ಶಿಕ್ಷಕರ ವರ್ಗಾವಣೆ ಮತ್ತು ಹೆಚ್ಚುವರಿ ಪರಿಷ್ಕೃತ ವೇಳಾಪಟ್ಟಿ 30/01/23

ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗಳು ಸ್ಥಗಿತಗೊಂಡಿರುವುದಿಲ್ಲ ಮುಂದುವರೆಯುತ್ತವೆ. ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ: 30/01/2023ರವರೆಗೆ ನಿಗಧಿಪಡಿಸಲಾಗಿತ್ತು.ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಅಂತಿಮವಾಗಿ ದಿನಾಂಕ: 04/02/2023ರವರೆಗೆ ವಿಸ್ತರಿಸಿದೆ.

ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ಪ್ರಕ್ರಿಯೆ ಕುರಿತಂತೆ ಅಂತಿಮ ಪೂರ್ವಭಾವಿ ಕ್ರಮಗಳು

ಕ್ರ. ಸಂ ವಿವರ
ವರ್ಗಾವಣೆ ವಿಧ
ವೃಂದ
ಪ್ರಾಥಮಿಕ ಶಿಕ್ಷಕರ ವೃಂದ |ಪ್ರೌಢಶಾಲಾ ಶಿಕ್ಷಕರ ವೃಂದ
ಕ್ರಮ ವಹಿಸುವ ಅಧಿಕಾರಿಗಳು
1.ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ಮಾಹಿತಿಯನ್ನುಇಂದೀಕರಿಸಲು ನೀಡಿರುವ ಅಂತಿಮ ಕಾಲಾವಧಿ 30/01/2023 ರಿಂದ04/02/2023
2.ಎಲ್ಲಾ ಶಿಕ್ಷಕರು ಆಧ್ಯತೆ ಅಥವಾ ವಿನಾಯಿತಿಗೆ ನಿಗಧಿಪಡಿಸಿದದಾಖಲೆಗಳನ್ನು ವರ್ಗಾವಣಾ ತಂತ್ರಾಂಶದಲ್ಲಿ ಇಂದೀಕರಿಸಲುಅಥವಾ ಸರಿಪಡಿಸಲು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮೂಲ ಪ್ರಮಾಣ ಪತ್ರವನ್ನು ದಾಖಲೆಗಳನ್ನು ಖುದ್ದಾಗಿ ಸಲ್ಲಿಸಲುನಿಗಧಿಪಡಿಸಿದ ಅಂತಿಮ ಕಾಲಾವಧಿ 6/02/2023ರಿಂದ
08/02/2023
ಶಿಕ್ಷಕರುಗಳು ಖುದ್ದಾಗಿಪೂರಕ ದಾಖಲೆಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸಲ್ಲಿಸುವುದು
3.ಶಿಕ್ಷಕರು ಸಲ್ಲಿಸಿರುವ ವೈಧ್ಯಕೀಯ ಪ್ರಮಾಣ ಪತ್ರಗಳ ನೈಜತೆ ಮರು ಪರಿಶೀಲನೆ ಸೇರಿದಂತೆ ಶಿಕ್ಷಕರು ಸಲ್ಲಿಸಿರುವ ಆಧ್ಯತೆ ಅಥವಾ ವಿನಾಯಿತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನುಪರಿಶೀಲಿಸಿ ತಂತ್ರಾಂಶದಲ್ಲಿ ದೃಢೀಕರಿಸಿ ಅನುಮೋದಿಸಲುಅಥವಾ ತಿರಸ್ಕರಿಸಲು ನಿಗಧಿಪಡಿಸಿರುವ ಅವಧಿ09/02/2023ರಿಂದ
10/02/2023
ಸಂಬಂಧಿಸಿದ ವ್ಯಾಪ್ತಿಯಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು

