ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿ – ತುಂಗಾ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

IMG 20220410 WA0045 min
ತುಂಗಾ

(ಕೃತಿ ಪರಿಚಯ – 13)

‘ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು”ಈ ಅಂಕಣದಲ್ಲಿ ಪರಿಚಯಿಸಲಾಗುತ್ತಿರುವ ಕೃತಿ ಕಾಡುವ ಕಾದಂಬರಿ
ವಿ ಗಾಯತ್ರಿ ಯವರು ಬರೆದ “ತುಂಗಾ “ಪುಸ್ತಕ.
ಅವಳಿಗೆ ಸಿಕ್ಕಂತ ಶಾಲೆ ನಮಗೇಕೆ ಸಿಗಲಿಲ್ಲ?!!!

ಹೌದು, ಮಕ್ಕಳೆಂದರೆ ಅದೆಷ್ಟೋ ಮುಗ್ಧತೆ ,ತಿಳಿ ಮನಸ್ಸು,ಚಂಚಲತೆ,ಈಗ ನೋಡಿದ ಬಣ್ಣದ ವಸ್ತು ಒಮ್ಮೆ ಮಾತ್ರ,ತಕ್ಷಣ ಬದಲಾಗೋ ಮನಸು ,ಬಣ್ಣ ಬಣ್ಣದ ಕನಸುಗಳು,ಹಲವಾರು ಪ್ರಶ್ನೆ ಗಳು ಹೀಗೆ‌ ಒಂದರ  ಮೇಲೊಂದರಂತೆ ಪುಂಖಾನುಪುಂಖಾವಾಗಿ ಹಾದು ಹೋಗುವ ಯೋಚನಾಲಹರಿಗಳು ಪ್ರಾಥಮಿಕ ಶಾಲೆಯ ಶಿಕ್ಷಕರಾದವರಿಗೆ ಇವುಗಳೆಲ್ಲವೂ ಅನುಭವ ವೇದ್ಯವಾದುದು..
ನಾನು ಓದಿದ ಪುಸ್ತಕ “ತುಂಗಾ” ರಚ್ಚೆ ಹಿಡಿದು ಶಾಲೆಗೆ ಕರೆದುಕೊಂಡು ಹೋಗು ‘ಎನ್ನುವಂತೆ ಮಾಡುವ ಶಾಲೆಗಳಿಗೆ ,ಎನ್ನುವ ಶೀರ್ಷಿಕೆಯಡಿಯಲ್ಲಿ ಆರಂಭವಾಗುವ ಈ ಪುಸ್ತಕ ಒಬ್ಬಳು ತುಂಗಾ ಎನ್ನುವ ಹುಡುಗಿಯ ಸುತ್ತ ಹೆಣೆದ ವಾಸ್ತವಿಕ ಕತೆಯಾಗಿದೆ. ಡೊಂಬರಾಟದವರನ್ನು ಶಾಲೆಗೆ ತರಿಸಿದ ಹುಡುಗಿ “ತುಂಗಾ”  ನಾಲ್ಕು ಗೋಡೆಗಳಿರುವ ಶಾಲೆಯನ್ನು ,ಹೇಳಿದ ಪಾಠವನ್ನೆ ಹೇಳುವ ಅತೀ ಶಿಸ್ತಿನ ಸಿಪಾಯಿಗಳಂತಿರುವ ಶಿಕ್ಷಕರು ಇರುವ  ಶಾಲೆಯನ್ನು ಒಪ್ಪದೆ ತನ್ನ ತಾಯಿಯ ಜೊತೆ ಶಾಲೆಗೆ ಹೋಗಲಾರೆ ಎಂದು ರಚ್ಚೆ ಹಿಡಿಯುತ್ತಾಳೆ.
ನಂತರ ಅವಳನ್ನು ಚಿಣ್ಣರಲೋಕದಂತಿರುವ‌ ಶಾಲೆಗೆ‌ ಕರೆದೊಯ್ದಾಗ ಬಸ್ಸಲ್ಲಿ ಹೋದಾಗ ಕಂಡಕ್ಟರ್ ಜೊತೆ ಮಾತಾಡಿದ್ದು ಹಳೆಶಾಲೆಯ ಶಿಕ್ಷಕರು ಹೊಡೆದ್ದನ್ನು ಹೇಳಿದ್ದು,ಶಾಲೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟಿದ್ದು ತನ್ನ ಮನೆಯ ನಾಯಿ ಬಚ್ಚನ ತಮಾಷೆ,ಅವಳು ಹಾಕುವ ಬಟ್ಟೆಗಳು ಬೇಲಿಗೆ ಸಿಕ್ಕಿ ಹರಿಯುವುದು,ಕಾಡಿನಲ್ಲಿರುವ ಹಲವು ಬಗೆಯ ಹಣ್ಣುಗಳನ್ನು ಸವಿಯೋದು‌.ತರಗತಿಯಿಂದ ಹೊರಗೆ ಹೋಗಿ‌ ಪರಿಸರದ ವೈಶಿಷ್ಟ್ಯತೆಗಳನ್ನು ಅರಿಯುವುದು  ಹೀಗೆ ಒಂದರ ಮೇಲೊಂದು ಅವಳ ಅನುಭವಗಳನ್ನು ಹೇಳುತ್ತಾ ಹೋಗುತ್ತಾಳೆ.ಕೊನೆಗೆ  ಮಾಂಡವಿ ( ಮುಖ್ಯ ಶಿಕ್ಷಕರು )ಸಂತೋಷದಿಂದ ಇದೀಗ ನೀನು ನಮ್ಮ ಶಾಲೆಯ ಹುಡುಗಿ ಎಂದು ಹೇಳಿದಾಗ ತುಂಗಾಳಿಗಾದ ಸಂತೋಷಕ್ಕೆ ಪಾರವೇ ಇಲ್ಲ.
