ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿ – ಸ್ತ್ರೀ ಸ್ವಾಸ್ಥ್ಯ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

ಸ್ತ್ರೀ ಸ್ವಾಸ್ಥ್ಯ
ಸ್ತ್ರೀ ಸ್ವಾಸ್ಥ್ಯ
WhatsApp Group Join Now
Telegram Group Join Now

(ಕೃತಿ ಪರಿಚಯ – 12)

‘ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು’   ಈ ಅಂಕಣದಲ್ಲಿ ಇಂದು ಪರಿಚಯಿಸಲಾಗುತ್ತಿರುವ ಕೃತಿ, ಸ್ತ್ರೀ ಸ್ವಾಸ್ಥ್ಯ.

ಪುಟಗಳು :-106
ಲೇಖಕರು:- ಡಾ.ವೀಣಾ.ಎನ್ ಸುಳ್ಯ.
ಬೆಲೆ :- 100 ರೂ
ಪ್ರಕಾಶಕರು:- ವಾಸವಿ ಸಾಹಿತ್ಯ ಕಲಾ ವೇದಿಕೆ ಸುಳ್ಯ.

‘ಆರೋಗ್ಯವೇ ಭಾಗ್ಯ’ ಈ ನಾಣ್ಣುಡಿ ಎಲ್ಲಾ ಸಂಪತ್ತಿಗಿಂತ ಆರೋಗ್ಯ ಭಾಗ್ಯವೇ ಮೇಲು, ಎಂಬುದನ್ನು ಒತ್ತಿ ಹೇಳುತ್ತದೆ. ಪ್ರತಿಯೊಬ್ಬರಿಗೂ ಆರೋಗ್ಯ ಸಂಪತ್ತಾದರೂ ‘ಹೆಣ್ತನದ’ ಸೌಭಾಗ್ಯ ಪಡೆದಿರುವ ಜೀವಜಗತ್ತನ್ನು ಅಭಿವೃದ್ಧಿಪಡಿಸುವ ಹೆಣ್ಣಿನ ದೇಹಾರೋಗ್ಯ ಬಹಳ ಮಹತ್ವವನ್ನು ಪಡೆದಿದೆ. ಇದಕ್ಕಾಗಿ ಅವಳ ದೇಹದ ರಚನೆ ವಿಶೇಷವಾಗಿದೆ. ಇದು ಅವಳ ಜೈವಿಕ ಹಕ್ಕು.
ಮಾನವನ ಜೀವಜಗತ್ತಿನ ಅಡಿಪಾಯ ಆರೋಗ್ಯವಂತ ಹೆಣ್ಣು. ಇಂತಹ ಅಮೂಲ್ಯ ಕೊಡುಗೆ ನೀಡುತ್ತಿರುವ ಹೆಣ್ಣಿನ ಆರೋಗ್ಯ ರಕ್ಷಣೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯವೂ ಹೌದು. ಆ ನಿಟ್ಟಿನಲ್ಲಿ ಡಾ.ವೀಣಾ .ಎನ್. ತಮ್ಮ ಅನುಭವಜನ್ಯ ಮೂಸೆಯಿಂದ ಹೊರಬಂದ ಮಾರ್ಗದರ್ಶನ, ಕಿವಿಮಾತು ,ಸಲಹೆ ಮತ್ತು ವೈಜ್ಞಾನಿಕ ವಿಚಾರಗಳು ಈ ಹೊತ್ತಗೆಯಲ್ಲಿ ಅಡಕವಾಗಿದೆ.

ಹೆಣ್ಣಿನ ಋತುಚಕ್ರದ ಅವಧಿಯ ಪೂರ್ವದಿಂದ ಪ್ರಾರಂಭಿಸಿ, ಋತುಚಕ್ರ, ದೇಹ, ಜನಾಂಗದ ಬದಲಾವಣೆ, ಬೆಳವಣಿಗೆ,ಗರ್ಭಧಾರಣೆ, ಪ್ರಸವ,ತಾಯ್ತನ,ಆರೋಗ್ಯವಂತ ಶಿಶುವನ್ನು ಮುಂದಿನ ಪೀಳಿಗೆಯ ಆರೋಗ್ಯ ಕಾಪಿಡುವ ಜವಾಬ್ಧಾರಿ….. ಹೀಗೆ ಹತ್ತು ಹಲವು ವಿಚಾರಗಳ ಮಂಥನ ಈ ಪುಸ್ತಕದಲ್ಲಿ ಅಡಗಿದೆ.

