ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿ – ಅರವಿಂದ ಚೊಕ್ಕಾಡಿ ಅವರ ಬದುಕಿಗಾಗಿ ಶಿಕ್ಷಣ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

IMG 20220305 WA0019 min
ಬದುಕಿಗಾಗಿ ಶಿಕ್ಷಣ

(ಕೃತಿ ಪರಿಚಯ – 8)

ನಮಸ್ತೆ ಸ್ನೇಹಿತರೆ.

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು… ಅಂಕಣದಲ್ಲಿ ಈ ದಿನ
ನಾನು ಪರಿಚಯಿಸಲು ಹೊರಟ ಪುಸ್ತಕದ ಹೆಸರು ಅರವಿಂದ ಚೊಕ್ಕಾಡಿ ಅವರ ಬದುಕಿಗಾಗಿ ಶಿಕ್ಷಣ.

ಬದುಕಿಗಾಗಿ ಶಿಕ್ಷಣ
ಲೇಖಕರು -ಅರವಿಂದ ಚೊಕ್ಕಾಡಿ
ಪ್ರಕಾಶಕರು-ಲೋಹಿಯ ಪ್ರಕಾಶನ ಬಳ್ಳಾರಿ
ಪುಟಗಳು-108
ಬೆಲೆ- ರೂ 40

ನಾವೆಲ್ಲರೂ ಶಿಕ್ಷಣ ಪಡೆದಿದ್ದೇವೆ, ಪಡೆಯುತ್ತಿದ್ದೇವೆ ನಿಜ. ಅದನ್ನು ಕಾರ್ಯಗತಗೊಳಿಸುವಲ್ಲಿ ಎಷ್ಟು ಯಶಸ್ವಿಯಾಗುತ್ತೇವೆ, ಎಲ್ಲಿ ಎಡವುತ್ತಿದ್ದೇವೆ ಎಂಬುದರ ಕುರಿತಾಗಿ ವೈಚಾರಿಕವಾಗಿ ಬರೆದ ಕೃತಿ ಇದಾಗಿದೆ.
ಈ ಪುಸ್ತಕದಲ್ಲಿ ಒಟ್ಟು 12ಪರಿವಿಡಿಗಳಿದ್ದು ಪ್ರತಿಯೊಂದು ಪರಿವಿಡಿಯ ಬರಹಗಳು ಕೂಡ ನಾವು ವೈಚಾರಿಕವಾಗಿ ಯೋಚನೆ ಮಾಡುವಂತೆ ಪ್ರೆರೇಪಿಸುತ್ತದೆ.
ಮೊದಲ ಪರಿವಿಡಿಯ ಬರಹದಲ್ಲಿ ಹೇಳುವುದನ್ನು ಮಾಡಲು ಸಾಧ್ಯವೇ? ಎಂಬ ಶೀರ್ಷಿಕೆ ಅಡಿಯಲ್ಲಿ ಒಬ್ಬ ಬಸ್ ಕಂಡೆಕ್ಟರ್ ಮತ್ತು ವಿದ್ಯಾರ್ಥಿ ನಡುವಿನ ಸಂವಾದ ಇದೆ. ಒಬ್ಬ ಸಾಮಾನ್ಯ ಕಂಡಕ್ಟರ್ ಪಾತ್ರದ ಮೂಲಕ ಸಮಯಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ಚಾಕ ಚಕ್ಯತೆ ಶಿಕ್ಷಕರಲ್ಲಿ ಇರಬೇಕಾದುದನ್ನು ನೆನಪಿಸುತ್ತದೆ.

ಮುಂದಿನ ಅಧ್ಯಾಯದಲ್ಲಿ ಮೌಲ್ಯಗಳನ್ನು ಅರಸುತ್ತಾ,… ಎಂಬ ಶೀರ್ಷಿಕೆ ಅಡಿಯಲ್ಲಿ ಮಕ್ಕಳಲ್ಲಿ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಬಿತ್ತುವ ಬಗ್ಗೆ ವಿವರಿಸಿದ್ದಾರೆ.

ಮುಂದಿನ ಪುಟಗಳಲ್ಲಿ ಶಿಕ್ಷಣದ ಸುಧಾರಣೆಗಳು, ಶಿಕ್ಷಕರ ಸಶಕ್ತೀಕರಣ, ಸಂಬಂಧಗಳು ಮತ್ತು ಶೈಕ್ಷಣಿಕ ಮನೋವಿಜ್ಞಾನ, ಇತ್ಯಾದಿಗಳ ಬಗ್ಗೆ ಪರಿಣಾಮಕಾರಿಯಾಗಿ ಬರೆದಿದ್ದಾರೆ.