ನಂತರ ಇದೇ ಚಿಣ್ಣರ ಲೋಕದ ಹಳ್ಳದಲ್ಲಿ ಈಜಾಡಿದ ಸಂಭ್ರಮ,ಕಾಡಿನಲ್ಲಿ ಕ್ಯಾಂಪ್ ಹಾಕಿ ನಕ್ಷತ್ರಗಳನ್ನು ಎನಿಸಿದ್ದು,ಪೋಲಿಯೋ ಪೀಡಿತ ಚಂದ್ರಕಾಂತನಿಗೆ ಮರಹತ್ತಲು ಸಹಾಯ ಮಾಡಿ ಹುರಿದುಂಬಿಸಿದ್ದು,ಯಕ್ಷಗಾನ ಕಲಿಯಲು  ವೇಷ ಹಾಕಿದ್ದು ,ನದಿಗಳು ಸಮುದ್ರವನ್ನು ಸೇರುವ ದೃಶ್ಯವನ್ನು ನೋಡಿದ್ದು,ಚಿಣ್ಣರ ಲೋಕದಲ್ಲಿ ಸಂಗೀತ ವ್ಯಾಯಾಮ ,ಶಾಲಾ ಗ್ರಂಥಾಲಯ,ಹೊರಸಂಚಾರದಲ್ಲಿ ಅಡುಗೆ ಮಾಡಿದ್ದು ತುಂಗಾ ನಿಜವಾಗಿಯೂ ಒಳ್ಳೆಯ ಹುಡುಗಿ ಎಂಬ ಹಣೆಪಟ್ಟಿ ಇದು ತುಂಗಾಳ ಮರೆಯಲಾರದ ಬಾಲ್ಯದ ಪುಟಗಳು .ಮಕ್ಕಳು ಚಿಣ್ಣರ ಲೋಕದ ಬಗ್ಗೆ ತಾತ್ಸಾರ ತೋರಿದಾಗ ತುಂಗಾಳು ಚಿಣ್ಣರಲೋಕದ ಬಗ್ಗೆ ಹಾಡು ಕಟ್ಟಿ ಕುಣಿಯುತ್ತಾಳೆ. ತುಂಗಾಳ ಶಾಲಾ ಜೀವನದಲ್ಲಿ ನಡೆದ ಮರೆಯಲಾಗದ ಮತ್ತು ಪರಿಸರದಿಂದ ಕಲಿತ ಪಾಠ ಇಲ್ಲಿ ಕಾಣಬಹುದು .ಹೆಚ್ಚಿನ ಶಿಕ್ಷಣ ಪಡೆದು ಮಾಂಡವಿ ಶಿಕ್ಷಕಿಯ ಜೊತೆ  ತುಂಗಾ ಶಾಲೆಯ ಶಿಕ್ಷಕಿಯಾಗಿ ಹೈಸ್ಕೂಲು ತನಕ ಶಾಲೆಯನ್ನು ಮುಂದುವರೆಸುವ ಚಿತ್ರಣವನ್ನು ಕಾಣಬಹುದು .ಇನ್ನು ಹಲವಾರು ವಿಷಯಗಳು ಈ ಪುಸ್ತಕದಲ್ಲಿ ಸಮ್ಮಿಳಿತಗೊಂಡಿದೆ.
ಒಟ್ಟಾರೆಯಾಗಿ ಚಿಣ್ಣರ ಲೋಕ ಶಾಲೆಯು ಗುರುಕುಲ ಮಾದರಿಯಲ್ಲಿ ನಡೆಯುತ್ತದೆ.ವೈವಿಧ್ಯತೆಯಿಂದ ಕೂಡಿದ ಶಾಲೆಯಾಗಿತ್ತು. ಮಕ್ಕಳು ಪ್ರತಿ ದಿನ ಹೊಸತನವನ್ನು ಬಯಸುತ್ತಾರೆ.ಶಿಕ್ಷಕರಾದವರು ನಾವು ಹೊಸತನವನ್ನು ಕಲಿಯುತ್ತಾ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ಮೂಡಿಸಲು ಕಾರ್ಯಶೀಲರಾಗಬೇಕು. ಮುಕ್ತವಾಗಿ , ಸ್ವಚ್ಛಂದ ವಾಗಿ ಕಲಿಯುವ ವಾತಾವರಣವನ್ನು ನಿರ್ಮಾಣಮಾಡಿಕೊಡಬೇಕು.
ಆಧುನಿಕ ತಂತ್ರಜ್ಞಾನದಿಂದಾಗಿ ಮಕ್ಕಳ ಮನಸ್ಸು ಸಂಕುಚಿತಗೊಂಡು ಮಾನವೀಯ ಮೌಲ್ಯಗಳು  ಮರೆಯಾಗುತ್ತಿದೆ.ತುಂಗಾ ಹುಡುಗಿಗೆ ಸಿಕ್ಕಂತಹ ಶಿಕ್ಷಣ ದೊರಕಿದರೆ  ಇಂದಿನ ಮಕ್ಕಳು  ಮುಂದೆ ದೇಶದ ಉತ್ತಮ ಪ್ರಜೆಗಳಾಗಬಹುದು ಎಂಬುದು ನನ್ನ ಅನಿಸಿಕೆ.ನೀವು ಏನಂತಿರಿ ??