ಸಂತಾನೋತ್ಪತ್ತಿಯ ಅಂಗಗಳು ,ಗರ್ಭಿಣಿಗೆ ಸಲಹೆ, ಆರೈಕೆ, ಎದೆಹಾಲಿನ ಮಹತ್ವ, ಶಿಶುವಿಗೆ ರೋಗನಿರೋಧಕಗಳು, ಗರ್ಭಕೋಶದಲ್ಲಿ ಬರಬಹುದಾದ ತೊಂದರೆಗಳು, ಚಿಕಿತ್ಸೆಗಳು, ಮುಟ್ಟು ನಿಲುಗಡೆ ಹೀಗೆ ಎಲ್ಲವನ್ನೂ ಸಾಮಾನ್ಯರೂ ಅರ್ಥಮಾಡಿಕೊಳ್ಳುವಂತೆ ಬಹಳ ಸರಳವಾಗಿ ಆತ್ಮಸ್ಥೈರ್ಯ ತುಂಬುವ ರೀತಿಯಲ್ಲಿ ಲೇಖಕರು ಇಲ್ಲಿ ಬರೆದಿರುತ್ತಾರೆ.
ಪುಸ್ತಕದ ಪುಟಗಳಲ್ಲಿ ಅಗತ್ಯವಿದ್ದಲ್ಲಿ ಚಿತ್ರಗಳು ಇರುವುದರಿಂದ ವಿಷಯ ಇನ್ನಷ್ಟು ಸ್ಪಷ್ಟೀಕರಿಸಲು ಸಾಧ್ಯವಾಗಿದೆ.
ಬರವಣಿಗೆಯ ಶೈಲಿ ಬಹಳ ಆತ್ಮೀಯವಾಗಿದ್ದು ಪ್ರತಿಯೊಬ್ಬರೂ ಕೊಂಡು ಓದಲೇಬೇಕಾದ ಪುಸ್ತಕ ಇದಾಗಿದೆ.

ನಾನು ಓದಿರುವ ಪುಸ್ತಕವನ್ನು ಪರಿಚಯಿಸಲು ಅವಕಾಶ ನೀಡಿದ ,

ಅಧ್ಯಕ್ಷರು/ಕಾರ್ಯದರ್ಶಿಗಳು.
ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘ.(ರಿ) ಬೆಂಗಳೂರು.
ದ.ಕ.
ಇವರಿಗೆ ಹೃದಯಾಂತರಾಳದ ಕೃತಜ್ಞತೆಗಳು.

ಶ್ರೀಮತಿ ಜಲಜಾಕ್ಷಿ ಕೆ.ಡಿ. ಸಹಶಿಕ್ಷಕರು. ಸ.ಉ.ಹಿ.ಪ್ರಾ.ಶಾಲೆ.ಕೋಲ್ಚಾರು.

IMG 20220401 WA0161 min
ಜಲಜಾಕ್ಷಿ ಕೆ.ಡಿ.

ಶ್ರೀಮತಿ ಜಲಜಾಕ್ಷಿ ಕೆ.ಡಿ. ಇವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ 20ವರ್ಷಗಳ ಸೇವೆ,ತದನಂತರ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ 5 ವರ್ಷ ಕಾರ್ಯನಿರ್ವಹಿಸಿ ಒಟ್ಟು 25ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುತ್ತಾರೆ.  ಸದಾ ವಿದ್ಯಾರ್ಥಿಗಳ ಕಲಿಕಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಇವರು ಹಲವು ರೀತಿಯ ಬೋಧನಾ ಕಲಿಕಾ ಸಾಮಗ್ರಿಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಆಕರ್ಷಕ ರೀತಿಯಲ್ಲಿ ತಂತ್ರಜ್ಞಾನ ಬಳಸಿ ಬೋಧನೆಯನ್ನು ನಿರ್ವಹಿಸಿಕೊಂಡು ಬಂದಿರುತ್ತಾರೆ. ಸದಾ ಚಟುವಟಿಕೆಯಿಂದ ಇರುವ ಇವರು ಪ್ರಂಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನ ಗಳಿಸಿರುತ್ತಾರೆ. ಹಾಗೂ ಹಲವು ಬರಹಗಳು ಸ್ಥಳೀಯ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ.

ಆತ್ಮೀಯ ಶಿಕ್ಷಕ ಮಿತ್ರರೇ,
ನೀವು ಕೂಡ ಇದೇ ರೀತಿ ಹಲವು ಉತ್ತಮ ಪುಸ್ತಕಗಳನ್ನು ಓದಿ ತಮ್ಮದಾಗಿಸಿ ಜ್ಞಾನವನ್ನು ಹೆಚ್ಚಿಸಿಕೊಂಡಿರಬಹುದು. ನೀವು ಓದಿದ ಹೊತ್ತಗೆಯ ಪರಿಚಯವನ್ನು ನಮ್ಮೊಂದಿಗೆ ಇದೇ ರೀತಿ ಹಂಚುವ ಮೂಲಕ ನಮಗೂ ಜ್ಞಾನದ ಬೆಳಕನ್ನು ಹಚ್ಚುವಲ್ಲಿ ಕೈಜೋಡಿಸಬೇಕಾಗಿ ವಿನಂತಿ.
ತಮ್ಮ ಬರಹವನ್ನು ಕಳಿಸಬೇಕಾದ ಸಂಖ್ಯೆ :- 8970260893

WhatsApp Group Join Now
Telegram Group Join Now
Sharing Is Caring:

Leave a Comment