IMG 20230130 WA0030

ಹೆಚ್ಚುವರಿ ವರ್ಗಾವಣೆಗೆ ವಿನಾಯಿತಿ ಮತ್ತು ಆದ್ಯತೆಗೆ ಅರ್ಜಿ ಸಲ್ಲಿಸಲು ಕಡೆಯ ಅವಕಾಶವನ್ನು ಇಲಾಖೆಯು ನೀಡಿದ್ದು, ದಿನಾಂಕ 06/02/2023 ರಿಂದ 08/02/2023 ರವರೆಗೆ ಬಿಇಒ ಕಚೇರಿಗೆ ಖುದ್ದಾಗಿ ಹಾಜರಾಗಿ ಮೂಲ ದಾಖಲೆಗಳನ್ನು (ವರ್ಗಾವಣೆ ಕಾಯ್ದೆ ನಿಯಮ 2020 ರ 10 ನಿಯಮದಂತೆ) ನೀಡಲು ತಿಳಿಸಿದೆ

ಹೆಚ್ಚುವರಿ ಪ್ರಕ್ರಿಯೆಯ ಹಾಗೂ ಕೋರಿಕೆ/ಪರಸ್ಪರ ವರ್ಗಾವಣೆ ಕುರಿತಂತೆ ವಿಶ್ವತವಾದವೇಳಾಪಟ್ಟಿಯನ್ನು ನಂತರದಲ್ಲಿ ಪ್ರಕಟಿಸಲಾಗುವುದು. ಉಳಿದಂತೆ ದಿನಾಂಕ: 26/12/2022 ರಲ್ಲಿಹೊರಡಿಸಲಾದ ಎಲ್ಲಾ ಮಾರ್ಗಸೂಚಿ ಅಂಶಗಳು ಮಾತ್ರ ಯಥಾವತ್ತಾಗಿ ಮುಂದುವರೆಯುತ್ತದೆ.

ಶಿಕ್ಷಕರುಗಳಿಗೆ ಸೂಚನೆಗಳು

1. ಶಿಕ್ಷಕರುಗಳು ಇ.ಇ.ಡಿ.ಎಸ್ ನಲ್ಲಿ ದಾಖಲಿಸಿರುವ ಮಾಹಿತಿಯ ಆಧಾರದ ಮೇಲೆ ಹೆಚ್ಚುವರಿ ಮತ್ತುಕೋರಿಕೆ ವರ್ಗಾವಣೆಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ಎಲ್ಲಾ ಶಿಕ್ಷಕರುಗಳು ಮತ್ತೊಮ್ಮೆ ತಮ್ಮ ಸೇವಾವಿವರಗಳನ್ನು ಇ.ಇ.ಡಿ.ಎಸ್ ನಲ್ಲಿ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಲು ದಿನಾಂಕ: 04/02/2023ರ ಸಂಜೆ5-30 ರವರೆಗೆ ಅಂತಿಮ ಕಾಲಾವಕಾಶವನ್ನು ನೀಡಲಾಗಿದೆ.

2. ಬಹುತೇಕ ಶಿಕ್ಷಕರು ಖಾಯಂ ಸೇವಾಪೂರ್ವ ಅವಧಿ ಘೋಷಣೆ, ಸೇವೆಗೆ ಸೇರಿದ ದಿನಾಂಕ, ಪ್ರಸ್ತುತಕಾರ್ಯ ನಿರ್ವಹಿಸುತ್ತಿರುವ ವೃಂದ, ಬೋಧನಾ ಮಾಧ್ಯಮ/ ವಿಷಯ, ಪ್ರಸ್ತುತ ಕರ್ತವ್ಯನಿರ್ವಹಿಸುತ್ತಿರುವ ಶಾಲೆಯ ಡೈಸ್ ಸಂಖ್ಯೆ/ಶಾಲೆಯ ವಿವರ, ವಲಯ, ಶಿಕ್ಷಕರ ಸೇವಾ ವಿವರ ಇತ್ಯಾದಿ ವಿವರಗಳನ್ನು ಇಂದೀಕರಿಸಿರುವುದಿಲ್ಲ. ಇದನ್ನು ಮತ್ತೊಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.