ಯಾತನೆಗಳು….. ಎಂಬ ತಲೆ ಬರಹದಡಿ, ವಿವಿಧ ಕಾರಣಕ್ಕೆ ಮಗು ತರಗತಿ ಕೋಣೆಯೊಳಗೆ ಅನುಭವಿಸುವ ಯಾತನೆಯನ್ನು ಸಾಮಾಜೀಕರಣಗೊಳಿಸಿ ಬದುಕು ಭವಿಷ್ಯ, ಸಮಸ್ಯೆ ಆತ್ಮಹತ್ಯೆ…..ಪರಿಹಾರ ಇತ್ಯಾದಿ ವಿಚಾರಗಳ ಕುರಿತು ತಮ್ಮ ಅತ್ಯುತ್ತಮ ಚಿಂತನೆಯನ್ನು ನಮ್ಮ ಮುಂದಿರಿಸಿದ್ದಾರೆ.

ಒಟ್ಟಾರೆ ಪುಸ್ತಕವನ್ನು ಓದಿ ಮುಗಿಸಿದಾಗ ಶಿಕ್ಷಣ ಅನ್ನೋದು ನಮ್ಮ ಅಂತಸ್ತನ್ನು ಪ್ರದರ್ಶಿಸುವ ವಸ್ತುವಾಗದೆ, ಮಗುವನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಒಂದು ಅತ್ಯುತ್ತಮ ಉದ್ದೇಶವನ್ನು ನಮಗೆ ನೆನಪಿಸುವಂತಿದೆ.

ಶಿಕ್ಷಕರು ಕೂಡ ಓದಿ ಅನುಸರಿಸುವ ಉತ್ತಮ ವಿಚಾರ ಧಾರೆಗಳಿದ್ದು, ಅದನ್ನು ಪುಸ್ತಕ ರೂಪದಲ್ಲಿ ನಮಗೆ ತಲುಪಿಸಿದ ಲೇಖಕರಾದ ಅರವಿಂದ ಚೊಕ್ಕಾಡಿಯವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.

ಧನ್ಯವಾದಗಳೊಂದಿಗೆ,

ಪ್ರಮೀಳಾ

ಮುಖ್ಯ ಶಿಕ್ಷಕರು,
ಕಿರಿಯ ಪ್ರಾಥಮಿಕ ಶಾಲೆ, ನಿಡುಬೆ
ಐವರ್ನಾಡು.

IMG 20220305 WA0020 min
ಪ್ರಮೀಳಾ ರಾಜ್

ಪ್ರಮೀಳಾ ರಾಜ್
ಮೂಲತಃ ಬಂಟ್ವಾಳ ತಾಲೂಕಿನ ಆಲದಪದವಿನವರು. ದಿವಂಗತ ಶೀನ ಮತ್ತು ಲಲಿತಮ್ಮ ಅವರ ಸುಪುತ್ರಿ.ಸುಳ್ಯ ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಂಗೀತ ಮತ್ತು ಸಾಹಿತ್ಯ ಕುರಿತಾಗಿ ಅಭಿರುಚಿ ಹೊಂದಿರುವ ಇವರು ಹಲವಾರು ಸಾಹಿತ್ಯ ಕಾರ್ಯಕ್ರಮಗಳು, ಕವಿಗೋಷ್ಠಿಗಳಲ್ಲಿ ಭಾಗಿಯಾಗಿರುತ್ತಾರೆ.ಮತ್ತು ಹಲವು ಸಾಹಿತ್ಯ ಬಳಗಗಳಲ್ಲಿ ನಿತ್ಯದ ಬರಹಗರರಾಗಿದ್ದಾರೆ.
ಸಂಗೀತ…. ನನ್ನೆದೆಯ ಭಾವಗಳ ಯಾನ ಎಂಬ ಕವನ ಸಂಕಲನ 2018ರಲ್ಲಿ ಬಿಡುಗಡೆ ಯಾಗಿದ್ದು
ಸಾಹಿತ್ಯ ವಿಭೂಷಣ, ಸಾಹಿತ್ಯ ಸ್ಪೂರ್ತಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಭಾವಯಾನಿ ಎಂಬ ಹೆಸರಿನಲ್ಲಿ ತನ್ನನ್ನು ತಾನು ಕ್ರಿಯಾಶೀಲವಾಗಿ ತೊಡಗಿಸಿ ಕೊಂಡು ನಿತ್ಯ ಸಾಹಿತ್ಯ ಕೃಷಿ ನಡೆಸುತ್ತಿದ್ದಾರೆ.
ಇತ್ತೀಚಿಗೆ ಸಾಹಿತ್ಯ ಜ್ಞಾನ, ಗಾನ ಬಳಗ ಎಂಬ ವಾಟ್ಸಪ್ ಬಳಗ ರಚನೆ ಮಾಡಿ ಅದರಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳ ಬರಹಗಳು ವಿಮರ್ಶೆಗಳು ಹರಿದು ಬರುತ್ತಿವೆ.

Sharing Is Caring:

Leave a Comment