು ಏನಾದರೂ ತಿದ್ದುಪಡಿ ಇದ್ದರೆ ಕೂಡಲೇ ನಿಮ್ಮ BEO ಕಾರ್ಯಾಲಯಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ

20230525 093259 0000 min
20230528 194100 0000 min
Useful for teachers2023

Nullam et nibh ac nulla commodo ultricies ac in dui. Mauris mollis leo vel nulla scelerisque lobortis. Nam ultrices dui eget suscipit euismod. Duis id metus condimentum, interdum mauris a, venenatis sapien. Mauris felis libero, ultricies vitae dolor sit amet,

WhatsApp Group Join Now
Telegram Group Join Now
Sharing Is Caring:

Leave a Comment