3. ಅಂತಿಮ ದಿನಾಂಕದ ನಂತರ ಇ.ಇ.ಡಿ.ಎಸ್‌ನಲ್ಲಿ ಯಾವುದೇ ತಿದ್ದುಪಡಿಗೆ ಅವಕಾಶವಿರುವುದಿಲ್ಲ. ನಿಗಧಿತ ಅವಧಿ ಮೀರಿದ ನಂತರ ತಿದ್ದುಪಡಿ ಕೋರಿ ಮನವಿ ಸಲ್ಲಿಸಿದಲ್ಲಿ ಅಂತಹ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ

4. ಕೆಲವು ಶಿಕ್ಷಕರು ಸಮುಚಿತ ಮಾರ್ಗದಲ್ಲಿ ಮನವಿ ಸಲ್ಲಿಸದೇ ನೇರವಾಗಿ ಆಯುಕ್ತರು/ನಿರ್ದೆಶಕರಿಗೆ ಪತ್ರ ಬರೆಯುತ್ತಿರುವ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಇದು ಶಿಷ್ಟಾಚಾರದ ಉಲ್ಲಂಘನೆಯಾಗುವುದರಿಂದ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅಥವಾ ಮನವಿ ಇದ್ದಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವು ಉಪನಿರ್ದೇಶಕರ ಮುಖಾಂತರ ಪ್ರಸ್ತಾವನೆ ಸಲ್ಲಿಸುವುದು. ತಪ್ಪಿದಲ್ಲಿ ಅಂತಹಾ ಶಿಕ್ಷಕರ ವಿರುದ್ಧ ಕರ್ತವ್ಯಲೋಪದ ಆರೋಪದಡಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಡತೆ(ನಿಯಮ)-2021ರ ನಿಯಮ-29ರ ಪ್ರಕಾರ ಶಿಸ್ತು ಕ್ರಮಕ್ಕೆ ಗುರುತು ಪಡಿಸಲಾಗುವುದು

5. ಶಿಕ್ಷಕರುಗಳು ಇ.ಇ.ಡಿ.ಎಸ್ ನಲ್ಲಿ ತಪ್ಪಾಗಿ ಮಾಹಿತಿ ನಮೂದಿಸಿ ಮುಂದಿನ ದಿನಗಳಲ್ಲಿ ವೇಟೇಜ್ಅಂಕಗಳು ಹಾಗೂ ಹೆಚ್ಚುವರಿಯಲ್ಲಿ ಅಥವಾ ಕೋರಿಕೆ ವರ್ಗವಣೆಯಲ್ಲಿ ಸಮಸ್ಯೆಯಾದಲ್ಲಿ ಅದಕ್ಕೆ ಸಂಬಂಧಪಟ್ಟ ಶಿಕ್ಷಕರುಗಳೇ ನೇರ ಹೊಣೆಗಾರರಾಗಿರುತ್ತಾರೆ.

6. ಈಗಾಗಲೇ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ಪ್ರಕ್ರಿಯೆಯಲ್ಲಿ ಆಯಾ ಶಾಲೆಯಲ್ಲಿ ಶಿಕ್ಷಕರು ಹೆಚ್ಚುವರಿಪಟ್ಟಿಯಲ್ಲಿರಲಿ ಅಥವಾ ಪಟ್ಟಿಯಲ್ಲಿ ಇಲ್ಲದಿರಲಿ ಅಂತಹಾ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಹೆಚ್ಚುವರಿಯಿಂದ ವಿನಾಯಿತಿ ಪಡೆಯಲು ಅಥವಾ ಆಧ್ಯತೆಯನ್ನು ಕ್ಲೇಂ ಮಾಡಲು ಸೆಕ್ಷನ್ 10(1) ರಲ್ಲಿನಿಗಧಿಪಡಿಸಿರುವ ದಾಖಲೆಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಇಂದೀಕರಿಸಲು ಆಯಾ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಭೌತಿಕವಾಗಿ ಪೂರಕ ದಾಖಲೆಗಳನ್ನು ಒದಗಿಸುವುದು.

Sharing Is Caring:

Leave a Comment