ಹೊತ್ತಗೆಯೊಳಗೆ ಒಂದಿಷ್ಟು  ಹೊತ್ತು ಅಂಕಣದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿ – ಭವ್ಯ ವ್ಯಕ್ತಿ ತ್ವ- ದಿವ್ಯ ಸಂದೇಶ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

ಭವ್ಯ ವ್ಯಕ್ತಿ ತ್ವ- ದಿವ್ಯ ಸಂದೇಶ
ಭವ್ಯ ವ್ಯಕ್ತಿ ತ್ವ- ದಿವ್ಯ ಸಂದೇಶ

(ಕೃತಿ ಪರಿಚಯ – 6)

ಹೊತ್ತಗೆಯೊಳಗೆ ಒಂದಿಷ್ಟು  ಹೊತ್ತು ಅಂಕಣದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿ “ಭವ್ಯ ವ್ಯಕ್ತಿ ತ್ವ- ದಿವ್ಯ ಸಂದೇಶ” .
  ಮೂಲ ಲೇಖಕರು:- ಬ್ರಹ್ಮಚಾರಿ ಅಮಲ್.  ಕನ್ನಡಕ್ಕೆ ಅನುವಾದ:- ಡಾ. ಇ. ವಸಂತಕುಮಾರ್.
ಸ್ವಾಮಿಖ ವಿವೇಕಾನಂದರ ಸಂದೇಶದ ಅನುವಾದ:- ಸ್ವಾಮಿ ವೀರೇಶಾನಂದ.

ಪ್ರಕಾಶಕರು: ಅಧ್ಯಕ್ಷರು,ಶ್ರೀ ರಾಮಕೃಷ್ಣ ಆಶ್ರಮ.
ಯಾದವಗಿರಿ,ಮೈಸೂರು.
ಪುಟಗಳು-118
ಹಿಂದಿನ ಮುಖಬೆಲೆ:-20ರೂ.

   ಭಾರತಾದ್ಯಂತ ಜನಜನಿತವಾಗಿರುವ ಹೆಸರು ಮತ್ತು ವ್ಯಕ್ತಿತ್ವ  ಸ್ವಾಮೀ ವಿವೇಕಾನಂದರದು.
ಆಧುನಿಕ ಜಗತ್ತಿನ ಅತ್ಯಂತ ಶ್ರೇಷ್ಠ ನೇತಾರರಲ್ಲಿ ಒಬ್ಬರಾದ ಇವರು , ಇಂದಿನ ಯುವ ಪೀಳಿಗೆಗೂ ಪ್ರೇರಕಶಕ್ತಿಯಾಗಿದ್ದಾರೆ. ಅವರ ಜೀವನವೇ ಅತ್ಯದ್ಭುತ ಮೌಲ್ಯಗಳ ಆಗರ. ಒಂದು ಪುಸ್ತಕದ ಓದಿನಿಂದ ಮಾನವನ ಬೌದ್ಧಿಕ ಮಟ್ಟವನ್ನು ವೃದ್ದಿಸುವಲ್ಲಿ ಸಹಕಾರಿ ಎಂಬುದು ಅಕ್ಷರಶಃ ನಿಜವಾಗಿಸುವ ಈ ಹೊತ್ತಗೆ ಎಲ್ಲಾ ವಯೋಮಾನದವರನ್ನು ಬಡಿದೆಚ್ಚರಿಸಿ ಚಲನಶೀಲವಾಗಿರುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ.