IMG 20220410 WA0035 min
ಶ್ರೀಮತಿ ಮಮತಾ

ಶ್ರೀಮತಿ ಮಮತಾ
ಸಹಶಿಕ್ಷಕರು
ಸ.ಉ.ಹಿ. ಪ್ರಾ.ಶಾಲೆ ಕೊಡಿಯಾಲ.
ಸುಳ್ಯ. ದ.ಕ

ಇವರು ಶಿಕ್ಷಕರಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಸಾಹಿತ್ಯಿಕ ಬರಹಗಳನ್ನು ತಮ್ಮ ಪ್ರವೃತ್ತಿಯಾಗಿಸಿಕೊಂಡಿರುವ ಇವರು ಗಾಯನ,ಕವನ,ಲೇಖನ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಶಿಕ್ಷಕರ ಹಲವು ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿರುತ್ತಾರೆ.

ಆತ್ಮೀಯ ಶಿಕ್ಷಕ ಮಿತ್ರರೇ,
ನೀವು ಕೂಡ ಇದೇ ರೀತಿ ಹಲವು ಉತ್ತಮ ಪುಸ್ತಕಗಳನ್ನು ಓದಿ ತಮ್ಮದಾಗಿಸಿ ಜ್ಞಾನವನ್ನು ಹೆಚ್ಚಿಸಿಕೊಂಡಿರಬಹುದು. ನೀವು ಓದಿದ ಹೊತ್ತಗೆಯ ಪರಿಚಯವನ್ನು ನಮ್ಮೊಂದಿಗೆ ಇದೇ ರೀತಿ ಹಂಚುವ ಮೂಲಕ ನಮಗೂ ಜ್ಞಾನದ ಬೆಳಕನ್ನು ಹಚ್ಚುವಲ್ಲಿ ಕೈಜೋಡಿಸಬೇಕಾಗಿ ವಿನಂತಿ.
ತಮ್ಮ ಬರಹವನ್ನು ಕಳಿಸಬೇಕಾದ ಸಂಖ್ಯೆ :- 8970260893

Sharing Is Caring:

Leave a Comment