ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿ – ನಿಮ್ಮ  ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

IMG 20220512 WA0000 min
ನಿಮ್ಮ  ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

(ಕೃತಿ ಪರಿಚಯ – 15)

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಇಂದು ಪರಿಚಯಿಸಲಾಗುತ್ತಿರುವ ಕೃತಿ-      ನಿಮ್ಮ  ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

ಲೇಖಕರು:- ಡಾ॥ ಸಿ.ಆರ್. ಚಂದ್ರಶೇಖರ್
ಪ್ರಕಾಶಕರು:- ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್.

ಪುಟಗಳು:- 212
ಬೆಲೆ:-126
    

               ಒಬ್ಬ ವ್ಯಕ್ತಿ ಆರೋಗ್ಯವಂತನಾದ ಉಪಯುಕ್ತ  ಹಾಗೂ ಯಶಸ್ವೀ ವ್ಯಕ್ತಿ ಎನಿಸಿಕೊಳ್ಳಬೇಕಾದರೆ,ಬರಿಯ ದೇಹ ಗಟ್ಟಿ ಮುಟ್ಟಾಗಿದ್ದರೆ ಸಾಲದು ಮನಸ್ಸೂ ಕೂಡ ಸದೃಢವಾಗಿ ಆರೋಗ್ಯವಾಗಿರಬೇಕು. ಕಷ್ಟ ನಷ್ಟ ದುರಂತಗಳು ಎದುರಾದಾಗ ಸಮತೋಲನವನ್ನು ಕಳೆದುಕೊಳ್ಳದೆ ಮುನ್ನಡೆಯುವುದು ಮನುಷ್ಯನಾದವನಿಗೆ  ಅತೀ ಅಗತ್ಯವಾದ ಬಲಿಷ್ಠತೆಯಲ್ಲೊಂದು.  ಆದ್ದರಿಂದ  ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೇ ಮತ್ತು ಹೆಚ್ಚಿಸಿಕೊಳ್ಳಬಹುದೇ ಅನ್ನುವ ನಮ್ಮೊಳಗಿನ ಪ್ರಶ್ನೆಗಳಿಗೆ ಈ ಹೊತ್ತಗೆ ಉತ್ತರವಾಗಬಲ್ಲದು.
             ಇತ್ತೀಚಿನ ಒತ್ತಡಮಯ ಪರಿಸರಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳಲು ನಮ್ಮಲ್ಲಿನ ಮಾನಸಿಕ ದೃಢತೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ.  ಈ ದೃಢತೆಯನ್ನು ಪಡೆಯುವುದು ಹೇಗೆ?ಆಲೋಚನಾ ಶಕ್ತಿ,ಕಲಿಯುವ ಸಾಮರ್ಥ್ಯ, ಜ್ಞಾಪಕ ಶಕ್ತಿ, ಮನಸ್ಸನ್ನು ಮುತ್ತಿ ಕಾಡುವ ಅಂಜಿಕೆ,ಖಿನ್ನತೆ,ಕೀಳರಿಮೆಗಳನ್ನು ನಿವಾರಿಸುವುದು ಹೇಗೆ?,ಮುಪ್ಪಿನ ಸಮಯದಲ್ಲಿ ಉಂಟಾಗುವ ಮಾನಸಿಕ ತಳಮಳಗಳು, ಸಾವನ್ನು ಎದುರಿಸುವುದು,ಸಾವಿನಿಂದ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಸ್ಥಿತಪ್ರಜ್ಞರಾಗಿರಲು ಈ ಪುಸ್ತಕ ಸಹಕಾರಿ.
      ಈ ಹೊತ್ತಗೆಯ ಒಳಹೊಕ್ಕಾಗ ನಮಗೆ ನಮ್ಮ ಶರೀರದ ಮಾನಸಿಕ ಮತ್ತು ದೈಹಿಕ ಕ್ರಿಯೆಗಳ ಸ್ಪಷ್ಟ ಪರಿಚಯವಾಗುತ್ತದೆ. ಲೇಖಕರು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿ ಬರೆದಿರುವ ಪುಸ್ತಕ ಇದಾಗಿದೆ. ನಮ್ಮೊಳಗೆ ಇರುವಂತಹ ಬಹಳಷ್ಟು ಸಮಸ್ಯೆಗಳಿಂದ ಮುಕ್ತಿ ದೊರೆಯಲು ಈ ಹೊತ್ತಗೆ ಸಹಕಾರಿಯಾಗಬಲ್ಲದು.
ಲೇಖಕರಾದ ಡಾ॥ಸಿ.ಆರ್ . ಚಂದ್ರಶೇಖರ್ ಇವರು ಒಬ್ಬ ಮಾನಸಿಕ ಆರೋಗ್ಯ ತಜ್ಞರು. ಇವರು ಬೆಂಗಳೂರಿನ ನಿಮಾನ್ಸ್ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಪುಸ್ತಕಗಳು ನಮ್ಮ ನಿಮ್ಮ ನಡುವೆ ಇರುವ ಒಂದಷ್ಟು ಮನಸ್ಸಿನ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವನ್ನು ಮಾಡುತ್ತಿವೆ.
      ಮನಸ್ಸಿನ ಶಾಂತತೆಗೆ ಸಹಾಯಕವಾಗುವ ಈ ಪುಸ್ತಕವನ್ನು ಹದಿಹರಯದಿಂದ ಹಿಡಿದು ಮುದಿವಯಸ್ಸಿನವರೂ ಓದಿ  ನೆಮ್ಮದಿಯ ಜೀವನವನ್ನು ಸಾಗಿಸಲು ಸಹಕಾರಿಯಾಗಬಲ್ಲದು………ಓದಿ ತಮ್ಮದಾಗಿಸಿಕೊಳ್ಳಿ ಎನ್ನುತ್ತಾ…..

  ಶುಭಾಶಯಗಳೊಂದಿಗೆ,

                          ಪರಮೇಶ್ವರಿ
ಸಮೂಹ ಸಂಪನ್ಮೂಲ ವ್ಯಕ್ತಿ.
ನರಿಮೊಗರು ಕ್ಲಸ್ಟರ್.ಪುತ್ತೂರು
.

ಆತ್ಮೀಯ ಶಿಕ್ಷಕ ಮಿತ್ರರೇ,
ನೀವು ಕೂಡ ಇದೇ ರೀತಿ ಹಲವು ಉತ್ತಮ ಪುಸ್ತಕಗಳನ್ನು ಓದಿ ತಮ್ಮದಾಗಿಸಿ ಜ್ಞಾನವನ್ನು ಹೆಚ್ಚಿಸಿಕೊಂಡಿರಬಹುದು. ನೀವು ಓದಿದ ಹೊತ್ತಗೆಯ ಪರಿಚಯವನ್ನು ನಮ್ಮೊಂದಿಗೆ ಇದೇ ರೀತಿ ಹಂಚುವ ಮೂಲಕ ನಮಗೂ ಜ್ಞಾನದ ಬೆಳಕನ್ನು ಹಚ್ಚುವಲ್ಲಿ ಕೈಜೋಡಿಸಬೇಕಾಗಿ ವಿನಂತಿ.
ತಮ್ಮ ಬರಹವನ್ನು ಕಳಿಸಬೇಕಾದ ಸಂಖ್ಯೆ :- 8970260893

Sharing Is Caring:

Leave a Comment