ಇಂದಿನ ಕಾಲಘಟ್ಟದಲ್ಲಿ ಅತೀ ಅವಶ್ಯಕವೆನಿಸಿರುವ ಜಾತಿ,ಲಿಂಗ, ಜನಾಂಗದ ತಾರತಮ್ಯವನ್ನು ಮರೆತು ಬಾಳುವ ಅನಿವಾರ್ಯತೆಯೆಡೆಗೆ ಸಾಗುವುದರೊಂದಿಗೆ ಜೀವನದ ಯಶಸ್ಸು, ಸಮೃದ್ಧಿ, ಆರೋಗ್ಯ, ಆತ್ಮವಿಶ್ವಾಸ, ಸಂತೋಷಗಳನ್ನು ಹೊಂದಲು ಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡಿದೆ. ಯುವಕರ ಹೃದಯದಲ್ಲಿ ನೈತಿಕ ಮೌಲ್ಯ ಮತ್ತು ಆಧ್ಯಾತ್ಮಿಕತೆಯನ್ನು ಮೂಡಿಸುವ ಮೂಲಕ ಜೀವನದಲ್ಲಿ ನೈಜ ಸಾರ್ಥಕತೆ ಮತ್ತು ಮನಶಾಂತಿಯನ್ನು ಗಳಿಸಲು ಈ ಪುಸ್ತಕ ಸಹಾಯ ಮಾಡುತ್ತದೆ.
    ಪುಸ್ತಕದ ಮೊದಲ ಭಾಗದಲ್ಲಿ ವಿವೇಕಾನಂದರು ಶಿಕಾಗೋ ಸಮ್ಮೇಳನಕ್ಕೆ ಹೋಗುವ ಸಂದರ್ಭದಲ್ಲಿ ಅನುಭವಿಸಿದ ಕಷ್ಟ ನಷ್ಟಗಳು, ಹಸಿವು,ಬಡತನ,ನಿರ್ಗತಿಕರ ನೈಜ ಜೀವನವನ್ನು ತಾವೇ ಅನುಭವಿಸಿ,ಇವರು ಮನಸ್ಸಿನ ಬಲಿಷ್ಠತೆಗೆ ಸಾಕ್ಷಿಯಾದವರು.
ಈ ಪುಸ್ತಕ ಸಾಧನೆಯ ಪಥಗಳಲ್ಲಿ ಸಾಗುವ ಪ್ರತಿಯೊಬ್ಬನಿಗೂ ಸ್ಪೂರ್ತಿದಾಯಕವಾಗಬಲ್ಲುದು.
  ಈ ಪುಸ್ತಕದ ಎರಡನೆಯ ಭಾಗದಲ್ಲಿ ಸಮಗ್ರ ಯುವ ಸಮುದಾಯಕ್ಕೆ ಇವರ ಬೋಧನೆಯನ್ನು ಕಾಣಬಹುದು. ಇವರ ಮಾತುಗಳು ಎಂತಹಾ ದುರ್ಬಲ ಮನುಷ್ಯನನ್ನೂ ಪ್ರಬಲಗೊಳ್ಳುವಂತೆ ಮಾಡುವಂತಹ ಅವರ್ಣನೀಯ ಶಕ್ತಿಯನ್ನು ಹೊಂದಿದೆ. ಓದುತ್ತಾ ಹೋದಂತೆ ಆತ್ಮವಿಶ್ವಾಸ,ಧೈರ್ಯ ಇವುಗಳು ತಾನಾಗಿ ಮನದಲ್ಲಿ ಸೃಜಿಸುವ ಭಾವ ಉಂಟು ಮಾಡುತ್ತದೆ. ಈ ಪುಸ್ತಕ ಇಡೀ ಯುವ ಶಕ್ತಿಯನ್ನೇ ಬಡಿದೆಚ್ಚರಿಸುವ ಕಾರ್ಯ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ…

ಪರಮೇಶ್ವರಿ ,ಶಿಕ್ಷಕಿ
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರು

ಆತ್ಮೀಯರೇ
ನೀವು ಓದಿರುವ ಇತರರು ಓದಿದ್ರೆ ಉತ್ತಮ ಎಂದೆನಿಸುವ ಪುಸ್ತಕದ ಪರಿಚಯವನ್ನು ನಮಗೆ ಕಳುಹಿಸಿ ಕೊಡಿ, ವಾರದ ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಪ್ರಕಟಿಸಲಾಗುವುದು

Sharing Is Caring:

Leave a Comment